ಏನಿದು #KidsNotForSale ಅಭಿಯಾನ?


Updated:July 30, 2018, 4:44 PM IST
ಏನಿದು #KidsNotForSale  ಅಭಿಯಾನ?

Updated: July 30, 2018, 4:44 PM IST
ಭಾರತದ ಇಕಾಮರ್ಸ್​ ಮಾರುಕಟ್ಟೆ ಸ್ನಾಪ್​ಡೀಲ್​ ಮಕ್ಕಳ ಹೊಸ ಅಭಿಯಾನವನ್ನು ಹೊರಡಿಸಿದ್ದು, ಮಕ್ಕಳ ಮಾರಾಟ ಜಾಲದ ವಿರುದ್ಧ ಕಿಡಿಕಾರಿರುವ ಸ್ನಾಪ್​ಡೀಲ್​ ಹೊಸದಾಗಿ 'ಮಾರಾಟ' ಪೇಜ್​ವೊಂದನ್ನು ಹುಟ್ಟುಹಾಕಿದೆ.

ಮಕ್ಕಳ ಮಾರಾಟಕ್ಕಾಗಿ ಈಜಾಗವಿಲ್ಲ, ಆದರೆ ಮಕ್ಕಳು ಮಾರಾಟವಾಗುತ್ತಿದ್ದಾರೆ ಎಂಬ ಘೋಷಣೆಯಲ್ಲಿ ಸೇಲ್ಸ್​ ಎಂಬ ಮಾರಾಟದ ಹೊಸ ಸೆಕ್ಷನ್​ನ್ನು ಹುಟ್ಟುಹಾಕಿದೆ. ಸೇವ್​ ಚಿಲ್ಡ್ರೆನ್​ ಎಂಬ ಪೌಂಡೇಷನ್​ನೊಂದಿಗೆ ಈ ಅಭಿಯಾನವನ್ನು ಸ್ನಾಪ್​ಡೀಲ್​ ಆರಂಭಿಸಿದ್ದು, ಮಕ್ಕಳ ಮಾರಾಟ ಜಾಲದಿಂದ ರಕ್ಷಿಸಲು ಸಹಾಯಧನವನ್ನು ಕೂಡಾ ಪಡೆಯುತ್ತಿದೆ.

ಈಕಾಮರ್ಸ್​ ಸಂಸ್ಥೆಯ ಈ ನಡೆಯಿಂದ ಭಾರತದಲ್ಲಿ ಮಕ್ಕಳ ಮಾರಾಟವನ್ನು ತಡೆಗಟ್ಟಲು ಎರಡು ರೀತಿಯಲ್ಲಿ ಸಾಧ್ಯವಾಗುತ್ತದೆ. ಮೊದಲನೇಯದಾಗಿ ಪ್ರಧಾನ ಮಂತ್ತಿಯವರೇ ಸೂಚಿಸಿದಂತೆ ಚೇಂಜ್​ ಎಂಬ ವೆಬ್​ಸೈಟ್​ನಲ್ಲಿ ಪೆಟಿಷನ್​ ಕೂಡಾ ಜಾರಿಗೊಳಿಸಬಹುದು. ಅಲ್ಲದೇ ಮೋದಿಯೇ ಹೇಳಿದಂತೆ ನಮ್ಮ ದೇಶದಲ್ಲಿ ಪ್ರತಿನಿತ್ಯ 174 ಮಕ್ಕಳು ಕಾಣೆಯಾಗುತ್ತಾರೆ. ಇದನ್ನು ನಿಲ್ಲಿಸಲು ಸ್ನಾಪ್​ಡೀಲ್​ ಐದು ಯೋಜನೆಗಳನ್ನು ಚಾಲ್ತಿಗೆ ತರಲು ಸೂಚಿಸಿದೆ.

ಮತ್ತೊಂದು ಕ್ರಮವೆಂದರೆ ಈ ಕಾರ್ಯಕ್ರಮಕ್ಕೆ ಚಂದಾ ಪಡೆಯುತ್ತಿದೆ, ಈ ಚಂದಾ ಹಣವನ್ನು ಮಾರಾಟ ಜಾಲದಿಂದ ರಕ್ಷಿಸಲ್ಪಟ್ಟ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸಲಾಗುತ್ತದೆ. ಶೇ,82ರಷ್ಟು ಹಣವನ್ನು ಈ ಯೋಜನೆಗೆ ಬಳಸಲಾಗುತ್ತದೆ, ಶೇ,14 ರಷ್ಟು ಹಣವನ್ನು ಹೊಸ ಯೋಜನೆಗಳಿಗೆ ಬಳಕೆ ಮಾಡಲಾಗುತ್ತದೆ. ಇನ್ನುಳಿದ ಶೇ,4ರಷ್ಟು ಹಣವನ್ನು ಸಂಸ್ಥೆ ನಿರ್ವಹಣೆಗೆ ಬಳಕೆಯಾಗುತ್ತದೆ ಎಂದು ನಕ್ಷೆ ಮೂಲಕ ಸ್ನಾಪ್​ಡೀಲ್​ ತೋರಿಸಿದೆ.

ಸಂಸ್ಥೆಯ ಮಾರುಕಟ್ಟೆ ಹಾಗು ವ್ಯಾಪಾರ ಅಭಿವೃದ್ಧಿಗಾಗಿ ಸ್ನಾಪ್​ಡೀಲ್​ ಈ ರೀತಿ ಮಾಡುತ್ತಿದೆಯೋ ಇಲ್ಲವೋ ಆದರೆ ಮಕ್ಕಳ ರಕ್ಷಣೆಗೆ ಮುಂದಾದ ಸಂಸ್ಥೆಯ ಯೋಜನೆಯನ್ನು ನಾವು ಮೆಚ್ಚಲೇಬೇಕು.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...