• Home
 • »
 • News
 • »
 • tech
 • »
 • Twitter: ಟ್ವಿಟರ್‌ಗೆ ಮತ್ತೆ ಮರಳಲಿದ್ದಾರೆ ಶ್ರೀರಾಮ್‌ ಕೃಷ್ಣನ್‌, ಎಲಾನ್​ ಮಸ್ಕ್​ ಪ್ಲ್ಯಾನ್​ ಗೆಸ್ಸ್​​​ ಮಾಡೋದೇ ಕಷ್ಟ!

Twitter: ಟ್ವಿಟರ್‌ಗೆ ಮತ್ತೆ ಮರಳಲಿದ್ದಾರೆ ಶ್ರೀರಾಮ್‌ ಕೃಷ್ಣನ್‌, ಎಲಾನ್​ ಮಸ್ಕ್​ ಪ್ಲ್ಯಾನ್​ ಗೆಸ್ಸ್​​​ ಮಾಡೋದೇ ಕಷ್ಟ!

ಟ್ವಿಟರ್‌ ಶ್ರೀರಾಮ್‌ ಕೃಷ್ಣನ್

ಟ್ವಿಟರ್‌ ಶ್ರೀರಾಮ್‌ ಕೃಷ್ಣನ್

ಟ್ವಿಟರ್‌ ಅನ್ನು ಬದಲಾವಣೆ ಮಾಡುತ್ತಿರುವ ಎಲಾನ್‌ ಮಸ್ಕ್ ಅವರು ಟ್ವಿಟರ್‌ನ ಕೆಲಸಕ್ಕೆ ಮತ್ತೊಬ್ಬ ಭಾರತೀಯ ಮೂಲದ ಶ್ರೀರಾಮ್‌ ಕೃಷ್ಣನ್‌ ಅವರನ್ನು ಆಯ್ದುಕೊಳ್ಳುವ ಬಗ್ಗೆ ಬಲವಾದ ಸುಳಿವು ದೊರೆತಿದೆ. ಯಾರು ಇವರು? ಇಲ್ಲದೆ ಮಾಹಿತಿ

 • Share this:

  ಇತ್ತೀಚೆಗೆ ಸಮಾಜಿಕ ಜಾಲತಾಣದಲ್ಲಿ (Social Media) ಮಹತ್ತರವಾದ ಒಂದು ಸುದ್ದಿ (News) ಹರಿದಾಡುತ್ತಿತ್ತು. ಅದೇನೆಂದರೆ ಟ್ವಿಟರ್‌ (Twitter) ಸ್ವಾಧೀನ ಪಡಿಸಿಕೊಳ್ಳವುದರ ಬಗ್ಗೆ ದೊಡ್ಡದಾಗಿ ಒಂದು ಸುದ್ದಿ ವರದಿಯಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಎಲಾನ್‌ ಮಸ್ಕ್‌ (Elon Musk) ಅವರು ಟ್ವಿಟರ್‌ ಅನ್ನು ಖರೀದಿ ಮಾಡುವ ಮೂಲಕ ಸಮಸ್ಯೆಯನ್ನು ಪರಿಹರಿಸಿದರು. ಇದಲ್ಲದೆ ಟ್ವಿಟರ್‌ ಸಿಇಒ (Twitter CEO) ಆಗಿದ್ದ ಪರಾಗ್‌ ಅಗ್ರವಾಲ್‌ (Parag Agrawal) ಜೊತೆಗೆ ನಾಲ್ಕು ಮಂದಿ ಟ್ವಿಟರ್‌ನಲ್ಲಿ ಕಾರ್ಯನಿರ್ವಹಿಸು‌ತ್ತಿರುವವರನ್ನು ವಜಾ ಮಾಡಲಾಗಿತ್ತು. ನಂತರ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಅನ್ನು ಇನ್ನಷ್ಟು ಅಪ್‌ಡೇಟ್‌ (Update) ಮಾಡಲಾಗುವುದು, ಗ್ರಾಹಕರಿಗೆ ಇನ್ನಷ್ಟು ಸುಲಭವಾಗುವಂತೆ ರಚಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಅದೇ ರೀತಿ ಬದಲಾವಣೆಗಳನ್ನೂ ಮಾಡುತ್ತಿದ್ದಾರೆ.


  ಇದೀಗ ಟ್ವಿಟರ್‌ ಅನ್ನು ಬದಲಾವಣೆ ಮಾಡುತ್ತಿರುವ ಎಲಾನ್‌ ಮಸ್ಕ್ ಅವರು ಟ್ವಿಟರ್‌ನ ಕೆಲಸಕ್ಕೆ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿಯನ್ನೇ ಆಯ್ದುಕೊಳ್ಳುವ ಬಗ್ಗೆ ಬಲವಾದ ಸುಳಿವು ದೊರೆತಿದೆ. ಟ್ವಿಟರ್​ನಲ್ಲೇ ಮೊದಲು ಕಾರ್ಯನಿರ್ವಹಿಸಿದ್ದ, ಭಾರತೀಯ ಮೂಲದ ಶ್ರೀರಾಮ್ ಕೃಷ್ಣನ್ ಅವರು ಎಲಾನ್ ಮಸ್ಕ್​ಗೆ ನೆರವಾಗುವ ಬಗ್ಗೆ ಟ್ವೀಟ್​ ಮಾಡಿದ್ದಾರೆ.


  ಶ್ರೀರಾಮ್‌ ಕೃಷ್ಣನ್‌ ಯಾರು?


  ಶ್ರೀರಾಮ್ ಕೃಷ್ಣನ್‌ ಅವರು ಮೂಲವಾಗಿ ಎಂಜಿನಿಯರ್‌ ಹಾಗೂ ತಂತ್ರಜ್ಞರಾಗಿದ್ದಾರೆ. ಇವರು ಟ್ವಿಟರ್‌, ಮೆಟಾ ಮತ್ತು ಮೈಕ್ರೊಸಾಫ್ಟ್‌ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವದವರಾಗಿದ್ದಾರೆ. 2005 ನೇ ಇಸವಿಯಲ್ಲಿ ಶ್ರೀರಾಮ್‌ ಕೃಷ್ಣನ್‌ ತಮ್ಮ 21ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಅಮೆರಿಕಗೆ ತೆರಳಿದ್ದರು. ಇದಾದ ನಂತರ ಎಂಜಿನಿಯರ್‌ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.‌


  Sriram Krishnan will return to Twitter What else will change on Twitter
  ಟ್ವಿಟರ್‌ ಎಲಾನ್‌ ಮಸ್ಕ್


  ಇದನ್ನೂ ಓದಿ: ನಿಮ್ಮ ಆಂಡ್ರಾಯ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ ? ಈ ತಂತ್ರಗಳನ್ನೊಮ್ಮೆ ಬಳಸಿ


  ಟ್ವಿಟರ್​ನ ಮುಖ್ಯ ಟೈಮ್​ಲೈನ್, ಅದಕ್ಕೆ ಹೊಸ ಯುಐ ಅಭಿವೃದ್ಧಿಪಡಿಸುವಲ್ಲಿ ಹಾಗೂ ಬಳಕೆದಾರರ ಸಂಖ್ಯೆ ಹೆಚ್ಚಿಸುವಲ್ಲಿ ಶ್ರೀರಾಮ್ ಕೃಷ್ಣನ್ ಪ್ರಮುಖ ಪಾತ್ರ ವಹಿಸಿದ್ದರು. ಮೆಟಾದ ಅಸ್ಥಿತ್ವದಲ್ಲಿರುವ ಫೇಸ್​ಬುಕ್​ನಲ್ಲಿ​ ಮೊಬೈಲ್ ಜಾಹೀರಾತು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದರು. ಈಗ ಈ ಫೇಸ್‌ಬುಕ್ ಅತಿದೊಡ್ಡ ಜಾಹೀರಾತು ಪ್ರದರ್ಶನ ವೇದಿಕೆಯಾಗಿ ಹೊರಹೊಮ್ಮಿದೆ.‌


  ಶ್ರೀರಾಮ್‌ ಕೃಷ್ಣನ್ ಮಾಡಿದ ಕೆಲಸಗಳು:‌


  ಮೈಕ್ರೋಸಾಫ್ಟ್​ನಲ್ಲಿ ವೃತ್ತಿ ಆರಂಭಿಸಿದ್ದ ಅವರು ವಿಂಡೋಸ್​ಗಾಗಿ ಹೆಚ್ಚು ಕೆಲಸ ಮಾಡಿದ್ದರು. ಸದ್ಯ ಆರಂಭಿಕ ಹಂತದಲ್ಲಿರುವ ಸ್ಟಾರ್ಟಪ್​ಗಳಲ್ಲಿ ಹೂಡಿಕೆದಾರರಾಗಿರುವ ಅವರು, ಎ16ಝಡ್ ಕಂಪನಿಯ ಭಾಗವಾಗಿದ್ದು, ಕ್ರಿಪ್ಟೊ ಕರೆನ್ಸಿ ವಹಿವಾಟುಗಳ ಬಗ್ಗೆ ಬಹಳ ಕುತೂಹಲದಿಂದ ಗಮನಿಸುತ್ತಿದ್ದಾರೆ.


  ಶ್ರೀರಾಮ್‌ ಕೃಷ್ಣನ್‌ ಅವರ ಟ್ವೀಟ್‌ನಲ್ಲಿ  ಏನಿದೆ?


  ‘ಈಗ ವಿಷಯ ಹೊರಬಿದ್ದಿದೆ. ನಾನು ಎಲಾನ್ ಮಸ್ಕ್ ಅವರಿಗೆ ಹಾಗೂ ಟ್ವಿಟರ್​ಗೆ ಕೆಲವೊಬ್ಬರು ಮಹಾನ್ ವ್ಯಕ್ತಿಗಳ ಜತೆಗೂಡಿ ನೆರವಾಗಲಿದ್ದೇನೆ. ಇದು ಅತ್ಯಂತ ಪ್ರಮುಖವೆಂದು ನಾನು ಭಾವಿಸಿದ್ದು ಜಾಗತಿಕವಾಗಿ ಪರಿಣಾಮ ಬೀರಬಹುದು ಎಂದು ತಿಳಿದಿದ್ದೇನೆ. ಎಲಾನ್ ಮಸ್ಕ್ ಅದನ್ನು ಸಾಧ್ಯವಾಗಿಸಲಿದ್ದಾರೆ’ ಎಂದು ಶ್ರೀರಾಮ್ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.


  ಶ್ರೀರಾಮ್ ಕೃಷ್ಣನ್ ಟ್ವಿಟರ್‌ನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ?


  ಶ್ರೀರಾಮ್‌ ಕೃಷ್ಣನ್‌ ಅವರು ಈ ಹಿಂದೆಯೂ ಟ್ವಿಟರ್‌ನಲ್ಲಿ ಕಾರ್ಯನಿರ್ವಹಿಸಿದ್ದು. ಟ್ವಿಟರ್‌ ಕಾರ್ಯವೈಖರಿಯ ಬಗ್ಗೆ ಬಹಳಷ್ಟು ಅನುಭವಗಳಿವೆ. ಇದಕ್ಕಾಗಿಯೇ ಎಲಾನ್‌ ಮಸ್ಕ್‌ ಅವರು ಇವರನ್ನು ತನ್ನತ್ತ ಕರೆಸಿಕೊಂಡಿದ್ದಾರೆ. ಟ್ವಿಟರ್‌ ಅನ್ನು ಮತ್ತೆ ಅಭಿವೃದ್ಧಿಗೊಳಿಸುವ ಉದ್ದೇಶವನ್ನು ಇಟ್ಟುಕೊಂಡಿರುವ ಎಲಾನ್‌ ಮಸ್ಕ್‌ ಅವರು ಇದೇ ಕಾರಣಕ್ಕಾಗಿ ಇವರನ್ನು ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.‌


  Need a Blue Tick for a Social Media Account Follow these tricks as soon as possible
  ಟ್ವಿಟರ್‌ ಶ್ರೀರಾಮ್‌ ಕೃಷ್ಣನ್


  ಎಲಾನ್‌ ಮಸ್ಕ್‌ ಅವರ ಮುಖ್ಯ ಉದ್ದೇಶ:


  ಟ್ವಿಟರ್​ ಸದ್ಯ ಮುಖ್ಯವಾಗಿ ಎದುರಿಸುತ್ತಿರುವುದು ಮಾನಿಟೈಸೇಷನ್ ಸಮಸ್ಯೆ. ಇದರ ಬಗ್ಗೆ ಮಸ್ಕ್ ಅವರು ಈಗಾಗಲೇ ಹಲವು ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್​ನ ಬ್ಲೂ ಸಬ್​ಸ್ಕ್ರಿಪ್ಷನ್​ಗೆ ಸುಮಾರು 1,640 ರೂ. ಶುಲ್ಕ ವಿಧಿಸಲು ಮಸ್ಕ್ ಯೋಚಿಸುತ್ತಿದ್ದಾರೆ ಎಂದು ಸೋಮವಾರ ವರದಿಯಾಗಿತ್ತು. ಮಸ್ಕ್ ಅವರು ಟ್ವಿಟರ್​ನಲ್ಲಿ ತಮ್ಮ ಉದ್ಯಮ ಯೋಜನೆಗಳನ್ನು ಜಾರಿಗೆ ತರಲು ಶ್ರೀರಾಮ್ ಕೃಷ್ಣನ್ ಅವರನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.


  ಇದನ್ನೂ ಓದಿ: Maruti Suzuki: ಕಾರು ಪ್ರಿಯರಿಗೆ ಗುಡ್​ ನ್ಯೂಸ್, ಕೈಗಟಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾರುತಿ ಸುಜುಕಿ!


  ಈ ಎಲ್ಲಾ ಕಾರಣಕ್ಕಾಗಿಯೇ ಶ್ರೀರಾಮ್‌ ಕೃಷ್ಣನ್‌ ಅವರು ಟ್ವಿಟರ್‌ಗೆ ಸೇರ್ಪಡೆಯಾಗಲಿದ್ದಾರೆ. ಇದರಿಂದ ಎಲಾನ್‌ ಮಸ್ಕ್‌ ಅವರ ಯೋಚನೆಗಳು ಇನ್ನಷ್ಟು ಯಶಸ್ಸು ಸಾಧಿಸಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.

  Published by:ವಾಸುದೇವ್ ಎಂ
  First published: