ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ (Mobile Market) ಹೊಸ ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಲೇ ಇದೆ. ಕಡಿಮೆ ಎಂದರೂ ತಿಂಗಳಿಗೆ ಐದರಿಂದ ಏಳರ ತನಕ ಸ್ಮಾರ್ಟ್ಫೋನ್ಗಳು (Smartphones) ಬಿಡುಗಡೆಯಾಗುತ್ತಿದೆ. ಸ್ಮಾರ್ಟ್ಫೋನ್ಗಳಿಗೆ ಈಗಂತೂ ಎಲ್ಲಿಲ್ಲದ ಬೇಡಿಕೆ. ಇದೇ ವಿಷಯವನ್ನು ಮೊಬೈಲ್ ಕಂಪೆನಿಗಳು ಗಮನದಲ್ಲಿಟ್ಟುಕೊಂಡು ಜಾಗತಿಕ ಮಾರುಕಟ್ಟೆಗೆ ವಿನೂತನ ಫೀಚರ್ಸ್ಗಳನ್ನು (New Features) ಒಳಗೊಂಡ ಮೊಬೈಲ್ಗಳನ್ನು ಪರಿಚಯಿಸುತ್ತಿದೆ. ಅದ್ರಲ್ಲೂ ಗ್ರಾಹಕರಿಗೆ ಕೈಗೆಟಕುವ ಬೆಲೆಯಿಂದ ಹಿಡಿದು ಪ್ರೀಮಿಯಂ ಬೆಲೆಯನ್ನು ಹೊಂದಿದ ಸಾಕಷ್ಟು ಸ್ಮಾರ್ಟ್ಫೋನ್ಗಳು ಲಭ್ಯವಿದೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ಕೆಲವೊಂದು ಮೊಬೈಲ್ಗಳ ಸುದ್ದಿಯೇ ಇಲ್ಲದಂತಾಗಿದೆ. ಎಷ್ಟೇ ಆಕರ್ಷಕ ಫೀಚರ್ಸ್ ಹೊಂದಿದ್ದರೂ ಮಾರುಕಟ್ಟೆಯಲ್ಲಿ ಕೆಲವು ಮೊಬೈಲ್ಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ.
ಹೌದು, ಮಾರುಕಟ್ಟೆಯಲ್ಲಿ ಇತ್ತೀಚೆಗೆ ಹಲವಾರು ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗಿದೆ. ಕಡಿಮೆ ಬೆಲಯಿಂದ ಹಿಡಿದು ದುಬಾರಿ ಬೆಲೆಯನ್ನು ಹೊಂದಿದ, ಗುಣಮಟ್ಟದ ಫೀ ಚರ್ಸ್ಗಳುಲ್ಲ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿವೆ. ಆದರೆ ಈ ಸಾಲಿನಲ್ಲಿ ಈ ಬಾರಿ ಬಿಡುಗಡೆಯಾದ ಉತ್ತಮ ಫೀಚರ್ಸ್ಗಳನ್ನು ಹೊಂದಿದ್ದರೂ ಮಾರುಕಟ್ಟೆಯಲ್ಲಿ ಮಾರಾಟವಾಗುವಲ್ಲಿ ವಿಫಲವಾದವು. ಆ ಸ್ಮಾರ್ಟ್ಫೋನ್ಗಳು ಯಾವುದೆಂಬುದನ್ನು ಈ ಲೇಖನದಲ್ಲಿ ಓದಿ.
ಐಕ್ಯೂ 9ಟಿ ಸ್ಮಾರ್ಟ್ಫೋನ್
ಮಾರುಕಟ್ಟೆಯಲ್ಲಿ ಎಷ್ಟೇ ಗುಣಮಟ್ಟದ ಫೀಚರ್ಸ್ ಹೊಂದಿದ್ದು ವಿಫಲವಾದ ಸ್ಮಾರ್ಟ್ಫೋನ್ಗಳಲ್ಲಿ ಐಕ್ಯೂ 9ಟಿ ಸ್ಮಾರ್ಟ್ಫೋನ್ ಕೂಡ ಒಂದು. ಈ ಸ್ಮಾರ್ಟ್ಫೋನ್ 6.78 ಇಂಚಿನ ಫುಲ್ ಹೆಚ್ಡಿ + ಡಿಸ್ಪ್ಲೇ ಹೊಂದಿದೆ. ಇದು ಸ್ನಾಪ್ಡ್ರಾಗನ್ 8+ ಜೆನ್ 1 ಎಸ್ಓಸಿ ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಅನ್ನು ಬೆಂಬಲಿಸುವ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಸಹ ಇದು ಹೊಂದಿದೆ ಐಕ್ಯೂ 9ಟಿ ಸ್ಮಾರ್ಟ್ಫೋನ್ 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದ್ದು, ಈ ಬ್ಯಾಟರಿಯು 120W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಈ ಸ್ಮಾರ್ಟ್ಫೋನ್ ಫುಲ್ ಚಾರ್ಜ್ ಆಗಲು ಕೇವಲ 20 ನಿಮಿಷಗಳು ಸಾಕಾಗುತ್ತದೆ ಎಂದು ಕಂಪೆನಿ ತಿಳಿಸಿದೆ.
ಮೊಟೊರೊಲಾ ಎಡ್ಜ್ 30 ಫ್ಯೂಶನ್
ಮೊಟೊರೊಲಾ ಕಂಪೆನಿ ಇತ್ತೀಚೆಗೆ ಬಜೆಟ್ ಬೆಲೆಯ ಮೊಟೊರೊಲಾ ಎಡ್ಜ್ 30 ಫ್ಯೂಶನ್ ಎಂಬ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ಫೋನ್ ಮಾರುಕಟ್ಟೆಗೆ 39,999 ರೂಪಾಯಿ ಬೆಲೆಯಲ್ಲಿ ಅನಾವರಣವಾಗಿತ್ತು. ಬೆಲೆಗೆ ತಕ್ಕಂತೆ ಇದು ಉತ್ತಮ ಫೀಚರ್ಸ್ಗಳನ್ನು ಸಹ ಹೊಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸುವಲ್ಲಿ ಮಾತ್ರ ಈ ಸ್ಮಾರ್ಟ್ಫೋನ್ ವಿಫಲವಾಯಿತು.
ಇನ್ನು ಈ ಸ್ಮಾರ್ಟ್ಫೋನ್ನ ಫೀಚರ್ಸ್ ಬಗ್ಗೆ ಹೇಳುವುದಾದರೆ, ಮೊಟೊರೊಲಾ ಎಡ್ಜ್ 30 ಫ್ಯೂಶನ್ ಸ್ಮಾರ್ಟ್ಫೋನ್ 6.55 ಇಂಚಿನ ಕರ್ವ್ಡ್ ಎಂಡ್ಲೆಸ್ ಎಡ್ಜ್ ಫೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಸ್ನಾಪ್ಡ್ರಾಗನ್ 888+ ಎಸ್ಓಸಿ ಪ್ರೊಸೆಸರ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ಫೋನ್ನಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದು 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯು 68W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಐಕ್ಯೂ 9 ಎಸ್ಇ ಸ್ಮಾರ್ಟ್ಫೋನ್
ಐಕ್ಯೂ ಕಂಪೆನಿ ಮಾರುಕಟ್ಟೆಗೆ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಸದ್ಯ ಮಾರುಕಟ್ಟೆಗೆ ಬಜೆಟ್ ಬೆಲೆಯಲ್ಲಿ ಐಕ್ಯೂ 9 ಎಸ್ಇ ಸ್ಮಾರ್ಟ್ಫೋನ್ ಅನ್ನು 33,990 ರೂಪಾಯಿಗೆ ಪರಿಚಯಿಸಿತ್ತು. ಇಷ್ಟೊಂದು ಬೆಲೆಯನ್ನು ಹೊಂದಿರುವ ಈ ಸ್ಮಾರ್ಟ್ಫೋನ್ ಉತ್ತಮ ಫೀಚರ್ಸ್ಗಳನ್ನು ಸಹ ಹೊಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವನ್ನು ಮಾತ್ರ ಕಾಣಲೇ ಇಲ್ಲ.
ಇನ್ನು ಐಕ್ಯೂ 9 ಎಸ್ಇ 6.62 ಇಂಚಿನ ಫುಲ್ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 SoC ಪ್ರೊಸೆಸರ್ನೊಂದಿಗೆ ರನ್ ಆಗುತ್ತದೆ. ಹಾಗೆಯೇ ಈ ಸ್ಮಾರ್ಟ್ಫೋನ್ ವಿಶೇಷವಾಗಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX598 ಸೆನ್ಸಾರ್ ಅನ್ನು ಅಳವಡಿಸಲಾಗಿದೆ. ಇದು 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಬ್ಯಾಟರಿಯು 66W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ವಿವೋ ಎಕ್ಸ್80 ಸ್ಮಾರ್ಟ್ಫೋನ್
ವಿವೋ ಕಂಪೆನಿ ಮಾರುಕಟ್ಟೆಯಲ್ಲಿ ವಿಶೇಷ ಫೀಚರ್ಸ್ಗಳನ್ನೊಳಗೊಂಡ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುವ ಮೂಲಕ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಇದೀಗ ಮಾರುಕಟ್ಟೆಯಲ್ಲಿ ವೇಗದ ಸ್ಮಾರ್ಟ್ಫೋನ್ ಎಂಬ ಹೆಸರನ್ನು ಪಡೆದಿರುವ ವಿವೋ ಎಕ್ಸ್80 ಸ್ಮಾರ್ಟ್ಫೋನ್ 79,999 ರೂಪಾಯಿ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದು 6.78 ಇಂಚಿನ ಹೆಚ್ಡಿ ಡಿಸ್ಪ್ಲೇಯನ್ನು ಒಳಗೊಂಡಿದೆ.
ಇನ್ನು ಈ ವಿವೋ ಎಕ್ಸ್80 ಸ್ಮಾರ್ಟ್ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9000 SoC ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX866 RGBW ಸೆನ್ಸಾರ್ ಹೊಂದಿದೆ. ಜೊತೆಗೆ 4,500mAh ಬ್ಯಾಟರಿಯನ್ನು ಹೊಂದಿದ್ದು, ಇದು 80W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ರಿಯಲ್ಮಿ ಜಿಟಿ ನಿಯೋ 3: ಸ್ಮಾರ್ಟ್ಫೋನ್
ರಿಯಲ್ಮಿ ಸ್ಮಾರ್ಟ್ಫೋನ್ ಉತ್ತಮ ಫೀಚರ್ಸ್ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ಇತ್ತೀಚೆಗೆ 42,999 ರೂಪಾಯಿಗೆ ರಿಯಲ್ಮಿ ಜಿಟಿ ನಿಯೋ 3 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ 6.43 ಇಂಚಿನ ಹೆಚ್ಡಿ+ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಎಸ್ಓಸಿ ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ: ಆಕ್ಟಿವಾ ಸ್ಕೂಟರ್ ಸ್ಟಾರ್ಟ್ ಮಾಡೋಕೆ ಈಗ ಕೀ ಬೇಕಾಗಿಲ್ಲ!
ಇನ್ನು ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ 4,500 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಸಹ ಹೊಂದಿದೆ. ಈ ಬ್ಯಾಟರಿಯು 150W ಸಾಮರ್ಥ್ಯದ ಆಲ್ಟ್ರಾ ಫಾಸ್ಟ್ ಚಾರ್ಜಿಂಗ್ ಬಲವನ್ನು ಪಡೆದಿದೆ. ಈ ಮೂಲಕ ಕೇವಲ 5 ನಿಮಿಷಗಳಲ್ಲಿ 0 ರಿಂದ 50% ನಷ್ಟು ನಿಮ್ಮ ಮೊಬೈಲ್ ಅನ್ನು ಚಾರ್ಜ್ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ