New Technology: ಇನ್ಮುಂದೆ ಮಾನವ ಮೂತ್ರದಿಂದಲೂ ಕೂಡ ಸ್ಮಾರ್ಟ್​ಫೋನ್ ಚಾರ್ಜ್ ಮಾಡ್ಬೋದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Smartphone Charging: ಇನ್ಮುಂದೆ ಎಲ್ಲಾದರೂ ಹೋದಾಗ ಮೊಬೈಲ್​ ಚಾರ್ಜ್ ಮುಗಿದರೆ ಪವರ್​​ ಬ್ಯಾಂಕ್​, ಚಾರ್ಜರ್​ನ ಅಗತ್ಯವಿಲ್ಲ. ಬದಲಾಗಿ ಮಾನವರ ಮೂತ್ರದ ಮೂಲಕ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದು. ದೇಹದಿಂದ ಹೊರಬರುವ ಮೂತ್ರದಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್ ನಿಂದ ಮೊಬೈಲ್ ಅಥವಾ ಲ್ಯಾಪ್ ಟಾಪ್ ಚಾರ್ಜ್ ಮಾಡಬಹುದು.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • New Delhi, India
  • Share this:

    ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಬಳಿ ಸ್ಮಾರ್ಟ್‌ಫೋನ್ (Smartphone) ಇದೆ. ವಿದ್ಯಾವಂತರೆಲ್ಲರೂ ಮೊಬೈಲ್ (Mobile) ಮತ್ತು ಇಂಟರ್ನೆಟ್ (Internet) ಬಳಸುತ್ತಿದ್ದಾರೆ. ಆದರೆ ಪ್ರತಿ ಮೊಬೈಲಿನಲ್ಲಿ ಬರುವ ಸಮಸ್ಯೆಯೆಂದರೆ ಬ್ಯಾಟರಿ. ಇನ್ನು ಕೆಲವು ಮೊಬೈಲ್ ಗಳಲ್ಲಿ ಫುಲ್ ಚಾರ್ಜ್ ಹಾಕಿದರೂ ಒಂದು ಗಂಟೆಯೊಳಗೆ ಖಾಲಿಯಾಗುತ್ತದೆ. ಮತ್ತೆ, ನಂತರ ಚಾರ್ಜ್ (Mobile Charge) ಮಾಡಲು ತೆಗೆದುಕೊಳ್ಳುವ ಸಮಯ ಅಷ್ಟೆ ಅಲ್ಲ. ಕೆಲವೊಮ್ಮೆ ಆ ಫೋನ್ ಬಳಸುವವರಿಗೆ ಬೇಸರವಾಗುತ್ತದೆ. ಮೊಬೈಲ್ ಫೋನ್ ಬ್ಯಾಟರಿ ಖಾಲಿಯಾದರೆ, ಅದನ್ನು ಮನೆಯಲ್ಲಿಯೇ ಮತ್ತೆ ಚಾರ್ಜ್ ಮಾಡಬಹುದು. ದೂರದ ಊರಿಗೆ ಹೋದಾಗ ಈ ಸಮಸ್ಯೆ ಎದುರಾದರೆ ಫೋನ್ ಸ್ವಿಚ್ ಆಫ್ ಮಾಡಬೇಕು. ಇದಕ್ಕಾಗಿ ಕೆಲವರು ಪವರ್ ಬ್ಯಾಂಕ್ ಜೊತೆಗೆ ಕರೆದುಕೊಂಡು ಹೋಗುತ್ತಾರೆ.


    ಆದರೆ ಇನ್ಮುಂದೆ ಎಲ್ಲಾದರೂ ಹೋದಾಗ ಮೊಬೈಲ್​ ಚಾರ್ಜ್ ಮುಗಿದರೆ ಪವರ್​​ ಬ್ಯಾಂಕ್​, ಚಾರ್ಜರ್​ನ ಅಗತ್ಯವಿಲ್ಲ. ಬದಲಾಗಿ ಮಾನವರ ಮೂತ್ರದ ಮೂಲಕ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದು. ದೇಹದಿಂದ ಹೊರಬರುವ ಮೂತ್ರದಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ಶಕ್ತಿಯಿಂದ ಉತ್ಪತ್ತಿಯಾಗುವ ವಿದ್ಯುತ್ ನಿಂದ ಮೊಬೈಲ್ ಅಥವಾ ಲ್ಯಾಪ್ ಟಾಪ್ ಚಾರ್ಜ್ ಮಾಡಬಹುದು.


    ಬ್ರಿಟನ್ ವಿಜ್ಞಾನಿಗಳಿಂದ ಸಂಶೋಧನೆ


    ಈ ಕೆಲಸವನ್ನು ಸಾಧ್ಯವಾಗಿಸಲು ಬ್ರಿಟನ್‌ನ ವಿಜ್ಞಾನಿಗಳ ತಂಡ ನಿರಂತರವಾಗಿ ಪ್ರಯೋಗಗಳನ್ನು ನಡೆಸುತ್ತಿದೆ. ಬ್ರಿಟಿಷ್ ಮಾಧ್ಯಮದ ವರದಿಗಳ ಪ್ರಕಾರ, ವಿಜ್ಞಾನಿಗಳು ಈ ಕೆಲಸದಲ್ಲಿ ಇದೀ ಸ್ವಲ್ಪ ಯಶಸ್ಸನ್ನು ಸಾಧಿಸಿದ್ದಾರೆ.


    ಇದನ್ನೂ ಓದಿ:  ಸ್ಯಾಮ್​ಸಂಗ್ ಗ್ಯಾಲಕ್ಸಿ ಎಮ್​​33 5ಜಿ​ ಸ್ಮಾರ್ಟ್​ಫೋನ್​ ಮೇಲೆ ಭರ್ಜರಿ ಡಿಸ್ಕೌಂಟ್​!


    ವಿಜ್ಞಾನಿಗಳ ಪ್ರಕಾರ, ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸಿದರೆ, ಅದು ಭವಿಷ್ಯಕ್ಕೆ ಹೆಚ್ಚು ಪ್ರಯೋಜನಕಾರಿ ವಿಷಯವಾಗಿದೆ. ಏಕೆಂದರೆ ಮಾನವ ಮಲವಿಸರ್ಜನೆಯು ನವೀಕರಿಸಬಹುದಾದ ಒಂದು ಸಂಪನ್ಮೂಲವಾಗಿದೆ. ಮೂತ್ರದಿಂದ ಉತ್ಪತ್ತಿಯಾಗುವ ವಿದ್ಯುತ್ ಮೂಲಕ ಚಿಕ್ಕ ಮೊಬೈಲ್ ಅನ್ನು ಚಾರ್ಜ್ ಮಾಡಬಹುದು ಎಂದು ಪ್ರಯೋಗಗಳು ಸಾಬೀತುಪಡಿಸಿವೆ.


    ಬಾತ್​ರೂಂಗಳ ಸಾಧನಗಳಿಗೂ ಉಪಕಾರಿ


    ಈ ರೀತಿಯ ವಿದ್ಯುತ್ ಉತ್ಪಾದನಾ ಪ್ರಕ್ರಿಯೆಯನ್ನು ಕೈಗೊಳ್ಳಲು 'ಮೈಕ್ರೊಬಿಯಲ್ ಫ್ಯೂಯಲ್ ಸೆಲ್' ಅನ್ನು ಬಳಸಲಾಗುತ್ತದೆ. ಇದು ಶಕ್ತಿಯನ್ನು ಪರಿವರ್ತನೆ ಮಾಡುತ್ತದೆ. ಇದಕ್ಕಾಗಿ ಮೂತ್ರದಲ್ಲಿ ಕೆಲವು ಬ್ಯಾಕ್ಟೀರಿಯಾಗಳೂ ಬೆರೆತಿರುತ್ತವೆ.


    ಸಾಂಕೇತಿಕ ಚಿತ್ರ


    ಬ್ರಿಸ್ಟಲ್ ರೋಬೋಟಿಕ್ಸ್ ಪ್ರಯೋಗಾಲಯದಲ್ಲಿ ಮೂತ್ರದಿಂದ ತಯಾರಿಸಿದ ಈ ವಿದ್ಯುತ್ ಉಚಿತವಾಗಿರುತ್ತದೆ. ವಿಜ್ಞಾನಿಗಳ ಪ್ರಕಾರ, ಈ ತಂತ್ರಜ್ಞಾನ ಯಶಸ್ವಿಯಾದರೆ, ಇದನ್ನು ಸ್ನಾನಗೃಹಗಳಲ್ಲಿ ಬಳಸಬಹುದು. ಈ ವಿದ್ಯುತ್ ಶವರ್, ಲೈಟಿಂಗ್, ರೇಜರ್‌ಗಳು ಮತ್ತು ಸ್ಮಾರ್ಟ್‌ಹೋಮ್‌ ಡಿವೈಸ್​ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.


    ಗೋವಿನ ಸಗಣಿ ಮತ್ತು ಮೂತ್ರದಿಂದ ಇಂಧನವನ್ನು ಪಡೆಯುವುದು ನಮಗೆಲ್ಲರಿಗೂ ತಿಳಿದಿದೆ. ಮಾನವನ ಮಲಮೂತ್ರ ಸಹ ಈಗ ಈ ಸಾಲಿಗೆ ಸೇರ್ಪಡೆಯಾಗಲಿದೆ. ಮಾನವ ಮೂತ್ರದಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದಿಸುವುದರಿಂದ ವಿದ್ಯುತ್ ಬೇಡಿಕೆಯನ್ನು ಪೂರೈಸಲುಇದು ಸಹಾಯ ಮಾಡುತ್ತದೆ. ಏಕೆಂದರೆ, ಪ್ರಸ್ತುತ ವಿದ್ಯುತ್ ಅಗತ್ಯವನ್ನು ನೋಡಿದರೆ, ವಿದ್ಯುತ್ ಉತ್ಪಾದನಾ ವಲಯದ ಮೇಲೆ ಭಾರೀ ಒತ್ತಡವಿದೆ. ಈ ಒತ್ತಡವನ್ನು ಕಡಿಮೆ ಮಾಡಲು, ವಿಜ್ಞಾನಿಗಳು ವಿದ್ಯುತ್ ಉತ್ಪಾದನೆಯ ಹೊಸ ಮೂಲಗಳನ್ನು ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ.




    ಈ ಪ್ರಯೋಗ ಇದೇ ಮೊದಲು ನಡೆಯುತ್ತಿರುವುದಾಗಿದ್ದು, ಇದುವರೆಗೆ ಕೇವಲ ಪ್ರಾಣಿಗಳ ಮೂತ್ರಗಳಿಂದ ವಿದ್ಯುತ್ ಅನ್ನು ಉತ್ಪಾದಿಸುವ ಸಂಶೋಧನೆಯನ್ನು ಮಾಡಿದ್ದರು. ಆದರೆ ಈಗ ಮಾನವರ ಮೂತ್ರದಿಂದಲೂ ವಿದ್ಯುತ್​ ಉತ್ಪಾದಿಸಬಹುದೆಂದು ಸಾಬೀತಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇದು ಪೂರ್ಣ ಕಾರ್ಯವೈಖರಿ ಅಭಿವೃದ್ಧಿಯಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


    (ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ನ್ಯೂಸ್ 18 ಇದನ್ನು ಅನುಮೋದಿಸುವುದಿಲ್ಲ. ಅದನ್ನು ಕಾರ್ಯಗತಗೊಳಿಸುವ ಮೊದಲು, ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.)

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು