HOME » NEWS » Tech » SIX NEW BIKES AND SCOOTERS LAUNCHING IN APRIL 2021 STG HG

April‌ 2021: ಈ ತಿಂಗಳಲ್ಲಿ ಬಿಡುಗಡೆಯಾಗಲಿರುವ ನೂತನ ಬೈಕುಗಳ ವಿವರ ಇಲ್ಲಿದೆ

ಟಿವಿಎಸ್‌ ಮೋಟರ್‌ ಕಂಪನಿ ನೂತನ ಅಪಾಚೆ ಬೈಕ್‌ ಮೂಲಕ ಮತ್ತೆ ಆಕರ್ಷಕ ಬೆಲೆ ಮೂಲಕ ಸೂಪರ್‌ ಬೈಕ್‌ಗಳೊಂದಿಗೆ ಸ್ಪರ್ಧೆಗಿಳಿಯುತ್ತಿದೆ. ಇದೇ ರೀತಿ, ಈ ತಿಂಗಳು ಬಿಡುಗಡೆಯಾಗುತ್ತಿರುವ ಉತ್ತಮ ದ್ವಿಚಕ್ರ ವಾಹನಗಳ ಆಯ್ಕೆಯನ್ನು ಇಲ್ಲಿ ನೀಡಲಾಗಿದೆ.

news18-kannada
Updated:April 5, 2021, 3:53 PM IST
April‌ 2021: ಈ ತಿಂಗಳಲ್ಲಿ ಬಿಡುಗಡೆಯಾಗಲಿರುವ ನೂತನ ಬೈಕುಗಳ ವಿವರ ಇಲ್ಲಿದೆ
Bike
  • Share this:
ಮೋಟರ್‌ ಸೈಕಲ್‌ ಅಭಿಮಾನಿಗಳು, ಉತ್ಸಾಹಿಗಳು ಹಾಗೂ ನಿರೀಕ್ಷಿತ ಖರೀದಿದಾರರು ಈ ತಿಂಗಳು ಬಹಳಷ್ಟು ಆಯ್ಕೆಗಳನ್ನು ಹೊಂದಿದ್ದಾರೆ. ಇದೇ ತಿಂಗಳಲ್ಲಿ ಉತ್ತಮ ಬೈಕುಗಳು ಅಥವಾ ಸ್ಕೂಟರ್‌ಗಳು ಬಿಡುಗಡೆಯಾಗಲಿದೆ. ಈವರೆಗಿನ ಅತ್ಯಂತ ಕಡಿಮೆ ಬೆಲೆಗೆ ಟ್ರಯಂಫ್‌ ಬೈಕ್‌ ಬಿಡುಗಡೆಯಾಗುತ್ತಿದ್ದು, ಡುಕಾಟಿಯ ದೊಡ್ಡ ಪವರ್ ಕ್ರೂಸರ್ ಸಹ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಇನ್ನು, ಟಿವಿಎಸ್‌ ಮೋಟರ್‌ ಕಂಪನಿ ನೂತನ ಅಪಾಚೆ ಬೈಕ್‌ ಮೂಲಕ ಮತ್ತೆ ಆಕರ್ಷಕ ಬೆಲೆ ಮೂಲಕ ಸೂಪರ್‌ ಬೈಕ್‌ಗಳೊಂದಿಗೆ ಸ್ಪರ್ಧೆಗಿಳಿಯುತ್ತಿದೆ. ಇದೇ ರೀತಿ, ಈ ತಿಂಗಳು ಬಿಡುಗಡೆಯಾಗುತ್ತಿರುವ ಉತ್ತಮ ದ್ವಿಚಕ್ರ ವಾಹನಗಳ ಆಯ್ಕೆಯನ್ನು ಇಲ್ಲಿ ನೀಡಲಾಗಿದೆ.

1. TRIUMPH TRIDENT 660

ಟ್ರಯಂಫ್ ಮೋಟಾರ್‌ ಸೈಕಲ್ಸ್ ಇಂಡಿಯಾ ಏಪ್ರಿಲ್ 6, 2021 ರಂದು ಟ್ರಯಂಫ್ ಟ್ರೈಡೆಂಟ್ 660 ಅನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕಳೆದ ನವೆಂಬರ್‌ನಲ್ಲೇ 50,000 ರೂ. ಬೆಲೆಗೆ ಬುಕ್ಕಿಂಗ್ ಸ್ವೀಕರಿಸಲು ಆರಂಭಿಸಿದೆ. ಆದರೆ, ಬೈಕ್‌ ದರ ಕೇವಲ 50 ಸಾವಿರ ಅನ್ಕೋಬೇಡಿ. ಟ್ರಯಂಫ್ ಟ್ರೈಡೆಂಟ್ 660ಯ ಬೆಲೆ ಸುಮಾರು 7.45 ಲಕ್ಷ ರೂ (ಎಕ್ಸ್‌ಶೋರೂಂ ಬೆಲೆ) ಎಂದು ನಿರೀಕ್ಷಿಸಲಾಗಿದೆ. ಇದು 660 ಸಿಸಿ ಇನ್‌ಲೈನ್ ಮೂರು-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಜತೆಗೆ 80 ಎಚ್‌ಪಿ ಮತ್ತು 64 ಎನ್‌ಎಂ ಟಾರ್ಕ್ ಅನ್ನು ನೀಡುತ್ತದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, ಕಂಪನಿಯು ಬೈಕ್‌ನೊಂದಿಗೆ ಹಲವಾರು ಪರಿಕರಗಳನ್ನು ಸಹ ನೀಡಲಿದೆ.

2.  2021 TVS Apache RR 310

ಚೆನ್ನೈ ಮೂಲದ ಬೈಕ್‌ಮೇಕರ್ ಅಪಾಚೆ ಆರ್‌ಆರ್‌ 310ನ ನವೀಕರಿಸಿದ ಆವೃತ್ತಿಯನ್ನು ಏಪ್ರಿಲ್ 7 ರಂದು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಬೆಲೆ ಇನ್ನೂ ಘೋಷಣೆಯಾಗಿಲ್ಲವಾದರೂ 2.5 ಲಕ್ಷ ರೂ. ಗಿಂತ ಕಡಿಮೆ ಎಂದು ಹೇಳಳಾಗಿದೆ. ಹೊಸ ಮಾಡೆಲ್‌ ನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಅಳವಡಿಸಲಾಗಿದೆ ಎಂಬುದು ಟೀಸರ್‌ ಮೂಲಕ ಗಮನಿಸಬಹುದು. ಇದರೊಂದಿಗೆ ಹಳೆಯ ಅಪಾಚೆಗಿಂತ ಇನ್ನೂ ಕೆಲ ಅಪ್‌ಡೇಟ್‌ಗಳನ್ನು ಮಾಡಲಾಗಿದೆ. 2021 ಟಿವಿಎಸ್ ಅಪಾಚೆ ಆರ್‌ಆರ್‌ 310 ಅದೇ 312.2 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ಬರಲಿದ್ದು, 33.5 ಬಿಹೆಚ್‌ಪಿ ಮತ್ತು 27.3 ಎನ್ಎಂ ಟಾರ್ಕ್ ಅನ್ನು ಹೊಂದಿದೆ. ಸ್ಲಿಪ್ಪರ್ ಕ್ಲಚ್, ರೈಡ್-ಬೈ-ವೈರ್ ಮತ್ತು ಟ್ರ್ಯಾಕ್, ರೈನ್, ಅರ್ಬನ್ ಮತ್ತು ಸ್ಪೋರ್ಟ್ಸ್‌ ರೈಡ್ ಮೋಡ್‌ಗಳನ್ನು ಪಡೆಯುತ್ತದೆ.

3. DUCATI DIAVEL, XDIAVEL

ಇಟಲಿಯ ಸೂಪರ್‌ಬೈಕ್ ತಯಾರಕ ಡುಕಾಟಿ ಕಳೆದ ವರ್ಷ ನವೆಂಬರ್‌ನಲ್ಲಿ 2021 XDIAVEL ಶ್ರೇಣಿಯ ಮೋಟಾರ್‌ಸೈಕಲ್ ಅನ್ನು ಪ್ರಪಂಚದ ಹಲವೆಡೆ ಬಿಡುಗಡೆ ಮಾಡಿದೆ. ಈ ಮಾಡೆಲ್‌ ಕೆಲವು ಯಾಂತ್ರಿಕ ಮತ್ತು ವೈಶಿಷ್ಟ್ಯ ನವೀಕರಣಗಳನ್ನು ಪಡೆದುಕೊಂಡಿದೆ. ಬೈಕು ಡಿವಿಟಿಯೊಂದಿಗೆ 1262 ಸಿಸಿ ಎಂಜಿನ್ ಅನ್ನು ಬಳಸುತ್ತದೆ. ಮೋಟಾರು 127Nm ಟಾರ್ಕ್‌ನೊಂದಿಗೆ ಗರಿಷ್ಠ ಶಕ್ತಿಯನ್ನು ಹೊರಹಾಕುತ್ತದೆ. ಇದು ಸ್ಲಿಪ್ ಅಸಿಸ್ಟ್ ಕ್ಲಚ್ ಮತ್ತು ರೈಡ್-ಬೈ-ವೈರ್ ಸಿಸ್ಟಮ್‌ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಜಾಗತಿಕ ಮಾದರಿಯಂತೆಯೇ, ಇಂಡಿಯಾ-ಸ್ಪೆಕ್ ಆವೃತ್ತಿಯನ್ನು ಡಾರ್ಕ್, ಎಸ್ ಮತ್ತು ಬ್ಲಾಕ್ ಸ್ಟಾರ್ ಎಂಬ ಮೂರು ಟ್ರಿಮ್‌ಗಳಲ್ಲಿ ಬಿಡುಗಡೆಯಾಗುವುದು..ಡುಕಾಟಿ ಇಂಡಿಯಾ ಭರವಸೆ ನೀಡಿದಂತೆ, DIAVEL ಮತ್ತು XDIAVEL ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಒಂದು ವೇಳೆ ತಡವಾದರೂ 2021 ರ ಮೊದಲ ತ್ರೈಮಾಸಿಕದ ಅಂತ್ಯದೊಳಗೆ ಲಾಂಛ್‌ ಆಗಲಿದೆ. ಡುಕಾಟಿಯ ದೊಡ್ಡ ಬುಚ್ ಪವರ್ ಕ್ರೂಸರ್ XDIAVEL ಮತ್ತು ಅದರ ಸ್ಪೋರ್ಟಿ ಆವೃತ್ತಿ DIAVEL ಕ್ರಮವಾಗಿ ಸುಮಾರು 19 ಲಕ್ಷ ಮತ್ತು 18 ಲಕ್ಷ ರೂ. ಬೆಲೆ ಎಂದು ತಿಳಿದುಬಂದಿದೆ.

4. 2021 KTM RC 390

2021 ಕೆಟಿಎಂ ಆರ್‌ಸಿ 390 ತನ್ನ ಮಾರುಕಟ್ಟೆ ಬಿಡುಗಡೆಗೆ ಮುಂಚಿತವಾಗಿ ಮಾರಾಟಗಾರರಿಗೆ ಬರಲು ಪ್ರಾರಂಭಿಸಿದೆ. ಆದರೆ, ಅಧಿಕೃತ ಬಿಡುಗಡೆ ದಿನಾಂಕ ಮತ್ತು ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಹೊಳಪುಳ್ಳ ಕಪ್ಪು ಬಣ್ಣದ ಸ್ಕೀಂನಲ್ಲಿ ಪೇಂಟ್‌ ಮಾಡಲಾಗಿದ್ದು, ಈ ಬೈಕು ಈಗಿರುವ ಮಾಡೆಲ್‌ಗಿಂತ ಸಾಕಷ್ಟು ರಿಫ್ರೆಶ್ ಆಗಿ ಕಾಣುತ್ತದೆ. LED DRL ಮತ್ತು ಸೈಡ್ ಟರ್ನ್ ಸೂಚಕಗಳೊಂದಿಗೆ ಹೊಸ ಸಿಂಗಲ್ ಪೀಸ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಪರಿಷ್ಕೃತ ಫ್ರಂಟ್ ಫಾರ್ಮಿಂಗ್, ಇಂಧನ ಟ್ಯಾಂಕ್ ಮತ್ತು ರೈಡರ್ ದಕ್ಷತಾಶಾಸ್ತ್ರ, ಹೊಸ ಸ್ಪ್ಲಿಟ್ ಸೀಟ್ ಮತ್ತು ಪಿಲಿಯನ್ ಗ್ರ್ಯಾಬ್‌ ರೇಲ್, ದೊಡ್ಡ ಸಿಂಗಲ್-ಡಿಸ್ಕ್ ಬ್ರೇಕ್ ಮತ್ತು ಹೆಚ್ಚಿನ ಪ್ರಮುಖ ನವೀಕರಣಗಳನ್ನು ಒಳಗೊಂಡಿದೆ. ಹಳೆಯ ಮಾಡೆಲ್‌ನಂತೆ 373 ಸಿಸಿ, ಸಿಲಿಂಡರ್ ಎಂಜಿನ್ ಅನ್ನು ಬಳಸುವುದನ್ನು ಮುಂದುವರಿಸುತ್ತದೆ.

5. NEW SUZUKI HAYABUSA

ಹೊಸ ಸುಜುಕಿ ಹಯಾಬುಸಾ ಖಂಡಿತವಾಗಿಯೂ ದೇಶದಲ್ಲಿ ಬಹುನಿರೀಕ್ಷಿತ ಹೊಸ ಬೈಕ್‌ಗಳಲ್ಲಿ ಒಂದಾಗಿದೆ. "ಇದುವರೆಗಿನ ಅತಿ ವೇಗವಾಗಿ ಚಲಿಸುವ ಹಯಾಬುಸಾ" ಎಂದು ಹೇಳಲಾದ ಈ ಮಾಡೆಲ್ 1340 ಸಿಸಿ, 4-ಸಿಲಿಂಡರ್ ಎಂಜಿನ್ ಅನ್ನು ಹೊಸ, ಹಗುರವಾದ ಪಿಸ್ಟನ್‌ಗಳು, ನವೀಕರಿಸಿದ ಇಂಧನ ಇಂಜೆಕ್ಷನ್‌ ಮತ್ತು ಹೊಸ ಸಂಪರ್ಕಿಸುವ ರಾಡ್‌ಗಳನ್ನು ಹೊಂದಿದೆ. ಇದು 190bhp ಮತ್ತು 150Nm ಅನ್ನು ನೀಡುತ್ತದೆ ಮತ್ತು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ದ್ವಿಮುಖ ತ್ವರಿತ ಶಿಫ್ಟರ್ ಮತ್ತು ಆಟೋಬ್ಲಿಪ್ಪರ್ ಅನ್ನು ಹೊಂದಿದೆ. ಅವಳಿ-ಸ್ಪಾರ್ ಅಲ್ಯೂಮಿನಿಯಂ ಫ್ರೇಮ್ ಹಾಗೇ ಉಳಿಸಿಕೊಂಡರೆ, ಅದು 2 ಕೆ.ಜಿ. ಗಳಿಂದ ಹಗುರವಾಗಿರುತ್ತದೆ. ಬೈಕು ಹಲವಾರು ಹೊಸ ಸುಧಾರಿತ ತಂತ್ರಜ್ಞಾನಗಳನ್ನು ಮತ್ತು ಗುಡಿಗಳನ್ನು ಹೊಂದಿದೆ.

6. APRILIA SXR 125

ಪಿಯಾಜಿಯೊ ಇಂಡಿಯಾ ಎಸ್‌ಎಕ್ಸ್‌ಆರ್ 125 ಸ್ಕೂಟರ್ ಅನ್ನು ಏಪ್ರಿಲ್ 2021 ರಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಇತ್ತೀಚೆಗೆ 5,000 ರೂ.ಗಳ ಟೋಕನ್ ಮೊತ್ತದಲ್ಲಿ ತನ್ನ ಅಧಿಕೃತ ಬುಕಿಂಗ್ ಅನ್ನುಪ್ರಾರಂಭಿಸಿದೆ. ಅದರ ಕೆಲವು ವಿನ್ಯಾಸದ ಬಿಟ್‌ಗಳನ್ನು ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ನಿಂದ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಉದ್ದವಾದ ಸೀಟ್ ಪ್ಯಾನಲ್, ವಿಶಾಲ ಮುಂಭಾಗದ ಏಪ್ರನ್ ಮತ್ತು ಎತ್ತರದ ವಿಸಿಯರ್‌ ಅನ್ನು ಹೊಂದಿದೆ. ನಾಲ್ಕು ಬಣ್ಣಗಳಲ್ಲಿ ಈ ಸ್ಕೂಟರ್ ಲಭ್ಯವಾಗಲಿದ್ದು, ಇದು ಬಿಎಸ್ 6- ರೆಡಿ 125 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಶಕ್ತಿಯನ್ನು ಪಡೆಯುತ್ತದೆ.
Published by: Harshith AS
First published: April 5, 2021, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories