ಬೆಸ್ಟ್​ ಕ್ಯಾಮೆರಾ ಮೊಬೈಲ್​ಗಾಗಿ ಸೋನಿಯವರ ಈ ಮೊಬೈಲ್​


Updated:July 25, 2018, 7:21 PM IST
ಬೆಸ್ಟ್​ ಕ್ಯಾಮೆರಾ ಮೊಬೈಲ್​ಗಾಗಿ ಸೋನಿಯವರ ಈ ಮೊಬೈಲ್​
Sonymobile.com

Updated: July 25, 2018, 7:21 PM IST
ಚೀನೀ ಮೊಬೈಲ್​ಗಳ ವ್ಯಾಪಕ ಮಾರುಕಟ್ಟೆಯ ದಾಳಿಯಿಂದ ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಛಾಪು ಕಳೆದುಕೊಂಡಿರುವ ಸೋನಿ ಮೊಬೈಲ್​ ಇದೀಗ ಪ್ರೀಮಿಯಂ ಬಜೆಟ್​ನ ಮೊಬೈಲ್​ ಬಿಡುಗಡೆ ಮಾಡಿದ್ದು, ಆ.1ರಂದು ಲಭ್ಯವಾಗಲಾಗಲಿದೆ.ತನ್ನ ಅತ್ಯುತ್ತಮ ಕ್ಯಾಮೆರಾ ಹಾಗೂ ಸ್ಲೈಟಿಂಗ್​ ಮತ್ತು ವಿಶಿಷ್ಟ ವಾಲ್ಕ್​ಮ್ಯಾನ್​ ಶ್ರೇಣಿಯ ಮೊಬೈಲ್​ಗಳಿಂದ ಫೇಮಸ್​ ಆಗಿದ್ದ ಸೋನಿ ಎಕ್ಸ್​​ಪೀರಿಯಾ ಮೊಬೈಲ್​ ಚೀನೀ ಮೊಬೈಲ್​ಗಳಾದ ಶಿಯೋಮಿ, ಲೆನೆವೊ ಸೇರಿದಂತೆ ಹಲವು ಮೊಬೈಲ್​ಗಳ ದಾಳಿಯಿಂದ ಬದಿಗೊತ್ತಿಕೊಂಡಿತ್ತು. ಇದೀಗ ಎಕ್ಸ್​ಪೀರಿಯಾ XZ2 ಮೊಬೈಲ್​ನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾ ಹಾಗೂ ಹೊಸ ಮಾದರಿಯ ಆಡಿಯೋ ಮತ್ತು 3ಡಿ ವ್ಯವಸ್ಥೆಯನ್ನು ಇದರಲ್ಲಿ ನೀಡಲಾಗಿದೆ. ಮತ್ತೊಂದು ವೈಶಿಷ್ಟ್ಯವೆಂದರೆ ಗೂಗಲ್​ ಎರ್​ಕೋರ್​ ಮತ್ತ ಗೂಗಲ್​ ಲೆನ್ಸ್​​ ವ್ಯವಸ್ಥೆಯಿದೆ.ಎಕ್ಸ್​ಪೀರಿಯಾ XZ2 ಬೆಲೆ, ಗುಣ ವೈಶಿಷ್ಟ್ಯಗಳು
3ಡಿ ಗ್ಲಾಸ್​ ಡಿಸ್​ಪ್ಲೇ ಹಾಗು ಬೆಜಲ್​ ಗ್ಲಾಸ್​ ಹೊಂದಿರುವ ಎಕ್ಸ್​ಪೀರಿಯಾ XZ2 ಮೊಬೈಲ್​ನ ಕೆಳ ಭಾಗದಲ್ಲಿ ಸೆನ್ಸಾರ್​ ಸಂಸ್ಥೆಯ ಲೊಗೊ ನೀಡಲಾಗಿದೆ. ಇನ್ನು ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿಯುವ ಸಂದರ್ಭದಲ್ಲಿ ಬೆರೆಯದೇ ಶಟರ್​ ಬಟನ್​ನ್ನು ಕೂಡಾ ನೀಡಲಾಗಿದೆ. ಇದು ವಾಲ್ಯೂಮ್​ ಹಾಗು ಪವರ್​ ಬಟನ್​ನ ಕೆಳಭಾಗದಲ್ಲಿ ಗೋಚರಿಸಲಿದೆ.
Loading...

ಇತರೇ ಮೊಬೈಲ್​ಗಳಂತೆ 4K HDR ವಿಡಿಯೋ ರೆಕಾರ್ಡಿಂಗ್​, 3ಡಿ ಕ್ರಿಯೇಟರ್​ ಸೌಲಭ್ಯವನ್ನು ಕ್ಯಾಮೆರಾಗಳಿಗೆ ಅಳವಡಿಸಲಾಗಿದೆ. 5,7 ಇಂಚಿನ ಸಂಪೂರ್ಣ ಹೆಚ್​ಡಿ ಪ್ಲಸ್​, TRILUMINOS ಡಿಸ್​ಪ್ಲೇ ಬಳಕೆ ಮಾಡಲಾಗಿದೆ, ಇದರ ರಕ್ಷಣೆಗೆ ಇತ್ತೀಚೆಗೆ ಬಿಡುಗಡೆಯಾದ ಕಾರ್ನಿಂಗ್​ Gorilla Glass 5 ಅಳವಡಿಸಲಾಗಿದೆ.

ಪ್ರೊಸೆಸರ್​: Snapdragon 845 SoC,
ಮೆಮೊರಿ : 6GB of RAM, 64GB
ಕ್ಯಾಮೆರಾ: 19 ಮೆಗಾಪಿಕ್ಸೆಲ್​ Motion Eye, 8x ಝೂಮ್​, 960fps ಸೂಪರ್​ ಸ್ಲೋ ಮೋಷನ್​ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ.
5 ಎಂಪಿ ಸೆಲ್ಫಿ ಕ್ಯಾಮೆರಾ
ಬ್ಯಾಟರಿ: 3180mAh ಶೀಘ್ರ ಚಾರ್ಜಿಂಗ್​ಗಾಗಿ Quick Charge 3.0

ಬೆಲೆ: 72,990,
ಲಭ್ಯ: ಸೋನಿಯ ಕೆಲವೇ ಸರ್ವಿಸ್​ ಸೆಂಟರ್​ಗಳಲ್ಲಿ ಈ ಮೊಬೈಲ್ ಲಭ್ಯವಿರುತ್ತದೆ.
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ