• Home
  • »
  • News
  • »
  • tech
  • »
  • Telecom Company: ಇನ್ಮುಂದೆ ಸಿಮ್​ಗಳ ವಂಚನೆ ಅಸಾಧ್ಯ! ಟೆಲಿಕಾಂ ಇಲಾಖೆಯಿಂದ ಹೊಸ ನಿಯಮ

Telecom Company: ಇನ್ಮುಂದೆ ಸಿಮ್​ಗಳ ವಂಚನೆ ಅಸಾಧ್ಯ! ಟೆಲಿಕಾಂ ಇಲಾಖೆಯಿಂದ ಹೊಸ ನಿಯಮ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಟೆಲಿಕಾಂ ಕಂಪನಿಯಿಂದ ಗ್ರಾಹಕರ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದ್ದು ಈ ವಿಷಯದ ಬಗ್ಗೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಈ ಕೆಳಗೆ ನೀಡಲಾಗಿದೆ.

  • Share this:

    ಟೆಲಿಕಾಂ ಕಂಪನಿಗಳು (Te[lecom Company) ದಿನದಿಂದ ದಿನಕ್ಕೆ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್​ ಪ್ಲಾನ್ (Prepaid Plan) ಅನ್ನು ಪರಿಚಯಿಸುತ್ತಲೆ ಇದೆ. ಃಇಗಿರುವಾಗ ಟೆಲಿಕಾಂ ಇಲಾಖೆ  ಎಸ್​ಎಮ್​​ಎಸ್​​ಗಾಗಿ (SMS) ಹೊಸ ನಿಯಮವನ್ನು ತಂದಿದೆ. ರಿಲಯನ್ಸ್ ಜಿಯೋ (Reliance Jio), ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vi) ಸೇರಿದಂತೆ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಿಗೆ ಹೊಸ ನಿಯಮವನ್ನು ಅನುಸರಿಸಲು ಹೇಳಲಾಗಿದೆ. ಇದೀಗ ಟೆಲಿಕಾಂನಲ್ಲಿ ಆಗುತ್ತಿರುವ ಕೆಲವೊಂದು ವಂಚನೆಗಳಿಂದ ಈ ನಿಯಮವನ್ನು ಜಾರಿಗೆ ತರಲಾಗಿದ್ದು ಗ್ರಾಹಕರ ಗೌಪ್ಯತೆಯನ್ನು ಕಾಪಾಡಲು ಬಹಳ ಸಹಕಾರಿಯಾಗುತ್ತದೆ. ಈ ನಿಯಮಕ್ಕಾಗಿ ಟೆಲಿಕಾಂ ಕಂಪನಿಗಳಿಗೆ 15 ದಿನಗಳ ಕಾಲ ಅವಕಾಶವನ್ನು ನೀಡಿದ್ದು ಆದಷ್ಟು ಬೇಗ  ಅಳವಡಿಸುವಂತೆ ಹೇಳಲಾಗಿದೆ.


    ಟೆಲಿಕಾಂ ಕಂಪನಿಯಿಂದ ಗ್ರಾಹಕರ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದ್ದು ಈ ವಿಷಯದ ಬಗ್ಗೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಈ ಕೆಳಗೆ ನೀಡಲಾಗಿದೆ.


    ನಿಯಮದ ಉದ್ದೇಶ ಮತ್ತು ಕಾರ್ಯ:


    ಟೆಲಿಕಾಂ ಇಲಾಖೆ ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಈಗಾಗಲೇ ಒಂದು ಸಂಖ್ಯೆಯನ್ನು ಬಳಸುತ್ತಿರುವಾಗ ಅದೇ ಸಂಖ್ಯೆಗೆ ಬೇರೊಂದು ಕಂಪನಿಯ ಹೊಸ ಸಿಮ್ ಖರೀದಿಸಿದರೆ, ಸಂಬಂಧಪಟ್ಟ ಟೆಲಿಕಾಂ ಕಂಪನಿಗಳು ಒಳಬರುವ ಮತ್ತು ಹೊರಹೋಗುವ ಎಸ್‌ಎಂಎಸ್ ಸೇವೆಯನ್ನು ನಿಷೇಧಿಸಬೇಕು ಅಥವಾ ಸ್ಥಗಿತಗೊಳಿಸಬೇಕು.


    ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಈ ವಿಷಯಗಳನ್ನು ತಿಳಿದುಕೊಳ್ಳದಿದ್ದರೆ ಹ್ಯಾಕ್ ಆಗೋದು ಗ್ಯಾರಂಟಿ!


    ಬಳಿಕ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ ಸುಮಾರು 24 ಗಂಟೆಗಳ ಕಾಲ ಅದನ್ನು ಪರಿಶೀಲಿಸಬೇಕು . ಈ ರೀತಿ ಮಾಡುವುದರಿಂದ ಸಿಮ್ ಸ್ವಾಪ್ ಹಗರಣಗಳಿಂದ ಬಳಕೆದಾರರನ್ನು ರಕ್ಷಿಸಬಹುದು. ಈ ಉದ್ದೇಶದಿಂದಲೇ ಕೇಂದ್ರ ಟೆಲಿಕಾಂ ಇಲಾಖೆ ಈ ನಿರ್ಧಾರ ಕೈಗೊಂಡಿದೆ.


    Jio tops the Indian telecom market
    ಸಾಂಕೇತಿಕ ಚಿತ್ರ


    ಟೆಲಿಕಾಂ ಕಂಪನಿಗಳಿಗೆ 15 ದಿನಗಳ ಕಾಲಾವಕಾಶ: 


    ಈ ಹೊಸ ನಿಯಮದ ಅಡಿಯಲ್ಲಿ, ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಸೇರಿದಂತೆ ಟೆಲಿಕಾಂ ಆಪರೇಟರ್‌ಗಳು ಸಿಮ್ ಎಕ್ಸ್​​ಚೇಂಜ್ ಮತ್ತು ಬಳಕೆದಾರರಿಂದ ಸಿಮ್ ಅಪ್‌ಗ್ರೇಡ್ ವಿನಂತಿಯ ಸಮಯದಲ್ಲಿ ಹೊಸ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಿದ ನಂತರ ನಿರ್ದಿಷ್ಟ ಸಿಮ್ ಕಾರ್ಡ್‌ನಲ್ಲಿ 24 ಗಂಟೆಗಳ ಕಾಲ ಎಸ್‌ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಈ ಹೊಸ ನಿಯಮವನ್ನು ಜಾರಿಗೆ ತರಲು ಕೇಂದ್ರ ಟೆಲಿಕಾಂ ಇಲಾಖೆಯು ಟೆಲಿಕಾಂ ಸೇವಾ ಕಂಪನಿಗಳಿಗೆ 15 ದಿನಗಳ ಕಾಲಾವಕಾಶ ನೀಡಿದೆ.


    ಸ್ವಾಪ್ ಹಗರಣಗಳ ಹಾವಳಿಯನ್ನು ತಡೆಯುವ ಗುರಿ


    ಕೇಂದ್ರ ಟೆಲಿಕಾಂ ಇಲಾಖೆಯ ಈ ಹೊಸ ನಿಯಮಗಳು ನಮ್ಮ ದೇಶದ ಅತ್ಯಂತ ಸಾಮಾನ್ಯ ಸೈಬರ್ ಅಪರಾಧಗಳಲ್ಲಿ ಒಂದಾದ ಸಿಮ್ ಸ್ವಾಪ್ ಹಗರಣಗಳ ಹಾವಳಿಯನ್ನು ತಡೆಯುವ ಗುರಿಯನ್ನು ಹೊಂದಿವೆ. 2016 ಮತ್ತು 2018 ರಲ್ಲಿ, ಹೊಸ ಸಿಮ್ ಕಾರ್ಡ್‌ಗಳನ್ನು ವಿತರಿಸಲು ಗ್ರಾಹಕರ ಎಕ್ಸ್‌ಪ್ರೆಸ್ ಒಪ್ಪಿಗೆಯನ್ನು ಪಡೆಯಲು ವಿವರವಾದ ಕಾರ್ಯವಿಧಾನಗಳನ್ನು ಟೆಲಿಕಾಂ ಇಲಾಖೆ ಬಿಡುಗಡೆ ಮಾಡಿದೆ. ಹೊಸ ನಿಯಮಗಳ ಮೂಲಕ ಗ್ರಾಹಕರು ಒಮ್ಮೆ ಹೊಸ ಸಿಮ್‌ಗಾಗಿ ವಿನಂತಿಯನ್ನು ಮಾಡಿದಾಗ ಬಹು ಪರಿಶೀಲನೆ ಸೇರಿದಂತೆ ಸಿಮ್ ಅಪ್‌ಗ್ರೇಡ್, ಸ್ವಾಪ್ ವಿನಂತಿ ಇತ್ಯಾದಿಗಳನ್ನು ನಿರ್ವಹಿಸುವಾಗ ತೆಗೆದುಕೊಳ್ಳಬೇಕಾದ ವಿವರವಾದ ಕ್ರಮಗಳನ್ನು  ಟೆಲಿಕಾಂ ಕಂಪನಿ ತಿಳಿಸಿದೆ.


    ಸಿಮ್ ಸ್ವಾಪ್ ವಂಚನೆ ಎಂದರೇನು?


    ನಕಲಿ ಕರೆಗಳು ಅಥವಾ ಫಿಶಿಂಗ್ ಮೂಲಕ ಒಬ್ಬರ ವೈಯಕ್ತಿಕ ಮಾಹಿತಿಯನ್ನು ಪಡೆದ ನಂತರ, ವಂಚಕರು ಒಬ್ಬರ ಟೆಲಿಕಾಂ ಸೇವಾ ಪೂರೈಕೆದಾರರನ್ನು ಸಂಪರ್ಕಿಸುತ್ತಾರೆ ಮತ್ತು ಅಸ್ತಿತ್ವದಲ್ಲಿರುವ ಸಂಖ್ಯೆಗೆ ನಕಲಿ ಸಿಮ್ ಖರೀದಿಸಲು ಮೋಸದಿಂದ ಪಡೆದ ಡೇಟಾವನ್ನು ಬಳಸುತ್ತಾರೆ. ಅಸಲಿ ಬಳಕೆದಾರರ ಕೈಯಲ್ಲಿರುವ ಸಿಮ್ ನಿಷ್ಕ್ರಿಯಗೊಂಡು, ವಂಚಕರ ಕೈಯಲ್ಲಿರುವ ಹೊಸ ಸಿಮ್ ಆಕ್ಟಿವೇಟ್ ಆಗುತ್ತದೆ. ಈ ಮೂಲಕ ಒಟಿಪಿ ಪ್ರವೇಶಿಸಿ ವಂಚನೆಗಳು ನಡೆಯುತ್ತವೆ ಮತ್ತು ಹಣವನ್ನು ದೋಚುವ ಪ್ರಯತ್ನಗಳನ್ನು ಮಾಡುತ್ತಾರೆ.

    Published by:Prajwal B
    First published: