ಎಚ್ಚರ: ಅತಿ ಹೆಚ್ಚು ರೇಡಿಯೇಷನ್​ ಹೊಂದಿರುವ ​ಫೋನ್ ಪಟ್ಟಿ ಬಿಡುಗಡೆ: ನಿಮ್ಮ ಮೊಬೈಲ್​ ಇದರಲ್ಲಿದೆಯೇ?

ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ರೇಡಿಯೇಷನ್ ಇರುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಏಕೆಂದರೆ ಮೊಬೈಲ್​ನಿಂದ ಉಂಟಾಗುವ ತರಂಗಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

zahir | news18
Updated:February 11, 2019, 10:19 PM IST
ಎಚ್ಚರ: ಅತಿ ಹೆಚ್ಚು ರೇಡಿಯೇಷನ್​ ಹೊಂದಿರುವ ​ಫೋನ್ ಪಟ್ಟಿ ಬಿಡುಗಡೆ: ನಿಮ್ಮ ಮೊಬೈಲ್​ ಇದರಲ್ಲಿದೆಯೇ?
ಸಾಂದರ್ಭಿಕ ಚಿತ್ರ
zahir | news18
Updated: February 11, 2019, 10:19 PM IST
ಮೊಬೈಲ್​ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಆಧುನಿಕ ಜೀವನ ಶೈಲಿಯ ಅತ್ಯವಶ್ಯಕ ವಸ್ತುಗಳಲ್ಲಿ ಸ್ಮಾರ್ಟ್​ಫೋನ್​ ಕೂಡ ಸ್ಥಾನ ಪಡೆದಿರುವುದು ಇದೇ ಕಾರಣಕ್ಕೆ. ಸಾಮಾನ್ಯವಾಗಿ ಮೊಬೈಲ್​ ಖರೀದಿ ವೇಳೆ ಫೀಚರ್​ಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತೇವೆ. ಯಾವ ಮೊಬೈಲ್​ನಲ್ಲಿ ಹೆಚ್ಚು ಸ್ಟೋರೇಜ್ ಇದೆ, ಬ್ಯಾಟರಿ ಪ್ಯಾಕ್​ಅಪ್ ಯಾವುದರಲ್ಲಿ ಹೆಚ್ಚಿದೆ? ಇತ್ತೀಚೆಗೆ ಬಿಡುಗಡೆಯಾದ ಅತ್ಯುತ್ತಮ ಕ್ಯಾಮೆರಾ ಫೋನ್ ಯಾವುದು? ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಆದರೆ ಇವೆಲ್ಲಕ್ಕಿಂತಲೂ ಮೊಬೈಲ್​ನಲ್ಲಿ ನೋಡಬೇಕಿರುವುದು ಸ್ಮಾರ್ಟ್​ಫೋನಿನ ರೇಡಿಯೇಷನ್. ಆದರೆ ಇಂತಹದೊಂದು ವಿಷಯದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಎಂಬುದೇ ಆತಂಕಕಾರಿ ವಿಷಯ.

ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ರೇಡಿಯೇಷನ್ ಇರುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಏಕೆಂದರೆ ಮೊಬೈಲ್​ನಿಂದ ಉಂಟಾಗುವ ತರಂಗಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ನಾವು ಫೋನಿನಲ್ಲಿ ಮಾತನಾಡುವ ವೇಳೆ ಹೊರ ಬರುವ ರೇಡಿಯೇಷನ್ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೆದುಳು ಕ್ಯಾನ್ಸರ್​ಗೂ ಇದುವೇ ಕಾರಣವಾಗುತ್ತಿದೆ ಎಂದು ಕೆಲ ವರದಿಗಳು ಹೇಳಿದೆ.

ಅದರಂತೆ ಇದೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ಗಳ ಮತ್ತು ಅತೀ ಕಡಿಮೆ ರೇಡಿಯೇಷನ್ ಹೊಂದಿರುವ ಮೊಬೈಲ್​ಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಿಶ್ವದ ಅತ್ಯುತ್ತಮ ಮೊಬೈಲ್ ಎಂದು ಖ್ಯಾತಿ ಪಡೆದಿರುವ ಆ್ಯಪಲ್​ನ ಐಫೋನ್​ ಸೇರಿದಂತೆ 16 ಮೊಬೈಲ್​ಗಳಿವೆ. ಶಿಯೋಮಿ ಕಂಪೆನಿಯ ಮೀ ಎ1 ಮೊಬೈಲ್​ 1.75 ಪ್ರಯಾಣದ ರೇಡಿಯೇಷನ್​ ಬಿಡುಗಡೆ ಮಾಡುವ ಮೂಲಕ ಈ ಪಟ್ಟಿಯ ಅಪಾಯಕಾರಿ ಫೋನ್​ ಎನಿಸಿಕೊಂಡಿದೆ. ಇಂತಹ ಮೊಬೈಲ್ ಫೋನ್​ಗಳಿಂದ ಸಾಧ್ಯವಾದಷ್ಟು ದೂರವಿರುವುದು ನಿಮ್ಮ ಆರೋಗ್ಯದ  ಹಿತದೃಷ್ಟಿಯಿಂದ ಉತ್ತಮ ಎಂದು ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅತೀ ಹೆಚ್ಚು ರೇಡಿಯೇಷನ್ ಬಿಡುಗಡೆ ಮಾಡುವ ಸ್ಮಾರ್ಟ್​ಫೋನ್​ಗಳು ಇಂತಿವೆ.
1. Xiaomi Mi A1
2. OnePlus 5T
3. Xiaomi Mi Max 3
4. OnePlus 6T
5. HTC U12 Life
6. Xiaomi Mi Mix 3
7. Google Pixel 3 XL
8. OnePlus 5
9. iPhone 7
10. Sony Xperia XZ1 Compact
11. HTC Desire 12/12+
12.Google Pixel 3
13. one Plus 6
14. iPhone 8
15. Xiaomi Redmi Note
16 ZTE AXON 7 mini

ಅತೀ ಹೆಚ್ಚು ರೇಡಿಯೇಷನ್ ಹೊಂದಿರುವ ಫೋನ್​ಗಳ ಪಟ್ಟಿ


ಈ ಸ್ಮಾರ್ಟ್​ಫೋನ್​ಗಳನ್ನು ಹೆಚ್ಚಾಗಿ ಬಳಸುವುದು ಅಪಾಯಕಾರಿ. ಈ ಪಟ್ಟಿಯಲ್ಲಿರುವ ಹಲವು ಮೊಬೈಲ್​ಗಳು ವಿಶ್ವದ ಟಾಪ್ ಸ್ಮಾರ್ಟ್​ಫೋನ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಆತಂಕಕಾರಿ. ಹೀಗಾಗಿ ಇಲ್ಲಿ ನೀಡಲಾಗಿರುವ ಸ್ಮಾರ್ಟ್​ಫೋನ್​ಗಳನ್ನು ಮಲಗುವಾಗ ತಲೆ ಭಾಗದಲ್ಲಿರಿಸಬೇಡಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಇನ್ನು ಕಡಿಮೆ ರೇಡಿಯೇಷನ್ ಇರುವ ಫೋನ್‌ಗಳ ಪಟ್ಟಿ ಇಲ್ಲಿದೆ.
1. Samsung Galaxy 8
2. ZTE Axon Elite
3. LG G7
4. Samsung Galaxy A8
5. Samsung Galaxy S8+
6. Samsung Galaxy S7 Edge
7. HTC U11 Life
8. LG Q6/Q6+
9. Samsung Galaxy S9+
10.motorola Moto g5 plus
11. Motorola Moto Z
12. Samsung Galaxy J6+
13. ZTE Blade A610
14. Samsung Galaxy J4+
15. Samsung Galaxy S8
16. ZTE Blade V9

ಅತೀ ಕಡಿಮೆ ರೇಡಿಯೇಷನ್ ಹೊಂದಿರುವ ಫೋನ್​ಗಳ ಪಟ್ಟಿ


ಈ 16 ಸ್ಮಾರ್ಟ್​ಫೋನ್​ಗಳಿಂದ ಕಡಿಮೆ ಪ್ರಮಾಣದ ರೇಡಿಯೇಷನ್ ಬಿಡುಗಡೆಯಾಗುತ್ತದೆ. ಈ ಫೋನ್​ಗಳ ಬಳಕೆಯಿಂದ ಅಪಾಯವಿಲ್ಲ ಎಂದಲ್ಲ. ಬದಲಾಗಿ ರೇಡಿಯೇಷನ್ ಪ್ರಭಾವ ಕಡಿಮೆ ಇರುವುದರಿಂದ ಬಳಕೆಗೆ ಈ ಸ್ಮಾರ್ಟ್​ಫೋನ್​ಗಳು ಉತ್ತಮ ಎಂದು ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಮಾಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ!
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...