HOME » NEWS » Tech » SIX THINGS TO DO BEFORE SELLING YOUR ANDROID SMARTPHONE HG

ಸ್ಮಾಟ್​ಫೋನ್​ ಮಾರಾಟ ಮಾಡುವ ಮುನ್ನ ಈ ವಿಚಾರ ನೆನಪಿಟ್ಟುಕೊಳ್ಳಿ

ಇದ್ದಕ್ಕಿಂದಂತೆಯೇ ಸ್ಮಾರ್ಟ್​ಫೋನ್​ ಮಾರಾಟ ಮಾಡಿದಾಗ ನಿಮ್ಮ ವೈಯ್ಯಕ್ತಿಕ ಡಾಟಾ ಬೇರೆಯವರ ಪಾಲಾಗಬಹುದು. ಅಷ್ಟು ಮಾತ್ರವಲ್ಲದೆ, ಪಾಸ್​ವರ್ಡ್​, ಬ್ಯಾಂಕ್​ ಖಾತೆ, ಮತ್ತಿತರ ಮಾಹಿತಿ ಕೂಡ ಸೋರಿಕೆಯಾಗಬಹುದು.

news18-kannada
Updated:March 31, 2021, 1:16 PM IST
ಸ್ಮಾಟ್​ಫೋನ್​ ಮಾರಾಟ ಮಾಡುವ ಮುನ್ನ ಈ ವಿಚಾರ ನೆನಪಿಟ್ಟುಕೊಳ್ಳಿ
ಸ್ಮಾರ್ಟ್​ಫೋನ್
  • Share this:
ಹೊಸ ಸ್ಮಾರ್ಟ್​ಫೋನ್ ಖರೀದಿಸಿದಾಗ ಹಳೆಯ ಫೋನನ್ನು ಮಾರಾಟ ಮಾಡಲು ಮುಂದಾಗುತ್ತೇವೆ. ಸೂಕ್ತವಾದ ಬೆಲೆ ಸಿಕ್ಕಾಗ ಕಣ್ಣು ಮುಚ್ಚಿ ಹಳೆಯ ಸ್ಮಾರ್ಟ್​ಫೋನನ್ನು ಸೇಲ್​ ಮಾಡುತ್ತೇವೆ. ಆದರೆ ಹಾಗೆ ಮಾಡುವ ಮುನ್ನ ಕೊಂಚ ಆಲೋಚನೆ ಮಾಡುವುದು ಒಳಿತು.

ಹಳೆಯ ಸ್ಮಾರ್ಟ್​ಫೋನ್​ ಮಾರಾಟ ಮಾಡುವ ಮುನ್ನ ಕೆಲವೊಂದು ವಿಚಾರ ಗಮನದಲ್ಲಿರಿಸಬೇಕಾಗುತ್ತದೆ. ಏಕೆಂದರೆ ಸದ್ಯ ಸ್ಮಾರ್ಟ್​ಫೋನ್​ ಮೂಲಕ ದೈನಂದಿನ ಎಲ್ಲಾ ವ್ಯವಹಾರವನ್ನು ಮುಗಿಸುತ್ತೇವೆ. ಹಾಗಾಗಿ ಅದರಲ್ಲಿ ಅನೇಕ ಡಾಟಾ ಸ್ಟೊರೇಜ್​ ಆಗಿರುತ್ತದೆ.

ಇದ್ದಕ್ಕಿಂದಂತೆಯೇ ಸ್ಮಾರ್ಟ್​ಫೋನ್​ ಮಾರಾಟ ಮಾಡಿದಾಗ ನಿಮ್ಮ ವೈಯ್ಯಕ್ತಿಕ ಡಾಟಾ ಬೇರೆಯವರ ಪಾಲಾಗಬಹುದು. ಅಷ್ಟು ಮಾತ್ರವಲ್ಲದೆ, ಪಾಸ್​ವರ್ಡ್​, ಬ್ಯಾಂಕ್​ ಖಾತೆ, ಮತ್ತಿತರ ಮಾಹಿತಿ ಕೂಡ ಸೋರಿಕೆಯಾಗಬಹುದು. ಹಾಗಾಗಿ ಕೆಲವೊಂದು ವಿಚಾರವನ್ನು ಗಮದಲ್ಲಿರಿಸಿಕೊಂಡು ಸ್ಮಾರ್ಟ್​ಫೋನ್​ ಮಾರಾಟ ಮಾಡುವುದು ಒಳಿತು.

ಸಂಪರ್ಕ:

ಹಳೆಯ ಸ್ಮಾರ್ಟ್​ಫೋನ್​ ಮಾರಾಟ ಮಾಡುವ ಮುನ್ನ ಬಳಕೆದಾರ ಮೊದಲು ಅದರಲ್ಲಿ ಸೇವ್​ ಆಗಿರುವ ಸಂಪರ್ಕವನ್ನು (ಕ್ವಾಂಟ್ಯಾಕ್ಟ್​) ಮತ್ತು ಅದರ ಬ್ಯಾಕ್​ಅಪ್​ ಅನ್ನು ಜಿಮೇಲ್​ಗೆ ವರ್ಗಾಯಿಸಿಕೊಳ್ಳಿ.

ಸಂದೇಶ, ಕರೆ:

ಸ್ಮಾರ್ಟ್​ಫೋನ್​ನಲ್ಲಿ ಈಗಾಗಲೇ ಸೇವ್​ ಆಗಿರುವ ಸಂದೇಶ ಮತ್ತು ಫೋನ್​ ಕರೆ ರೆಕಾರ್ಡ್​ ಅನ್ನು ಡಿಲೀಟ್ ಮಾಡಲು ಮರೆಯದಿರಿ.ಫೋಟೋ, ವಿಡಿಯೋ:

ಕೆಲವೊಮ್ಮೆ ಫೋನ್​ ಸ್ಟೊರೇಜ್​ನಲ್ಲಿ ಎಲ್ಲವೂ ಸೇವ್​ ಆಗಿರುತ್ತದೆ. ಹಾಗಾಗಿ ಫೋಟೋ, ವಿಡಿಯೋವನ್ನು ಇದ್ದರೆ ಅದನ್ನು ಬೇರೆ ಖಾತೆಗೆ ಬ್ಯಾಕ್​ಅಪ್​ ಮಾಡಿದ್ದೀರಾ ಎಂದು ಗಮನಿಸಿ.

ಅಕೌಂಟ್​ ಲಾಗ್​ಔಟ್​:

ಜಿಮೇಲ್​, ಬ್ಯಾಂಕ್ ಖಾತೆ ಇನ್ನಿತರ ಖಾತೆಗಳಿಂದ ಲಾಗ್​ ಔಟ್​ ಆಗಿದ್ದೀರಾ ಎಂದು ಮೊದಲು ಗಮನಿಸಿ. ಇಲ್ಲದಿದ್ದಲ್ಲಿ ಸ್ಮಾರ್ಟ್​ಫೋನ್​ ಮಾರಿದ ಮೇಲೆ ನಿಮ್ಮ ಮಾಹಿತಿ ಸೋರಿಕೆಯಾಗಬಹುದು.

ಮೈಕ್ರೋಎಸ್​ಡಿ ಕಾರ್ಡ್:

ಮೊಮೊರಿ ಕಾರ್ಡ್​​ನಲ್ಲಿ ಎಲ್ಲಾ ಫೈಲ್​​ಗಳು ಸೇವ್ ಆಗಿರುತ್ತದೆ. ಹಾಗಾಗಿ ಸ್ಮಾರ್ಟ್​ಫೋನ್​ ಸೇಲ್​ ಮಾಡುವ ಮುನ್ನ ಮೆಮೊರಿ ಕಾರ್ಡ್​ ತೆಗೆದಿದ್ದೀರಾ ಎಂದು ತಿಳಿದುಕೊಳ್ಳಿ.

ವಾಟ್ಸ್​​ಆ್ಯಪ್​​:

ಬಹುತೇಕರು ವಾಟ್ಸ್​ಆ್ಯಪ್​ ಬಳಸುತ್ತಾರೆ. ಹಾಗಾಗಿ ಹಳೆಯ ಫೋನ್​ ಸೇಲ್​ ಮಾಡುವ ಮುನ್ನ ವಾಟ್ಸ್​ಆ್ಯಪ್ ಖಾತೆಯಿಂದ ಲಾಗ್​ಔಟ್​ ಆಗಿದ್ದೀರಾ ಎಂದು ಪರೀಕ್ಷಿಸಿರಿ. ಏಕೆಂದರೆ ದೈನಂದಿನ ಮೆಸೇಜ್​, ಫೋಟೋ, ವಿಡಿಯೋ ಸಂಪರ್ಕಗಳ ಕುರಿತ ಅನೇಕ ಮಾಹಿತಿ ವಾಟ್ಸ್​ಆ್ಯಪ್​ನಲ್ಲಿ ದೊರಕುತ್ತದೆ. ಹಾಗಾಗಿ ಸ್ಮಾರ್ಟ್​ಫೋನ್​ ರೀಸೆಟ್​ ಮಾಡುವ ಮೂಲಕ ಮಾರಾಟ ಮಾಡಿ.
Published by: Harshith AS
First published: March 31, 2021, 1:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories