ಸ್ಪೇನ್ ದೇಶದ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಸಂದೇಶಗಳನ್ನ ಓದಬಹುದು:ಸ್ಪ್ಯಾನಿಷ್ ಕೋರ್ಟ್ ಮಹತ್ವದ ತೀರ್ಪು


Updated:December 29, 2017, 5:30 PM IST
ಸ್ಪೇನ್ ದೇಶದ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಸಂದೇಶಗಳನ್ನ ಓದಬಹುದು:ಸ್ಪ್ಯಾನಿಷ್ ಕೋರ್ಟ್ ಮಹತ್ವದ ತೀರ್ಪು
ಸ್ಪೇನ್ ದೇಶದ ಪೋಷಕರಿಗೆ ವಿಶೇಷ ಅಧಿಕಾರ ನೀಡಿದ ಕೋರ್ಟ್

Updated: December 29, 2017, 5:30 PM IST
ಖಾಸಗಿತನದ ಕಾನೂನುಗಳನ್ನೂ ಬದಿಗೊತ್ತಿ ಸ್ಪ್ಯಾನಿಷ್ ಕೋರ್ಟ್ ಅಲ್ಲಿನ ಪೋಷಕರಿಗೆ ವಿಶೇಷ ಜವಾಬ್ದಾರಿ ಮತ್ತು ಹಕ್ಕನ್ನ ನೀಡಿದೆ. ಮಕ್ಕಳು ಬಳಸುವ ಸೋಶಿಯಲ್ ಜಾಲತಾಣಗಳನ್ನ ಮಾನಿಟರ್ ಮಾಡುವ ಮತ್ತು ವಾಟ್ಸಾಪ್ ಸಂದೇಶಗಳನ್ನ ಓದುವ ಹಕ್ಕನ್ನ ಕೋರ್ಟ್ ಪೋಷಕರಿಗೆ ನೀಡಿದೆ. ವಾಟ್ಸಾಪ್ ಸೇರಿದಂತೆ ಅಪ್ರಾಪ್ತ ಮಕ್ಕಳು ಬಳಸುವ ಸೋಶಿಯಲ್ ಮೀಡಿಯಾಗಳ ಮೇಲೆ ಪೋಷಕರು ಕಣ್ಣಿಡುವ ಮತ್ತು ಜಾಗ್ರತೆ ವಹಿಸುವ ಅಗತ್ಯವಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ವ್ಯಕ್ತಿಯೊಬ್ಬ ತನ್ನ ಮಗಳ ವಾಟ್ಸಾಪ್ ಸಂದೇಶಗಳನ್ನ ಓದುವ ಮೂಲಕ ಖಾಸಗಿತನದ ಉಲ್ಲಂಘನೆ ಮಾಡಿದ್ದಾರೆಂದು ಆತನ ಮಾಜಿ ಪತ್ನಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಸ್ಪ್ಯಾನಿಷ್`ನ ಪೊಂಟೆವೆಡ್ರಾ ಕೋರ್ಟ್, ಮಾಜಿ ಪತಿಯ ಕೃತ್ಯವನ್ನ ಎತ್ತಿಹಿಡಿದಿದೆ. ಅಪ್ರಾಪ್ತರು ಬಳಸುವ ಸೋಶಿಯಲ್ ಮೀಡಿಯಾದ ಮೇಲೆ ಹೆತ್ತವರು ಜಾಗ್ರತೆವಹಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ.

ನನ್ನ ಮಾಜಿ ಪತಿ ನನ್ನ ಮಕ್ಕಳ ಬೆಡ್ ರೂಮಿಗೆ ತೆರಳಿ ಅವರ ಖಾಸಗಿ ಸಂದೇಶಗಳಗಳನ್ನ ಓದುತ್ತಿರುವುದಾಗಿ ನನಗೆ ತಿಳಿಸಿದ್ದರು ಎಂದು ಹೆಸರನ್ನೇಳಲು ಇಚ್ಚಿಸದ ತಾಯಿ ಮಾಧ್ಯಮಗಳಿಗೆ ತಿಳಿಸಿದ್ಧಾರೆ. ಈ ಮೊದಲು ತಾಯಿಯ ದೂರನ್ನ ಪುರಸ್ಕರಿಸಿದ್ದ ಕೆಳಹಂತದ ಕೋರ್ಟ್, ಮಾಜಿ ಪತಿಯ ಕೃತ್ಯವನ್ನ ಮಕ್ಕಳ ಖಾಸಗಿತನದ ಹಕ್ಕಿನ ಉಲ್ಲಂಘನೆ ಯಾಗಿದ್ದು, 4 ವರ್ಷ ಶಿಕ್ಷಾರ್ಹ, ದಂಡ ವಿಧಿಸಬಹುದಾದ ಅಪರಾಧ ಎಂದು ತೀರ್ಪು ನೀಡಿತ್ತು. ಇದೀಗ, ಸ್ಪ್ಯಾನಿಷ್`ನ ಪೊಂಟೆವೆಡ್ರಾ ಕೋರ್ಟ್ ಮಕ್ಕಳ ವಾಟ್ಸಾಪ್ ಸಂದೇಶಗಳನ್ನ ಓದಿದ ತಂದೆ ಕೃತ್ಯವನ್ನ ಎತ್ತಿಹಿಡಿದಿದ್ದು, ವಿಶೇಷ ಹಕ್ಕು ನೀಡಿದೆ. ಈ ತೀರ್ಪಿನಿಂದಾಗಿ ತಮ್ಮ ಮಕ್ಕಳ ಮೇಲೆ ನಿಗಾ ಇಡಲು ಸ್ಪೇನ್ ದೇಶದ ಪೋಷಕರಿಗೆ ದೊಡ್ಡ ಹಕ್ಕು ಸಿಕ್ಕಂತಾಗಿದೆ ಎಂದು ಬ್ಯುಸಿನೆಸ್ ಟೈಮ್ಸ್ ವರದಿ ಮಾಡಿದೆ.
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...