Vlog ಮಾಡ್ತೀರಾ? ಅದಕ್ಕೆಂದೇ ಸೋನಿ ಪರಿಚಯಿಸಿದೆ ZV-E10 ಕ್ಯಾಮೆರಾ

Sony ZV-E10: ಸಾಂಕ್ರಾಮಿಕದ ಸಮಯದಲ್ಲೂ ಆರಂಭ ಹಂತದ ವೃತ್ತಿಪರ ಕ್ಯಾಮೆರಾಗಳಿಗೆ ಬೇಡಿಕೆ ಇರುವುದನ್ನು ಈ ಕ್ಯಾಮೆರಾಗಳು ಖಾತ್ರಿಪಡಿಸಿದ್ದು, ಹೆಚ್ಚಿನ ವ್ಲಾಗರ್‌ಗಳಿಗೆ ತಮ್ಮ ದೈನಂದಿನ ಚಟುವಟಿಕೆಯನ್ನು ಫಾಲೋವರ್‌ಗಳಿಗೆ ಹಂಚಿಕೊಳ್ಳಲು ಈ ಕ್ಯಾಮೆರಾಗಳು ಸಹಕಾರಿಯಾಗಿವೆ. ಸೋನಿಯ ವ್ಲಾಗಿಂಗ್‌ಗೆಂದೇ ನಿರ್ದಿಷ್ಟವಾಗಿರುವ ಕ್ಯಾಮೆರಾಗಳು ಸಾಂಕ್ರಾಮಿಕದ ಸಮಯದಲ್ಲೂ ಜನಪ್ರಿಯತೆ ಗಳಿಸಿವೆ.

Sony

Sony

  • Share this:

Sony ZV-E10: ಸೋನಿ ತನ್ನ ಮೊದಲ ಆಲ್ಫಾ ಸೀರೀಸ್ ಇಂಟರ್‌ಚೇಂಜೇಬಲ್ ಲೆನ್ಸ್ ವ್ಲೋಗ್ ಕ್ಯಾಮೆರಾ ZV-E10 ಪರಿಚಯಿಸಿದ್ದು ಕಳೆದ ವರ್ಷ ZV-1 ಪರಿಚಯಿಸಿದ ನಂತರ ಸೋನಿ ಪರಿಚಯಿಸುತ್ತಿರುವ ಎರಡನೆಯ ವ್ಲಾಗಿಂಗ್ ಸ್ಪೆಸಿಫಿಕ್ ಕ್ಯಾಮೆರಾ ಇದಾಗಿದೆ. ಸಾಂಕ್ರಾಮಿಕದ ಸಮಯದಲ್ಲೂ ಆರಂಭ ಹಂತದ ವೃತ್ತಿಪರ ಕ್ಯಾಮೆರಾಗಳಿಗೆ ಬೇಡಿಕೆ ಇರುವುದನ್ನು ಈ ಕ್ಯಾಮೆರಾಗಳು ಖಾತ್ರಿಪಡಿಸಿದ್ದು, ಹೆಚ್ಚಿನ ವ್ಲಾಗರ್‌ಗಳಿಗೆ ತಮ್ಮ ದೈನಂದಿನ ಚಟುವಟಿಕೆಯನ್ನು ಫಾಲೋವರ್‌ಗಳಿಗೆ ಹಂಚಿಕೊಳ್ಳಲು ಈ ಕ್ಯಾಮೆರಾಗಳು ಸಹಕಾರಿಯಾಗಿವೆ. ಸೋನಿಯ ವ್ಲಾಗಿಂಗ್‌ಗೆಂದೇ ನಿರ್ದಿಷ್ಟವಾಗಿರುವ ಕ್ಯಾಮೆರಾಗಳು ಸಾಂಕ್ರಾಮಿಕದ ಸಮಯದಲ್ಲೂ ಜನಪ್ರಿಯತೆ ಗಳಿಸಿವೆ.


ಸೋನಿ ಇಂಡಿಯಾದ ಡಿಜಿಟಲ್ ಇಮೇಜಿಂಗ್ ಮುಖ್ಯಸ್ಥ ಮುಕೇಶ್ ಶ್ರೀವಾಸ್ತವ್ ಸೋನಿಯ ಲೆನ್ಸ್ ವ್ಲಾಗ್ ಕ್ಯಾಮೆರಾಗಳಿಗಿರುವ ಈ ಅಭೂತಪೂರ್ವ ಬೆಳವಣಿಗೆ ನೋಡಿ ಪ್ರಸ್ತುತ ಕ್ಯಾಮೆರಾ ಮಾರುಕಟ್ಟೆಗಳು ಬದಲಾವಣೆಯ ಹಾದಿಯಲ್ಲಿವೆ ಎಂದು ಪ್ರಶಂಸಿಸಿದ್ದಾರೆ. ವಿಡಿಯೋ ರಚನೆಕಾರರಿಗೆಂದೇ ನಿರ್ಮಿಸಲಾಗಿರುವ ZV-E10 ಅನ್ನು ಇನ್ನಷ್ಟು ಸುಧಾರಿಸುವಂತೆ ವ್ಲಾಗರ್‌ಗಳು ಕಂಪನಿಯನ್ನು ಪ್ರೇರೇಪಿಸಿದ್ದಾರೆ ಎಂದು ಮುಕೇಶ್ ತಿಳಿಸಿದ್ದಾರೆ.


ಸೋನಿಯು ವ್ಲಾಗರ್‌ಗಳಿಗೆಂದೇ ಪರಿಚಯಿಸಿದ್ದ ZV-1 ಅಭೂತಪೂರ್ವ ಯಶಸ್ಸನ್ನು ನೋಡಿ ಶ್ರೀವಾಸ್ತವ ಈ ಮಾತುಗಳನ್ನು ಹೇಳಿದ್ದಾರೆ. ZV-1 ಸುಧಾರಿತ ಆವೃತ್ತಿಯಾಗಿರುವ ZV-E10 ಬದಲಾಯಿಸಬಹುದಾದ ಲೆನ್ಸ್‌ಗಳನ್ನು ಹೊಂದಿದ್ದು, ಅಂತೆಯೇ ದೊಡ್ಡ ಸೆನ್ಸಾರ್‌ಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ. Z


V-1 ಕ್ಯಾಮೆರಾ ವ್ಲಾಗರ್‌ಗಳಿಗಾಗಿ ತಯಾರಿಸಲಾಗಿದ್ದ ಕಾಂಪ್ಯಾಕ್ಟ್ ಕ್ಯಾಮೆರಾ ಆಗಿದ್ದರೂ ಕೆಲವೊಂದು ಸುಧಾರಿತ ವೈಶಿಷ್ಟ್ಯಗಳನ್ನು ಒಳಗೊಂಡಿರಲಿಲ್ಲ. ZV-E10 ನೊಂದಿಗೆ ಸೋನಿ ಕಂಪನಿಯು A6100ನಲ್ಲಿ ಕಾಣಬಹುದಾದ ದೊಡ್ಡ 24 ಮೆಗಾಪಿಕ್ಸೆಲ್ APS-C ಸೆನ್ಸಾರ್‌ ಸೇರಿಸಿದ್ದು ಸೋನಿಯ 60 ಪ್ಲಸ್ ಇ-ಮೌಂಟ್ ಲೆನ್ಸ್‌ನ ಅದೇ ಪ್ರಯೋಜನವನ್ನು ZV-E10ನಲ್ಲಿ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.


ZV-E10 ಕ್ಯಾಮೆರಾ ವಿಶೇಷತೆ ಏನು?


ZV-E10 ವಿಡಿಯೋ-ಕ್ಯಾಮೆರಾ ಆಗಿದ್ದು ಹಗುರವಾಗಿದೆ ಹಾಗೂ ಸರಳವಾದ ವಿನ್ಯಾಸವನ್ನು ಪಡೆದುಕೊಂಡಿದೆ. ಕ್ಯಾಮೆರಾದಲ್ಲಿ 4k/30p ವಿಡಿಯೊ ರೆಕಾರ್ಡಿಂಗ್‌ಗಳನ್ನು ಮಾಡಬಹುದಾಗಿದ್ದು, 1080/120p ವರೆಗೆ ಸ್ಲೋ ಮೋಶನ್ ಚಿತ್ರಣ ಸೆರೆಹಿಡಿಯಬಹುದಾಗಿದೆ.


ಇದು ಆ್ಯಕ್ಟೀವ್ ಇಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಒದಗಿಸುತ್ತಿದ್ದು ನಡೆಯುವಾಗಲೂ ನಿಖರವಾದ ವಿಡಿಯೋ ರೆಕಾರ್ಡಿಂಗ್‌ಗೆ ಅನುವು ಮಾಡಿಕೊಡುತ್ತದೆ. ಕ್ಯಾಮೆರಾ ಹೆಚ್ಚಿನ ಗುಣಮಟ್ಟದ ಮೈಕ್ರೋಫೋನ್ ಹೊಂದಿದ್ದು ಫ್ಲಿಪ್ ಔಟ್ ಸ್ಕ್ರೀನ್ ಅನ್ನು ಹೊಂದಿದೆ. ಅಂತೆಯೇ ವ್ಲಾಗಿಂಗ್ ವೈಶಿಷ್ಟ್ಯವಾದ “ಬ್ಯಾಕ್‌ಗ್ರೌಂಡ್ ಡಿಫೋಕಸ್” ಒಳಗೊಂಡಿದೆ.


ZV-E10 ವಿನ್ಯಾಸದಲ್ಲಿರುವ ಅಂಶಗಳೇನು?


ಬಳಕೆದಾರ ಇಂಟರ್ಫೇಸ್ ಸುಧಾರಿಸುವುದು ಹಾಗೆಯೇ ವ್ಲಾಗರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್ಸ್‌ಗೆ ನೆರವಾಗುವ ರೀತಿಯಲ್ಲಿ ಸಣ್ಣ ಹಾರ್ಡ್‌ವೇರ್ ಟ್ರಿಕ್ಸ್‌ಗಳನ್ನು ZV-E10ನಲ್ಲಿ ಅಳವಡಿಸಲಾಗಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ. ಕ್ಯಾಮೆರಾದ ಮೇಲ್ಭಾಗದಲ್ಲಿ ಹೊಸ ಮೋಡ್ ಬಟನ್ ಇದ್ದು, ಬಳಕೆದಾರರಿಗೆ ಸುಲಭವಾಗಿ ಸ್ಟಿಲ್/ಮೂವಿ/ಸ್ಲೋ ಹಾಗೂ ಕ್ವಿಕ್ ಮೋಡ್‌ಗಳಿಗೆ ಬದಲಿಸಿಕೊಳ್ಳಲು ನೆರವು ನೀಡುತ್ತದೆ.


“ಪ್ರಾಡಕ್ಟ್ ಶೋ ಕೇಸ್” ಫೀಚರ್ ಕ್ಯಾಮೆರಾದಲ್ಲಿದ್ದು ಇದರಿಂದ ನಿಮ್ಮ ಮುಖದಿಂದ ಅಥವಾ ಕ್ಯಾಮೆರಾ ಫೋಕಸ್ ಮಾಡಿರುವ ಯಾವುದೇ ವಸ್ತುವಿನಿಂದ ಫೋಕಸ್ ಬದಲಾಯಿಸಲು ಕ್ರಿಯೇಟರ್ಸ್‌ಗೆ ಅನುವು ಮಾಡಿಕೊಡುತ್ತದೆ.


Read Also⇒ Don’t drink: ನಂಬಿದ್ರೆ ನಂಬಿ…ಈ ತಾರೆಯರು ಎಣ್ಣೆ ಕುಡಿಯಲ್ಲ, ಸಿಗರೇಟ್ ಮುಟ್ಟಲ್ವಂತೆ!

ಸ್ಮಾರ್ಟ್‌ಫೋನ್ ಕಂಪನಿಗಳು ತಮ್ಮ ಡಿವೈಸ್‌ಗಳಲ್ಲಿ ಹಲವಾರು ಸುಧಾರಣೆಗಳನ್ನು ಕ್ಯಾಮೆರಾ ವಿಭಾಗಗಳಿಗೆ ತಂದಿದ್ದು ಆ್ಯಪಲ್ ಹಾಗೂ ಒನ್‌ಪ್ಲಸ್, ಪ್ರೋ ಬ್ರ್ಯಾಂಡಿಂಗ್ ಮೂಲಕ ಕ್ಯಾಮೆರಾ ಫೀಚರ್‌ಗಳನ್ನು ಇನ್ನಷ್ಟು ಸುಧಾರಿಸಿವೆ. ಹೀಗಾಗಿ ವೃತ್ತಿಪರ ಕ್ಯಾಮೆರಾ ಮಾರುಕಟ್ಟೆ ಕಠಿಣ ಪೈಪೋಟಿಯತ್ತ ಸಾಗುತ್ತಿವೆ. ಆದರೆ ಈಗಾಗಲೇ ಖ್ಯಾತಿಗಳಿಸಿರುವ ಕ್ಯಾಮೆರಾಗಳು ಸ್ಮಾರ್ಟ್‌ಫೋನ್‌ ಕ್ಯಾಮೆರಾಗಳಿಗಿಂತಲೂ ಬೇಡಿಕೆಯನ್ನು ಉಳಿಸಿಕೊಂಡಿವೆ.




ZV-E10 ಕ್ಯಾಮೆರಾಗಳನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾಗಳಿಗೆ ಹೋಲಿಸಲಾಗುವುದಿಲ್ಲ.ಏಕೆಂದರೆ ಈ ಕ್ಯಾಮೆರಾಗಳು ಹೊಂದಿರುವ ಸಾಕಷ್ಟು ಫೀಚರ್‌ಗಳನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾಗಳು ಪಡೆದುಕೊಳ್ಳಲು ಸಾಧ್ಯವಿಲ್ಲ. ಕ್ಯಾಮೆರಾಗಳು ದೊಡ್ಡ ಸೆನ್ಸಾರ್‌ಗಳನ್ನು ಪಡೆದುಕೊಂಡಿರುವುದರಿಂದ ಕಡಿಮೆ ಬೆಳಕಿನ ಸಾಮರ್ಥ್ಯದಲ್ಲೂ ಅವುಗಳನ್ನು ಬಳಸಲು ಸಾಧ್ಯವಿದೆ.


ZV-E10 ಕ್ಯಾಮೆರಾ ಯಾರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ..?


ಶ್ರೀವಾಸ್ತವ ಹೇಳುವಂತೆ ZV-E10 ಕ್ಯಾಮೆರಾಗಳನ್ನು ಮುಖ್ಯವಾಗಿ ಮಧ್ಯಮದಿಂದ ಆರಂಭಿಕ ಹಂತದ ಬ್ಲಾಗರ್‌ಗಳಿಗೆ ಹಾಗೂ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ತಯಾರಿಸುವ ಹುಮ್ಮಸ್ಸಿರುವವರನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ. ZV-E10 ಗೆ ಸ್ಪಷ್ಟವಾದ ಹಾಗೂ ನಿಖರವಾದ ಮಾರುಕಟ್ಟೆ ಇದೆ ಎಂದು ಶ್ರೀವಾಸ್ತವ ಹೇಳುತ್ತಾರೆ. ವ್ಲಾಗಿಂಗ್‌ನಲ್ಲಿ ತಮ್ಮ ವೃತ್ತಿ ಕಂಡುಕೊಳ್ಳಲು ಬಯಸುವವರಿಗೆ ಇದು ಹೇಳಿಮಾಡಿಸಿರುವ ಕ್ಯಾಮೆರಾ ಆಗಿದೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ. ZV-E10 ಅಂದಾಜು ರಿಟೇಲ್ ಬೆಲೆ 59,490 ರೂ ಹಾಗೂ 16-50mm ಕಿಟ್ ಲೆನ್ಸ್ 69,990 ರೂ. ಗೆ ಲಭ್ಯವಿದೆ.


First published: