ಸಾಮಾಜಿಕ ಮಾಧ್ಯಮ ಸಂಸ್ಥೆ ಸ್ನ್ಯಾಪ್(Snap) ತನ್ನ ಫೋಟೋ ಮೆಸೇಜಿಂಗ್ ಆ್ಯಪ್ ಆದ ಸ್ನ್ಯಾಪ್‌ಚಾಟ್‌ನ(Snapchat) ಕೆಲವು ಬಳಕೆದಾರರಿಗೆ ಓಪನ್‌ಎಐನ ಪ್ರಾಯೋಗಿಕ ಚಾಟ್‌ಬಾಟ್ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ ಎಂದು ತಿಳಿಸಿದೆ. ಮೈ ಎಐ(My AI) ಎಂದು ಹೆಸರಿಸಲಾದ ಚಾಟ್‌ಬಾಟ್(Chatbot) ವೈಶಿಷ್ಟ್ಯವು ಸ್ನ್ಯಾಪ್‌ಚಾಟ್‌ಗಾಗಿ ಕಸ್ಟಮೈಸ್ ಮಾಡಲಾದ ಓಪನ್ ಎಐನ GPT ತಂತ್ರಜ್ಞಾನದ ಇತ್ತೀಚಿನ ಆವೃತ್ತಿಯನ್ನು ರನ್(Run) ಮಾಡುತ್ತದೆ.
ಪ್ರತಿಕ್ರಿಯೆ ಸಲ್ಲಿಸಲು ಬಳಕೆದಾರರಲ್ಲಿ ವಿನಂತಿ
AI ಚಾಟ್‌ಬಾಟ್ ಆರಂಭದಲ್ಲಿ Snapchat+ ಚಂದಾದಾರರಿಗೆ ಪ್ರಾಯೋಗಿಕವಾಗಿ ಹೊರತರಲಿದ್ದು, ಈ ವಾರ ಬಿಡುಗಡೆಯಾಗಲಿದೆ ಎಂದು ವರದಿ ತಿಳಿಸಿದೆ. ಚಾಟ್‌ಬಾಟ್ ಅನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಬಳಕೆದಾರರನ್ನು ವಿನಂತಿಸಿದೆ.
My AI ಸ್ನ್ಯಾಪ್‌ಚಾಟ್‌ನ ಕೆಲವೊಂದು ಚಟುವಟಿಕೆಗಳಾದ ಸ್ನೇಹ, ಕಲಿಕೆ ಹಾಗೂ ವಿನೋದದಾದ್ಯಂತ ವಿಶಿಷ್ಟ ಸ್ವರ ಹಾಗೂ ವ್ಯಕ್ತಿತ್ವ ಹೊಂದಲು ತರಬೇತಿ ನೀಡಲಾಗಿದೆ ಎಂದು ಸಂಸ್ಥೆಯ ವಕ್ತಾರರು ಇಮೇಲ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: WhatsApp: ವಾಟ್ಸಾಪ್ನಿಂದ ಮತ್ತೊಂದು ಹೊಸ ಅಪ್ಡೇಟ್, ಇನ್ಮುಂದೆ ಕಾಲ್ ಶೆಡ್ಯೂಲ್ ಸಹ ಮಾಡಿಡಬಹುದು!
ಬ್ಲಾಗ್‌ನಲ್ಲಿ ಘೋಷಿಸಿದ ಸ್ನ್ಯಾಪ್
ಅಧಿಕೃತ ಬ್ಲಾಗ್ ಪೋಸ್ಟ್‌ನಲ್ಲಿ ಸ್ನ್ಯಾಪ್ ತನ್ನ ಪ್ರಾಯೋಗಿಕ AI ಚಾಟ್‌ಬಾಟ್‌ನ ಬಿಡುಗಡೆಯನ್ನು ಘೋಷಿಸಿತು, ಅದು OpenAI ನ GPT ತಂತ್ರಜ್ಞಾನದ ಇತ್ತೀಚಿನ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಚಾಟ್‌ಬಾಟ್ ಅಥವಾ My AI ಈ ವಾರ ಬಿಡುಗಡೆಯಾಗಲಿದೆ ಮತ್ತು ಸದ್ಯಕ್ಕೆ ಸ್ನ್ಯಾಪ್‌ಚಾಟ್+ ನಲ್ಲಿ ಚಂದಾದಾರರಾಗಿರುವ ಬಳಕೆದಾರರಿಗೆ ಸೀಮಿತವಾಗಿರುತ್ತದೆ.
ಅದಾಗ್ಯೂ ಇದು ಎಲ್ಲಾ ಸ್ನ್ಯಾಪ್‌ಚಾಟ್ ಬಳಕೆದಾರರಿಗೆ ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗಬಹುದು. ಆದರೆ ಕಂಪನಿ ಈ ಕುರಿತು ತನ್ನ ಬ್ಲಾಗ್‌ನಲ್ಲಿ ಯಾವುದೇ ಬೆಳವಣಿಗೆಯ ಬಗ್ಗೆ ಸೂಚನೆ ನೀಡಿಲ್ಲ.
ಕೃತಕ ಬುದ್ಧಿಮತ್ತೆ ಆರಂಭ ಹಂತದಲ್ಲಿ ಕೆಲವೊಂದು ದೋಷಗಳನ್ನುಂಟು ಮಾಡಬಹುದು ಎಂದು ಸ್ನ್ಯಾಪ್ ಸಂಸ್ಥೆ ಸ್ಪಷ್ಟಪಡಿಸಿದೆ. ಇದರೊಂದಿಗೆ ಚಾಟ್‌ಬಾಟ್ ಮೂಲಕ ಯಾವುದೇ "ಪಕ್ಷಪಾತ, ತಪ್ಪು, ಹಾನಿಕಾರಕ ಅಥವಾ ತಪ್ಪುದಾರಿಗೆಳೆಯುವ ಮಾಹಿತಿಯನ್ನು" ತಪ್ಪಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Google Layoffs: ಸ್ಟಾರ್ ಪರ್ಫಾರ್ಮರ್ ಆಗಿ ಆಯ್ಕೆಯಾಗಿದ್ದವನಿಗೆ ಶಾಕ್, ಆತನನ್ನು ಕೆಲಸದಿಂದಲೇ ವಜಾ ಮಾಡಿದ ಗೂಗಲ್!
ಅನಗತ್ಯ ಮಾಹಿತಿ ಬಹಿರಂಗಪಡಿಸುವಂತಿಲ್ಲ
ಮೈಕ್ರೋಸಾಫ್ಟ್‌ನ ಚಾಟ್‌ಜಿಪಿಟಿ ಅಥವಾ ಗೂಗಲ್ ಬಾರ್ಡ್ ನಂತಹ ಇತರ ಚಾಟ್‌ಬಾಟ್‌ಗಳಂತೆಯೇ, ಅನಗತ್ಯ ಮಾಹಿತಿಯನ್ನು ಬಹಿರಂಗಪಡಿಸಲು My AI ಅನ್ನು ಮೋಸದ ಹಾದಿಯಲ್ಲಿ ಬಳಸುವ ಸಾಧ್ಯತೆ ಕೂಡ ಇರುವುದರಿಂದ ಸ್ನ್ಯಾಪ್ ಸಂಸ್ಥೆ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ.
My AI ಪ್ರತಿಕ್ರಿಯೆಯನ್ನು ದೀರ್ಘಕಾಲ ಒತ್ತುವ ಮೂಲಕ ಮತ್ತು ಅದನ್ನು ಸ್ನ್ಯಾಪ್‌ಚಾಟ್ನೊಂದಿಗೆ ಹಂಚಿಕೊಳ್ಳುವ ಮೂಲಕ ಬಳಕೆದಾರರು ನೇರವಾಗಿ ಸ್ನ್ಯಾಪ್‌ಚಾಟ್‌ಗೆ ಪ್ರತಿಕ್ರಿಯೆಯನ್ನು ಕಳುಹಿಸಬಹುದು. ಸ್ನ್ಯಾಪ್‌ಚಾಟ್ ತನ್ನ ಪ್ಲಾಟ್‌ಫಾರ್ಮ್‌ಗೆ AI ಅನ್ನು ಸಂಯೋಜಿಸುವ ಇತ್ತೀಚಿನ ಟೆಕ್ ಕಂಪನಿಯಾಗಿದೆ.
ಮೆಟಾ ಪರಿಚಯಿಸಿರುವ ಸಂಶೋಧನಾ ಸಾಧನ ಲಾಮಾ
ಆದಾಗ್ಯೂ, ಪ್ರಾಯೋಗಿಕ ಚಾಟ್‌ಬಾಟ್ ಅನ್ನು ಪರಿಶೀಲಿಸಲು ಕಂಪನಿಯು ಎಲ್ಲಾ ಸಂಭಾಷಣೆಗಳನ್ನು ಉಳಿಸಿಕೊಳ್ಳಲಿದೆ. ಬಳಕೆದಾರರ ವಿಮರ್ಶೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ, ಕಂಪನಿಯು ಸುಧಾರಣೆಗಾಗಿ ಮತ್ತಷ್ಟು ಬದಲಾವಣೆಗಳನ್ನು ಪರಿಚಯಿಸುವುದಾಗಿ ತಿಳಿಸಿದೆ.
AI ಚಾಟ್‌ಬಾಟ್‌ನೊಂದಿಗೆ ರಹಸ್ಯ ಮಾಹಿತಿ ಮತ್ತು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸುವಂತೆ ಸ್ನ್ಯಾಪ್ ತನ್ನ ಬಳಕೆದಾರರನ್ನು ವಿನಂತಿಸಿದೆ.
ಕಳೆದ ವಾರ, ಮೆಟಾ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬಾಟ್‌ಗಳು ಮತ್ತು ಇತರ ಉತ್ಪನ್ನಗಳನ್ನು ನಿರ್ಮಿಸಲು ಸಂಶೋಧನಾ ಸಾಧನವನ್ನು ಘೋಷಿಸಿದ್ದು, ಇದನ್ನು LAMA ಎಂದು ಹೆಸರಿಸಲಾಗಿದೆ.
ಉಪಕರಣಗಳು ಶೀಘ್ರದಲ್ಲೇ AI ಸಂಶೋಧಕರಿಗೆ ಲಭ್ಯವಾಗುವಂತೆ ಯೋಜಿಸಲಾಗಿದೆ. ಆದಾಗ್ಯೂ, ಇದು ಪ್ರಸ್ತುತ ವಾಟ್ಸ್ ಆ್ಯಪ್ ಮತ್ತು ಫೇಸ್‌ಬುಕ್‌ನಂತಹ ಮೆಟಾ-ಮಾಲೀಕತ್ವದ ಆ್ಯಪ್‌ಗಳಲ್ಲಿ ಲಭ್ಯವಿಲ್ಲ.
ಫೆಬ್ರವರಿ 6 ರಂದು, Google ತನ್ನದೇ ಆದ ಚಾಟ್‌ಜಿಪಿಟಿ (ChatGPT) ಪ್ರತಿಸ್ಪರ್ಧಿಯನ್ನು ಬಾರ್ಡ್ ಎಂದು ಅನಾವರಣಗೊಳಿಸಿತು. ನಂತರ ಫೆಬ್ರವರಿ 7 ರಂದು, ಮೈಕ್ರೋಸಾಫ್ಟ್ ತನ್ನ ಬಿಂಗ್ ಹುಡುಕಾಟದ ಹೊಸ ಆವೃತ್ತಿಯನ್ನು ಅನಾವರಣಗೊಳಿಸಿತು ಇದು ChatGPT ವೈಶಿಷ್ಟ್ಯವನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ