ಟಿಕ್​ಟಾಕ್​ಗೆ ಪೈಪೋಟಿ ನೀಡಲು ಸ್ಪಾಟ್​ಲೈಟ್​ ಫೀಚರ್ ಪರಿಚಯಿಸಿದ ಸ್ನಾಪ್​​ಚಾಟ್​!

ಸ್ನಾಪ್​ಚಾಟ್

ಸ್ನಾಪ್​ಚಾಟ್

ಟಿಕ್​ಟಾಕ್​​ ಆ್ಯಪ್​ಗೆ ಪೈಪೋಟಿ ನೀಡಲು ಅನೇಕ ಆ್ಯಪ್​ಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡುತ್ತಿದ್ದಾರೆ. ಇದೀಗ ಸ್ನಾಪ್​ಚಾಟ್​​ ಕೂಡ ಸ್ಪಾಟ್​ಲೈಟ್​ ಎಂಬ ಹೊಸ ಫೀಚರ್​ ಅನ್ನು ಅಭಿವೃದ್ಧಿ ಪಡಿಸಿದೆ.

  • Share this:

    ಒಂದು ಸಮಯದಲ್ಲಿ ಚೀನಾ ಮೂಲದ ಟಿಕ್​ಟಾಕ್​ ಭಾರತದಲ್ಲಿ ಭಾರೀ ಜನಪ್ರಿಯತೆಗಳಿಸಿತ್ತು. ಆದರೆ ಟಿಕ್​ಟಾಕ್​ ನೀತಿ ನಿಯಮ ಮತ್ತು ಭಾರತದ ಆಂತರಿಕ ಮತ್ತ ಬಾಹ್ಯ ದೃಷ್ಟಿಯನ್ನು ಗಮನಿಸಿ ಕೇಂದ್ರ ಸರ್ಕಾರ ಈ ಆ್ಯಪ್​ ಅನ್ನು ಬ್ಯಾನ್​ ಮಾಡಿತು. ಸದ್ಯ ಭಾರತದಲ್ಲಿ ಈ ಆ್ಯಪ್​ ಬ್ಯಾನ್​ ಆಗಿದ್ದರು ವಿದೇಶದಲ್ಲಿ  ಹವಾ ಸೃಷ್ಟಿಸುತ್ತಿದೆ.


    ಟಿಕ್​ಟಾಕ್​​ ಆ್ಯಪ್​ಗೆ ಪೈಪೋಟಿ ನೀಡಲು ಅನೇಕ ಆ್ಯಪ್​ಗಳನ್ನು ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡುತ್ತಿದ್ದಾರೆ. ಇದೀಗ ಸ್ನಾಪ್​ಚಾಟ್​​ ಕೂಡ ಸ್ಪಾಟ್​ಲೈಟ್​ ಎಂಬ ಹೊಸ ಫೀಚರ್​ ಅನ್ನು ಅಭಿವೃದ್ಧಿ ಪಡಿಸಿದೆ. ಶಾರ್ಟ್​ ವಿಡಿಯೋ ಫೀಚರ್​​ ಇದಾಗಿದ್ದು, ಬೈಟೆಡ್ಯಾನ್​ ಒಡೆತನದ ಟಿಕ್​ಟಾಕ್​ ಮತ್ತು ಇನ್​ಸ್ಟಾಗ್ರಾಂ ರೀಲ್​ ಜೊತೆಗೆ ಸ್ಪರ್ಧಿಸುವಂತೆ ವಿನ್ಯಾಸಗೊಳಿಸಿದ್ದಾರೆ.


    ಬಳಕೆದಾರರು ಸ್ನೇಹಿತರಿಗೆ ಸ್ನಾಪ್​ ಅಥವಾ ಸ್ಟೋರಿಗಳನ್ನು ಹಂಚಿಕೊಳ್ಳಬಹುದು. ಜೊತೆಗೆ ಸ್ಟಾಟ್​ಲೈಟ್​ ಮೂಲಕ ನೇರವಾಗಿ ಹಂಚಿಕೊಳ್ಳಬಹುದಾಗಿದೆ. ಎಂದು ಸ್ನಾಪ್​​ಚಾಟ್​ ತನ್ನ ಬ್ಲಾಗ್​ಪೋಸ್ಟ್​ನಲ್ಲಿ ತಿಳಿಸಿದೆ.\


    ವರ್ಷದ ಪ್ರಾರಂಭದಲ್ಲಿ ಫೇಸ್​ಬುಕ್​ ಸಂಸ್ಥೆ ಇನ್​ಸ್ಟಾಗ್ರಾಂ ರೀಲ್ ಅನ್ನು ಪ್ರಾರಂಭಿಸಿತ್ತು. ಆ ಮೂಲಕ ಟಿಕ್​ಟಾಕ್​ಗೆ ಪೈಪೋಟಿ ನೀಡಿತ್ತು. ಕಿರು ವಿಡಿಯೋ ಹಂಚಿಕೊಳ್ಳುವ ಜನರಿಗೆ ಹೊಸ ಅನುಭವ ನೀಡಿದೆ. ಇದೀಗ ಸ್ನಾಪ್​ಚಾಟ್​ ಕೂಡ ಸ್ಪಾಟ್​ಲೈಟ್​ ಎಂಬ ಹೊಸ ಫೀಚರ್​ ಪರಿಚಯಿಸಿದೆ.

    Published by:Harshith AS
    First published: