Facebook: ಹೊಸ ಹೆಸರಿನೊಂದಿಗೆ ಬರಲಿದೆ ಫೇಸ್​ಬುಕ್​! ಇಷ್ಟೆಲ್ಲಾ ಚಿಂತನೆ ಯಾಕಾಗಿ?

Facebook Rebrand: ದಿ ವರ್ಜ್ ಹೇಳಿದಂತೆ, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​ಗಳ ಮಾತೃ ಕಂಪನಿಯಾದ ಫೇಸ್​ಬುಕ್ ತನ್ನ ಬ್ರಾಂಡ್​ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂದು ತಿಳಿಸಿದೆ.

Facebook/ ಫೇಸ್​ಬುಕ್

Facebook/ ಫೇಸ್​ಬುಕ್

 • Share this:
  ಜನಪ್ರಿಯ ಫೇಸ್​​ಬುಕ್ (Facebook) ವಿಶ್ವದಾದ್ಯಂತ​ ಸಾಕಷ್ಟು ಬಳಕೆದಾರರನ್ನು ಹೊಂದಿದೆ. ಮಾತ್ರವಲ್ಲದೆ. ತನ್ನ ಫ್ಲಾಟ್​ಫಾರ್ಮ್​ ಮೂಲಕ ಅನೇಕ ಜನರಿಗೆ ಉದ್ಯೋಗ ಕಲ್ಪಿಸಿದೆ, ವ್ಯಾಪಾರವನ್ನು ವಿಸ್ತರಿಸಿದೆ. ಇವಿಷ್ಟು ಮಾತ್ರವಲ್ಲದೆ, ಇನ್​ಸ್ಟಾಗ್ರಾಂ (Instagram) ಮತ್ತು ವಾಟ್ಸ್​ಆ್ಯಪ್​ (Whatsapp) ಎಂಬಂತದ ವಿಶೇಷ ಫ್ಲಾರ್ಟ್​ಫಾರ್ಮ್​ ಅನ್ನು ಹುಟ್ಟುಹಾಕುವ ಮೂಲಕ ಅದರ ಜನಪ್ರಿಯತೆಗೆ ಕಾರಣವಾಗಿದೆ. ಹೀಗಿರುವಾಗ ಫೇಸ್​ಬುಕ್​ ತನ್ನ ಬ್ರಾಂಡ್​ ಹೆಸರನ್ನು ಬದಲಾಯಿಸಿಕೊಳ್ಳಲು ಮುಂದಾಗಿದೆ ಎಂಬ ಮಾತು ಕೇಳಿಬಂದಿದೆ.

  ದಿ ವರ್ಜ್ ಹೇಳಿದಂತೆ, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​ಗಳ ಮಾತೃ ಕಂಪನಿಯಾದ ಫೇಸ್​ಬುಕ್ ತನ್ನ ಬ್ರಾಂಡ್​ ಹೆಸರನ್ನು ಬದಲಾಯಿಸಲು ಮುಂದಾಗಿದೆ ಎಂದು ತಿಳಿಸಿದೆ.

  ವ್ಯಕ್ತಿಯೊಬ್ಬರು ಈ ಹಿಂದೆ ಹೇಳಿದಂತೆ ಸಾಮಾಜಿಕ ಮಾಧ್ಯಮ ಕಂಪನಿಯಾಗಿರುವ ಫೇಸ್​ಬುಕ್​ ಮೆಟಾವರ್ಸ್​ ಕಂಪನಿಯಾಗಿ ಪರಿಣಾಮಕಾರಿಯಾಗಿ ಪರಿವರ್ತನೆಗೊಳ್ಳಲು ಬಯಸುತ್ತಿದೆ ಎಂದು ಹೇಳಲಾಗುತ್ತಿದೆ. ಫೇಸ್​ಬುಕ್​ 10 ಸಾವಿರಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಜೊತೆಗೆ ಏರ್​ಆರ್​ ನಂತರ ಗ್ಲಾಸ್​ ಉತ್ಪಾದಿಸುತ್ತಿದೆ. ನೂತನ ಸ್ಮಾರ್ಟ್​ಗ್ಲಾಸ್​ ಸ್ಮಾರ್ಟ್​ಫೋನ್​ನಂತೆಯೇ ಸರ್ವವ್ಯಾಪಿಯಾಗಲಿದೆ ಎಂದು ಫೇಸ್​ಬುಕ್​ ಸಿಇಒ ಜುಕರ್​ಬರ್ಗ್​ ಈ ಹಿಂದೆ ಹೇಳಿದ್ದಾರೆ.

  ವರದಿಗಳ ಪ್ರಕಾರ, ಜುಕರ್​ಬರ್ಗ್​ ಯೋಚಿಸುತ್ತಿರುವಂತೆ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​ ಭವಿಷ್ಯದ ಕೆಲಸ ಮತ್ತು ಖಠಿಣ ಪರಿಶೀಲನೆಯ ಜೊತೆಗೆ ಪ್ರತ್ಯೇಕವಾಗಿ ಕಾಣಿಸಲಿದೆ ಎಂದು ಹೇಳಲಾಗುತ್ತಿದೆ.

  ಅಂದಹಾಗೆಯೇ ಹೊಸ ಫೇಸ್‌ಬುಕ್ ಕಂಪನಿಯ ಹೆಸರನ್ನು ಗುಟ್ಟಾಗಿ ಇಡಲಾಗಿದೆ ಮತ್ತು ಅದರ ಪೂರ್ಣ ಹೆಸರಿನ ಬಗ್ಗೆ ವ್ಯಾಪಕವಾಗಿ ಯಾರಿಗೂ ತಿಳಿದಿಲ್ಲ ಎಂದು ವರದಿ ಹೇಳಿದೆ. ಕಂಪನಿಯು ಮುಂದಿನ ಪೀಳಿಗೆಯ ತಂತ್ರಜ್ಞಾನ - ಮೆಟಾವರ್ಸ್‌ಗಾಗಿ ಸ್ಥಿರವಾಗಿ ನೀಲನಕ್ಷೆಯನ್ನು ಹಾಕುತ್ತಿದೆ ಮತ್ತು ಈಗಾಗಲೇ ಮೀಸಲಾದ ತಂಡವನ್ನು ಸ್ಥಾಪಿಸಿದೆ. ಯುರೋಪಿನಲ್ಲಿ ಮೆಟಾವರ್ಸ್‌ನಲ್ಲಿ ಕೆಲಸ ಮಾಡಲು 10,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ಘೋಷಿಸಿದೆ.

  ಆದರೀಗ ಫೇಸ್​ಬುಕ್ ತನ್ನ ಬ್ರಾಂಡ್​ ಹೆಸರನ್ನು ಬದಲಾಯಿಸಲು ಚಿಂತೆ ಮಾಡಿದೆ ಎನ್ನಲಾಗುತ್ತಿದೆ. 2015 ರಲ್ಲಿ ಗೂಗಲ್ ಹಿಡುವಳಿ ಕಂಪನಿ ಆಲ್ಫಾಬೆಟ್ ಅಡಿಯಲ್ಲಿ ಫೇಸ್​ಬುಕ್ ಅನ್ನು ಮರುಸಂಘಟಿಸಿತು, ಮತ್ತು 2016 ರಲ್ಲಿ ಸ್ನ್ಯಾಪ್‌ಚಾಟ್ ಅನ್ನು ಸ್ನ್ಯಾಪ್ ಇಂಕ್‌ಗೆ ಮರುಬ್ರಾಂಡ್ ಮಾಡಲಾಯಿತು.

  ಇದನ್ನು ಓದಿ: Phone Explodes: ಆನ್‌ಲೈನ್ ತರಗತಿಯ ಸಮಯದಲ್ಲಿ ಸ್ಮಾರ್ಟ್​ಫೋನ್ ಸ್ಫೋಟಗೊಂಡು ವಿದ್ಯಾರ್ಥಿ ಸಾವು  Facebooks next hardware launch will be its Ray Ban smart glasses
  ಮಾರ್ಕ್​​ ಜುಕರ್​​ಬರ್ಗ್​​


  ಫೇಸ್​ಬುಕ್​ ಸ್ಮಾರ್ಟ್​ಗ್ಲಾಸ್​:

  ನಿಖರವಾಗಿ ಒಂದು ವರ್ಷದ ಹಿಂದೆ, ಫೇಸ್​ಬುಕ್​ ವರ್ಚುವಲ್ ರಿಯಾಲಿಟಿ (ವಿಆರ್) ವಿಭಾಗದ ಉಪಾಧ್ಯಕ್ಷ ಹ್ಯೂಗೊ ಬಾರ್ರಾ ಅವರು ರೇ-ಬನ್ ಕಂಪೆನಿಯೊಂದಿಗೆ ಕೈಜೋಡಿಸಿ 2021 ರಲ್ಲಿ ಸುಧಾರಿತ ಸ್ಮಾರ್ಟ್ ಗ್ಲಾಸ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಬಿಡುಗಡೆ ಮಾಡುವುದಾಗಿ ಹೇಳಿದ್ದರು.

  ಅದರಂತೆ ಇದೀಗ ಎರಡು ಕಂಪನಿಗಳು ಕೈ ಜೋಡಿಸಿಕೊಂಡು ವಾರದ ಕೊನೆಯಲ್ಲಿ ಬಹುನಿರೀಕ್ಷಿತ ಸ್ಮಾರ್ಟ್ ವೇರಬಲ್ ಸ್ಮಾರ್ಟ್​ಗ್ಲಾಸ್ ಅನ್ನು ತರಲು ಸಜ್ಜಾಗಿವೆ. ಅದಕ್ಕಾಗಿ ಇಂದು ರೇ-ಬ್ಯಾನ್ ಮತ್ತು ಫೇಸ್​ಬುಕ್ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ.

  ಫೇಸ್​ಬುಕ್ ಮತ್ತ ರೇ-ಬನ್ ಸಹಯೋಗಿತ್ವದಲ್ಲಿ ಬರುವ ಸ್ಮಾರ್ಟಗ್ಲಾಸ್ ಕೊಂಚ ವಿಶೇಷವಾಗಿದ್ದು, ಗೂಗಲ್ ಗ್ಲಾಸ್​ಗಳಂತೆ ಅಥವಾ ಹಿಂದೆ ಹೊರಬಂದ ಲೆನ್ಸ್​ಗಳಗಿಂತಲೂ ವಿಶೇಷವಾಗಿರಲಿದೆ

  ಟೀಸರ್ ಚಿತ್ರದಲ್ಲಿ ಕಾಣುವಂತೆ, ಫೇಸ್​ಬುಕ್ –ರೇ-ಬನ್ ಸ್ಮಾರ್ಟ್ ಗ್ಲಾಸ್​ಗಳು ಕ್ಲಾಸಿಕ್ ರೇ-ಬನ್ ಸನ್ ಶೇಡ್ಸ್ ವಿನ್ಯಾಸವನ್ನು ಹೊಂದಿರುತ್ತವೆ ಆದರೆ ಉತ್ತಮ ಬಳಕೆದಾರ ಅನುಭವವನ್ನು ನೀಡುತ್ತದೆ.

  ಮಾರ್ಕ್ ಜುಕರ್ಬರ್ಗ್ ಹೇಳಿದಂತೆ, ಹೊಸ ಗ್ಯಾಜೆಟ್ ಪೂರ್ಣ ಪ್ರಮಾಣದ "ವರ್ಧಿತ ರಿಯಾಲಿಟಿ ಗ್ಲಾಸ್" ಆಗಿರುತ್ತದೆ ಎಂದಿದ್ದಾರೆ.

  ಇದನ್ನು ಓದಿ:Log-in to God: ಆ್ಯಪ್​ ಬಳಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ!, ‘‘ಕ್ಲಿಕ್ ಟು ಪ್ರೇ‘‘ಮತ್ತೆ ಆರಂಭಿಸಿದ ಪೋಪ್​ ಫ್ರಾನ್ಸಿಸ್​

  ಫೇಸ್ಬುಕ್ ರಿಯಾಲಿಟಿ ಲ್ಯಾಬ್ಸ್ (ಎಫ್ಆರ್ಎಲ್) ಸಂಶೋಧನೆಯು ಹೊಸ-ವಯಸ್ಸಿನ ರಿಸ್ಟ್ಬ್ಯಾಂಡ್ ಅನ್ನು ಅಭಿವೃದ್ಧಿಪಡಿಸಿದೆ, ಇದು ಹಾರ್ಡ್ವೇರ್ ಮಿತಿ ಮತ್ತು ಬಹು ಬಳಕೆದಾರ ಇಂಟರ್ಫೇಸ್​ಗಳ ತಡೆಗೋಡೆಗಳನ್ನು ತೊಡೆದುಹಾಕಲಿದೆ.

  ನೂತನ ರಿಸ್​ಬ್ಯಾಂಡ್ ಮೃದುವಾದ ರೊಬೊಟಿಕ್​ನಲ್ಲಿ ಎಫ್ಆರ್​ಎಲ್​ನಲ್ಲಿ ಅದ್ಭುತ ಕಾರ್ಯವನ್ನು ಮಾಡುತ್ತದೆ. ಮಣಿಕಟ್ಟಿನ ನರಗಳಿಂದ ನೇರವಾಗಿ ಮಾನವ-ಕಂಪ್ಯೂಟರ್​ನಲ್ಲಿ ಕಾರ್ಯನಿರ್ವಹಿಸುತ್ತದೆ.
  Published by:Harshith AS
  First published: