Shweta Tiwari: ದೇವರು ನನ್ನ ಬ್ರಾ ಅಳತೆ ತೆಗೆದುಕೊಳ್ತಿದ್ದಾನೆ ಎಂದ ನಟಿ, ಭುಗಿಲೆದ್ದ ಜನಾಕ್ರೋಶ

Shweta Tiwari In Trouble: ನಟಿ ಕೊನೆಯದಾಗಿ ಖತ್ರೋನ್ ಕೆ ಖಿಲಾಡಿಯಲ್ಲಿ ಕಾಣಿಸಿಕೊಂಡಿದ್ದರು.  ಅವರು ಅರ್ಜುನ್ ಬಿಜ್ಲಾನಿ, ದಿವ್ಯಾಂಕಾ ತ್ರಿಪಾಠಿ, ವರುಣ್ ಸೂದ್ ಮತ್ತು ವಿಶಾಲ್ ಆದಿತ್ಯ ಸಿಂಗ್ ಅವರೊಂದಿಗೆ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.

ಶ್ವೇತಾ ತಿವಾರಿ

ಶ್ವೇತಾ ತಿವಾರಿ

  • Share this:
ಜನಪ್ರಿಯ ಕಿರುತೆರೆ (Small Screen) ನಟಿ ಶ್ವೇತಾ ತಿವಾರಿ (Shwetha Tiwari) ಅವರು ತಮ್ಮ ಒಳ ಉಡುಪುಗಳ (Inner wear) ಬಗ್ಗೆ ಹೇಳಿಕೆ ನೀಡುವಾಗ ದೇವರನ್ನು ಉಲ್ಲೇಖಿಸಿ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದು, ಅವರ ಹೇಳಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತೀಚೆಗೆ, ಅವರು ಫ್ಯಾಶನ್ ಪ್ರಪಂಚವನ್ನು ಆಧರಿಸಿದ ತನ್ನ ಮುಂಬರುವ ವೆಬ್ ಸರಣಿ 'ಶೋ ಸ್ಟಾಪರ್' (Show Stopper) ಅನ್ನು ಪ್ರಚಾರ ಮಾಡಲು ಭೋಪಾಲ್​ಗೆ ಆಗಮಿಸಿದ್ದರು, ಈ ಸರಣಿಯಲ್ಲಿ ಸೌರಭ್ ರಾಜ್ ಜೈನ್ ಮತ್ತು ರೋಹಿತ್ ರಾಯ್ ಸಹ ನಟಿಸಿದ್ದಾರೆ. ಇನ್ನು ಪ್ರಚಾರ ಕಾರ್ಯಕ್ರಮದಲ್ಲಿ ಶ್ವೇತಾ ತನ್ನ ಬ್ರಾ ಗಾತ್ರವನ್ನು 'ಭಗವಾನ್' ತೆಗೆದುಕೊಳ್ಳುತ್ತಿದ್ದಾನೆ ಎಂದು ಹೇಳಿದ್ದರು. ದೇವರ ಬಗ್ಗೆ ತಮಾಷೆ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಜನರು ಸಿಟ್ಟಿಗೆದಿದ್ದು, ಶ್ವೇತಾ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ.  

ಶ್ವೇತ ವಿರುದ್ಧ ತನಿಖೆಗೆ ಆಗ್ರಹ

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಶ್ವೇತಾ ತಿವಾರಿ ಅವರ ಹೇಳಿಕೆಯ ಬಗ್ಗೆ ತನಿಖೆ ನಡೆಸಿ 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, "ನಾನು ಅವರ ಹೇಳಿಕೆಯನ್ನು ಕೇಳಿದ್ದೇನೆ ಮತ್ತು ನಾನು ಅದನ್ನು ತೀವ್ರವಾಗಿ ಖಂಡಿಸುತ್ತೇನೆ. ನಾನು ಈ ಬಗ್ಗೆ ತನಿಖೆ ನಡೆಸಿ 24 ಗಂಟೆಗಳ ಒಳಗೆ ವರದಿ ನೀಡುವಂತೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದೇನೆ. ನಂತರ, ಈ ವಿಷಯದಲ್ಲಿ ಏನು ಕ್ರಮ ಕೈಗೊಳ್ಳಬಹುದು ಎಂಬುದನ್ನು ನಾವು ನೋಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೆ ಬಂತು ಸಿನಿಮಾ ಹಬ್ಬ, ಮಾರ್ಚ್ 3 ರಿಂದ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಶುರು!

ತಿವಾರಿ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಅದರಲ್ಲಿ ಅವರು ತಮ್ಮ ಒಳ ಉಡುಪುಗಳ ಬಗ್ಗೆ ಮಾತನಾಡುವಾಗ ದೇವರನ್ನು ಉಲ್ಲೇಖಿಸಿದ್ದಾರೆ. "ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೈ," ಎಂದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶ್ವೇತಾ ತಿವಾರಿ ಹಿಂದಿ ಕಿರುತರೆಯಲ್ಲಿ ಅತ್ಯಂತ ಜನಪ್ರಿಯ ಮತ್ತು ಜನರ ನೆಚ್ಚಿನ ನಟಿಯರಲ್ಲಿ ಒಬ್ಬರು. ಅವರು 'ಕಸೌಟಿ ಜಿಂದಗಿ ಕೇ' ನಲ್ಲಿ ಪ್ರೇರಣಾ ಪಾತ್ರವನ್ನು ನಿರ್ವಹಿಸುವ ಮೂಲಕ ಮನೆ ಮನಗಳಲ್ಲಿ ಹೆಸರು ಪಡೆದಿದ್ದಾರೆ.ಅಂದಿನಿಂದ ಇಂದಿನವರೆಗೆ ನಟಿ ತಮ್ಮ ನಟನೆಯ ಮೂಲಕ ಹೆಸರುಗಳಿಸಿದ್ದಾರೆ.

ಇದನ್ನೂ ಓದಿ: ಗಂಡ ಇದ್ರೂ `ಆ’ ನಟನ ಜೊತೆ ನಮಿತಾ ಖುಲ್ಲಂ ಖುಲ್ಲಾ? ಮ್ಯಾಟರ್​ ತಿಳಿದು ರಾಂಗ್​ ಆದ ಪತಿ!

ನಟಿ ಕೊನೆಯದಾಗಿ ಖತ್ರೋನ್ ಕೆ ಖಿಲಾಡಿಯಲ್ಲಿ ಕಾಣಿಸಿಕೊಂಡಿದ್ದರು.  ಅವರು ಅರ್ಜುನ್ ಬಿಜ್ಲಾನಿ, ದಿವ್ಯಾಂಕಾ ತ್ರಿಪಾಠಿ, ವರುಣ್ ಸೂದ್ ಮತ್ತು ವಿಶಾಲ್ ಆದಿತ್ಯ ಸಿಂಗ್ ಅವರೊಂದಿಗೆ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
Published by:Sandhya M
First published: