ಪೆಟ್ರೋಲ್, ಡೀಸೆಲ್ ವಾಹನಗಳೆದುರು ಎಲೆಕ್ಟ್ರಿಕ್ ವಾಹನಗಳ ಸದ್ದು ಜೋರಾಗಿದೆ. ಹಲವು ಕಂಪನಿಗಳು ವಿಶೇಷ ಮತ್ತು ಆಕರ್ಷಕ ಫೀಚರ್ಸ್ ಜತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಅದರಂತೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಉತ್ಪಾದಕ ಸಂಸ್ಥೆಯಾದ ಸಿಂಪಲ್ ಎನರ್ಜಿಯು ಸಿಂಪಲ್ ಒನ್ ಸ್ಕೂಟರ್ ಪರಿಚಯಸಿದ್ದು, ಇದೀಗ ಗ್ರಾಹಕರಿಗಾಗಿ ಉಚಿತ ಬುಕ್ಕಿಂಗ್ ಮಾಡುವ ಅವಕಾಶದ ಜತೆಗೆ ಅದರ ಮೊತ್ತವನ್ನು ಘೋಷಿಸಿದೆ.
ಸಿಂಪಲ್ ಎನರ್ಜಿ ಸಂಸ್ಥೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಿದ್ದು, ಈಗಾಗಲೇ ಪರಿಚಯಿಸಿದೆ. ಆದರೀಗ ಗ್ರಾಹಕರಿಗಾಗಿ ಬುಕ್ಕಿಂಗ್ ಸೌಲಭ್ಯದ ಜತೆಗೆ ಅದರ ಬೆಲೆಯನ್ನು ಹೇಳಿದೆ. ಆಗಸ್ಟ್ 15ರಿಂದ ಬುಕ್ಕಿಂಗ್ ಮಾಡುವ ಅವಕಾಶ ನೀಡುತ್ತಿದ್ದು, 1,947 ರೂ.ಗೆ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.
ಇನ್ನು ಫ್ರೀ ಬುಕ್ಕಿಗ್ ಸಂಜೆ 5ರಿಂದ ಆರಂಭವಾಗುತ್ತದೆ. ಕಂಪನಿಯ ಅಧಿಕೃತ ವೆಬ್ಸೈಟ್ ಮೂಲಕ ವಾಹನ ಬುಕ್ಕಿಂಗ್ ಮಾಡಬಹುದು.
ಸಿಂಪಲ್ ಎನರ್ಜಿ ಸಂಸ್ಥೆ ಪೋರ್ಟೆಬಲ್ ಬ್ಯಾಟರಿ ಕುರಿತಾಗಿಯೂ ಮಾಹಿತಿ ಹಂಚಿಕೊಂಡಿದೆ. ಸ್ಕೂಟರಿಗಾಗಿ ಬೂದು ಬಣ್ಣದ ಬ್ಯಾಟರಿ ಪ್ಯಾಕ್ 6ಕೆ.ಜಿಗಿಂತ ಹೆಚ್ಚು ತೂಗುತ್ತದೆ. ಮನೆಯಲ್ಲಿಯೇ ಇದನ್ನು ಚಾರ್ಜ್ ಮಾಡಬಹುದಾಗಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ 4.8 ಕಿಲೋವ್ಯಾಟ್ ಲಿಥಿಯಂ- ಐಯಾನ್ ಬ್ಯಾಟರಿ ಒಳಗೊಂಡಿದೆ. 240 ಕಿಮೀ ಇಕೋ ಮೋಡ್ನಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 100ಕಿ.ಮೀ ಗರಿಷ್ಠ ವೇಗ ಮತ್ತು ಗಂಟೆಗೆ 0-50 ಕಿಲೋ ಮೀಟರ್ ವೇಗವನ್ನು 3.6 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ.
ಸ್ಕೂಟರ್ ಟಚ್ ಸ್ಕ್ರೀನ್, ಆನ್ಬೋರ್ಡ್ ನ್ಯಾವಿಗೇಷನ್, ಬ್ಲೂಟೂತ್ ಮುಂತಾಧ ಸ್ಮಾರ್ಟ್ಫೀಚರ್ಸ್ ಹೊಂದಿದೆ. ಇದರ ಖರೀದಿ ಬೆಲೆ 1,10,000ದಿಂದ 1,20,000 ರೂ.ವರೆಗೆ ಇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ