ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್‌ಫೋನ್ ಕಂಪನಿಗಳಿವೆ (Smartphone Companies). ಆಯಾ ಕಂಪನಿಗಳು ಅದರದೇ ಆದ ವಿಶೇಷತೆಗಳ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿಕೊಂಡಿದೆ. ಈ ಕಂಪನಿಗಳಲ್ಲಿ ಸೋನಿ ಸಹ ಒಂದು. ಬಹಳ ಹಿಂದಿನಿಂದಲೂ ಸೋನಿ (Sony Company) ಟೆಕ್ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯಲ್ಲಿದೆ. ತನ್ನದೇ ಆದ ಶೈಲಿಯಲ್ಲಿ ಸ್ಮಾರ್ಟ್ಫೋನ್ಗಳನ್ನು, ಸ್ಮಾರ್ಟ್ ಗ್ಯಾಜೆಟ್ಗಳನ್ನು (Smart Gadgets), ಸ್ಮಾರ್ಟ್ಟಿವಿಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಅಪಾರ ಗ್ರಾಹಕರನ್ನು ಇದು ಹೊಂದಿದೆ. ಭಾರೀ ಸಮಯಗಳ ನಂತರ ಸೋನಿ ಕಂಪನಿ ಇದೀಗ ತನ್ನ ಬ್ರಾಂಡ್ನ ಅಡಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ರೆಡಿಯಾಗಿದೆ.
ಸೋನಿ ಕಂಪನಿಯಿಂದ ಮುಂಬರುತ್ತಿರುವ ಹೊಸ ಸ್ಮಾರ್ಟ್‌ಫೋನ್ ಸೋನಿ ಎಕ್ಸ್ಪೀರಿಯ 1ವಿ ಎಂಬುದಾಗಿದೆ. ಈ ಸ್ಮಾರ್ಟ್ಫೋನ್ನ ಫೀಚರ್ಸ್ ಸದ್ಯ ಬಿಡುಗಡೆಗೆ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು ಇದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಸೋನಿ ಎಕ್ಸ್‌ಪೀರಿಯಾ 1ವಿ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿನ್ಯಾಸ
ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್ 6.5-ಇಂಚಿನ ಕ್ಯೂಹೆಚ್ಡಿ+ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1Hz ನಿಂದ 120 Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್ ಬೆಂಬಲಿಸುವ ಸಾಧ್ಯತೆಯಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ E6 ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿರುವ ಸಾಧ್ಯತೆಯಿದೆ.
ಇದನ್ನೂ ಓದಿ: ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಿ, ಡಿಸ್‌ಪ್ಲೇ ಬಗ್ಗೆ ಟೆನ್ಷನ್ನೇ ಇರಲ್ಲ
ಕ್ಯಾಮೆರಾ ಸೆಟಪ್
ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಸೆಟಪ್ ಅನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 ಜೆನ್ 2 ಎಸ್ಓಸಿ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ 12 ಜಿಬಿ ರ್‍ಯಾಮ್ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ಹೊಂದಿರುವ ಸಾಧ್ಯತೆಯಿದೆ.
ಸೋನಿ ಎಕ್ಸ್‌ಪೀರಿಯಾ 1ವಿ ಸ್ಮಾರ್ಟ್ಫೋನ್ನ ಬ್ಯಾಟರಿ ಬ್ಯಾಕಪ್
ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಬ್ಯಾಟರಿಯ ವೇಗದ ಚಾರ್ಜಿಂಗ್ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಜ್ಯಾಕ್, ಮೈಕ್ರೋ ಎಸ್ಡಿ ಸ್ಲಾಟ್, ಯುಎಸ್ಬಿ 4.0, IP68 ಪ್ರಮಾಣೀಕರಣವನ್ನು ಹೊಂದಿದೆ ಎನ್ನಲಾಗಿದೆ. ಹೆಡ್‌ಫೋನ್ ಜ್ಯಾಕ್, ಶಟರ್ ಬಟನ್ ಮತ್ತು ಇನ್‌ಬಿಲ್ಟ್ ಫಿಂಗರ್‌ಪ್ರಿಂಟ್ ರೀಡರ್ ಹೊಂದಿರುವ ಪವರ್ ಬಟನ್ ಡಿವೈಸ್ ಹೊಂದಿರಲಿದೆ.
ಬೆಲೆ ಮತ್ತು ಲಭ್ಯತೆ
ಇನ್ನು ಸೋನಿ ಎಕ್ಸ್‌ಪೀರಿಯಾ 1ವಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಯಾವಾಗ ಬರಬಹುದು ಎಂದು ಕಂಪೆನಿ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ. ಇದರ ಜೊತೆಗೆ ಬೆಲೆಯ ಬಗೆಗಿನ ಮಾಹಿತಿಯೂ ಕಂಪೆನಿ ತಿಳಿಸಿಲ್ಲ. ಸದ್ಯ ಈ ಕಂಪೆನಿ ಸ್ಮಾರ್ಟ್ಫೋನ್ನ ಫೀಚರ್ಸ್ಗಳು ಮಾತ್ರ ಲೀಕ್ ಆಗಿದ್ದು, ಇನ್ನೂ ಹಲವಾರು ಫೀಚರ್ಸ್ಗಳು ಇದರಲ್ಲಿ ಬರಲಿವೆ. ಅಂತೂ ಸೋನಿ ಕಂಪೆನಿಯ ಈ ಹೊಸ ಸ್ಮಾರ್ಟ್‌ಫೋನ್ ತನ್ನ ವೈಶಿಷ್ಟ್ಯತೆ ಮೂಲಕ ಹೊಸ ಸಂಚಲನ ಸೃಷ್ಟಿಸೋದು ಗ್ಯಾರಮಟಿಯಾಗಿದೆ.
ಸೋನಿ ಕಂಪೆನಿ ಹೆಚ್ಚಾಗಿ ತನ್ನ ಕ್ಯಾಮೆರಾ ಮತ್ತು ಕಾರ್ಯವೈಖರಿ ಮೂಲಕ ಹೆಚ್ಚು ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಅದೇ ರೀತಿಯಲ್ಲಿ ಈ ಬಾರಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್ ಸಹ ಬೇಡಿಕೆಯ ಸ್ಮಾರ್ಟ್ಫೋನ್ಗಳ ಪಟ್ಟಿಗೆ ಸೇರಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ