• Home
  • »
  • News
  • »
  • tech
  • »
  • Twitter: ಎಲಾನ್ ಮಸ್ಕ್‌ ಜೊತೆ ಕೈಜೋಡಿಸುತ್ತಿರುವ ಶ್ರೀರಾಮ್‌ ಕೃಷ್ಣನ್!

Twitter: ಎಲಾನ್ ಮಸ್ಕ್‌ ಜೊತೆ ಕೈಜೋಡಿಸುತ್ತಿರುವ ಶ್ರೀರಾಮ್‌ ಕೃಷ್ಣನ್!

ಶ್ರೀರಾಮ್‌ ಕೃಷ್ಣನ್

ಶ್ರೀರಾಮ್‌ ಕೃಷ್ಣನ್

ಟ್ವಿಟರ್ ಸಿಇಒ ಪರಾಗ್ ಅಗರ್‌ವಾಲ್ ಅವರೊಂದಿಗೆ ಇನ್ನೂ ಕೆಲವರನ್ನು ವಜಾಗೊಳಿಸುವ ಮೂಲಕ ಯೋಜನೆಗಳನ್ನು ಆರಂಭಿಸಿದರು. ಈ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಭಾರತೀಯರಾದ ಶ್ರೀರಾಮ್‌ ಕೃಷ್ಣನ್‌ ಅವರನ್ನು ಆಯ್ಕೆ ಮಾಡಿದ್ದಾರೆ.

  • Share this:

ಟ್ವಿಟರ್‌‌ (Twitter) ತನ್ನ ಅಪ್ಲಿಕೇಶನ್‌ನ (Application) ಸಾಫ್ಟ್‌ವೇರ್‌ (Software) ಅನ್ನು ದಿನದಿಂದ ದಿನಕ್ಕೆ ಬದಲಾವಣೆ ಮಾಡುತ್ತಲೇ ಇದೆ. ಅದೇ ರೀತಿ ಎಲಾನ್              ಮಸ್ಕ್‌ (Elon Musk) ಅವರು ಟ್ವಿಟರ್‌ ಅನ್ನು ಖರೀದಿ ಮಾಡಿದ ನಂತರ ಇದರಲ್ಲಿ ಸಾಕಷ್ಟು ಅಪ್‌ಡೇಟ್‌ (Update) ಮಾಡುವ ಯೋಚನೆಗಳಿವೆ ಇವೆ ಎಂದು ಹೇಳಿದ್ದರು. ಇದೀಗ ಈ ಬದಲಾವಣೆಗೆ ಎಲಾನ್ ಮಸ್ಕ್‌ ಅವರು ಶ್ರೀರಾಮ್‌ ಕೃಷ್ಣನ್‌ (Sriram Krishnan) ಅವರನ್ನು ತನ್ನತ್ತ ಕರೆಸಿಕೊಂಡಿದ್ದಾರೆ. ಟ್ವಿಟರ್ ಹೊಸ ಮುಖ್ಯಸ್ಥ ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಪ್ಲ್ಯಾಟ್‌ಫಾರ್ಮ್‌ನ (Microblogging Platform) ನಿರ್ಮಾಣಕ್ಕಾಗಿ ಉನ್ನತ ವಿಸಿ ಸಂಸ್ಥೆ ಆಂಡ್ರೆಸೆನ್ ಹೊರೊವಿಟ್ಜ್ (a16z) ನಲ್ಲಿ ಟೆಕ್ಕಿ ಮತ್ತು ಸಾಮಾನ್ಯ ಪಾಲುದಾರರಾಗಿರುವ ಶ್ರೀರಾಮ್ ಕೃಷ್ಣನ್ ಅವರನ್ನು ಸಂಪರ್ಕಿಸಿದ್ದಾರೆ. 


ಟ್ವಿಟರ್ ಸಿಇಒ ಪರಾಗ್ ಅಗರ್‌ವಾಲ್ ಅವರೊಂದಿಗೆ ಇನ್ನೂ ಕೆಲವರನ್ನು ವಜಾಗೊಳಿಸುವ ಮೂಲಕ ಯೋಜನೆಗಳನ್ನು ಆರಂಭಿಸಿದರು. ಆದರೆ ಮಸ್ಕ್, ಸಂಸ್ಥೆಯಿಂದ ಒಬ್ಬ ಭಾರತೀಯನನ್ನು ಹೊರಗೆ ಕಳುಹಿಸಿದೇ ಅದೇ ಸಂಸ್ಥೆಯನ್ನು ಪುನರ್ ರಚಿಸಲು ಇನ್ನೊಬ್ಬ ಭಾರತೀಯನನ್ನು ಅವಲಂಬಿಸಿದ್ದಾರೆ.


ಟ್ವಿಟರ್ ಪುನರ್ ನಿರ್ಮಾಣಕ್ಕೆ ಕೈಜೋಡಿಸಿರುವ ಶ್ರೀರಾಮ್ ಕೃಷ್ಣನ್


ಇಲ್ಲಿ ತಮಾಷೆಯ ಸಂಗತಿ ಎಂದರೆ ಎಲೋನ್ ಸಹಾಯ ಬಯಸಿರುವುದು ಕೂಡ ಮಾಜಿ ಟ್ವಿಟರ್ ಉದ್ಯೋಗಿಯೂ ಆಗಿರುವ ಶ್ರೀರಾಮ ಕೃಷ್ಣನ್ ಅವರನ್ನು. ಹಾಗಿದ್ದರೆ ಶ್ರೀರಾಮ್ ಕೃಷ್ಣನ್ ಯಾರು ಅವರನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.


Sriram Krishnan working with Elon Musk
ಟ್ವಿಟರ್


ಇದನ್ನೂ ಓದಿ: ಎಲಾನ್ ಮಸ್ಕ್​ ಮತ್ತೊಂದು ನಿರ್ಧಾರ! ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್


ಭಾರತೀಯ ಟೆಕ್ಕಿ ಶ್ರೀರಾಮ ಕೃಷ್ಣನ್ ಎಲಾನ್  ಮಸ್ಕ್ ಅವರ ಟ್ವಿಟರ್ ಪುನರ್ ವ್ಯವಸ್ಥೆಗೆ ಕೈ ಜೋಡಿಸಿರುವ ವ್ಯಕ್ತಿಯಾಗಿದ್ದಾರೆ. ಆರಂಭಿಕ ಹಂತದ ಗ್ರಾಹಕ ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡುವ‌ ಶ್ರೀರಾಮ್ ಕೃಷ್ಣನ್, ಟ್ವಿಟರ್‌ನಲ್ಲಿ ಮಸ್ಕ್ ಯೋಜಿಸಲಿರುವ ಆರಂಭ ಹಂತದ ಬದಲಾವಣೆಗಳಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.


ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್, ಟ್ವಿಟರ್ ಅನ್ನು 44 ಶತಕೋಟಿ ಮೌಲ್ಯಕ್ಕೆ ಖರೀದಿಸಿದ್ದಾರೆ. ತಾವು ಟ್ವಿಟರ್ ಪುನರ್ ರಚನೆಯಲ್ಲಿ ಕೈಜೋಡಿಸುವುದಾಗಿ ಅಧಿಕೃತವಾಗಿ ಟ್ವೀಟ್ ಮಾಡಿರುವ ಶ್ರೀರಾಮ, ಎಲಾನ್ ಮಸ್ಕ್‌ಗೆ ಸಹಾಯ ಮಾಡುತ್ತಿದ್ದು ಇತರ ಮಹಾನ್ ವ್ಯಕ್ತಿಗಳೊಂದಿಗೆ ಟ್ವಿಟರ್‌ಗೆ ಸಹಾಯ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.


ಪ್ರಮುಖ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಶ್ರೀರಾಮ್ ಕೃಷ್ಣನ್


ಭಾರತೀಯ ಮೂಲದ ಕೃಷ್ಣನ್ ಅವರು ಈ ಹಿಂದೆ ಟ್ವಿಟರ್, ಮೆಟಾ ಮತ್ತು ಸ್ನ್ಯಾಪ್‌ನಲ್ಲಿ ಉತ್ಪನ್ನ ಮತ್ತು ಎಂಜಿನಿಯರಿಂಗ್ ತಂಡಗಳನ್ನು ಮುನ್ನಡೆಸಿದ್ದರು. 2017 ರಿಂದ 2019 ರವರೆಗೆ ಟ್ವಿಟರ್‌ನ ಗ್ರಾಹಕ ಉತ್ಪನ್ನ ತಂಡವನ್ನು ಮುನ್ನಡೆಸಿದ ಕೀರ್ತಿ ಶ್ರೀರಾಮ್‌ ಕೃಷ್ಣನ್ ಅವರದ್ದಾಗಿದೆ.


ಸುದ್ದಿಮಾಧ್ಯಮ IANS ವರದಿ ಮಾಡಿರುವಂತೆ ಶ್ರೀರಾಮ್, ಎರಡು ವರ್ಷಗಳಲ್ಲಿ ಬಳಕೆದಾರರ ಬೆಳವಣಿಗೆಯನ್ನು 20% ಕ್ಕಿಂತ ಹೆಚ್ಚು ಹೆಚ್ಚಿಸಿದವರಾಗಿದ್ದು ಮರುವಿನ್ಯಾಸಗೊಳಿಸಲಾದ ಈವೆಂಟ್ ಒಳಗೊಂಡಂತೆ ಸಂಸ್ಥೆಯ ಬೆಳವಣಿಗೆಗಾಗಿ ಹಲವಾರು ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದೆ. ಸ್ನ್ಯಾಪ್ ಹಾಗೂ ಫೇಸ್‌ಬುಕ್ ಎರಡಕ್ಕೂ ವಿವಿಧ ಮೊಬೈಲ್ ಜಾಹೀರಾತು ಉತ್ಪನ್ನಗಳನ್ನು ಕೃಷ್ಣನ್ ರಚಿಸಿದ್ದಾರೆ.


ಪಾಡ್‌ಕಾಸ್ಟ್ ನಡೆಸುವ ಶ್ರೀರಾಮ್ ಕೃಷ್ಣನ್:


ಅವರು ನೋಷನ್, ಕ್ಯಾಮಿಯೋ, ಕೋಡಾ, ಸ್ಕೇಲ್.ಎಐ, ಸ್ಪೇಸ್‌ಎಕ್ಸ್, ಸಿಆರ್‌ಇಡಿ ಮತ್ತು ಖಾತಾಬುಕ್ ಸೇರಿದಂತೆ ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಅನೇಕ ಕಂಪನಿಗಳೊಂದಿಗೆ ಹೂಡಿಕೆದಾರರಾಗಿ ಮತ್ತು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.


Sriram Krishnan working with Elon Musk
ಟ್ವಿಟರ್


ತಮ್ಮ ಪತ್ನಿ ಆರತಿ ರಾಮ್‌ಮೂರ್ತಿ ಅವರೊಡಗೂಡಿ ದಿ ಗುಡ್ ಟೈಮ್ ಶೋ ಎಂಬ ಪಾಡ್‌ಕ್ಯಾಸ್ಟ್/ಯೂಟ್ಯೂಬ್ ಚಾನೆಲ್ ಅನ್ನು ಹೋಸ್ಟ್ ಮಾಡುತ್ತಿದ್ದು ಇದು ತಡರಾತ್ರಿ ಪ್ರಸಾರವಾಗುವ ಕ್ಲಬ್ ಹೌಸ್ ಕಾರ್ಯಕ್ರಮವಾಗಿ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದೆ.‌


ಇದನ್ನೂ ಓದಿ: ಟ್ವಿಟರ್ ಉದ್ಯೋಗಿಗಳಿಗೆ ಇನ್ನು ದಿನದ 12 ಗಂಟೆ, ವಾರದ 7 ದಿನ ಕೆಲಸ, ಮಾಡದವರು ವಜಾ!


ಶ್ರೀರಾಮ್ ಕೃಷ್ಣನ್‌ ಅವರ ಆಸಕ್ತಿ:


ಅವರ ಆಸಕ್ತಿಯ ಕ್ಷೇತ್ರವು ಗ್ರಾಹಕ ತಂತ್ರಜ್ಞಾನ ಹಾಗೂ ಕ್ರಿಪ್ಟೋ ಆಗಿದೆ. ಶ್ರೀರಾಮ್‌ ಕೃಷ್ಣನ್ ಚೆನ್ನೈನವರಾಗಿದ್ದು ಮಧ್ಯಮ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡಿದ್ದರು ಹಾಗೂ ತಾಯಿ ಗೃಹಿಣಿಯಾಗಿದ್ದರು. ತಮ್ಮ ಪತ್ನಿ ಆರತಿ ಅವರನ್ನು ಶ್ರೀರಾಮ್ ಯಾಹೂ ಮೆಸೆಂಜರ್‌ನಲ್ಲಿ 2002 ರಲ್ಲಿ ಭೇಟಿಯಾದರು. 20 ವರ್ಷಗಳ ಸುಖೀ ದಾಂಪತ್ಯ ಶ್ರೀರಾಮ್ ದಂಪತಿಗಳದ್ದಾಗಿದೆ.

First published: