Mobile Phone Rules: ಇನ್ನೊಬ್ಬರ ಫೋನ್ ಮುಟ್ಟಿದ್ರೆ ಜೈಲು, ಮೊಬೈಲ್ ಫೋನ್ ಬಳಸಲು ಹೊಸಾ ರೂಲ್ಸ್

Smartphone Rules: ಸ್ಮಾರ್ಟ್​ಫೋನ್​ ಬಳಕೆ ವಿಚಾರವಾಗಿ ನೆರೆಯ ಪಾಕಿಸ್ತಾನ (Pakistan) ಹೊಸ ಕಾನೂನು ರೂಪಿಸಿದೆ. ಸ್ಮಾರ್ಟ್​ಫೋನ್​ ಗೆ ಸಂಬಂಧಿಸಿದಂತೆ ಹಲವು ದೇಶಗಳಲ್ಲಿ ವಿಚಿತ್ರ ಕಾನೂನುಗಳನ್ನು ತರಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಕೊರೊನಾ ಕಾಲಘಟ್ಟದಲ್ಲಿ ಸ್ಮಾರ್ಟ್‌ಫೋನ್‌ಗಳ (Smartphone) ಬಳಕೆ ಹೆಚ್ಚಾಗಿದೆ. ಸ್ಮಾರ್ಟ್​ಫೋನ್​ ದೈನಂದಿನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ಮಕ್ಕಳಿರಲಿ, ಮುದುಕರಿರಲಿ ಇಂದು ಎಲ್ಲರ ಕೈಯಲ್ಲೂ ಮೊಬೈಲ್ ಬಂದುಬಿಟ್ಟಿದೆ. ಇಂತಹ ಪರಿಸ್ಥಿತಿಯ ನಡುವೆ ಸ್ಮಾರ್ಟ್​ಫೋನ್​ಗಳಿಂದಾಗುವ ಅವಾಂತರಗಳು ಕೂಡ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಸ್ಮಾರ್ಟ್​ಫೋನ್​ ಬಳಕೆ ಹೆಚ್ಚಾಗಿ ಆರೋಗ್ಯ (Health) ಸಮಸ್ಯೆ ಕಾಣಿಸಿಕೊಳ್ಳುವುದು ಒಂದೆಡೆಯಾದರೆ, ಮತ್ತೊಂದೆಡೆ ಇಂಟರ್​ನೆಟ್ (Internet)​ ಬಳಕೆಯಿಂದ ಸಮಸ್ಯೆಯಲ್ಲಿ ಸಿಲುಕುವುದು, ಹಣ ಕಳೆದುಕೊಳ್ಳುವುದು ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಕಣ್ಣೆದುರಿಗೆ ಇಂತಹ ಸಾವಿರಾರು ಘಟನೆಗಳು ಬೆಳಕಿಗೆ ಬಂದರು ಸ್ಮಾರ್ಟ್​ಫೋನ್​ ಬಳಕೆ ಕಡಿಮೆಯಾಗುತ್ತಿಲ್ಲ. ಕೊರೊನಾ ಸಮಯದಲ್ಲಂತೂ ವಿಪರೀತ ಇಂಟರ್​ನೆಟ್​ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ. ಮನೆಯಿಂದ ಹೊರ ಹೋಗದೆ ಇರಲಾಗದೆ ಸ್ಮಾರ್ಟ್​ಫೋನ್​ನಲ್ಲಿ ತಿಂಗಳಾನುಗಟ್ಟಲೆ ಸಮಯ ಕಳೆದವರಿದ್ದಾರೆ. ಅತಿಯಾದರೆ ಅಮೃತವು ವಿಷ ಎಂಬಂತೆ ಸ್ಮಾರ್ಟ್​ಫೋನ್​ ಬಳಕೆ ಹೀಗೆ ಹೆಚ್ಚಾಗುತ್ತಾ ಹೋದರೆ ಒಂದು ದಿನ ಮಾರಕ ಕಂಡಿತ.

  ಸ್ಮಾರ್ಟ್​ಫೋನ್​ ಬಳಕೆ ವಿಚಾರವಾಗಿ ನೆರೆಯ ಪಾಕಿಸ್ತಾನ (Pakistan) ಹೊಸ ಕಾನೂನು ರೂಪಿಸಿದೆ. ಸ್ಮಾರ್ಟ್​ಫೋನ್​ ಗೆ ಸಂಬಂಧಿಸಿದಂತೆ ಹಲವು ದೇಶಗಳಲ್ಲಿ ವಿಚಿತ್ರ ಕಾನೂನುಗಳನ್ನು ತರಲಾಗಿದೆ.

  ಪಾಕಿಸ್ತಾನದಲ್ಲಿ ಹೊಸ ಕಾನೂನು ಬಂದಿದೆ

  ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ತಂದ ಮಸೂದೆ ಸದ್ಯ ಸುದ್ದಿಯಲ್ಲಿದೆ, ಅದರ ಪ್ರಕಾರ ಮಾಲೀಕನ  ಅನುಮತಿಯಿಲ್ಲದೆ ಬೇರೊಬ್ಬ ಅವರ ಮೊಬೈಲ್ ಫೋನ್ ಅನ್ನು ಸ್ಪರ್ಶಿಸುವಂತಿಲ್ಲ. ಒಂದು ವೇಳೆ ಇಂತಹ ಘಟನೆ ಬೆಳಕಿಗೆ ಬಂದರೆ ಅವರಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸುವುದಾಗಿ ಹೇಳಿದೆ.

  ಚೀನಾದಲ್ಲೊಂದು ಕಾನೂನು

  ಚೀನಾದಲ್ಲಿ ಸಮಯ ಮಿತಿಯೊಂದಿಗೆ ಮಾತ್ರ ಸ್ಮಾರ್ಟ್​ಫೋನ್​ ಬಳಸಲು ಸಾಧ್ಯವಾಗುತ್ತದೆ.
  ಚೀನಾದಲ್ಲಿ ಮಕ್ಕಳು ಮತ್ತು ವಯಸ್ಕರು ವಾರದಲ್ಲಿ 3 ಗಂಟೆಗಳ ಕಾಲ ಮೊಬೈಲ್ ಅಥವಾ ಆನ್‌ಲೈನ್ ಆಟಗಳನ್ನು ಆಡಬಹುದು ಎಂಬ ನಿಯಮವನ್ನು ಮಾಡಲಾಗಿತ್ತು. ಇದಲ್ಲದೇ ಮೊಬೈಲ್ ನಲ್ಲಿ ಗೇಮ್ ಆಡುತ್ತಿರುವುದು ಕಂಡು ಬಂದಲ್ಲಿ ಗೇಮ್ ಒದಗಿಸುವವರ ಮೇಲೆ ಹಾಗೂ ಆಟಗಾರರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತ್ತು.

  ಚೀನಾದ ಜನಸಂಖ್ಯೆಯು ಹೆಚ್ಚು ಇರುವುದರಿಂದ, ಚೀನಾದಲ್ಲಿ ಮೊಬೈಲ್ ಅನ್ನು ಮಿತಿಗಿಂತ ಹೆಚ್ಚು ಬಳಸಲಾಗುತ್ತದೆ. ಆದ್ದರಿಂದ ಜನರು ಹೆಚ್ಚು ಫೋನ್ ಖರೀದಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಯಾರಾದರೂ ಹೊಸ ಮೊಬೈಲ್ ತೆಗೆದುಕೊಂಡರೆ ಅಥವಾ ಹೊಸ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡರೆ ಅವರ ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ ಎಂಬ ನಿಯಮವನ್ನು ಈ ಹಿಂದೆ ಹೊರಡಿಸಲಾಗಿತ್ತು.

  ಜಪಾನಿಗರು ರಸ್ತೆ ಮೇಲೆ ಮೊಬೈಲ್​ ಒತ್ತುವಂತಿಲ್ಲ

  ಮೊಬೈಲ್​ ಬಳಕೆ ಎಷ್ಟೆಂದರೆ ಕೆಲವರಿಗೆ ರಸ್ತೆಯಲ್ಲೂ ಮೊಬೈಲ್​ ಒತ್ತುವ ಚಟವಿದೆ. ಹೀಗಾಗಿ ಜಪಾನ್ ನಲ್ಲೂ ಮೊಬೈಲ್ ಚಟದಿಂದ ಮುಕ್ತಿ ಹೊಂದುವ ನಿಟ್ಟಿನಲ್ಲಿ ಆಡಳಿತ ಮಂಡಳಿಯವರು ರಸ್ತೆಯಲ್ಲಿ ನಡೆದುಕೊಂಡು ಮೊಬೈಲ್ ನೋಡುತ್ತಿದ್ದರೆ ದೊಡ್ಡ ದಂಡ ವಿಧಿಸುವ ನಿಯಮ ರೂಪಿಸಿದೆ.

  ಕರೆ ಮಾಡುವಂತಿಲ್ಲ!

  ಮೊಬೈಲ್‌ನ ದೊಡ್ಡ ಪ್ರಯೋಜನವೆಂದರೆ ನೀವು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಫೋನ್ ಅನ್ನು ಬಳಸಬಹುದು. ಆದರೆ ಪೋರ್ಚುಗಲ್‌ನಲ್ಲಿ ಕಂಪನಿಯ ಮುಖ್ಯಸ್ಥರು ತಮ್ಮ ಉದ್ಯೋಗಿಗಳಿಗೆ ಕಚೇರಿ ಸಮಯದ ನಂತರ ಕರೆ ಮಾಡುವಂತಿಲ್ಲ ಎಂಬ ಹೊಸ ನಿಯಮವನ್ನು ಮಾಡಲಾಗಿದೆ.

  ಕಾರು ಚಲಾಯಿಸುವಾಗ ಫೋನ್​ ಬಳಕೆ ನಿಷೇಧ

  ಅಂದಹಾಗೆ, ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸುವುದು ಬಹಳ ಅಪಾಯ. ಏಕೆಂದರೆ ಮೊಬೈಲ್​ ಮೇಲೆ ಗಮನ ಕೇಂದ್ರೀಕೃತವಾಗಿ ಅಪಘಾತವಾಗುವ ಸಾಧ್ಯತೆಯಿದೆ. ಆದರೆ ಕಾರು ನಿಲ್ಲಿಸಿ ಮೊಬೈಲ್ ನೋಡಿದರೆ ಅಭ್ಯಂತರವಿಲ್ಲ. ಫ್ರಾನ್ಸ್‌ನಲ್ಲೂ ಮೊಬೈಲ್​ ಬಳಕೆದಾರರಿಗೆ ಇಂತಹ ನಿಯಮವನ್ನು ರೂಪಸಿಲಾಗಿದೆ.

  ಅಂತರರಾಷ್ಟ್ರೀಯ ಕರೆ ಮಾಡುವಂತಿಲ್ಲ!

  ಸಾಮಾನ್ಯವಾಗಿ ಉದ್ಯೋಗಕ್ಕಾಘಿ ವಿದೇಶ ತೆರಳುವವರು ಬಹುತೇಕರಿದ್ದಾರೆ. ಬಿಡುವಿದ್ದಾಗ ವಿದೇಶದಲ್ಲಿರುವವರು ತಮ್ಮ ಮನೆಗೆ, ಸಂಬಂಧಿಕರಿಗೆ ಫೋನ್​ ಕರೆ ಮಾಡುತ್ತಾರೆ. ಆದರೆ ಉತ್ತರ ಕೊರಿಯಾದಲ್ಲಿ ಅಂತರಾಷ್ಟ್ರೀಯ ಕರೆಗಳನ್ನು ಮಾಡುವಂತಿಲ್ಲ. ಒಂದು ವೇಳೆ ಅಲ್ಲಿಯ ಜನರು ವಿದೇಶಿಗನಿಗೆ ಕರೆ ಮಾಡಿದರೆ ಶಿಕ್ಷೆ ಕಡ್ಡಾಯ.
  Published by:Harshith AS
  First published: