HOME » NEWS » Tech » SKODA OFFERING MASSIVE DISCOUNTS OF UPTO RS 8 LAKH ON OCTAVIA RS245 HERE NEW CAR PRICE STG HG

Skoda Octavia RS245: 8 ಲಕ್ಷ ರೂ. ವರೆಗೆ ಬೃಹತ್ ಡಿಸ್ಕೌಂಟ್‌!

ಈ ಕಾರು ಈಗ ಸ್ಥಗಿತಗೊಂಡಿರುವ ಆಕ್ಟೇವಿಯಾದ ಉತ್ತರಾಧಿಕಾರಿಯಾಗಿದೆ ಮತ್ತು ಈ ಮಾಡೆಲ್‌ನ 200 ಘಟಕಗಳು ಮಾತ್ರ ಭಾರತದಲ್ಲಿ ಮಾರಾಟಕ್ಕೆ ನೀಡಲಾಗಿತ್ತಾದರೂ ಆದರೆ ಕೆಲವು ಮಾರಾಟಗಾರರಲ್ಲಿ ಇನ್ನೂ ಕಾರಿನ ಸೀಮಿತ ಸ್ಟಾಕ್‌ಗಳು ಲಭ್ಯವಿದೆ.

news18-kannada
Updated:April 8, 2021, 11:50 AM IST
Skoda Octavia RS245: 8 ಲಕ್ಷ ರೂ. ವರೆಗೆ ಬೃಹತ್ ಡಿಸ್ಕೌಂಟ್‌!
Skoda Octavia RS245
  • Share this:
ಸ್ಕೋಡಾ ತನ್ನ RS245 ಮಾದರಿಯ ಸ್ಟಾಕ್‌ಗಳನ್ನು ಮಾರಾಟಗಾರರಲ್ಲಿ ಕ್ಲಿಯರ್‌ ಮಾಡುವ ಪ್ರಯತ್ನದಲ್ಲಿ ನಿರೀಕ್ಷಿತ ಖರೀದಿದಾರರಿಗೆ ಲಾಭದಾಯಕ ರಿಯಾಯಿತಿ ಮತ್ತು ಪ್ರಯೋಜನಗಳನ್ನು ನೀಡುತ್ತಿದೆ. ಜೆಕ್ ರಿಪಬ್ಲಿಕ್ ಪ್ರಧಾನ ಕಚೇರಿಯ ಕಾರು ತಯಾರಕರು ಕಳೆದ ವರ್ಷದ ಆರಂಭದಲ್ಲಿ ಆಕ್ಟೇವಿಯಾ RS245 ಮಾಡೆಲ್‌ ಅನ್ನು ಬಿಡುಗಡೆ ಮಾಡಿತ್ತು. ಈ ಕಾರು ಈಗ ಸ್ಥಗಿತಗೊಂಡಿರುವ ಆಕ್ಟೇವಿಯಾದ ಉತ್ತರಾಧಿಕಾರಿಯಾಗಿದೆ ಮತ್ತು ಈ ಮಾಡೆಲ್‌ನ 200 ಘಟಕಗಳು ಮಾತ್ರ ಭಾರತದಲ್ಲಿ ಮಾರಾಟಕ್ಕೆ ನೀಡಲಾಗಿತ್ತಾದರೂ ಆದರೆ ಕೆಲವು ಮಾರಾಟಗಾರರಲ್ಲಿ ಇನ್ನೂ ಕಾರಿನ ಸೀಮಿತ ಸ್ಟಾಕ್‌ಗಳು ಲಭ್ಯವಿದೆ.

ಕಾರಿನ ವಿಶೇಷತೆಗಳು:

ಪ್ರೀಮಿಯಂ ಸೆಡಾನ್ 45 ಹೆಚ್‌ಪಿ, 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಇದು 6.6 ಸೆಕೆಂಡುಗಳಲ್ಲಿ ವಾಹನವನ್ನು 0-100 ವೇಗವನ್ನು ಸ್ಪರ್ಶಿಸುವಂತೆ ಮಾಡುತ್ತದೆ. ಆಕ್ಟೇವಿಯಾ RS 245, RS ಕಾರು ಪೋರ್ಟ್‌ಫೋಲಿಯದ ಎರಡನೇ ಮಾಡೆಲ್‌ ಆಗಿದ್ದು, ಇದು ಹಿಂದಿನ ಪೀಳಿಗೆಯ ಆಕ್ಟೇವಿಯಾದಿಂದ ಸ್ಫೂರ್ತಿ ಪಡೆಯುತ್ತದೆ. ಸ್ಕೋಡಾ 2017 ರಲ್ಲಿ RS 245 ಗೂ ಮುನ್ನ RS230 ಅನ್ನು ಬಿಡುಗಡೆ ಮಾಡಲಾಗಿತ್ತು.

RS230ಗೆ ಹೋಲಿಸಿದಾಗ RS245 ಸುಧಾರಿತ ಎಂಜಿನ್ ಸಂರಚನೆಯನ್ನು ಹೊಂದಿದೆ ಮತ್ತು 245hp ಮತ್ತು 370Nm ಟಾರ್ಕ್ ಶಕ್ತಿಯನ್ನು ಹೊರಹಾಕುತ್ತದೆ. ಮಾದರಿಯು ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್ ಮತ್ತು ಹೆಚ್ಚು ಆಪ್ಟಿಮೈಸ್ಡ್ ಎಳೆತಕ್ಕಾಗಿ ವಿದ್ಯುತ್ ಚಾಲಿತ ಡಿಫರೆನ್ಷಿಯಲ್ ಅನ್ನು ಹೊಂದಿದೆ.

ಈ ವಾಹನದ ಎಕ್ಸ್-ಶೋರೂಮ್ ಬೆಲೆ 35.99 ಲಕ್ಷ ರೂ. ಆಗಿದ್ದು, ಸದ್ಯ ವ್ಯಾಪಕವಾದ ವೈಶಿಷ್ಟ್ಯಗಳನ್ನು ವಾಹನವು ಕೊಡುಗೆಯಾಗಿ ನೀಡುತ್ತಿದೆ. ಹೆಚ್ಚು ಬೆಲೆಯನ್ನು ಹೊಂದಿದ್ದರೂ ಸಹ, ಸ್ಕೋಡಾ RS245 ಕಾರು ಚಾಲನಾ ಉತ್ಸಾಹಿಗಳಲ್ಲಿ ಜನಪ್ರಿಯವಾಗಿದೆ. ಏಕೆಂದರೆ ಅದರ ತೀಕ್ಷ್ಣವಾದ ನೋಟ, ಶಕ್ತಿಯುತ ಎಂಜಿನ್ ಮತ್ತು ವರ್ಧಿತ ಸೌಕರ್ಯಕ್ಕಾಗಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. 200- ಯುನಿಟ್‌ ನಿರ್ಬಂಧವು ಪ್ರತ್ಯೇಕತೆಯ ಅಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ.

RS245 ಕಳೆದ ವರ್ಷ ಸೋಲ್ಡ್‌ ಔಟ್‌ ಆಗಿದೆ ಎಂದು ಸ್ಕೋಡಾ ವಿತರಕರು ಘೋಷಿಸಿದ್ದರೂ, ಕೋವಿಡ್ -19 ಸಾಂಕ್ರಾಮಿಕ, ನಂತರ ಲಾಕ್‌ಡೌನ್‌ ಕಾರಣಗಳಿಂದ ಹಲವು ಗ್ರಾಹಕರು ಕಾರು ಬುಕ್‌ ಮಾಡಿ ಕ್ಯಾನ್ಸಲ್‌ ಮಾಡಿದ್ದಾರೆ ಎನ್ನಲಾಗಿದೆ. ಇನ್ನು, ಆರ್ಥಿಕ ಕುಸಿತವು ಮುಂದುವರಿದಿದ್ದು, ಕಾರುಗಳ ಮಾರಾಟಕ್ಕೂ ಅಡ್ಡಿಯಾಗಿದೆ. ಇದರ ಪರಿಣಾಮವಾಗಿ ಮಾರಾಟದ ದಾಸ್ತಾನು ತೆರವುಗೊಳಿಸಲು ವಿತರಕರು 8 ಲಕ್ಷ ರೂ. ವರೆಗೆ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸಿದ್ದಾರೆ.
ಸ್ಕೋಡಾ ಈ ತಿಂಗಳು ತನ್ನ 2021 ಆಕ್ಟೇವಿಯಾ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮತ್ತು ಮಾಡೆಲ್‌ನ ಪೆಟ್ರೋಲ್ ಆವೃತ್ತಿಯನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಕಂಪನಿ ಮಾಹಿತಿ ನೀಡಿದೆ.
First published: April 8, 2021, 11:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories