Snapchat ಹೊಸಾ ವರ್ಷನ್​ ಬಹಳ ಸೇಫ್ ಅಂತೆ, ಏನೆಲ್ಲಾ ಫೀಚರ್ಸ್ ಇದೆ ನೋಡಿ

ಡ್ರಗ್ಸ್‌ ಸಮಸ್ಯೆಗಳ ವಿರುದ್ಧವೂ ಸ್ನ್ಯಾಪ್‌ಚಾಟ್‌ ಹೋರಾಡುತ್ತಿದೆ ಮತ್ತು ಅದರ ಪ್ಲಾಟ್‌ಫಾರ್ಮ್‌ನಲ್ಲಿ ಡ್ರಗ್‌ಗಳಿಗೆ ಸಂಬಂಧಿಸಿದ ವಿಷಯದ ಹರಡುವಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂಬುದನ್ನೂ ಸಹ ಗಮನಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ನ್ಯಾಪ್‌ಚಾಟ್‌ (Snapchat) ಖ್ಯಾತ ಸಾಮಾಜಿಕ ಜಾಲತಾಣಗಳಲ್ಲೊಂದು. ಪ್ರಮುಖವಾಗಿ ಯುವಕರು ಈ ಆ್ಯಪ್‌ ಅನ್ನು ಹೆಚ್ಚಾಗಿ ಬಳಸುತ್ತಾರೆ. ಈ ಹಿನ್ನೆಲೆ ಹಲವು ಸಾಮಾಜಿಕ ಜಾಲತಾಣಗಳಂತೆ ತನ್ನ ಪ್ಲ್ಯಾಟ್‌ಫಾರ್ಮ್‌ ಬಳಸುವ ಹದಿಹರೆಯದವರ ಸುರಕ್ಷತೆ (Safety) ಗುರಿಯಾಗಿಟ್ಟುಕೊಂಡು ಇನ್‌ಸ್ಟ್ಯಾಂಟ್‌ ಮೆಸೇಜಿಂಗ್ ಪ್ಲಾಟ್‌ಫಾರ್ಮ್(Instant Messaging Platform) ಸ್ನ್ಯಾಪ್‌ಚಾಟ್ ಎರಡು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ. ಈ ವೈಶಿಷ್ಟ್ಯಗಳು, ಅಪರಿಚಿತರು, ಸಂಭಾವ್ಯ ಕಿರುಕುಳ (Potential Harassment)ಮತ್ತು ಮಾದಕವಸ್ತುಗಳಿಂದ ಹದಿಹರೆಯ ಬಳಕೆದಾರರನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ.

ಫ್ರೆಂಡ್‌ ಸಜೆಸ್ಟ್‌ ಫೀಚರ್‌
ಈ ಪ್ಲಾಟ್‌ಫಾರ್ಮ್‌ನಲ್ಲಿ 13 ರಿಂದ 17 ವರ್ಷ ವಯಸ್ಸಿನವರಿಗೆ ರಕ್ಷಣೆಯನ್ನು ಹೆಚ್ಚಿಸಲು ಈ ವೈಶಿಷ್ಟ್ಯಗಳಲ್ಲಿ ಒಂದನ್ನು ಫ್ರೆಂಡ್‌ ಸಜೆಸ್ಟ್‌ ಮಾಡುವ ಫೀಚರ್‌ 'ಕ್ವಿಕ್ ಆ್ಯಡ್'ಗೆ ಸೇರಿಸಲಾಗಿದೆ. ಅವರು ಪರಸ್ಪರ ಸ್ನೇಹಿತರ ಗುಂಪನ್ನು ಹೊಂದಿಲ್ಲದಿದ್ದರೆ Snapchat 13-17 ವರ್ಷ ವಯಸ್ಸಿನ ಬಳಕೆದಾರರ ಫ್ರೆಂಡ್‌ ಸಜೆಸ್ಟನ್‌ ಅನ್ನು ಇತರರಿಗೆ ತೋರಿಸುವುದಿಲ್ಲ ಎಂದು ತಿಳಿದುಬಂದಿದೆ.

13 ರಿಂದ 17 ವರ್ಷ ವಯಸ್ಸಿನವರನ್ನು ಮತ್ತಷ್ಟು ರಕ್ಷಿಸಲು ನಮ್ಮ ಸ್ನೇಹಿತರ ಸಲಹೆಯ ವೈಶಿಷ್ಟ್ಯವಾದ ಕ್ವಿಕ್ ಆ್ಯಡ್‌ಗೆ ನಾವು ಇತ್ತೀಚೆಗೆ ಹೊಸ ಸುರಕ್ಷತೆಯನ್ನು ಸೇರಿಸಿದ್ದೇವೆ. ಕ್ವಿಕ್ ಆ್ಯಡ್‌ನಲ್ಲಿ ಬೇರೊಬ್ಬರಿಂದ ಅನ್ವೇಷಿಸಲು, 18 ವರ್ಷದೊಳಗಿನ ಬಳಕೆದಾರರು ಆ ವ್ಯಕ್ತಿಯೊಂದಿಗೆ ನಿರ್ದಿಷ್ಟ ಸಂಖ್ಯೆಯ ಸ್ನೇಹಿತರನ್ನು ಹೊಂದಿರಬೇಕಾಗುತ್ತದೆ. ಅವರು ನಿಜ ಜೀವನದಲ್ಲಿ ತಿಳಿದಿರುವ ಸ್ನೇಹಿತ ಎಂದು ಮತ್ತಷ್ಟು ಖಚಿತಪಡಿಸಿಕೊಳ್ಳಲು ಇದು ಅಗತ್ಯ," ಎಂದು ಬ್ಲಾಗ್‌ಪೋಸ್ಟ್‌ನಲ್ಲಿ Snapchat ಘೋಷಿಸಿತು.

 ಇದನ್ನೂ ಓದಿ: Social Media: ಸೋಷಿಯಲ್‌ ಮಿಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಪಡೆಯಲು ಹೀಗೆ ಮಾಡಿ...!

ಸ್ನ್ಯಾಪ್‌ಚಾಟ್ ಬ್ಲಾಗ್ ಪೋಸ್ಟ್‌
ಆಪ್ತ ಸ್ನೇಹಿತರಿಗಾಗಿ ನಿರ್ಮಿಸಲಾದ ವೇದಿಕೆಯಾಗಿ, ಅಪರಿಚಿತರಿಗೆ ಅಪ್ರಾಪ್ತ ವಯಸ್ಕರನ್ನು ಹುಡುಕಲು ಮತ್ತು ಸಂಪರ್ಕಿಸಲು ಕಷ್ಟವಾಗುವಂತೆ ನಾವು ಸ್ನ್ಯಾಪ್‌ಚಾಟ್ ಅನ್ನು ವಿನ್ಯಾಸಗೊಳಿಸಿದ್ದೇವೆ. ಉದಾಹರಣೆಗೆ, ಸ್ನ್ಯಾಪ್‌ಚಾಟರ್‌ಗಳು ಪರಸ್ಪರ ಸ್ನೇಹಿತರ ಪಟ್ಟಿಗಳನ್ನು ನೋಡಲು ಸಾಧ್ಯವಿಲ್ಲ. ಹಾಗೂ, 18 ವರ್ಷದೊಳಗಿನ ಯಾರಿಗಾದರೂ ಬ್ರೌಸ್ ಮಾಡಬಹುದಾದ ಸಾರ್ವಜನಿಕ ಪ್ರೊಫೈಲ್‌ಗಳನ್ನು ನಾವು ಅನುಮತಿಸುವುದಿಲ್ಲ. ಅಲ್ಲದೆ, ಪೂರ್ವನಿಯೋಜಿತವಾಗಿ, ಈಗಾಗಲೇ ನಿಮ್ಮ ಸ್ನೇಹಿತರಲ್ಲದವರಿಂದ ನೀವು ಸಂದೇಶವನ್ನು ಸ್ವೀಕರಿಸಲು ಸಾಧ್ಯವಿಲ್ಲ" ಎಂದು ಈ ಸಂಬಂಧ ಸ್ನ್ಯಾಪ್‌ಚಾಟ್ ಬ್ಲಾಗ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.

ಹಾನಿಕಾರಕ ನಡವಳಿಕೆ ತಡೆಗೆ ಯತ್ನ
ಕಾನೂನುಬಾಹಿರ ಅಥವಾ ಹಾನಿಕಾರಕ ನಡವಳಿಕೆಯಲ್ಲಿ ತೊಡಗಿರುವ ಜನರು ಸ್ನ್ಯಾಪ್‌ಚಾಟ್‌ನಲ್ಲಿ ಅಪ್ರಾಪ್ತ ವಯಸ್ಕರು ಪತ್ತೆಯಾಗದಂತೆ ನಾವು ಎಲ್ಲವನ್ನೂ ಮಾಡಲು ಬಯಸುತ್ತೇವೆ" ಎಂದೂ ಸಹ ಸ್ನ್ಯಾಪ್‌ಚಾಟ್‌ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದೆ. ಡ್ರಗ್ಸ್‌ ಸಮಸ್ಯೆಗಳ ವಿರುದ್ಧವೂ ಸ್ನ್ಯಾಪ್‌ಚಾಟ್‌ ಹೋರಾಡುತ್ತಿದೆ ಮತ್ತು ಅದರ ಪ್ಲಾಟ್‌ಫಾರ್ಮ್‌ನಲ್ಲಿ ಡ್ರಗ್‌ಗಳಿಗೆ ಸಂಬಂಧಿಸಿದ ವಿಷಯದ ಹರಡುವಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂಬುದನ್ನೂ ಸಹ ಗಮನಿಸಬಹುದು.

ಡ್ರಗ್ಸ್‌ ವಿಚಾರ ಪತ್ತೆ
ಇನ್ನು, ಡ್ರಗ್ಸ್‌ ವಿಷಯಕ್ಕೆ ಬಂದಾಗ, ಸ್ನ್ಯಾಪ್‌ಚಾಟ್‌ ಹಲವು ವರ್ಷಗಳಿಂದ ತೀವ್ರ ಟೀಕೆಗಳ್ನನು ಎದುರಿಸುತ್ತಿದೆ. ಏಕೆಂದರೆ, ಈ ಆನ್‌ಲೈನ್‌ ಪ್ಲ್ಯಾಟ್‌ಫಾರ್ಮ್‌ನಲ್ಲಿ ಡ್ರಗ್ಸ್‌ ಖರೀದಿಸಿದ ನಂತರ ವಿವಿಧ ಹದಿಹರೆಯದ ಯುವಕ - ಯುವತಿಯರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ.
ಈ ಹಿನ್ನೆಲೆ, ಸ್ನ್ಯಾಪ್‌ಚಾಟ್ ತನ್ನ ಡ್ರಗ್-ಪತ್ತೆ ಮಾಡುವ ಅಲ್ಗಾರಿದಮ್‌ಗಳೊಂದಿಗೆ ಸ್ವಲ್ಪ ಪ್ರಗತಿ ಸಾಧಿಸಿದ್ದೇವೆ ಎಂದು ಹೇಳಿದೆ. ಈ ಸಂಬಂಧ ಮಷಿನ್‌ ಕಲಿಕೆಗೆ ಪ್ರಸ್ತುತ ಅಪ್‌ಗ್ರೇಡ್ ಆಗಿದ್ದು, ಮತ್ತು AI ಅಲ್ಗಾರಿದಮ್ ಅಪ್‌ಡೇಟ್‌ನಿಂದ ಡ್ರಗ್ಸ್‌ ವಿಚಾರವನ್ನು ಪತ್ತೆ ಮಾಡುವಲ್ಲಿ ಕಳೆದ ವರ್ಷ 33% ಹೆಚ್ಚಳವನ್ನು ಕಂಡಿದ್ದೇವೆ ಎಂದು ಕಂಪನಿ ತನ್ನ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿಕೊಂಡಿದೆ.

ಇದನ್ನೂ ಓದಿ: Apps: ರಾತ್ರಿ ವೇಳೆ ನಿಮ್ಮ ನಿದ್ದೆ ಕದಿಯಲು ಈ 5 ಆ್ಯಪ್​​ಗಳೇ ಕಾರಣ!

ಅಲ್ಲದೆ, ಈ ವಿಚಾರದಲ್ಲಿ ಕಂಪನಿಯು ಕಮ್ಯುನಿಟಿ ಆ್ಯಂಟಿ ಡ್ರಗ್‌ ಕೊಯಲಿಷನ್ಸ್‌ ಆಫ್ ಅಮೆರಿಕ (CADCA) ಮತ್ತು ಟ್ರೂತ್ ಇನಿಶಿಯೇಟಿವ್ ಎಂಬ ಇಬ್ಬರು ಹೊಸ ಪಾಲುದಾರರನ್ನು ಹೊಂದಿರುವ ಬಗ್ಗೆಯೂ ಸ್ನ್ಯಾಪ್‌ಚಾಟ್‌ ಹೇಳಿಕೊಂಡಿದೆ. CADCA ಸುರಕ್ಷಿತ, ಆರೋಗ್ಯಕರ ಮತ್ತು ಮಾದಕ ದ್ರವ್ಯ ಮುಕ್ತ ಸಮುದಾಯಗಳನ್ನು ರಚಿಸಲು ಬದ್ಧವಾಗಿರುವ ಲಾಭರಹಿತ ಸಂಸ್ಥೆಯಾಗಿದೆ. ಮತ್ತು ಟ್ರೂತ್ ಇನಿಶಿಯೇಟಿವ್, ಎಲ್ಲಾ ಯುವಜನರು ಧೂಮಪಾನ, ವ್ಯಾಪಿಂಗ್ ಮತ್ತು ನಿಕೋಟಿನ್ ಅನ್ನು ತಿರಸ್ಕರಿಸುವ ಸಂಸ್ಕೃತಿಯನ್ನು ಸಾಧಿಸಲು ಮೀಸಲಾಗಿರುವ ಲಾಭರಹಿತ ಸಂಸ್ಥೆ ಎಂದು ತಿಳಿದುಬಂದಿದೆ.
Published by:vanithasanjevani vanithasanjevani
First published: