VIDEO: ಸ್ಮಾರ್ಟ್​​ಫೋನ್​ಗಳಿಗೆ ಹೇಳಿ ಗುಡ್ ಬೈ: ಬಂದಿದೆ ಕಣ್ಣ ಮುಂದೆ ಸಂಪೂರ್ಣ ಮಾಹಿತಿ ನೀಡುವ ಸ್ಮಾರ್ಟ್​ ಗ್ಲಾಸ್​

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊಸ ಹೆಜ್ಜೆಯಾಗಿರುವ ವ್ಯುಝಿಕ್ಸ್​ ಕನ್ನಡಕ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

zahir | news18
Updated:December 30, 2018, 5:44 PM IST
VIDEO: ಸ್ಮಾರ್ಟ್​​ಫೋನ್​ಗಳಿಗೆ ಹೇಳಿ ಗುಡ್ ಬೈ: ಬಂದಿದೆ ಕಣ್ಣ ಮುಂದೆ ಸಂಪೂರ್ಣ ಮಾಹಿತಿ ನೀಡುವ ಸ್ಮಾರ್ಟ್​ ಗ್ಲಾಸ್​
ಸ್ಮಾರ್ಟ್​ ಗ್ಲಾಸ್
zahir | news18
Updated: December 30, 2018, 5:44 PM IST
ಸ್ಮಾರ್ಟ್​ ಗ್ಲಾಸ್​ಗಳ ಮೂಲಕ ವಿಶ್ವ ಪ್ರಸಿದ್ಧಿ ಪಡೆದಿರುವ ವ್ಯುಝಿಕ್ಸ್​ ಕಂಪೆನಿ ಇದೀಗ ಮತ್ತೊಂದು ಹೊಸ ಸ್ಮಾರ್ಟ್​ ಕನ್ನಡಕವನ್ನು ಪರಿಚಯಿಸಿದೆ. ಈ ಸ್ಮಾರ್ಟ್​ ಗ್ಲಾಸ್​ನ ವಿಶೇಷತೆ ಎಂದರೆ ಇದನ್ನು ಧರಿಸಿ ಸ್ಮಾರ್ಟ್​ಫೋನ್​ನಲ್ಲಿ ಮಾಡುವ ಪ್ರತಿಯೊಂದು ಕೆಲಸಗಳನ್ನು ಮಾಡಬಹುದು. ಹಾಗೆಯೇ ಸ್ಥಳೀಯ ಹವಾಮಾನದ ಪ್ರತಿಯೊಂದು ಮಾಹಿತಿಗಳನ್ನು ಪಡೆಯಬಹುದು. ಅದು ಕೂಡ ನಿಮ್ಮ ಕನ್ನಡಕದ ಸ್ಕ್ರೀನ್​ನಲ್ಲಿ ಎಂಬುದು ಮತ್ತೊಂದು ವಿಶೇಷ.

ಕಂಪೆನಿಯು ಇಂತಹದೊಂದು ಹೊಸ ಸ್ಮಾರ್ಟ್​ ಗ್ಲಾಸ್​ನ್ನು ಪರಿಚಯಿಸಲು ಅಕ್ಯೂವೆದರ್​ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು, ಇದರ ಫಲವಾಗಿ ಕಣ್ಣ ಮುಂದೆಯೇ ಹವಾಮಾನ ಮತ್ತು ಇತರೆ  ಮಾಹಿತಿಗಳು ಸಿಗಲಿದೆ. ಜನವರಿ 8 ರಿಂದ 11 ರವರೆಗೆ ಅಮೆರಿಕದಲ್ಲಿ ನಡೆಯಲಿರುವ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಷೋ (ಸಿಇಎಸ್) ನಲ್ಲಿ ಈ ಹೊಸ ಸ್ಮಾರ್ಟ್​ ಗ್ಲಾಸ್​ನ್ನು ಪ್ರದರ್ಶಿಸಲಾಗುತ್ತಿದ್ದು, ಇದರ ಬಳಿಕವಷ್ಟೇ  ಸ್ಮಾರ್ಟ್​ ಕನ್ನಡಕವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ವ್ಯುಝಿಕ್ಸ್​ ತಿಳಿಸಿದೆ.

ಈ ಹಿಂದೆ ಗೂಗಲ್​ ಇಂತಹದೊಂದು ತಂತ್ರಜ್ಞಾನವನ್ನು ಪರಿಚಯಿಸುವುದಾಗಿ ಹೇಳಿಕೊಂಡಿತ್ತು. ಆದರೆ ಅದಕ್ಕಿಂತಲೂ ಮುಂಚಿತವಾಗಿ ವ್ಯುಝಿಕ್ಸ್ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲು ಯಶಸ್ವಿಯಾಗಿದೆ. ವ್ಯುಝಿಕ್ಸ್​​ ಸ್ಮಾರ್ಟ್​ ಗ್ಲಾಸ್​ನ್ನು ಧರಿಸಿದರೆ ಸ್ಥಳೀಯ ಮಾಹಿತಿ, ಹವಾಮಾನದ ಮುನ್ಸೂಚನೆ, ಮೊಬೈಲ್ ಕಾರ್ಯ ಸೇರಿದಂತೆ ಹಲವು ಪ್ರಯೋಜನಗಳನ್ನು ಕಣ್ಣು ಮುಂದೆಯೇ ಪಡೆಯಬಹುದಾಗಿದೆ.

ಇದನ್ನೂ ಓದಿ: ರೈಲ್ವೆಯ 14033 ಹುದ್ದೆಗಳ ನೇಮಕಾತಿ: ತಿಂಗಳ ವೇತನ 35 ಸಾವಿರ ರೂ.

ಈ ಹೊಸ ಸಂಶೋಧನೆಯಿಂದ ಸಂಗೀತ ಕೇಳಲು, ಗೂಗಲ್​ ಮ್ಯಾಪ್ ಬಳಕೆಗಾಗಿ ಅಥವಾ ಹವಾಮಾನ ಮಾಹಿತಿ ಪಡೆಯಲು ಇನ್ನು ಮುಂದೆ ಮೊಬೈಲ್​ ಫೋನ್​ಗಳನ್ನು ಬಳಸಬೇಕಿಲ್ಲ. ಬದಲಾಗಿ ವ್ಯುಝಿಕ್ಸ್​ ಕನ್ನಡಕ ಧರಿಸಿ, ಅದರ ಗ್ಲಾಸ್​ ಮೇಲೆ ಟಚ್​ ಮಾಡಿ, ನಿಮಗೆ ಬೇಕಾದ ಆಯ್ಕೆಗಳ ಮಾಹಿತಿಗಳನ್ನು  ಪಡೆಯಬಹುದು. ಹಾಗೆಯೇ ಗ್ಲಾಸ್​ ಟಚ್​ ಮಾಡದೇ ಕೂಡ ಮಾಹಿತಿ ಪಡೆಯಲು, ಅಮೆಜಾನ್​ ಅಲೆಕ್ಸಾ ವಿರ್ಚುವಲ್ ಅಸಿಸ್ಟೆಂಟ್​ನ್ನು ಬಳಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ವರ್ಷಾಂತ್ಯದಲ್ಲಿ ಫ್ಲಿಪ್​ಕಾರ್ಟ್​ ಭರ್ಜರಿ ಆಫರ್: 30 ಸಾವಿರದ ಟಿವಿಗೆ ಕೇವಲ 19 ಸಾವಿರ ರೂ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊಸ ಹೆಜ್ಜೆಯಾಗಿರುವ ವ್ಯುಝಿಕ್ಸ್​ ಕನ್ನಡಕ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದರಿಂದ ಒಂದು ಪ್ರದೇಶದ ಚಿತ್ರಣ ಮತ್ತು ಮಾಹಿತಿಗಳನ್ನು ಕಣ್ಣ ಮುಂದೆಯೇ ಪಡೆದುಕೊಳ್ಳಬಹುದಾಗಿದೆ. ವ್ಯುಝಿಕ್ಸ್​ ಬ್ಲೇಡ್​ ಗ್ಲಾಸ್​ ಬೆಲೆ ಯುರೋಪ್ ಬೆಲೆ 1,099 ಯುರೋ ಆಗಿದ್ದು, ಭಾರತದಲ್ಲಿ ಇದರ ಬೆಲೆ 80 ರಿಂದ 90 ಸಾವಿರ ಆಗಿರಲಿದೆ ಎಂದು ಅಂದಾಜಿಸಲಾಗಿದೆ.
Loading...

ಸ್ಮಾರ್ಟ್​ ಗ್ಲಾಸ್​ನಲ್ಲಿರುವ ಇನ್ನಿತರೆ ಸೌಲಭ್ಯ
-ಒಂದು ಬದಿಯಲ್ಲಿ ಹೆಚ್​ಡಿ ಕ್ಯಾಮೆರಾ ಇದ್ದು, ಇದರ ಮೂಲಕ ವೀಡಿಯೊ, ಫೋಟೋಗಳನ್ನು ತೆಗೆಯಬಹುದು.
-ಯುಎಸ್​ಬಿ ಮತ್ತು ಬ್ಲೂಟೂತ್ ಅಡಿಯೋ ಕೂಡ ಸೌಲಭ್ಯಗಳನ್ನು ಇದರಲ್ಲಿ ನೀಡಲಾಗಿದೆ.
-ಐಒಎಸ್​ ಮತ್ತು ಅಂಡ್ರಾಯ್ಡ್​ ಅಪರೇಟಿಂಗ್  ಸಿಸ್ಟಂ ಕನೆಕ್ಟ್​ ಮಾಡಿಕೊಳ್ಳಬಹುದು.
-ಕನ್ನಡಕದ ಗ್ಲಾಸ್​ನಲ್ಲೇ ಸೋಷಿಯಲ್ ಮೀಡಿಯಾ ಮೆಸೇಜ್​ಗಳನ್ನು ವೀಕ್ಷಿಸಬಹುದು.
-ಕರೆಗಳನ್ನು ಸ್ವೀಕರಿಸಬಹುದು
-ಸ್ಥಳೀಯ ಮ್ಯಾಪ್​ನ ಸಂಪೂರ್ಣ ಮಾಹಿತಿ
-ಫೋಟೋ, ವೀಡಿಯೊಗಳನ್ನು ಶೇರ್​ ಮಾಡಿಕೊಳ್ಳುವ ಅವಕಾಶ
-ಸಂಗೀತ ಆಲಿಸುವ ಸೌಲಭ್ಯ

First published:December 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ