Amazon Republic Day Sale: ಕೇವಲ 3,500 ರೂ.ಗೆ ಖರೀದಿಸಿ ಈ 5G ಸ್ಮಾರ್ಟ್​ಫೋನ್​!

Amazon: ಅಂದಹಾಗೆಯೇ ಈ ಸೇಲ್​ ಮೂಲಕ ಸ್ಮಾರ್ಟ್‌ಫೋನ್ ಬ್ರಾಂಡ್ iQOO ನ ಉತ್ತಮ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಖರೀದಿಗೆ ಸಿಗುತ್ತಿದೆ. ಸ್ಮಾರ್ಟ್​ಫೋನ್​ ಖರೀದಿಸಲು ಕಾತುರದಿಂದ ಕಾಯುತ್ತಿದ್ದ ಗ್ರಾಹಕರಿಗೆ ರಿಪಬ್ಲಿಕ್​ ಸೇಲ್​ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Amazon / ಅಮೆಜಾನ್

Amazon / ಅಮೆಜಾನ್

  • Share this:
    ಜನಪ್ರಿಯ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್​ನಲ್ಲಿ (Amazon) ವಿಶೇಷ iQOO ರಿಪಬ್ಲಿಕ್ ಡೇ ಸೇಲ್ (Repulic day Sale) ನಡೆಯುತ್ತಿದೆ. ಇದರಲ್ಲಿ  ಸ್ಮಾರ್ಟ್‌ಫೋನ್‌ಗಳ (Smartphone) ಮೇಲೆ ಭಾರಿ ರಿಯಾಯಿತಿಗಳನ್ನು (Offer) ನೀಡಿದೆ. ಅಂದಹಾಗೆಯೇ ಈ ಸೇಲ್​ ಮೂಲಕ ಸ್ಮಾರ್ಟ್‌ಫೋನ್ ಬ್ರಾಂಡ್ iQOO ನ ಉತ್ತಮ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಖರೀದಿಗೆ ಸಿಗುತ್ತಿದೆ. ಸ್ಮಾರ್ಟ್​ಫೋನ್​ ಖರೀದಿಸಲು ಕಾತುರದಿಂದ ಕಾಯುತ್ತಿದ್ದ ಗ್ರಾಹಕರಿಗೆ ರಿಪಬ್ಲಿಕ್​ ಸೇಲ್​ ಮೂಲಕ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

    23 ಸಾವಿರದ 5G ಫೋನ್ ಅನ್ನು 3,500 ರೂ.ಗೆ ಖರೀದಿಸಿ

    iQOO Z3 5G ಸ್ಮಾರ್ಟ್​ಫೋನನ್ನು ಕಡಿಮೆ ಬೆಲೆ ಮಾರಾಟ ಮಾಡುತ್ತಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ 22,979 ರೂ. ಆಗಿದ್ದು, ಮಾರಾಟದಲ್ಲಿ ಈ ಸ್ಮಾರ್ಟ್‌ಫೋನ್ 13% ರಿಯಾಯಿತಿಯ ನಂತರ 19,999 ರೂ.ಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಖರೀದಿಸುವಾಗ OneCard ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ 5% ತ್ವರಿತ ರಿಯಾಯಿತಿಯನ್ನು ಸಿಗಲಿದೆ. ಮಾತ್ರವಲ್ಲದೆ, 1500 ರೂ.ವರೆಗೆ ಪಡೆಯುತ್ತೀರಿ ಮತ್ತು ವಿನಿಮಯ ಕೊಡುಗೆಯೊಂದಿಗೆ 14,950 ರೂ. ವರೆಗೆ ಉಳಿಸಬಹುದು. ಈ ಎರಡೂ ಆಫರ್‌ಗಳ ಸಂಪೂರ್ಣ ಪ್ರಯೋಜನವನ್ನು ಪಡೆದರೆ, ಈ ಸ್ಮಾರ್ಟ್‌ಫೋನ್ ಅನ್ನು 22,979 ರೂ ಬದಲಿಗೆ ಕೇವಲ 3,540 ರೂಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.

    ಈ 5G ಸ್ಮಾರ್ಟ್‌ಫೋನ್ ಮೇಲೆ 26 ಸಾವಿರ ರೂಪಾಯಿಗಳ ರಿಯಾಯಿತಿ ಪಡೆಯಿರಿ

    ಈ ಆಫರ್​ ಮೂಲಕ iQOO Z5 5G ಖರೀದಿಸಿದರೆ, ಒಟ್ಟು 26 ಸಾವಿರ ರೂಪಾಯಿಗಳನ್ನು ಉಳಿಸಬಹುದು. 29,966 ರೂ.ವಿನ ಈ ಸ್ಮಾರ್ಟ್‌ಫೋನ್ 5,976 ರೂ. ರಿಯಾಯಿತಿಯ ನಂತರ ರೂ 23,990 ಕ್ಕೆ ಅಮೆಜಾನ್ ಮಾರಾಟದಲ್ಲಿ ಮಾರಾಟವಾಗುತ್ತಿದೆ. ಈ ಒಪ್ಪಂದದಲ್ಲಿ, ಎರಡು ಸಾವಿರ ರೂಪಾಯಿಗಳ ಕೂಪನ್ ರಿಯಾಯಿತಿಯನ್ನು ಸಿಗಲಿದೆ. ಅಲ್ಲದೆ, OneCard ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ 1500 ರೂ. ವರೆಗೆ 5% ತ್ವರಿತ ರಿಯಾಯಿತಿಯನ್ನು ಸಿಗಲಿದೆ. ವಿನಿಮಯ ಕೊಡುಗೆಯೊಂದಿಗೆ 17,450 ರೂ.ವರೆಗೆ ಉಳಿಸಬಹುದು. ಈ ಎರಡೂ ಆಫರ್‌ಗಳ ಸಂಪೂರ್ಣ ಪ್ರಯೋಜನವನ್ನು ಪಡೆದರೆ, ಒಟ್ಟಾರೆಯಾಗಿ ಈ ಡೀಲ್‌ನಲ್ಲಿ 26,016 ರೂಪಾಯಿಗಳ ರಿಯಾಯಿತಿಯನ್ನು ಗ್ರಾಹಕರು ಪಡೆಯುತ್ತಾರೆ. ಆ ಮೂಲಕ ಫೋನ್‌ ಅನ್ನು 3,950 ರೂಪಾಯಿಗಳಿಗೆ ಖರೀದಿಗೆ ಸಿಗಲಿದೆ.

    ಇನ್ನು ಓದಿ: Internet Speed: Mbps ಮತ್ತು MBps ನಡುವಿನ ವ್ಯತ್ಯಾಸವೇನು? ಇಲ್ಲಿದೆ ಮಾಹಿತಿ

    iQOO 7 5G ನಲ್ಲಿಯೂ ತ್ವರಿತ ರಿಯಾಯಿತಿ ಪಡೆಯಿರಿ

    iQOO 7 5G ಅನ್ನು 34,989 ರೂ.ಗೆ ಮಾರಾಟ ಮಾಡುತ್ತಿದೆ. ಆದರೆ ಮಾರಾಟದಲ್ಲಿ ಅದನ್ನು 29,990 ರೂ.ಗೆ ಮನೆಗೆ ತೆಗೆದುಕೊಳ್ಳಬಹುದು. ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಇದನ್ನು ಖರೀದಿಸಿದರೆ, 19,950 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆದ ನಂತರ, ಫೋನ್‌ನ ಬೆಲೆ 10,040 ರೂ ಆಗುತ್ತದೆ. ಇದರಲ್ಲಿ ಬ್ಯಾಂಕ್ ಆಫರ್‌ಗಳನ್ನು ಸಹ ನೀಡಲಾಗುತ್ತಿದೆ ಮತ್ತು ಬಯಸಿದರೆ ಇದನ್ನು EMI ನಲ್ಲಿಯೂ ಖರೀದಿಸಬಹುದು.

    ಇನ್ನು ಓದಿ: Smart Phone: ಕೈಗೆಟುಕುವ ದರದಲ್ಲಿ ಹೊಸ ಸ್ಮಾರ್ಟ್​ಫೋನ್ ಲಾಂಚ್ ಮಾಡಲಿದೆ OnePlus

    ಇದು ಗಣರಾಜ್ಯೋತ್ಸವದ ಮಾರಾಟವಾಗಿರುವುದರಿಂದ ಸೀಮಿತ ಅವಧಿಯವರೆಗೆ ಮಾತ್ರ ಲೈವ್ ಆಗಿರುತ್ತದೆ. ಆದ್ದರಿಂದ, ಈ ಉತ್ತಮ 5G ಫೋನ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಅಮೆಜಾನ್​ ಈ ಅವಕಾಶವನ್ನು ತೆರೆದಿಟ್ಟಿದೆ.

    ಅಮೆಜಾನ್​ ಜನಪ್ರಿಯ ಈ- ಕಾಮರ್ಸ್​ ಮಳಿಗೆಗಳಲ್ಲಿ ಒಂದು. ಆಗಾಗ ಏನಾದರು ಒಂದು ಮಾರಾಟ ಸೇಲ್​ ಅನ್ನು ಆಯೋಜಿಸುತ್ತಿರುತ್ತದೆ. ಅದರಂತೆ ಅಮೆಜಾನ್​ ರಿಪಬ್ಲಿಕ್​ ಸೇಲ್​ ಸಮಯಲ್ಲಿ iQOO ರಿಪಬ್ಲಿಕ್ ಡೇ ಸೇಲ್ ಆಯೋಜಿಸಿದೆ. ಇದರ ಮೂಲಕ ಕಡಿಮೆ ಬೆಲಲೆ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡುತ್ತಿದೆ.
    Published by:Harshith AS
    First published: