ಭಾರತದಲ್ಲಿ (India) ಈ ಬಾರಿ ಹಲವಾರು ಸ್ಮಾರ್ಟ್ವಾಚ್ಗಳು (Smartwatch) ಬಿಡುಗಡೆಯಾಗಿದೆ. ಆದರೆ 2022 ರಲ್ಲಿ ಬಿಡುಗಡೆಯಲ್ಲಿ ಅತೀ ಹೆಚ್ಚು ಸದ್ದು ಮಾಡಿದ ಸ್ಮಾರ್ಟ್ವಾಚ್ಗಳು ಯಾವುದೆಂಬುದು ಇಲ್ಲಿದೆ. ಈಗಿನ ಸ್ಮಾರ್ಟ್ವಾಚ್ಗಳು ಮೊಬೈಲ್ನಂತೆಯೇ ಉತ್ತಮ ಫೀಚರ್ಸ್ಗಳನ್ನು (Features) ಒಳಗೊಂಡಿದ್ದು ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತಿದೆ. ಇತ್ತೀಚೆಗ ಬಿಡುಗಡೆಯಾದ ಸ್ಮಾರ್ಟ್ವಾಚ್ಗಳು ಕಡಿಮೆ ಬೆಲೆಯಿಂದ ಹಿಡಿದು ಹೆಚ್ಚಿನ ಬೆಲೆಯವರೆಗೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಪ್ರಸ್ತುತವಾಗಿ ಜನರು ಸ್ಮಾರ್ಟ್ಫೋನ್ (Smartphone)ಗಳ ಮೇಲೆ ಹೇಗೆ ಒಲವು ತೋರಿಸುತ್ತಾರೋ ಅದೇ ರೀತಿ ಸ್ಮಾರ್ಟ್ವಾಚ್ಗಳ ಮೇಲೆ ಕೂಡ ಒಲವು ತೋರಿಸುತ್ತಿದ್ದಾರೆ. ಆದ್ದರಿಂದ ಕಂಪನಿಗಳು ಕೂಡ ಈ ಬೇಡಿಕೆಯನ್ನು ನೋಡಿಕೊಂಡು ಬ್ರಾಂಡ್ಗಳನ್ನು ಬಿಡುಗಡೆ ಮಾಡುತ್ತಿದೆ.
ಗ್ರಾಹಕರನ್ನು ಗಮನಸೆಳೆಯುವಂತಹ ಸ್ಮಾರ್ಟ್ವಾಚ್ಗಳು ಮಾರುಕಟ್ಟೆಗೆ ಹಲವಾರು ಕಾಲಿಟ್ಟಿದೆ. ಆದರೆ ಬೇಡಿಕೆಯಲ್ಲಿರುವಂತಹ ಸ್ಮಾರ್ಟ್ವಾಚ್ಗಳು ಕೆಲವೇ ಕೆಲವು. ಹಾಗಿದ್ರೆ ಈ ಬಾರಿ ಸದ್ದು ಮಾಡಿದಂತಹ ಸ್ಮಾರ್ಟ್ವಾಚ್ಗಳು ಯಾವುದೆಂಬುದನ್ನು ಇಲ್ಲಿ ತಿಳಿಯಿರಿ.
ಒನ್ಪ್ಲಸ್ ನಾರ್ಡ್ ಸ್ಮಾರ್ಟ್ವಾಚ್
ಈ ವರ್ಷ ಬಾರತದಲ್ಲಿ ಕೈಗೆಟಕುವ ಬೆಲೆಯಲ್ಲಿ ಒನ್ಪ್ಲಸ್ ನಾರ್ಡ್ ಸ್ಮಾರ್ಟ್ವಾಚ್ ಬಿಡುಗಡೆಯಾಗಿದೆ. ಈ ಸ್ಮಾರ್ಟ್ವಾಚ್ ಅನ್ನು ಮಾರುಕಟ್ಟೆಯಲ್ಲಿ 4,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಇದರ ಫೀಚರ್ಸ್ ಬಗ್ಗೆ ಮಾತನಾಡುವುದಾದರೆ ಇದು 1.78 ಇಂಚಿನ HD ಅಮೋಲ್ಡ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 368x448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್ವಾಚ್ 30 ದಿನಗಳ ಸ್ಟ್ಯಾಂಡ್ಬೈ ಟೈಂ ಜೊತೆಗೆ 10 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ. ಇದು SpO2, ಹೃದಯ ಬಡಿತ ಮಾನಿಟರ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ: 3 ವರ್ಷದಲ್ಲಿ 6 ಲಕ್ಷಕ್ಕೂ ಅಧಿಕ ದೂರುಗಳು ದಾಖಲು
ರಿಯಲ್ಮಿ ವಾಚ್ 3
ರಿಯಲ್ಮಿ ಕಂಪನಿ ಸ್ಮಾರ್ಟ್ಫೋನ್ಗಳಲ್ಲಿ ಬಹಳಷ್ಟು ಮುಂಚೂಣಿಯಲ್ಲಿರುವಂತಹ ಕಂಪನಿಯಾಗಿದೆ. ಇದೀಗ ಸ್ಮಾರ್ಟ್ವಾಚ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಸದ್ದು ಮಾಡಿದೆ. ಈ ಸ್ಮಾರ್ಟ್ವಾಚ್ ಐಫೋನ್ ಮೊಬೈಲ್ಗೆ ಸಪೋರ್ಟ್ ಅನ್ನು ಪಡೆಯುತ್ತದೆ. ಇದರಲ್ಲಿ ಬಳಕೆದಾರರು ಐಫೋನ್ ಅನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡುವ ಮೂಲಕ ಕಾಲ್ಗಳನ್ನು ರಿಸೀವ್ ಮಾಡುವುದಕ್ಕೆ ಅವಕಾಶವಿದೆ. ಈ ಸ್ಮಾರ್ಟ್ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 7 ದಿನಗಳವರೆಗೆ ನಿರಂತರವಾಗಿ ಬಳಸಬಹುದಾಗಿದೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಇದನ್ನು 3,499ರೂಪಾಯಿಯಲ್ಲಿ ಖರೀದಿ ಮಾಡಬಹುದಾಗಿದೆ.
ಅಮೇಜ್ಫಿಟ್ ಬಿಪ್ 3
ಅಮೇಜ್ಫಿಟ್ ಬಿಪ್ 3 ಸ್ಮಾರ್ಟ್ವಾಚ್ ಬಹಳಷ್ಟು ಫೀಚರ್ಸ್ಅನ್ನು ಒಳಗೊಂಡಿದೆ. ಇದು ಮಾರುಕಟ್ಟೆಯಲ್ಲಿ ಬಹಳಷ್ಟು ಸಂಚಲನವನ್ನು ಮೂಡಿಸಿದ ಸ್ಮಾರ್ಟ್ವಾಚ್ ಎನ್ನಬಹುದಾಗಿದೆ. ಈ ಸ್ಮಾರ್ಟ್ವಾಚ್ 10 ದಿನಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಈ ಸ್ಮಾರ್ಟ್ವಾಚ್ ಗುಣಮಟ್ಟದ ಡಿಸ್ಪ್ಲೇಯನ್ನು ಹೊಂದಿದೆ. ಇದು ಸ್ಲೀಪ್ ಟ್ರ್ಯಾಕರ್, ಹೃದಯ ಬಡಿತ, SpO2 ಮತ್ತು ಮಲ್ಟಿ ಸ್ಪೋರ್ಟ್ಸ್ ಮೋಡ್ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್ವಾಚ್ ಸದ್ಯ ಭಾರತದಲ್ಲಿ 3,499 ರೂಪಾಯಿ ಬೆಲೆಯಲ್ಲಿ ಪಡೆಯಬಹುದಾಗಿದೆ.
ರೆಡ್ಮಿ ವಾಚ್ 2 ಲೈಟ್
ಶಿಯೋಮಿ ಕಂಪನಿಯಿಂದ ಸಾಕಷ್ಟು ಬ್ರಾಂಡ್ಗಳು ಇದುವರೆಗೆ ಬಿಡುಗಡೆಯಾಗಿವೆ. ಆದರೆ ಸ್ಮಾರ್ಟ್ವಾಚ್ಗಳು ರೆಡ್ಮಿ ಕಂಪನಿಯಲ್ಲಿ ಹಲವಾರು ಬಿಡುಗಡೆಯಾಗಿದೆ. ಆದರೆ ಈ ಬಾರಿ ಶಿಯೋಮಿ ಕಂಪನಿಯ ಅಡಿಯಲ್ಲಿ ರೆಡ್ಮಿ ವಾಚ್ 2 ಲೈಟ್ ಸ್ಮಾರ್ಟ್ವಾಚ್ ಬಹಳ ಬೇಡಿಕೆಯಲ್ಲಿರುವ ಬ್ರಾಂಡ್ ಆಗಿದೆ. ಇನ್ನು ಇದರ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದು SpO2 ಟ್ರ್ಯಾಕರ್, ನಿದ್ರೆಯ ಮಾನಿಟರಿಂಗ್, 5ATM ವಾಟರ್ ರೆಸಿಸ್ಟೆನ್ಸ್, 120+ ವಾಚ್ ಫೇಸ್ಗಳನ್ನು ಟ್ರ್ಯಾಕ್ ಮಾಡಲಿದೆ. ಇದಲ್ಲದೆ ಈ ಸ್ಮಾರ್ಟ್ವಾಚ್ ಮಲ್ಟಿ ಕಲರ್ ಆಯ್ಕೆಗಳಲ್ಲಿ ಕೂಡ ದೊರೆಯಲಿದೆ. ಪ್ರಸ್ತುತ ಭಾರತದಲ್ಲಿ ಇದರ ಬೆಲೆ 3,499 ರೂಪಾಯಿ ಆಗಿದೆ.
ಫೈರ್ಬೋಲ್ಟ್ ರಿಂಗ್ 3 ಸ್ಮಾರ್ಟ್ವಾಚ್
ಫೈರ್ಬೋಲ್ಟ್ ಕಂಪನಿಯಿಂದ ಬಿಡುಗಡೆಯಾಗಿರುವಂತಹ ಸ್ಮಾರ್ಟ್ವಾಚ್ಗಳಲ್ಲಿ ಫೈರ್ಬೋಲ್ಟ್ ರಿಂಗ್ 3 ವಾಚ್ ಕೂಡ ಒಂದು.ಈ ವಾಚ್ನಲ್ಲಿ ಕೂಡ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಒಳಗೊಂಡಿದೆ. ಈ ಸ್ಮಾರ್ಟ್ವಾಚ್ ಮಲ್ಟಿ ವಾಚ್ಫೇಸ್ಗಳನ್ನು ನೀಡಲಿದೆ. ಇದರಲ್ಲಿ ಡಯಲ್ ಅನ್ನು ತಿರುಗಿಸುವ ಮೂಲಕ ಬಳಕೆದಾರರು ವಾಲ್ಪೇಪರ್ ಅಥವಾ ವಾಚ್ ಫೇಸ್ ಅನ್ನು ಬದಲಾಯಿಸುವುದಕ್ಕೆ ಅವಕಾಶವಿದೆ. ಇನ್ನು ಈ ಸ್ಮಾರ್ಟ್ವಾಚ್ ಇನ್ಬಿಲ್ಟ್ ಕ್ಯಾಲ್ಕುಲೇಟರ್ ಮತ್ತು ಗೇಮ್ಸ್, SpO2 ಮತ್ತು ಹಾರ್ಟ್ಬೀಟ್ ಮಾನಿಟರಿಂಗ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್ವಾಚ್ ಪ್ರಸ್ತುತ 2,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ