Squid Game Malware ಸುಳಿಗೆ ಸಿಲುಕುವ ಮುನ್ನ ಎಚ್ಚರ! ಸಿರೀಸ್ ನೋಡುವ ಮೊದಲು ಈ ಅಗತ್ಯ ಕ್ರಮ ಪಾಲಿಸಿ

Squid Game: ಸ್ಕ್ವಿಡ್ ಗೇಮ್ ಸಿರೀಸ್​ ಅತಿಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿರುವುದನ್ನು ಗಮನಹರಿಸಿ ಹ್ಯಾಕರ್‌ಗಳು ಗಮನಹರಿಸಿ ಕೈಚಳಕ ತೊಳಿಸಲು ಮುಂದಾಗಿದ್ದಾರೆ. ದುರುದ್ದೇಶಪೂರಿತ ಮಾಲ್ವೇರ್​ ಮೂಲಕ ವೀಕ್ಷಕರನ್ನು ಸಂಕಷ್ಟದಲ್ಲಿ ಸಿಲುಕಿಸುವ ಯತ್ನ ಮಾಡುತ್ತಿದ್ದಾರೆ.

Squid Game

Squid Game

 • Share this:
  ಸ್ಕ್ವಿಡ್ ಗೇಮ್ ಇತ್ತೀಚಿನ ಸೂಪರ್ ಹಿಟ್ ಸರಣಿಯಾಗಿದೆ ಮತ್ತು ಪ್ರಪಂಚದಾದ್ಯಂತದ ಅನೇಕರು ಇದರ ವೀಕ್ಷಣೆಯಲ್ಲಿ ಮಗ್ನರಾಗಿದ್ದಾರೆ. ಅಂದಹಾಗೆಯೇ ಸುಮಾರು 21 ಮಿಲಿಯನ್ ಡಾಲರ್​ ವೆಚ್ಚದ ಪ್ರದರ್ಶನ ಕಂಡಿರುವ ಈ ಗೇಮ್​ 891.1  ಮಿಲಿಯನ್ ಡಾಲರ್​ ಮೌಲ್ಯವನ್ನು ಗಳಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

  ಸ್ಕ್ವಿಡ್ ಗೇಮ್ ಸಿರೀಸ್​ ಅತಿಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿರುವುದನ್ನು ಗಮನಹರಿಸಿ ಹ್ಯಾಕರ್‌ಗಳು ಗಮನಹರಿಸಿ ಕೈಚಳಕ ತೊಳಿಸಲು ಮುಂದಾಗಿದ್ದಾರೆ. ದುರುದ್ದೇಶಪೂರಿತ ಮಾಲ್ವೇರ್​ ಮೂಲಕ ವೀಕ್ಷಕರನ್ನು ಸಂಕಷ್ಟದಲ್ಲಿ ಸಿಲುಕಿಸುವ ಯತ್ನ ಮಾಡುತ್ತಿದ್ದಾರೆ. ಮಾಲ್ವೇರ್ ಹರಡಲು ಬಳಸಲಾಗುತ್ತಿದ್ದ ಆ್ಯಪ್ ಅನ್ನು ಭದ್ರತಾ ಸಂಸ್ಥೆಯು ಪ್ಲೇ ಸ್ಟೋರ್‌ನಲ್ಲಿ ಫ್ಲ್ಯಾಗ್ ಮಾಡಿದ ನಂತರ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ ಮತ್ತು ಬಳಕೆದಾರರು ತಮ್ಮ ಸಾಧನಗಳಿಂದ ಆ್ಯಪ್​ ಅನ್ನು ಡಿಲೀಟ್​ ಮಾಡುವಂತೆ ಕೇಳಿಕೊಂಡಿದೆ.

  ಜನಪ್ರಿಯ ನೆಟ್‌ಫ್ಲಿಕ್ಸ್ ಸರಣಿ ಸ್ಕ್ವಿಡ್ ಗೇಮ್‌ನ ವೀಕ್ಷಕರನ್ನು ಉದ್ದೇಶಿಸಿ ಸಿದ್ಧಪಡಿಸಿರುವ ಮಾಲ್‌ವೇರ್ ಅನ್ನು ಇಎಸ್‌ಇಟಿ ಸಂಶೋಧಕ ಲುಕಾಸ್ ಸ್ಟೆಫ್ಯಾಂಕೊ ಗುರುತಿಸಿದ್ದಾರೆ, ಅವರು ಭದ್ರತಾ ಸಂಸ್ಥೆಯಲ್ಲಿ ಮಾಲ್‌ವೇರ್ ಅಧ್ಯಯನ ಮಾಡುತ್ತಾರೆ. 'ಸ್ಕ್ವಿಡ್ ಗೇಮ್ ವಾಲ್‌ಪೇಪರ್ 4K HD' ಎಂದು ಕರೆಯಲ್ಪಡುವ ಅಪ್ಲಿಕೇಶನ್ ಕುಖ್ಯಾತ ಜೋಕರ್ ಮಾಲ್‌ವೇರ್ ಅನ್ನು ಹರಡಲು ಬಳಸಲಾಗುತ್ತಿದೆ ಎಂದು ವರದಿಯಾಗಿದೆ.

  ‘‘ನಾವು ಈ ಮೊದಲು ಜೋಕರ್ ಮಾಲ್‌ವೇರ್ ಅನ್ನು ಕವರ್ ಮಾಡಿದ್ದೇವೆ, ಪ್ಲೇ ಸ್ಟೋರ್‌ನಲ್ಲಿ ಇಂತಹ ಅಪ್ಲಿಕೇಶನ್ ಸಿಗುವುದು ಇದೇ ಮೊದಲೇನಲ್ಲ, ಆದರೆ ಹೊಸ ಹಿಟ್ ಸರಣಿಯ ವೀಕ್ಷಕರು ಗುರಿಯಾಗಿಸಿಕೊಂಡು ಮಾಲ್ವೇರ್ ಬಳಸುತ್ತಿರುವುದು ಇದೇ ಮೊದಲು’’ ಎಂದು ಲುಕಾಸ್ ಸ್ಟೆಫ್ಯಾಂಕೊ ಹೇಳಿದ್ದಾರೆ.

  ಸಂಶೋಧಕರ ಪ್ರಕಾರ, ಅಪ್ಲಿಕೇಶನ್ "ದುರುದ್ದೇಶಪೂರಿತ ಜಾಹೀರಾತು-ವಂಚನೆ ಅಥವಾ ಅನಗತ್ಯ SMS ಚಂದಾದಾರಿಕೆ ಗಳಿಗೆ ಕಾರಣವಾಗಬಹುದು. ಇದು ಜೋಕರ್ ಮಾಲ್‌ವೇರ್‌ನ ಕಾರ್ಯ ವಿಧಾನದಂತೆ ತೋರುತ್ತಿದ್ದರೆ, ಅದು ಎರಡೂ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಇದರರ್ಥ ಬಳಕೆದಾರರು ಕೇವಲ ಜಾಹೀರಾತುಗಳೊಂದಿಗೆ ಮಾತ್ರವಲ್ಲ ಕೆಲವು ಪ್ರೀಮಿಯಂ ಸೇವೆಗಳಿಗೆ ಸಹ ಸೈನ್ ಅಪ್ ಮಾಡುವ ಮೂಲಕ ಹಣ ಎಗರಿಸಬಹುದು’’ ಎಂದಿದ್ದಾರೆ.

  Google ಇದೀಗ ಪ್ಲೇ ಸ್ಟೋರ್‌ನಿಂದ ಮಾಲ್ವೇರ್​ ಆಧಾರಿತ ಅಪ್ಲಿಕೇಶನ್ ಅನ್ನು ತೆಗೆದುಹಾಕಿದೆ. ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ Android ಬಳಕೆದಾರರು ತಮ್ಮ ಸಾಧನಗಳು ಅಪಾಯದಲ್ಲಿರಬಹುದಾದ ಕಾರಣ ಅದನ್ನು ತಕ್ಷಣವೇ ತಮ್ಮ ಸಾಧನದಿಂದ ತೆಗೆದುಹಾಕಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ. ಭವಿಷ್ಯದಲ್ಲಿ ಕಾಣಿಸಿಕೊಳ್ಳುವ ಇದೇ ರೀತಿಯ ಆ್ಯಪ್‌ಗಳ ಬಗ್ಗೆಯೂ ಅವರು ಜಾಗರೂಕರಾಗಿರಬೇಕು ಮತ್ತು ಆ್ಯಪ್​ ಅನ್ನು ಉಚಿತವಾಗಿ ನೀಡುತ್ತಿದ್ದರೂ ಸಹ ಮೂಲ ಕಂಪನಿಯಿಂದ ಅಧಿಕೃತವಾಗಿ ತಪ್ಪಿಸಬೇಕು ಎಂದಿದ್ದಾರೆ.

  Read Also: PUBG New State: ‘ಪಬ್‌ಜಿ: ನ್ಯೂ ಸ್ಟೇಟ್’ ಗೇಮ್ ಬಿಡುಗಡೆಗೆ ದಿನಾಂಕ ನಿಗದಿ: ಹೇಗಿರಲಿದೆ ಗೊತ್ತಾ ಹೊಸ ಆಟ

  ಸಂಶೋಧಕರು ಗಮನಿಸಿದಂತೆ, ಒಂದೇ ಥೀಮ್ ಹೊಂದಿರುವ 200 ಕ್ಕೂ ಹೆಚ್ಚು ಆಪ್‌ಗಳು ಪ್ರಸ್ತುತ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ, ಮತ್ತು ಬಳಕೆದಾರರು ತಮ್ಮ ಸಾಧನಗಳನ್ನು ಸುರಕ್ಷಿತವಾಗಿರಿಸಲು ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವ ಬಗ್ಗೆ ಜಾಗರೂಕರಾಗಿರಬೇಕು ಎಂದಿದ್ದಾರೆ.

  ಸ್ಕ್ವಿಡ್ ಗೇಮ್ ಜನಪ್ರಿಯ ಸಿರೀಸ್​ ಅನ್ನು ವಿಶ್ವದಾದ್ಯಂತ ಅನೇಕ ಜನರು ವೀಕ್ಷಿಸುತ್ತಿದ್ದಾರೆ. ಭಾರತ ಮಾತ್ರವಲ್ಲದೆ, ವಿದೇಶದಲ್ಲಿ ಇದರ ವೀಕ್ಷಣೆ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಕೊರಿಯನ್​ ಸಿರೀಸ್​ ಅನ್ನು ವೀಕ್ಷಿಸಲು ಬಳಸುವ ಥರ್ಡ್​ ಪಾರ್ಟಿ ಆ್ಯಪ್​ ಮತ್ತು ಇನ್ನಿತರ ನಕಲಿ ವೈಬ್​ಸೈಟ್​ಗಳ ಮೇಲೂ ಹೆಚ್ಚು ಗಮನಹರಿಸುವುದು ಅಗತ್ಯ.

  Read Also: Online Shopping Scams: ದೀಪಾವಳಿ ಸೇಲ್​ಗೆ ಮುಗಿಬಿದ್ದು ಹಣ ಕಳ್ಕೋಬೇಡಿ…ಎಚ್ಚರ!

  ಅಧಿಕೃತ ವೇಬ್​ಸೈಟ್​ಗಳ ಮೂಲಕ ಸ್ಕ್ವಿಡ್ ಗೇಮ್ ಸರಣಿ ವೀಕ್ಷಿಸಬಹುದಾಗಿದೆ. ಆದರೆ ಕೆಲವೊಂದು ಆ್ಯಪ್​ಗಳು ಜಾಹೀರಾತುಗಳ ಮೂಲಕ ಸ್ಮಾರ್ಟ್​ಫೋನ್​ ಪರದೆಯ ಮೇಲೆ ಗೋಚರಿಸಿ ಕೊನೆಗೆ ಅದರ ಮೇಲೆ ಕ್ಲಿಕ್​ ಮಾಡುವ ಮೂಲಕ ಬಳಕೆದಾರರನ್ನು ಸಂಕಷ್ಟಕ್ಕೆ ದೂಡುವ ಪ್ರಮೇಯ ಒದಗಬಹುದು.

  ಇನ್ನು ಸಂಶೋಧಕರು ಹೇಳಿದಂತೆ ಪ್ಲೇ ಸ್ಟೋರ್​ನಲ್ಲಿ ದೊರಕುವ ನಕಲಿ ಆ್ಯಪ್​ಗಳು, ಇನ್ನು ಕೆಲವು ಥೀಮ್​ ಆ್ಯಪ್​ಗಳು ಬಳಸುದಕ್ಕೂ ಮೊದಲು ಜಾಗರೂಕರಾಗಿರುವುದು ಒಳಿತು.
  Published by:Harshith AS
  First published: