ಮಳೆಗಾಲದಲ್ಲಿ ಸಿಡಿಲಿನ ಕುರಿತಾದ ನಿಖರ ಮಾಹಿತಿ ನೀಡಲಿದೆ ಈ ಆ್ಯಪ್..!

ಇದಕ್ಕಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯದ ಆಯ್ದ ಪ್ರದೇಶದಗಳಲ್ಲಿ ಸುಮಾರು 10 ಸೆನ್ಸಾರ್​ಗಳನ್ನು ಅಳವಡಿಸಿದ್ದು, ಈ ಮೂಲಕ ನಿಮಗೆ ಮೊಬೈಲ್​ನಲ್ಲೇ ಮುನ್ನೆಚ್ಚರಿಕೆಯ ಸೂಚನೆಗಳನ್ನು ನೀಡಲಿದೆ.

zahir | news18
Updated:June 14, 2019, 5:16 PM IST
ಮಳೆಗಾಲದಲ್ಲಿ ಸಿಡಿಲಿನ ಕುರಿತಾದ ನಿಖರ ಮಾಹಿತಿ ನೀಡಲಿದೆ ಈ ಆ್ಯಪ್..!
@BoM
zahir | news18
Updated: June 14, 2019, 5:16 PM IST
ರಾಜ್ಯಾದ್ಯಂತ ಮುಂಗಾರು ಮಳೆ ಶುರುವಾಗಿದೆ. ಈ ಬಾರಿ ಕೂಡ ಸಿಡಿಲು-ಗುಡುಗುಗಳೊಂದಿಗೆ ಮಳೆ ಆರ್ಭಟಿಸಲಿರುವ ಸೂಚನೆ ನೀಡಲಾಗಿದೆ. ಇದರೊಂದಿಗೆ ಮಳೆಗಾಲದ ಅವಾಂತರಗಳ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಸಿಡಿಲು ಮತ್ತು ಗುಡುಗುಗಳಿಂದ ಬೆಚ್ಚಿ ಬೀಳುವವರೇ ಹೆಚ್ಚು. ಅದರಲ್ಲೂ ಸಿಡಿಲಿನಿಂದ ಅನೇಕ ಅನಾಹುತಗಳು ಸಂಭವಿಸುತ್ತವೆ. ಇಂತಹ ಅಪಾಯಗಳನ್ನು ತಪ್ಪಿಸಲು ಕೆಎಸ್​ಎನ್​ಡಿಎಂಸಿ ಆ್ಯಪ್​ವೊಂದನ್ನು ಹೊರ ತಂದಿದೆ.

ಸಿಡಿಲು ಎಂಬ ಹೆಸರಿನ ಈ ಆ್ಯಪ್​ ಬಳಸಿ ನೀವು ಎಲ್ಲಿ ಯಾವಾಗ ಸಿಡಿಲು ಉಂಟಾಗಲಿದೆ ಎಂಬ ಮುನ್ಸೂಚನೆಯನ್ನು ಪಡೆಯಬಹುದಾಗಿದೆ. ಇದರಿಂದ ಪ್ರಕೃತಿ ವಿಕೋಪಗಳಿಂದ ಉಂಟಾಗುವ ನಷ್ಟವನ್ನು ತಡೆಗಟ್ಟಲು ಸಹಾಯಕವಾಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಈ ಆ್ಯಪ್ ನಿಮ್ಮ ಲೊಕೇಶನ್ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ. ಈ ಅಪ್ಲಿಕೇಶನ್​ನನ್ನು ಓಪನ್ ಮಾಡಿದರೆ ನಿಮಗೆ ಹವಾಮಾನದ ಮಾಹಿತಿ, ಎಲ್ಲಿ ಯಾವಾಗ ಸಿಡಿಲು ಸಿಡಿಲು ಮೂಡಲಿದೆ. ಮಳೆಯ ಸಾಧ್ಯತೆಯ ಕುರಿತಾದ ಸಂಪೂರ್ಣ ಮಾಹಿತಿ ದೊರಕಲಿದೆ.

ಇದಕ್ಕಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರಾಜ್ಯದ ಆಯ್ದ ಪ್ರದೇಶದಗಳಲ್ಲಿ ಸುಮಾರು 10 ಸೆನ್ಸಾರ್​ಗಳನ್ನು ಅಳವಡಿಸಿದ್ದು, ಈ ಮೂಲಕ ನಿಮಗೆ ಮೊಬೈಲ್​ನಲ್ಲೇ ಮುನ್ನೆಚ್ಚರಿಕೆಯ ಸೂಚನೆಗಳನ್ನು ನೀಡಲಿದೆ.

ಸಿಡಿಲು ಆ್ಯಪ್


ಇಲ್ಲಿ ಕೆಂಪು, ಆರೆಂಜ್, ಹಳದಿ ಮತ್ತು ಹಸಿರು ಬಣ್ಣಗಳ ಸೂಚನೆಯ ಮೂಲಕ ಸಿಡಿಲಿನ ಸಾಧ್ಯತೆಯನ್ನು ತಿಳಿಸಲಾಗುತ್ತದೆ. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಸಿಡಿಲು ಕಾಣಿಸುತ್ತಿದ್ದರೆ ಆ್ಯಪ್​ನಲ್ಲಿ ಕೆಂಪು (ರೆಡ್) ​ಸಿಡಿಲಿನ ಸೂಚನೆ ತೋರಿಸುತ್ತದೆ. ಹಾಗೆಯೇ 5 ಕಿ.ಮೀ ಒಳಗೆ ಸಿಡಿಲು ಕಾಣಿಸಿಕೊಳ್ಳುವಂತಿದ್ದರೆ ಆರೆಂಜ್​ ಬಣ್ಣದಲ್ಲಿ ಸೂಚನೆ ನೀಡಲಾಗುತ್ತದೆ. 15 ಕಿ.ಮೀ ವ್ಯಾಪ್ತಿಯಲ್ಲಿ ಬೀಳುವ ಸಿಡಿಲಿನ ಸಾಧ್ಯತೆಯನ್ನು ಹಳದಿ ಬಣ್ಣದಲ್ಲಿ ಸೂಚಿಸಲಾಗುತ್ತದೆ. ಹಾಗೆಯೇ ಹಸಿರ ಬಣ್ಣದಲ್ಲಿದ್ದರೆ ಸುರಕ್ಷಿತ ಎಂಬುದನ್ನು ತಿಳಿಸುತ್ತದೆ.

2009 ರಿಂದ 2018 ರವರೆಗೆ 647 ಜನರು ಸಿಡಿಲಿಗೆ ಬಲಿಯಾದರೆ, 100ಕ್ಕೂ ಹೆಚ್ಚಿನ ಜನರಿಗೆ ಗಂಭೀರ ಗಾಯಗಳಾಗಿವೆ. ಈ ನಿಟ್ಟಿನಲ್ಲಿ ಆ್ಯಪ್ ಮೂಲಕ ಸಿಡಿಲಿನ ಕುರಿತಾದ ಮುನ್ನೆಚ್ಚರಿಕೆಯನ್ನು ನೀಡುವ ಕಾರ್ಯಕ್ಕೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುಂದಾಗಿದೆ.

ಇದನ್ನೂ ಓದಿ: 'ಏಕ್ ಲವ್​ ಯಾ': ಜೋಗಿ ಪ್ರೇಮ್​ - ಭಾಮೈದನನ ಚಿತ್ರಕ್ಕೆ ಸಿಕ್ಕಳು ನಾಯಕಿ..!
First published:June 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...