Mobile Photography: ಮೊಬೈಲ್ ಫೋಟೋಗ್ರಫಿಯಲ್ಲಿ ಹಣ ಸಂಪಾದಿಸುವ ಹಲವು ಮಾರ್ಗಗಳು ಇಲ್ಲಿದೆ ನೋಡಿ

Smartphone Photography: ನೀವು ಉತ್ತಮ ಛಾಯಾಗ್ರಾಹಕರಾಗಿದ್ದರೆ, ನಿಮ್ಮ ಛಾಯಾಚಿತ್ರಗಳನ್ನು ಆನ್‍ಲೈನ್‍ನಲ್ಲಿ ಅಂದರೆ ಮೇಲೆ ತಿಳಿಸಿದ ವೆಬ್‍ಸೈಟ್‍ನಲ್ಲಿ ಮಾರಾಟ ಮಾಡುವ ಮೂಲಕವೂ ನೀವು ಉತ್ತಮವಾಗಿ ಸಂಪಾದಿಸಬಹುದು. ಆನ್‍ಲೈನ್‍ನಲ್ಲಿ ಅಂತಹ ಅನೇಕ ವೇದಿಕೆಗಳು ಲಭ್ಯವಿವೆ, ಅದು ನಿಮ್ಮ ಹವ್ಯಾಸಕ್ಕೆ ಉತ್ತೇಜನ ನೀಡುತ್ತದೆ ಮತ್ತು ನಿಮ್ಮ ಛಾಯಾಚಿತ್ರ ಡೌನ್‍ಲೋಡ್ ಆಗುವ ಆಧಾರದ ಮೇಲೆ ವೆಬ್‍ಸೈಟ್‍ಗಳು ನಿಮಗೆ ಹಣವನ್ನು ನೀಡುತ್ತದೆ.

ಮೊಬೈಲ್ ಫೋಟೋಗ್ರಫಿ

ಮೊಬೈಲ್ ಫೋಟೋಗ್ರಫಿ

  • Share this:

ಕೆಲವರು ಫೋಟೋಗ್ರಫಿಯನ್ನು ಜೀವನದ ಹವ್ಯಾಸವಾಗಿ ಮಾಡಿಕೊಂಡಿರುತ್ತಾರೆ. ತುಂಬಾ ಒಳ್ಳೆಯ ಫೋಟೊಗಳನ್ನು ಮೊಬೈಲ್‍ನಲ್ಲೇ ಕ್ಲಿಕ್ಕಿಸಿ, ಎಡಿಂಗ್ ಮಾಡಿ ತುಂಬಾ ಫೇಮಸ್ ಸಹ ಆಗಿರುತ್ತಾರೆ. ಅಂತಹವರಿಗೆ ಇಲ್ಲಿದೆ ಸುವರ್ಣಾವಕಾಶ. ಹೌದು ನಿಮಗೇನಾದರೂ ಫೋಟೋಗ್ರಫಿಯಲ್ಲಿ ಅಥವಾ ಫೋಟೋ ಎಡಿಟಿಂಗ್‍ನಲ್ಲಿ ಒಳ್ಳೆಯ ಕೌಶಲ್ಯ ಇದ್ದರೆ ಹಣವನ್ನು ಸುಲಭವಾಗಿ ಸಂಪಾದಿಸಬಹುದು. ನೀವು ಮೊಬೈಲ್‍ನಲ್ಲಿ ತೆಗೆದ ಛಾಯಾಚಿತ್ರಗಳನ್ನು ಈ ಕೆಳಗಿನ ಮೂರು ವೆಬ್‍ಸೈಟ್‍ಗಳಿಗೆ ನೀಡಿದರೆ ಅವರು ನಿಮಗೆ ಹಣ ನೀಡುತ್ತಾರೆ. ಹವ್ಯಾಸವೂ ಸಹ ಹಣ ಸಂಪಾದನೆಗೆ ದಾರಿಯಾಗುತ್ತದೆ ಎಂದರೆ ಸೂಪರ್‌ ಅಲ್ಲವೇ..?




  1. https://goo.gl/RaJ6UW

  2. https: //goo.gl/tEF5rU

  3. https://www.pexels.com/

  4. https://freephotos.cc/

  5. https://burst.shopify.com/


ಈ ಮೇಲೆ ಹೇಳಿದ ಐದು ವೆಬ್‍ಸೈಟ್‍ಗಳಿಗೆ ನೀವು ತೆಗೆದ ಫೋಟೋಗಳನ್ನು ಕಳುಹಿಸಿಕೊಡಬೇಕು.


ನೀವು ಉತ್ತಮ ಛಾಯಾಗ್ರಾಹಕರಾಗಿದ್ದರೆ, ನಿಮ್ಮ ಛಾಯಾಚಿತ್ರಗಳನ್ನು ಆನ್‍ಲೈನ್‍ನಲ್ಲಿ ಅಂದರೆ ಮೇಲೆ ತಿಳಿಸಿದ ವೆಬ್‍ಸೈಟ್‍ನಲ್ಲಿ ಮಾರಾಟ ಮಾಡುವ ಮೂಲಕವೂ ನೀವು ಉತ್ತಮವಾಗಿ ಸಂಪಾದಿಸಬಹುದು. ಆನ್‍ಲೈನ್‍ನಲ್ಲಿ ಅಂತಹ ಅನೇಕ ವೇದಿಕೆಗಳು ಲಭ್ಯವಿವೆ, ಅದು ನಿಮ್ಮ ಹವ್ಯಾಸಕ್ಕೆ ಉತ್ತೇಜನ ನೀಡುತ್ತದೆ ಮತ್ತು ನಿಮ್ಮ ಛಾಯಾಚಿತ್ರ ಡೌನ್‍ಲೋಡ್ ಆಗುವ ಆಧಾರದ ಮೇಲೆ ವೆಬ್‍ಸೈಟ್‍ಗಳು ನಿಮಗೆ ಹಣವನ್ನು ನೀಡುತ್ತದೆ. ನೀವು ಈ ವೆಬ್‍ಸೈಟ್‍ನೊಂದಿಗೆ ಅಥವಾ ಇತರೆ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ ಛಾಯಾಗ್ರಹಣ ಹವ್ಯಾಸವನ್ನು ವ್ಯವಹಾರವಾಗಿ ಪ್ರಾರಂಭಿಸಬಹುದು ಮತ್ತು ನಿಮ್ಮ ಉತ್ತಮ ಛಾಯಾಚಿತ್ರಗಳನ್ನು ಅವರಿಗೆ ಮಾರಾಟ ಮಾಡಬಹುದು. ಇದಕ್ಕೆ ಉತ್ತಮ ಸಂಭಾವನೆಯೂ ನಿಮಗೆ ಸಿಗುತ್ತದೆ.


ಇದೊಂದೇ ಅಲ್ಲ ಇದರ ಹೊರತಾಗಿಯೂ ಛಾಯಾಗ್ರಹಣದಲ್ಲಿ ವಿಫುಲ ಅವಕಾಶಗಳಿವೆ. ನಿಮಗೆ ಫೋಟೋಗ್ರಫಿ ತಿಳಿದಿದ್ದರೆ, ಜಾಹೀರಾತು ಕಂಪೆನಿಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳು, ವೆಬ್​ಸೈಟ್, ಸರ್ಕಾರಿ ಇಲಾಖೆಗಳು, ಗ್ರಾಫಿಕ್ ಡಿಸೈನರ್ ಹೀಗೆ ಹಲವೆಡೆ ನೀವು ನಿಮ್ಮ ಛಾಯಾಚಿತ್ರಗಳನ್ನು ನೀಡಬಹುದು. ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ, ಸಾಮಾಜಿಕ ಜಾಲತಾಣ ಉತ್ತೇಜಿಸುತ್ತದೆ. ಆದ ಕಾರಣ ನಿಮ್ಮ ಸ್ವಂತ ವೆಬ್‍ಸೈಟ್ ಮೂಲಕ ನಿಮ್ಮ ಪ್ರತಿಭೆಯನ್ನು ಹೊರಹಾಕಬಹುದು. ಜೊತೆಗೆ ಅಂತರ್ಜಾಲದಲ್ಲಿ ಹಲವು ವೆಬ್‍ಸೈಟ್‍ಗಳಿದ್ದು ನೀವು ನಿಮ್ಮ ಫೋಟೋಗಳನ್ನು ಅಲ್ಲಿಯೂ ನೋಂದಣಿ ಮಾಡಿಕೊಂಡು ಮಾರಾಟ ಮಾಡಬಹುದು. ಇಂತಹ ವೆಬ್‍ಸೈಟ್‍ಗಳಲ್ಲಿ ಯಾವುದೇ ನೊಂದಣಿ ಶುಲ್ಕ ಇಲ್ಲ ಎಂಬುದೇ ಕೊಂಚ ಸಮಾಧಾನ.


ಇತ್ತೀಚಿನ ದಿನಗಳಲ್ಲಿ ಫೋಟೋಗಳಿಗಾಗಿಯೇ ನಿರ್ದಿಷ್ಟ ವೆಬ್‍ಸೈಟ್‍ಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಜಾಹೀರಾತು ಏಜೆನ್ಸಿಗಳು, ಕಾರ್ಪೊರೇಟ್‌ ಕಚೇರಿಗಳು, ಬ್ಲಾಗ್‍ಗಳು, ವೆಬ್‍ಸೈಟ್‍ಗಳು, ಯೂಟ್ಯೂಬ್ ಮುಂತಾದ ಅನೇಕ ಸ್ಥಳಗಳಲ್ಲಿ ಎಲ್ಲಾ ರೀತಿಯ ಛಾಯಾಚಿತ್ರಗಳಿಗೆ ಬೇಡಿಕೆ ಇದೆ. ಹಾಗಾಗಿ ಜನರು ತಕ್ಷಣ ಸ್ಟಾಕ್ ಫೋಟೋ ವೆಬ್‍ಸೈಟ್‍ಗೆ ಹೋಗಿ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಫೋಟೋಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.


ಫೋಟೋವನ್ನು ಮಾರಾಟ ಮಾಡಲು, ಆನ್‍ಲೈನ್‍ನಲ್ಲಿ ಉತ್ತಮ ಮಾರ್ಗವಿದೆ. ಅಂತರ್ಜಾಲದಲ್ಲಿ ಸಾಕಷ್ಟು ಸ್ಟಾಕ್ ಫೋಟೋಗ್ರಫಿ ವೆಬ್‍ಸೈಟ್ ಇದೆ. ಅವುಗಳಲ್ಲಿ ನೀವು ನೋಂದಾಣಿ ಮಾಡಿಕೊಂಡು ನಿಮ್ಮ ಫೋಟೋವನ್ನು ಅಪ್‍ಲೋಡ್ ಮಾಡಿ. ಫೋಟೋ ಅಪ್‍ಲೋಡ್ ಮಾಡುವಾಗ, ಸರಿಯಾದ ಕ್ಯಾಪ್ಷನ್‌, ಕೀವರ್ಡ್, ವಿವರಣೆಯನ್ನು ನೀಡಿ. ಫೋಟೋವನ್ನು ಹುಡುಕುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ವೆಬ್‍ಸೈಟ್‍ನಲ್ಲಿ, ಫೋಟೋವನ್ನು 5 ಡಾಲರ್‌ಗಳಿಂದ 500 ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಮಾರಾಟ ಮಾಡಬಹುದು. ಒಂದೇ ಫೋಟೋವನ್ನು ಅನೇಕ ಬಾರಿ ಮಾರಾಟ ಮಾಡಬಹುದು. ಸ್ಟಾಕ್ ಫೋಟೋ ವೆಬ್‍ಸೈಟ್ ಕೂಡ ಒಂದಿಷ್ಟು ಹಣವನ್ನು ಪಾವತಿ ಮಾಡುತ್ತದೆ.





ನೀವು ನಿಮ್ಮ ಫೋಟೋಗಳನ್ನು ಅಪ್‍ಲೋಡ್ ಮಾಡುವುದನ್ನು ಎಂದು ಮರೆಯಬಾರದು. ನಿರಂತರವಾಗಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಲೇ ಇರಿ. ನಿಮ್ಮ ಫೋಟೋವನ್ನು ಕೇವಲ ಒಂದೇ ವೆಬ್‍ಸೈಟ್‍ಗೆ ಸೀಮಿತಗೊಳಿಸದೇ ಬೇರೆ ಬೇರೆ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡುತ್ತಲೇ ಇರಬೇಕು. ಆಗ ಮಾತ್ರ ನಿಮ್ಮ ಆದಾಯ ಹೆಚ್ಚಳವಾಗುವುದು. ಪ್ರತಿಯೊಂದು ವೆಬ್‍ಸೈಟ್ ತನ್ನದೇ ನಿಯಮಗಳನ್ನು ಹೊಂದಿದ್ದು, ನೋಂದಣಿ ಮಾಡಿಕೊಳ್ಳುವ ಮೊದಲು ನಿಬಂಧನೆಗಳನ್ನು ಓದಿ ಅರ್ಥೈಸಿಕೊಳ್ಳಿ.


First published: