ವಾಟ್ಸಪ್​ನಲ್ಲೂ ಜಾಹೀರಾತು ಆರಂಭ!


Updated:August 3, 2018, 11:04 AM IST
ವಾಟ್ಸಪ್​ನಲ್ಲೂ ಜಾಹೀರಾತು ಆರಂಭ!

Updated: August 3, 2018, 11:04 AM IST
ಫೇಸ್​ಬುಕ್​ ಕೆಲ ದಿನಗಳ ಹಿಂದೆ ಅಳವಡಿಸಿಕೊಂಡಿರುವ ಜಾಹಿರಾತು ಮಾದರಿಯನ್ನೇ ವಾಟ್ಸಪ್​ನಲ್ಲೂ ಅಳವಡಿಸಲು ಸಂಸ್ಥೆ ತೀರ್ಮಾನಿಸಿದ್ದು, ಕೆಲವೇ ದಿನಗಳಲ್ಲಿ ವಾಟ್ಸಪ್​ ಸ್ಟೇಟಸ್​ ಸೆಕ್ಷನ್​ನಲ್ಲೂ ಜಾಹೀರಾತು ಕಾಣಿಸಿಕೊಳ್ಳಲಿದೆ.

ಈಗಾಗಲೇ ಹಲವಾರು ಸಂಸ್ಥೆಗಳು ವಾಟ್ಸಪ್​ನಲ್ಲಿ ಜಾಹೀರಾತನ್ನು ನೀಡಲು ಫೇಸ್​ಬುಕ್​ನ್ನು ಸಂಪರ್ಕಿಸಿದ್ದು, ವಾಲ್​ ಸ್ಟ್ರೀಟ್​ ಜರ್ನಲ್​ ಪ್ರಕಾರ ಮುಂದಿನ ತಿಂಗಳಿನಿಂದಲೇ ಈ ಜಾಹೀರಾತು ಟೆಸ್ಟಿಂಗ್​ ಆರಂಭಿಸಲಾಗುತ್ತದೆ. ಸಿಂಗಾಪುರ್​ ಏರ್​ಲೈನ್​, ಊಬರ್​ ಹೀಗೆ ನೂರಕ್ಕೂ ಅಧಿಕ ಸಂಸ್ಥೆಗಳು ಫೇಸ್​ಬುಕ್​ನ್ನು ಸಂಪರ್ಕಿಸಿರುವುದಾಗಿ ಸಂಸ್ಥೆಯ ವಕ್ತಾರ ವಾಲ್​ ಸ್ಟ್ರೀಟ್​ ಜರ್ನಲ್​ಗೆ ತಿಳಿಸಿದ್ದಾರೆ.

ಈಗಾಗಲೇ ಫೇಸ್​ಬುಕ್​ ಮತ್ತು ಇನ್ಸ್ಟಾಗ್ರಾಂನ ಸ್ಟೋರಿ ಸೆಕ್ಷನ್​ನಲ್ಲಿ ಜಾಹೀರಾತುಗಳು ಪ್ರಸಾರವಾಗುತ್ತವೆ. ಆದರೆ ಫೇಸ್​ಬುಕ್​ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ವಾಟ್ಸಪ್​ನಲ್ಲೂ ಇದೇ ರೀತಿಯ ಜಾಹೀರಾತು ಬಿಡುಗಡೆ ಮಾಡಿದರೆ ಗ್ರಾಹಕರು ಮತ್ತಷ್ಟು ಕಿರಿಕಿರಿ ಅನುಭವಿಸುವುರಲ್ಲಿ ಸಂಶಯವಿಲ್ಲ. ಈ ಯೋಜನೆಯಿಂದ ಫೇಸಬುಕ್​ ಸಾಕಷ್ಟು ಲಾಭ ಮಾಡಿಕೊಳ್ಳುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸಕ್ತ ಸ್ಥಿತಿಯಲ್ಲಿ ಫೇಸ್​ಬುಕ್​ ಈ ಫೀಚರ್​ನ್ನು ಮುಂದಿನ ವರ್ಷದಿಂದ ಆರಂಭಿಸ ಬಹುದು ಎನ್ನಲಾಗಿದೆ. ಅದೇನೆ ಇರಲಿ ಸಂಸ್ಥೆ ಈಗಾಗಲೇ ವಾಟ್ಸಪ್​ ಮತ್ತು ಫೇಸ್​ಬುಕ್​ನಲ್ಲಿ ಸಾಕಷ್ಟು ಬದಲಾವಣೆಯನ್ನು ಅಳವಡಿಸಿತ್ತು. ವಾರದ ಹಿಂದೆ ವಾಟ್ಸಪ್​ನಲ್ಲಿ ಗ್ರೂಪ್​ ವಿಡಿಯೋ ಕಾಲ್​ ಮಾಡಲು ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೇ ವಾಟ್ಸಪ್​ನಲ್ಲಿ ಫಾರ್ವರ್ಡ್ ಆಗಿರುವ ಸಂದೇಶವನ್ನು ಪತ್ತೆ ಹಚ್ಚಲು ಫಾರ್ವರ್ಡ್​ ಸ್ಟಿಕ್ಕರ್​ ಕೂಡಾ ಗೋಚರಿಸುತ್ತಿದೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...