Snapdeal: ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್ ನೀಡಿದ ಸ್ನಾಪ್​​ಡೀಲ್; ಅ.16ರಿಂದ ದಿವಾಳಿ ಸೇಲ್ ಪ್ರಾರಂಭ

Snapdeal Diwali sale 2020: ಅಕ್ಟೋಬರ್​ 16 ರಿಂದ ಸ್ನಾಪ್​ಡೀಲ್​ ದಿವಾಳಿ ಸೇಲ್​ ಆಯೋಜನೆ ಮಾಡಿದ್ದು, ಅ.20ರವರೆಗೆ ನಡೆಯಲಿದೆ. ಬಳಕೆದಾರರಿಗೆ ಬೇಕಾಗುವ ಆಕರ್ಷಕ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ.

ಸ್ನಾಪ್​ಡೀಲ್​

ಸ್ನಾಪ್​ಡೀಲ್​

 • Share this:
  ದೀಪಾವಳಿ ಹಬ್ಬದ ಸಡಗರಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ಆನ್​​ಲೈನ್​ ಮಾರಾಟ ಮಳಿಗೆಯಾದ ಸ್ನಾಪ್​ಡೀಲ್​ ತನ್ನ ಗ್ರಾಹಕರಿಗಾಗಿ ‘ ದಿವಾಳಿ ಸೇಲ್’​ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಭರ್ಜರಿ ಆಫರ್​ ಹೊರಡಿಸುವ ಮೂಲಕ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತಿದೆ.

  ಅಕ್ಟೋಬರ್​ 16 ರಿಂದ ಸ್ನಾಪ್​ಡೀಲ್​ ದಿವಾಳಿ ಸೇಲ್​ ಆಯೋಜನೆ ಮಾಡಿದ್ದು, ಅ.20ರವರೆಗೆ ನಡೆಯಲಿದೆ. ಬಳಕೆದಾರರಿಗೆ ಬೇಕಾಗುವ ಆಕರ್ಷಕ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಿದೆ.

  ಅಡುಗೆ ಸಾಮಾಗ್ರಿ, ಪಿರೋಪಕರಣ, ಸೀರೆ, ಕುರ್ತಾ, ಸೂಟ್​, ಫ್ಯಾಷನ್​, ವಾಚ್​, ವಾಲೆಟ್​ ಹೀಗೆ ಹಲವು ವಸ್ತುಗಳ ಮೇಲೆ ಆಫರ್​ ಹೊರಡಿಸಿದೆ. ಜೊತೆಗೆ ಹೆಚ್​​ಡಿಎಫ್​ಸಿ, ಬ್ಯಾಂಕ್​ ಆಫ್​ ಬರೋಡಾ, ರತ್ನಾಕರ್​ ಬ್ಯಾಂಕ್​, ಪೇಟಿಯಂ ಮೂಲಕ ವಸ್ತು ಅಥವಾ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಆಕರ್ಷಕ ಡಿಸ್ಕೌಂಟ್​ ನೀಡುತ್ತಿದೆ.

  ಫ್ಲಿಪ್​ಕಾಟ್​ ಕೂಡ ಇದೇ 16ರಿಂದ ಬಿಗ್​ ಬಿಲಿಯನ್​ ಡೇಸ್​ ಸೇಲ್​ ಆಯೋಜನೆ ಮಾಡಿದೆ. ಅದರಂತೆ ರಿಯಲ್​ಮಿ ಅದೇ ದಿನದಂದು ‘ಫೆಸ್ಟೀವ್​ ಡೇಸ್​ ಸೇಲ್’​ ಹಮ್ಮಿಕೊಂಡಿದೆ. ಇನ್ನು ಅಮೆಜಾನ್​ ಅ.17ರಂದು​ ‘ಗ್ರೇಟ್​​ ಇಂಡಿಯನ್​’ ಸೇಲ್​ ಆಯೋಜನೆ ಮಾಡಿದೆ.

  ಈ ಬಾರಿಯ ದೀಪಾವಳಿ ಹಬ್ಬಕ್ಕೆ ಆನ್​ಲೈನ್​​ ಮಳಿಗೆಗಳು ಭರ್ಜರಿ ಆಫರ್​ಗಳನ್ನು ಹೊರಡಿಸಿದೆ. ಆ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರಮಾಲು ಮುಂದಾಗಿದೆ.
  Published by:Harshith AS
  First published: