HOME » NEWS » Tech » SIX NEW GOOGLE UPDATES FOR ANDROID HG

ಆ್ಯಂಡ್ರಾಯ್ಡ್ ಸಾಧನಗಳಿಗೆ ಗೂಗಲ್ ಪರಿಚಯಿಸುತ್ತಿರುವ ಆರು ನವೀಕರಣಗಳಿವು!

ಆ್ಯಂಡ್ರಾಯ್ಡ್​ ಹಳೆಯ ಡಿವೈಸ್​ಗಳಲ್ಲಿ ಪಾಸ್​ವರ್ಡ್​ ಪರಿಶೀಲಿಸುವ ಆಯ್ಕೆಯನ್ನು ನೀಡುತ್ತಿದೆ. ಆ್ಯಂಡ್ರಾಯ್ಡ್​ 9 ಮತ್ತು ಅದರ ನಂತರದ ಚಾಲನೆಯಲ್ಲಿರುವ ಸಾಧನಗಳಲ್ಲಿ ಉಳಿಸಲಾದ ಪಾಸ್ಟ್​ವರ್ಡ್​ ಅನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

news18-kannada
Updated:February 24, 2021, 1:45 PM IST
ಆ್ಯಂಡ್ರಾಯ್ಡ್ ಸಾಧನಗಳಿಗೆ ಗೂಗಲ್ ಪರಿಚಯಿಸುತ್ತಿರುವ ಆರು ನವೀಕರಣಗಳಿವು!
ಗೂಗಲ್
  • Share this:
ಗೂಗಲ್​ ಆ್ಯಂಡ್ರಾಯ್ಡ್​ ಸಾಧನಗಳಿಗೆ ಹೊಸ ನವೀಕರಣ ಶ್ರೇಣಿಯನ್ನು ಘೋಷಿಸಿದೆ. ಬಳಕೆದಾರರಿಗೆ ಸುರಕ್ಷತೆ ಮತ್ತು ಅನುಕೂಲಕರವಾಗಿಸಲು ಹಲವು ಅಪ್​ಡೇಟ್​ಗಳನ್ನು ಪರಿಚಯಿಸುತ್ತಿದೆ.

-ಆ್ಯಂಡ್ರಾಯ್ಡ್​ ಹಳೆಯ ಡಿವೈಸ್​ಗಳಲ್ಲಿ ಪಾಸ್​ವರ್ಡ್​ ಪರಿಶೀಲಿಸುವ ಆಯ್ಕೆಯನ್ನು ನೀಡುತ್ತಿದೆ. ಆ್ಯಂಡ್ರಾಯ್ಡ್​ 9 ಮತ್ತು ಅದರ ನಂತರದ ಚಾಲನೆಯಲ್ಲಿರುವ ಸಾಧನಗಳಲ್ಲಿ ಉಳಿಸಲಾದ ಪಾಸ್ಟ್​ವರ್ಡ್​ ಅನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

"ಈ ವೈಶಿಷ್ಟ್ಯದ ಮೂಲಕ ಬಳಕೆದಾರ ಬಳಸಿದ ಪಾಸ್‌ವರ್ಡ್ ಅನ್ನು ಈ ಹಿಂದೆ ಬಹಿರಂಗಪಡಿಸಲಾಗಿದೆಯೇ ಮತ್ತು ಅದರ ಬಗ್ಗೆ ಏನು ಮಾಡಬೇಕೆಂದು ತಿಳಿಸುತ್ತದೆ" ಎಂದು ಗೂಗಲ್ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದೆ.

-ಸಂದೇಶವನ್ನು ನಿಗದಿತ ಸಮಯಕ್ಕೆ ಕಳುಹಿಸಬಹುದಾದ ಆಯ್ಕೆಯನ್ನು ಗೂಗಲ್​ ನವೀಕರಣದ ಮೂಲಕ ನೀಡಲಿದೆ. ಅಂದರೆ ಸಂದೇಶವನ್ನು ನಿಗದಿತ ದಿನಾಂಕ, ಸಮಯಕ್ಕೆ ಕಳುಹಿಸುವಂತೆ ಶೆಡ್ಯೂಲ್​ ಮಾಡಿ ಇಡಬಹುದಾಗಿದೆ. ಆ್ಯಂಡ್ರಾಯ್ಡ್​​ 7 ಮತ್ತು ಹೊಸ ಫೋನ್​ಗಳಲ್ಲಿ ಈ ಹೊಸ ಫೀಚರ್ಸ್​​ ಅನ್ನು ತರಲು ಗೂಗಲ್​ ಮುಂದಾಗಿದೆ.

-ಆ್ಯಂಡ್ರಾಯ್ಡ್​ ಡಿವೈಸ್​ಗಳಲ್ಲಿ ಸ್ಕ್ರೀನ್​ ರೀಡರ್​ ಮತ್ತು ಟಾಕ್​ಬ್ಯಾಕ್​​ ಆಯ್ಕೆಯನ್ನು ಗೂಗಲ್​ ಪರಿಚಯಿಸಿದೆ. ಈ ಫೀಚರ್​ ಸನ್ನೆಗಳ ಮೂಲಕ ಮತ್ತು ಸುಲಭವಾಗಿ ಅರ್ಥೈಸಿಕೊಳ್ಳುವ ಅವಕಾಶವನ್ನು ಇದರ ಮೂಲಕ ನೀಡುತ್ತದೆ. ಫಿಕ್ಸೆಲ್​ ಮತ್ತು ಸ್ಯಾಮ್​ಸಂಗ್​ ಡಿವೈಸ್​ಗಳಲ್ಲಿ ಟಾಕ್​ಬ್ಯಾಕ್​ ಆಯ್ಕೆ ಸಿಗಲಿದೆ.

-ಗೂಗಲ್​ ಅಸಿಸ್ಟೆಂಟ್​ ನವೀಕರಣಣವನ್ನು ಮಾಡಿದೆ. ಈ ಮೊದಲಿಗಿಂತಲೂ ಹೊಸ ಆಯ್ಕೆಗಳು ಬಳಕೆದಾರರಿಗೆ ಸಿಗುತ್ತಿದೆ
-ಅನೇಕರು ಗೂಗಲ್​ ಮ್ಯಾಪ್ ಬಳಸುತ್ತಿದ್ದಾರೆ. ಆದರೀಗ ಅದರಲ್ಲಿ​ ಡಾರ್ಕ್​ ಥೀಮ್​ ಆಯ್ಕೆಯನ್ನು ಅಂತಿಮವಾಗಿ ಹೊರತರುತ್ತಿದೆ. ಎಲ್ಲಾ ಆ್ಯಂಡ್ರಾಯ್ಡ್​ ಬಳಕೆದಾರರಿಗೆ ಈ ಆಯ್ಕೆ ಸಿಗಲಿದೆ. ಜೊತೆಗೆ ಬ್ಯಾಟರಿ ಮತ್ತು ಬೆಳಕಿನಿಂದ ಕಣ್ಣು ರಕ್ಷಣೆಗೆ ಇದು ಸಹಾಯಕವಾಗಲಿದೆ.
Published by: Harshith AS
First published: February 24, 2021, 1:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories