ಬರೋಬ್ಬರಿ 13 ಲಕ್ಷ! Sony ಪರಿಚಯಿಸಿದ ಹೊಸ 8K ಟಿವಿಯ ವಿಶೇಷತೆ ಏನೆಂದು ಗೊತ್ತಿದ್ಯಾ?

Sony Bravia XR Master Series: ಸೋನಿ 85Z9J ಟಿವಿ 7,680x4,320 ಪಿಕ್ಸೆಲ್ ಎಲ್ಇಡಿ ಸ್ಕ್ರೀನ್ ಹೊಂದಿದ್ದು, ಎಚ್‌ಡಿಆರ್‌ಗೆ ಡಾಲ್ಬಿ ವಿಷನ್ ಫಾರ್ಮ್ಯಾಟ್ ವರೆಗೆ ಬೆಂಬಲವಿದೆ. ಇದರ ಹೊರತಾಗಿ, ಗೂಗಲ್ ಟಿವಿ ಇಂಟರ್ಫೇಸ್‌ನೊಂದಿಗೆ ಸ್ಮಾರ್ಟ್ ಸಂಪರ್ಕಕ್ಕಾಗಿ ಆಂಡ್ರಾಯ್ಡ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಗೂಗಲ್ ಕ್ರೋಮ್‌ಕಾಸ್ಟ್ ಮತ್ತು ಆಪಲ್ ಏರ್‌ಪ್ಲೇ ಅನ್ನು ಸಹ ಬೆಂಬಲಿಸುತ್ತದೆ.

Sony Bravia XR Master Series 85Z9J

Sony Bravia XR Master Series 85Z9J

 • Share this:
  Sony Bravia XR Master Series 85Z9J: ಸೋನಿ ಬ್ರಾವಿಯಾ XR ಮಾಸ್ಟರ್ ಸರಣಿ 85Z9J 8K LED TV ಭಾರತದಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ ರೂ. 12,99,990 ಆಗಿದೆ. ಈ ದೊಡ್ಡ ಪರದೆಯ ಟಿವಿಯು ಎಲ್ಇಡಿ ಟೆಲಿವಿಷನ್ 7,680x4,320 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ, ಆಂಡ್ರಾಯ್ಡ್ ಟಿವಿ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಸೋನಿ ಎಕ್ಸ್‌ಆರ್ ಕಾಗ್ನಿಟಿವ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ, ಸದ್ಯ ದುಬಾರಿ ಟಿವಿಗಳ ಪಟಗಟಿಗೆ ಸೇರಿರುವ ಸೋನಿ ಬ್ರಾವಿಯಾ XR ಮಾಸ್ಟರ್ ಟಿವಿ ಸಿನಿಮಾ, ಕ್ರೀಡೆ ಸೇರಿದಂತೆ ಮನೋರಂಜನೆ ಕಾರ್ಯಕ್ರಮ ವೀಕ್ಷಣೆ ಜೊತೆಗೆ ಒಳ್ಳೆಯ ಅನುಭವ ನೀಡಲಿದೆ. ಅಂದಹಾಗೆಯೇ ಸೋನಿ ರಿಟೇಲ್ ಸ್ಟೋರ್‌, ಆನ್‌ಲೈನ್ ಸ್ಟೋರ್, ಪ್ರಮುಖ ಎಲೆಕ್ಟ್ರಾನಿಕ್ಸ್ ಸ್ಟೋರ್‌ ಮತ್ತು ಆಯ್ದ ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ಭಾರತದಲ್ಲಿ ಮಾರಾಟ ಮಾಡುತ್ತಿದೆ.

  ಸೋನಿ ಭಾರತೀಯರಿಗೆ ಪರಿಚಯಿಸಿರುವ ಹೊಸ ಟಿವಿ 85 ಇಂಚು ಹೊಂದಿದ್ದು, 8K ರೆಸಲ್ಯೂಶನ್​ನಲ್ಲಿದೆ.  ನೆಕ್ಸ್​ ಜನರೇಶನ್​ ತಕ್ಕಂತೆ ಸಿದ್ಧಪಡಿಸಲಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ 8K ಫೀಚರ್ಸ್​ನಲ್ಲಿ ಯಾವುದೇ ಮೈನ್​ಸ್ಟ್ರೀಮ್​ ಲಭ್ಯವಿಲ್ಲದಿದ್ದರೂ, ಸೋನಿ 85X9J ಟಿವಿ ಅದನ್ನು ಪರಿಗಣಿಸುವ ಮೂಲಕ ನೂತನ ಟಿವಿ ಪರಿಚಯಿಸಿದೆ. Sony 85X9J TV ಸ್ಯಾಮ್​​ಸಂಗ್​, LG ಮತ್ತು ಹಿಸ್ಸೆನ್ಸ್ ನಂತಹ ಬ್ರ್ಯಾಂಡ್‌ಗಳ 8K ಆಯ್ಕೆಗಳ ವಿರುದ್ಧ ಹೋರಾಡಲಿದೆ.

  ಸೋನಿ ಬ್ರಾವಿಯಾ XR ಮಾಸ್ಟರ್ ಸರಣಿ 85Z9J LED ಟಿವಿ ವೈಶಿಷ್ಟ್ಯಗಳು

  ಸೋನಿ 85Z9J ಟಿವಿ 7,680x4,320 ಪಿಕ್ಸೆಲ್ ಎಲ್ಇಡಿ ಸ್ಕ್ರೀನ್ ಹೊಂದಿದ್ದು, ಎಚ್‌ಡಿಆರ್‌ಗೆ ಡಾಲ್ಬಿ ವಿಷನ್ ಫಾರ್ಮ್ಯಾಟ್ ವರೆಗೆ ಬೆಂಬಲವಿದೆ. ಇದರ ಹೊರತಾಗಿ, ಗೂಗಲ್ ಟಿವಿ ಇಂಟರ್ಫೇಸ್‌ನೊಂದಿಗೆ ಸ್ಮಾರ್ಟ್ ಸಂಪರ್ಕಕ್ಕಾಗಿ ಆಂಡ್ರಾಯ್ಡ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಗೂಗಲ್ ಕ್ರೋಮ್‌ಕಾಸ್ಟ್ ಮತ್ತು ಆಪಲ್ ಏರ್‌ಪ್ಲೇ ಅನ್ನು ಸಹ ಬೆಂಬಲಿಸುತ್ತದೆ.

  ಸೋನಿ ಎಕ್ಸ್‌ಆರ್ ಟಿವಿ ಕಾಗ್ನಿಟಿವ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ, ಇದೆ ಆಯ್ಕೆಯಲ್ಲಿ ಕಂಪನಿಯ ಇತರ ಕೆಲವು ಟಿವಿಗಳನ್ನು ಈ ವರ್ಷ ಲಾಂಚ್​ ಮಾಡಲಿದೆ.

  ಸೋನಿ ಬ್ರಾವಿಯಾ XR ಮಾಸ್ಟರ್ ಸರಣಿ 85Z9J 8K LED TV ಎರಡು ಸ್ಪೀಕರ್ ಸೆಟಪ್ ಮೂಲಕ 85W ನ ಮಧ್ಯಮ ಶ್ರೇಣಿಯ ಔಟ್​​ಪುಟ್ ನೀಡುತ್ತಿದೆ​. ನಾಲ್ಕು ಟ್ವೀಟರ್ಸ್​ಗಳು ಮತ್ತು ನಾಲ್ಕು ಸಬ್ ವೂಫರ್ ಗಳನ್ನು ಒಳಗೊಂಡಿದೆ. ಡಾಲ್ಬಿ ಅಟ್ಮಾಸ್ ಆಡಿಯೋ ಬೆಂಬಲವಿದೆ,

  ಟಿವಿಯಲ್ಲಿ ಆ್ಯಪ್​ ಮತ್ತು ಆಪ್ ಡೇಟಾಕ್ಕಾಗಿ 16 ಜಿಬಿ ಆನ್‌ಬೋರ್ಡ್ ಸಂಗ್ರಹಣೆಯನ್ನು ನೀಡಲಾಗಿದೆ, ಆಪ್‌ಗಳಿಗಾಗಿ ಗೂಗಲ್ ಪ್ಲೇ ಸ್ಟೋರ್ ಸಂಪರ್ಕಿಸಬಹುದಾಗಿದೆ. ಅಂದಹಾಗೆಯೇ ಈ ಟಿಬಿ  ಅಲ್ಟ್ರಾ-ಎಚ್​ಡಿ ರೆಸೊಲ್ಯೂಶನ್‌ನಲ್ಲಿ 120Hz ವರೆಗಿನ ರಿಫ್ರೆಶ್ ದರವನ್ನು ಹೊಂದಿದೆ.

  Read Also ⇒ Instagram: ಆ್ಯಂಡ್ರಾಯ್ಡ್ ಮತ್ತು ಐಫೋನ್​​ನಲ್ಲಿ ‘‘Dark Mode‘‘ ಸಕ್ರಿಯಗೊಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

  ಸ್ಯಾಮ್‌ಸಂಗ್ ಕೂಡ ನಿಯೋ ಕ್ಯೂಎಲ್‌ಇಡಿ ಟಿವಿ- Samsung Neo QLED TV

  ಸ್ಯಾಮ್‌ಸಂಗ್ ಕೂಡ ನಿಯೋ ಕ್ಯೂಎಲ್‌ಇಡಿ ಟಿವಿ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕೊರಿಯಾದ ಕಂಪನಿ ಕ್ವಾಂಟಮ್ ಮಿನಿ-ಎಲ್ಇಡಿ ಲೈಟ್ ಸೋರ್ಸ್ ಮತ್ತು ನಿಯೋ ಕ್ವಾಂಟಮ್ ಪ್ರೊಸೆಸರ್‌ಗಳ ಬೆಂಬಲದೊಂದಿಗೆ ನಿಯೋ ಕ್ಯೂಎಲ್‌ಇಡಿ ಟಿವಿಯನ್ನು ಪಡಿಚಯಿಸಿದೆ.

  ಸ್ಯಾಮ್‌ಸಂಗ್ ನಿಯೋ ಕ್ಯೂಎಲ್‌ಇಡಿ ಟಿವಿಗಳು 8ಕೆ ಮತ್ತು 4ಕೆ ವೇರಿಯೆಂಟ್‌ಗಳಲ್ಲಿ ಬರುತ್ತವೆ ಮತ್ತು 50 ಇಂಚಿನಿಂದ 85 ಇಂಚಿನವರೆಗೆ ಐದು ವಿಭಿನ್ನ ಗಾತ್ರಗಳನ್ನು ಹೊಂದಿವೆ. ನಿಯೋ ಕ್ಯೂಎಲ್‌ಇಡಿ ಟಿವಿ ಸರಣಿಯನ್ನು ಆರಂಭದಲ್ಲಿ ಸ್ಯಾಮ್‌ಸಂಗ್ ತನ್ನ ಪೂರ್ವ ಸಿಇಎಸ್ 2021 ವರ್ಚುವಲ್ ಈವೆಂಟ್‌ನಲ್ಲಿ ಈ ವರ್ಷದ ಆರಂಭದಲ್ಲಿ ಅನಾವರಣಗೊಳಿಸಿತು.

  ಸ್ಯಾಮ್‌ಸಂಗ್ ನಿಯೋ ಕ್ಯೂಎಲ್‌ಇಡಿ ಟಿವಿ ಬೆಲೆ 99,990 ರೂ ಆಗಿದೆ.
  Published by:Harshith AS
  First published: