ಮೊಬೈಲ್​ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಹೀಗೆ ಮಾಡಿ


Updated:May 24, 2018, 3:13 PM IST
ಮೊಬೈಲ್​ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಹೀಗೆ ಮಾಡಿ

Updated: May 24, 2018, 3:13 PM IST
ಈ ಸ್ಮಾರ್ಟ್‌ಫೋನ್ ಯುಗದಲ್ಲಿ ಮೊಬೈಲ್​ಗಳದ್ದೇ ಹವಾ, ಕೇವಲ ಫೋನ್‌ಗಳನ್ನು ಮಾತನಾಡಲು ಮತ್ತು ಸಂದೇಶ ರವಾನಿಸಲು ಮಾತ್ರ ಬಳಕೆಯಾಗುತ್ತಿದ್ದ ಮೊಬೈಲ್​ ಇತ್ತೀಚೆಗೆ ಮನರಂಜನೆಯಿಂದ ಹಿಡಿದು ವ್ಯವಹಾರ, ವಹಿವಾಟಿಗೂ ಬಳಕೆಯಾಗ ತೊಡಗಿದೆ. ಈ ಎಲ್ಲದರ ನಡುವೆ ಬಳಕೆದಾರರು ಎದುರಿಸುವ ದೊಡ್ಡ ಸಮಸ್ಯೆಯೆಂದರೆ ಬ್ಯಾಟರಿ ಚಾರ್ಜಿಂಗ್ ಸಮಸ್ಯೆ. ಈ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಕೆಲವು ಅಪ್​ಡೇಟೆಡ್​ ಟಿಪ್ಸ್​ಗಳು

ಮೂಲ ಚಾರ್ಜರ್​ ಬಳಸಿ
ಮೊಬೈಲ್ ಬ್ಯಾಟರಿ ಬಾಳಿಕೆ ಉತ್ತಮಗೊಳಿಸಿಲು ಮೊದಲನೇ ಹಾಗೂ ಬಹು ಮುಖ್ಯ ಅಂಶವೆಂದರೆ ಕಂಪನಿಯ ಮೂಲ ಚಾರ್ಚರ್​ ಅಥವಾ ಕಂಪನಿಗಳ ಸಲಹೆಯ ಮೇರೆಗೆ ಬಳಸಬಹುದಾದ ಚಾರ್ಜರ್​ನಲ್ಲೇ ಬ್ಯಾಟರಿ ಚಾರ್ಜ್​ ಮಾಡಿ. ಈ ಮೂಲಕ ನೀವು ಬ್ಯಾಟರಿ ಬಾಳಿಕೆ ಹೆಚ್ಚಿನ ಬಹುದು

ಕಡಿಮೆ ಬ್ರೈಟ್​ನೆಸ್​

ಸೆಟ್ಟಿಂಗ್‌ಗೆ ಹೋಗಿ ಮೊಬೈಲ್​ ಬ್ರೈಟ್‌ನೆಸ್‌ ಕಡಿಮೆ ಮಾಡಿಕೊಳ್ಳಿ. ಬ್ರೈಟ್‌ನೆಸ್‌ ಕಡಿಮೆಯಾದಷ್ಟು ಬ್ಯಾಟರಿ ಬಾಳಿಕೆ ಅಧಿಕವಾಗಿ ಬರುತ್ತದೆ. ಈ ರೀತಿ ಮಾಡುವುದರಿಂದ ಕಣ್ಣಿನ ಆರೋಗ್ಯವನ್ನೂ ನಾವು ಕಾಪಾಡಬಹುದು

ಜಿಪಿಎಸ್, ಬ್ಲ್ಯೂಟೂತ್, ಬಳಕೆ
ವೈ-ಫೈ ಮತ್ತು ಮೊಬೈಲ್ ಡೇಟಾ ಇತ್ಯಾದಿಗಳನ್ನು ಅಗತ್ಯವಿದ್ದಾಗಷ್ಟೇ ಬಳಸಿ. ಇಂಟರ್‌ನೆಟ್ ಕನೆಕ್ಷನ್ ಸಾಧ್ಯವಾದಷ್ಟು ಆಫ್ ಆಗಿರಲಿ. ಇಲ್ಲದಿದ್ದರೆ ಇದು ಹೆಚ್ಚಿನ ಬ್ಯಾಟರಿ ಶಕ್ತಿಯನ್ನು ಎಳೆದುಕೊಳ್ಳುತ್ತದೆ.
Loading...

ವೈಬ್ರೇಟ್​ ಮೋಡ್​ ಆಫ್​ ಮಾಡಿ
ಹೆಚ್ಚಿನ ಜನರು ಫೋನನ್ನು ವೈಬ್ರೇಟ್ ಮೋಡಿನಲ್ಲಿ ಬಳಕೆ ಮಾಡುತ್ತಾರೆ, ಕೆಲಸದ ಸಂದರ್ಭದಲ್ಲೋ ಅಥವಾ ಮೀಟಿಂಗ್ ಸಮಯದಲ್ಲಿ ವೈಬ್ರೇಟ್​ ಮೋಡ್​ನಲ್ಲಿ ಮೊಬೈಲ್​ ಬಳಕೆ ಮಾಡುತ್ತೇವೆ. ಆದರೆ ಈ ವೈಬ್ರೇಟ್​ ಮೋಡ್​ ಹೆಚ್ಚಿನ ಬ್ರಾಟರಿ ಶಕ್ತಿಯನ್ನು ಹೆಚ್ಚಿಗೆ ಎಳೆದುಕೊಳ್ಳುತ್ತದೆ. ಇದರ ಬದಲು ಸೈಲೆಂಟ್​ ಮೋಡ್​ನಲ್ಲಿ ಇಟ್ಟರೆ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ.

ಏರೋಪ್ಲೇನ್​ ಮೋಡ್​
ವೇಗದ ಚಾರ್ಜಿಂಗ್​ ಮತ್ತು ರಾತ್ರಿಯ ಸಂದರ್ಭದಲ್ಲಿ ಮೊಬೈಲ್​ನ್ನು ಏರೋಪ್ಲೇನ್​ ಮೋಡ್​ನಲ್ಲಿ ಇಟ್ಟುಕೊಂಡರ ಬ್ಯಾಟರಿ ಬಾಳಿಕೆ ಹೆಚ್ಚುತ್ತದೆ ಎಂದರೆ ತಪ್ಪಾಗಲಾರದು. ಮೊಬೈಲ್​ನಲ್ಲಿ ವಿಡಿಯೋ ಸಂಗೀತ ಅಥವಾ ಪ್ರಯಾಣದ ಸಂದರ್ಭದಲ್ಲಿ ನೆಟ್​ವರ್ಕ್​ ಸಿಗದೇ ಇರುವ ಸಂದರ್ಭದಲ್ಲಿ ಏರೋಪ್ಲೇನ್​ ಮೋಡ್ ಬಳಕೆ ಸೂಕ್ತ ಮತ್ತು ಬಹಳ ಉಪಕಾರಿ.

ಆಟೋ ಅಪ್​ಡೇಟ್​ ಸ್ಥಗಿತಗೊಳಿಸಿ
ಬ್ಯಾಟರಿ ಅತ್ಯಂತ ಕಡಿಮೆ ಇರುವ ಸಂದರ್ಬದಲ್ಲಿ ಆಟೋ ಅಪ್​ಡೇಟ್​ ಮೋಡ್​ನ್ನು ಸ್ಥಗಿತಗೊಳಿಸಿದರೆ ಬ್ಯಾಟರಿ ಬಾಳಿಕೆಯನ್ನು ವೃದ್ಧಿಸಬಹುದು.
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...