• Home
  • »
  • News
  • »
  • tech
  • »
  • Smartphone Tips: ಬೆಡ್‌ ರೂಂನಲ್ಲಿ ಸ್ಮಾರ್ಟ್‌ ಫೋನ್ ಇಡೋ ಅಭ್ಯಾಸ, ವಿವಾಹಿತರಿಗೆ ಕಂಟಕ!

Smartphone Tips: ಬೆಡ್‌ ರೂಂನಲ್ಲಿ ಸ್ಮಾರ್ಟ್‌ ಫೋನ್ ಇಡೋ ಅಭ್ಯಾಸ, ವಿವಾಹಿತರಿಗೆ ಕಂಟಕ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಗಂಡ-ಹೆಂಡತಿಯ ಜಗಳಕ್ಕೆ ಮೂಲ ಕಾರಣವೇ ಈ ಸ್ಮಾರ್ಟ್​ಫೋನ್ ಎಂದು ವರದಿ ಮಾಡಿದೆ. ವಿವೋ ಕಂಪನಿ ನಡೆಸಿದ ಸ್ವಿಚ್​ ಆಫ್ ವರದಿಯಲ್ಲಿ ಭಾರತದಲ್ಲಿ ಶೇಕಡಾ 88% ರಷ್ಟು ವಿವಾಹಿತರ ಸಂಬಂಧಗಳು ಹಾಳಾಗಲು ಈ ಮೊಬೈಲ್​ಗಳೇ ಕಾರಣ ಎಂದು ಕಂಪನಿ ವರದಿಯಲ್ಲಿ ಬಹಿರಂಗಪಡಿಸಿದೆ. ಹಾಗಿದ್ರೆ ಇನ್ನು ಏನೆಲ್ಲಾ ವಿಷಯಗಳನ್ನು ಇದ್ರಲ್ಲಿ ಬಹಿರಂಗ ಮಾಡಿದ್ದಾರೆ ಎಂಬುದನ್ನು ನೀವೇ ಓದಿ.

ಮುಂದೆ ಓದಿ ...
  • Share this:

    ಯಾವುದೇ ವಿಚಾರವಾಗಲೀ ಅದು ಅತಿಯಾಗಬಾರದು. ಅತಿಯಾದರೆ ಅಮೃತವೂ ವಿಷ ಎಂಬ ಗಾದೆಯಿದೆ. ಮುಖ್ಯವಾಗಿ ಸ್ಮಾರ್ಟ್​​ಫೋನ್​ಗಳು (Smartphones) ಈಗಿನ ಜನರ ಜೀವನದಲ್ಲಿ ಬಹಳಷ್ಟು ಪ್ರಭಾವವನ್ನು ಬೀರಿದೆ. ಚಿಕ್ಕ ಮಕ್ಕಳಿಂದ ಹಿಡಿದು ಮದುವೆಯಾದವರವರೆಗೂ ಸ್ಮಾರ್ಟ್​ಫೋನ್ ಇಲ್ಲದೆ ಜೀವನವೇ ಇಲ್ಲವೆನ್ನುತ್ತಾರೆ. ಆದರೆ ಈ ಸ್ಮಾರ್ಟ್​ಫೋನ್​ಗಳಿಂದ ಎಷ್ಟು ಲಾಭವಿದೆಯೋ ಅದಕ್ಕಿಂತ ಎರಡು ಪಟ್ಟು ತೊಂದರೆಗಳಿವೆ. ಈ ಸ್ಮಾರ್ಟ್​​ಫೋನ್​ನ ಪರಿಣಾಮದ ಬಗ್ಗೆ ಒಂದು ಕಂಪನಿ (Company) ಅಧ್ಯಯನ ನಡೆಸಿ ಬೆಚ್ಚಿಬೀಳುವಂತಹ ಸತ್ಯವೊಂದನ್ನು ಜನರಿಗೆ ತಿಳಿಸಿದೆ. ಈ ವರದಿಯ ಪ್ರಕಾರ ವಿವಾಹಿತರು ಈ ಸ್ಮಾರ್ಟ್​​ಫೋನ್​ಗಳ ಬಳಕೆಯಿಂದಲೇ ತಮ್ಮ ಸಂಬಂಧಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ವರದಿ ಮಾಡಿದೆ.


    ಈ ಗಂಡ-ಹೆಂಡತಿಯ ಜಗಳಕ್ಕೆ ಮೂಲ ಕಾರಣವೇ ಈ ಸ್ಮಾರ್ಟ್​ಫೋನ್ ಎಂದು ವರದಿ ಮಾಡಿದೆ. ವಿವೋ ಕಂಪನಿ ನಡೆಸಿದ ಸ್ವಿಚ್​ ಆಫ್ ವರದಿಯಲ್ಲಿ ಭಾರತದಲ್ಲಿ ಶೇಕಡಾ 88% ರಷ್ಟು ವಿವಾಹಿತರ ಸಂಬಂಧಗಳು ಹಾಳಾಗಲು ಈ ಮೊಬೈಲ್​ಗಳೇ ಕಾರಣ ಎಂದು ಕಂಪನಿ ವರದಿಯಲ್ಲಿ ಬಹಿರಂಗಪಡಿಸಿದೆ. ಹಾಗಿದ್ರೆ ಇನ್ನು ಏನೆಲ್ಲಾ ವಿಷಯಗಳನ್ನು ಇದ್ರಲ್ಲಿ ಬಹಿರಂಗ ಮಾಡಿದ್ದಾರೆ ಎಂಬುದನ್ನು ನೀವೇ ಓದಿ.


    ಶೇಕಡಾ 88% ರಷ್ಟು ದಾಂಪತ್ಯ ಕಲಹಕ್ಕೆ ಮೊಬೈಲ್​ ಕಾರಣ


    "ವಿವೋ ಕಂಪನಿ ಸಂಗಾತಿ ಸಂಬಂಧಗಳ ಮೇಲೆ ಸ್ಮಾರ್ಟ್‌ಫೋನ್‌ಗಳ ಪ್ರಭಾವ" ಎನ್ನುವ ಶೀರ್ಷಿಕೆಯಲ್ಲಿ ಹೊಸ ಅಧ್ಯಯನವೊಂದನ್ನು ನಡೆಸಿದೆ. ಈ ಸಮೀಕ್ಷೆಯಲ್ಲಿ ಸ್ಮಾರ್ಟ್​ಫೋನ್​ಗಳು ಸಂಸಾರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿಸಿದೆ. ಈ ಸಮೀಕ್ಷೆಯ ಪ್ರಕಾರ ಶೇಕಡಾ 88 ರಷ್ಟು ದಾಂಪತ್ಯ ಕಲಹಕ್ಕೆ ಈ ಸ್ಮಾರ್ಟ್​​ಫೋನ್​ಗಳೇ ಕಾರಣ ಎಂದಿದ್ದಾರೆ.


    ಇದನ್ನೂ ಓದಿ: ಈ ಸಿಮ್​ಗೆ ರೀಚಾರ್ಜ್ ಮಾಡಿದ್ರೆ​ ನಿಮಗೆ 50ಜಿಬಿ ಡೇಟಾ ಫ್ರೀ ಸಿಗುತ್ತೆ! ಏನಿದು ಹೊಸ ಆಫರ್​​?


    ಕೆಲವೊಂದು ಭಾಗಗಳಲ್ಲಿ ಜನರ ಮನೋಸ್ಥಿತಿಯಲ್ಲಿ ಬದಲಾವಣೆ


    ಈ ಸ್ಮಾರ್ಟ್​ಫೋನ್​ಗಳು ಇತ್ತೀಚೆಗೆ ವಿವಾಹಿತರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎನ್ನಬಹುದು. ಏಕೆಂದರೆ ಈ ಸ್ಮಾರ್ಟ್​​ಫೋನ್​ಗಳು ಜನರ ಮನೋಸ್ಥಿತಿಯನ್ನೇ ಬದಲಾಯಿಸಿಬಿಡುತ್ತದೆ. ಆದ್ದರಿಂದ ಸಂಬಂಧಗಳು ಒಂದೇ ರೀತಿ ಇರದಿರಲು ಕಾರಣವೇ ಈ ಮೊಬೈಲ್​ಗಳು. ಸ್ಮಾರ್ಟ್​ಫೋನ್​ಗಳಲ್ಲಿರುವಂತಹ ಪರ್ಸನಲ್​ ವಿಚಾರಗಳು ಮತ್ತು ಅನೇಕ ವಿಷಯಗಳು ಕುಟುಂಬದವರಲ್ಲಿ ಮನಸ್ತಾಪ ಮೂಡಲು ಕಾರಣ ಎಂದು ಸಮೀಕ್ಷೆ ಹೇಳುತ್ತದೆ.


    ಸಾಂದರ್ಭಿಕ ಚಿತ್ರ


    ಅದ್ರಲ್ಲೂ ಹೈದರಾಬಾದ್, ಬೆಂಗಳೂರು, ಅಹಮದಾಬಾದ್ ಮತ್ತು ಪುಣೆಯಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಸ್ಮಾರ್ಟ್‌ಫೋನ್ ಸಾಧನಗಳ ಅತಿಯಾದ ಬಳಕೆಯಿಂದಾಗಿ ವಿವಾಹಿತ ದಂಪತಿಗಳ ನಡುವೆ ಹೆಚ್ಚು ಕಲಹಗಳು ಸಂಭವಿಸಿವೆ ಮತ್ತು ಅಲ್ಲಿ ಜನಗಳು ಮಾನಸಿಕವಾಗಿ ಬದಲಾವಣೆಯೂ ಆಗಿದ್ದಾರೆ ಎಂದು ಹೇಳುತ್ತದೆ.


    ಸಮೀಕ್ಷೆ ಬಗ್ಗೆ ಭಾರತೀಯ ವಿವಾಹಿತ ದಂಪತಿಗಳ ಅಭಿಪ್ರಾಯ


    ಸ್ಮಾರ್ಟ್​​ಫೋನ್​ನ ಅತಿಯಾದ ಬಳಕೆ ವಿವಾಹಿತ ದಂಪತಿಗಳ ಸಂಬಂಧಕ್ಕೆ ಎಷ್ಟು ಪ್ರಭಾವ ಬೀರುತ್ತದೆ ಎಂದು ಭಾರತದಲ್ಲಿ ಕೆಲವೊಂದು ಭಾಗಗಳಲ್ಲಿ ಸಮೀಕ್ಷೆ ನಡೆಸಲಾಯಿತು. ಇದರ ಪ್ರಕಾರ 67 ಶೇಕಡಾದಷ್ಟು ಭಾರತೀಯ ವಿವಾಹಿತ ದಂಪತಿಗಳು ತಮ್ಮ ಬಾಳ ಸಂಗಾತಿಯ ಜೊತೆಗೆ ಮಾತನಾಡುತ್ತಿರುವಾಗ, ಖುಷಿಯಿಂದ ಕಾಲ ಕಳೆಯುವಾಗ ಈ ಸ್ಮಾರ್ಟ್​​ಫೋನ್​ಗಳು ಬಹಳಷ್ಟು ಅಡ್ಡಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


    ಸಾಂದರ್ಭಿಕ ಚಿತ್ರ


    ಇನ್ನು ಶೇಕಡಾ 66% ರಷ್ಟು ವಿವಾಹಿತ ದಂಪತಿಗಳು ಈ ಸ್ಮಾರ್ಟ್​​ಫೋನ್​ಗಳಿಂದಲೇ ತನ್ನ ಸಂಗಾತಿಯೊಂದಿಗಿನ ಬಾಂಧವ್ಯವನ್ನು ಹಾಳುಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.


    ಇನ್ನು ಶೇಕಡಾ 70% ರಷ್ಟು ಜನರು ತಾವು ಮೊಬೈಲ್​ ಒತ್ತುತ್ತಿರುವಾಗ ಸಂಗಾತಿ ಏನಾದರು ಮಾತನಾಡಿದರೆ, ಏನಾದರು ಕೇಳಿದರೆ ಬೇಗನೆ ಕೋಪಗೊಳ್ಳುತ್ತೇವೆ ಎಂದು ಸಮೀಕ್ಷೆ ನಡೆಸುವಾಗ ಒಪ್ಪಿಕೊಂಡಿರುತ್ತಾರೆ.


    ಅಂತೂ ಈ ಸಮೀಕ್ಷೆಯ ಮೂಲಕ ಹೆಚ್ಚಾಗಿ ದಾಂಪತ್ಯ ಜೀವನದಲ್ಲಿ ಕಲಹಗಳು ಬರಲು ಈ ಸ್ಮಾರ್ಟ್​​ಫೋನ್​ಗಳ ಅತಿಯಾದ ಬಳಕೇಯೇ ಕಾರಣ ಅಮತ ಹೇಳಬಹುದು.


    ಸ್ಮಾರ್ಟ್​ಫೋನ್​ಗಳ ಬಳಕೆಯಿಂದ ಪ್ರಯೋಜನವೂ ಇದೆ


    ಇನ್ನು ಈ ಸಮೀಕ್ಷೆ ನಡೆಸುವಾಗ ಮೊಬೈಲ್​ಗಳ ಅತಿಯಾದ ಬಳಕೆಯಿಂದ ಸಮಸ್ಯೆ ಮಾತ್ರವಲ್ಲದೆ ಇದರಿಂದ ಬಹಳಷ್ಟು ಉಪಯೋಗವೂ ಇದೆ ಎಂದು ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ. ಇದರಲ್ಲಿ 60% ರಷ್ಟು ಜನರು ಸ್ಮಾರ್ಟ್​ಫೋನ್​ಗಳ ಬಳಕೆಯಿಂದ ಬಹಳಷ್ಟು ಉಪಯೋಗವೂ ಇದೆ ಎಂದಿದ್ದಾರೆ. ಇದರಲ್ಲಿ ಕೆಲವರು ತಮ್ಮ ಸ್ನೇಹಿತರ, ಕುಟುಂಬವರ್ಗದವರ ಜೊತೆ ಸಂಪರ್ಕದಲ್ಲಿರಲು ಈ ಸಾಧನಗಳು ಬಹಳಷ್ಟು ಸಹಕಾರಿಯಾಗಿವೆ ಎಂದಿದ್ದಾರೆ. ಇನ್ನು ಕೆಲವರು ಈ ಮೊಬೈಲ್​ಗಳಿಂದ ನಮ್ಮ ಜ್ಞಾನ ಬಹಳಷ್ಟು ಅಭಿವೃದ್ಧಿಯಾಗಿವೆ ಎಂದೂ ಹೇಳಿದ್ದಾರೆ.


    ಸಾಂದರ್ಭಿಕ ಚಿತ್ರ


    ಈ ಸಮೀಕ್ಷೆಯ ಕುರಿತು ಹೇಳುವುದಾದರೆ ಸ್ಮಾರ್ಟ್​ಫೋನ್​ಗಳನ್ನು ಹೆಚ್ಚು ಬಳಕೆ ಮಾಡದೆ ತಮ್ಮ ಪ್ರೀತಿ ಪಾತ್ರರ ಜೊತೆ ಕಾಲಕಳೆಯಬೇಕು. ಈ ಸಾಧನಗಳು ಮಾನವರ ಜೀವನದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಇದರಿಂದ ಎಷ್ಟು ಲಾಭವಿದೆಯೋ ಅಷ್ಟೇ ತೊಂದರೆಗಳೂ ಇದೆ.

    Published by:Prajwal B
    First published: