• Home
  • »
  • News
  • »
  • tech
  • »
  • Virus Attack: ನಿಮ್ಮ ಕಂಪ್ಯೂಟರ್​​ಗೆ ವೈರಸ್​ ಅಟ್ಯಾಕ್ ಆಗ್ಬಾರ್ದಾ? ಇಲ್ಲಿದೆ ನೋಡಿ ಟ್ರಿಕ್ಸ್​

Virus Attack: ನಿಮ್ಮ ಕಂಪ್ಯೂಟರ್​​ಗೆ ವೈರಸ್​ ಅಟ್ಯಾಕ್ ಆಗ್ಬಾರ್ದಾ? ಇಲ್ಲಿದೆ ನೋಡಿ ಟ್ರಿಕ್ಸ್​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಂಪ್ಯೂಟರ್​ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದರಿಂದ ಈ ಸಾದನಕ್ಕೆ ವೈರಸ್ ಅಥವಾ ಮಾಲ್ವೇರ್ ಅಟ್ಯಾಕ್ ಆಗುತ್ತದೆ. ಈ ರೀತಿಯ ವೈರಸ್​ಗಳು ಬರುವುದರಿಂದ ಕಂಪ್ಯೂಟರ್​​ನಲ್ಲಿರುವ ಡೇಟಾಗಳು ಕ್ಷಣಾರ್ಧದಲ್ಲಿ ಹ್ಯಾಕ್ ಆಗುತ್ತದೆ. ಆದರೆ ಈ ಸಮಸ್ಯೆಯನ್ನು ಇನ್ಮುಂದೆ ಬಗೆಹರಿಸಬಹುದು. ಇದಕ್ಕೆ ಸಂಬಂಧಪಟ್ಟ ಟ್ರಿಕ್ಸ್​ ಇಲ್ಲಿದೆ.

ಮುಂದೆ ಓದಿ ...
  • Share this:

    ಇದು ಕಂಪ್ಯೂಟರ್ (Computer) ಯುಗ. ಇಲ್ಲಿ ಮನುಷ್ಯನ ಕೈಗಿಂತಲೂ ಕಂಪ್ಯೂಟರ್​​ನ ಕೆಲಸವೇ ಹೆ್ಚ್ಚು. ಅದ್ದರಿಂದ ಈಗ ಯಾವುದೇ ರೀತಿಯ ಕೆಲಸವಾಗಬೇಕಾದರು ಕಂಪ್ಯೂಟರ್ ಬಹಳ ಮುಖ್ಯವಾಗಿರುತ್ತದೆ. ಇಂದಿನ ಯುಗದಲ್ಲಿ ಕಂಪ್ಯೂಟರ್ ಎಂಬುದು ಮನುಷ್ಯರಿಗೆ ಬಹಳ ಮುಖ್ಯ ಭಾಗವಾಗಿಬಿಟ್ಟಿದೆ. ದಿನದಿಂದ ದಿನಕ್ಕೆ ಕಂಪ್ಯೂಟರ್ ಬಳಕೆ ಹೆಚ್ಚಾಗುವುದನ್ನು ಗಮನಿಸಿ ಕೆಲವು  ಹ್ಯಾಕರ್ಸ್ (Hackers)​ ಇದನ್ನು ಗಮನದಲ್ಲಿಟ್ಟುಕೊಂಡು ವಂಚನೆ ಮಾಡುತ್ತಿದ್ದಾರೆ. ಇದಲ್ಲದೆ ಕೆಲವೊಂದು ಕಂಪ್ಯೂಟರ್​ಗಳಿಗೆ ಮಾಲ್ವೇರ್​ (Malware) ಎಂಬ ವೈರಸ್ ಕೂಡ ಅಟ್ಯಾಕ್ ಆಗುತ್ತಿದೆ. ಮಾಲ್ವೇರ್ ಎನ್ನುವುದು ಕಂಪ್ಯೂಟರ್‌ನಲ್ಲಿ ಸಂಭವಿಸುವ ವೈರಸ್‌ನ ಹೆಸರು. ಇದು ಕಂಪ್ಯೂಟರ್‌ನ ಡೇಟಾವನ್ನು (Data) ಕ್ಷಣಾರ್ಧದಲ್ಲಿ ವಶಕ್ಕೆ ಪಡೆಯುತ್ತದೆ.


    ಕಂಪ್ಯೂಟರ್​ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದರಿಂದ ಈ ಸಾದನಕ್ಕೆ ವೈರಸ್ ಅಥವಾ ಮಾಲ್ವೇರ್ ಅಟ್ಯಾಕ್ ಆಗುತ್ತದೆ. ಈ ರೀತಿಯ ವೈರಸ್​ಗಳು ಬರುವುದರಿಂದ ಕಂಪ್ಯೂಟರ್​​ನಲ್ಲಿರುವ ಡೇಟಾಗಳು ಕ್ಷಣಾರ್ಧದಲ್ಲಿ ಹ್ಯಾಕ್ ಆಗುತ್ತದೆ. ಆದರೆ ಈ ಸಮಸ್ಯೆಯನ್ನು ಇನ್ಮುಂದೆ ಬಗೆಹರಿಸಬಹುದು. ಇದಕ್ಕೆ ಸಂಬಂಧಪಟ್ಟ ಟ್ರಿಕ್ಸ್​ ಇಲ್ಲಿದೆ.


    ವೈರಸ್ ಅಟ್ಯಾಕ್ ಆಗಲು ಕಾರಣವೇನು?


    ಕೆಲವೊಂದು ಪ್ರಸಿದ್ಧ ತಂತ್ರಜ್ಞಾನ ಕಂಪನಿಗಳ ಬೆಳವಣಿಗೆಯನ್ನು ನೋಡಿ ಕೆಲವು ಹ್ಯಾಕರ್ಸ್​ ಈ ಕಂಪನಿಗಳ ಮೇಲೆ ವೈರಸ್ ದಾಳಿ ನಡೆಸುತ್ತದೆ. ಈ ಮೂಲಕ ಆ ಕಂಪನಿಯ ಅಗತ್ಯವಾದ ಡಾಕ್ಯುಮೆಂಟ್ಸ್​, ಪರ್ಸನಲ್ ವಿಚಾರಗಳನ್ನು, ಪರ್ಸನಲ್ ಫೋಟೋ, ವಿಡಿಯೋ ಮುಂತಾದ ಅಗತ್ಯ ದಾಖಲೆಗಳನ್ನು ಹ್ಯಾಕ್ ಮಾಡುತ್ತದೆ. ಇದು ಮಾಲ್ವೇರ್​ಗಳು ವಿವಿಧ ರೀತಿಯ ವೈರಸ್​ಗಳನ್ನು ಕಂಪ್ಯೂಟರ್​​ಗಳಿಗೆ ದಾಳಿ ಮಾಡುವಂತೆ ಮಾಡಿ ಹ್ಯಾಕ್ ಮಾಡುತ್ತದೆ.


    ಇದನ್ನೂ ಓದಿ: ಶೇರ್​ಚಾಟ್​ನಿಂದ ಕೂಡಾ ಉದ್ಯೋಗಿಗಳ ವಜಾ ನಿರ್ಧಾರ! ಏನಾಗಿದೆ ಈ ಟೆಕ್ ಕಂಪನಿಗಳಿಗೆ?


    ಕಂಪ್ಯೂಟರ್​​ಗೆ ದಾಳಿಯಾಗುವಂತಹ ಯಾವುದೇ ರೀತಿಯ ವೈರಸ್​ಗಳು ನಿಮ್ಮ ಎಲ್ಲಾ ಡೇಟಾವನ್ನು ನಾಶಪಡಿಸುವ ಅಥವಾ ಸಾಮರ್ಥ್ಯವನ್ನು ಹೊಂದಿದೆ.


    ಸಾಂಕೇತಿಕ ಚಿತ್ರ


    ಹೇಗೆ ಅಟ್ಯಾಕ್ ಆಗುತ್ತದೆ?:


    ವೈರಸ್​ಗಳು ಕಂಪ್ಯೂಟರ್​ನ ಪ್ರೋಗ್ರಾಂನೊಳಗೆ ಪ್ರವೇಶಿಸಿ, ಆ ಪ್ರೋಗ್ರಾಂ ರನ್ ಆಗುವಾಗ ಈ ವೈರಸ್ ಕೂಡ ರನ್ ಆಗಿ ಬೇರೆ ಪ್ರೋಗ್ರಾಂಗಳಿಗೆ, ಅಪ್ಲಿಕೇಶನ್‌ಗಳಿಗೆ ಅಥವಾ ಇಡೀ ಕಂಪ್ಯೂಟರಿಗೆ ಹರಡುತ್ತದೆ. ಹೆಚ್ಚಾಗಿ, ಪೂರ್ವನಿರ್ಧರಿತ ದಿನದಂದು ಈ ವೈರಸ್ ಕೋಡ್ ಸಕ್ರಿಯಗೊಳ್ಳುವಂತೆ ಪ್ರೋಗ್ರಾಂ ಮಾಡಬಹುದಾಗಿದೆ. ಹಿಂದೆಲ್ಲಾ ವೈರಸ್‌ಗಳು ಕಂಪ್ಯೂಟರನ್ನು ಹಾಳುಗೆಡಹುವಂತೆ ಕಿಡಿಗೇಡಿಗಳ ಮೂಲಕ ಸೃಷ್ಟಿಯಾಗುತ್ತಿದ್ದವು.


    ಆದರೆ ಈಗ ಅವು ಮಾಹಿತಿ ಕದಿಯುವ ತಂತ್ರಜ್ಞಾನವಾಗಿ ಬೆಳೆದುಬಿಟ್ಟಿದೆ. ಕೆಲ ವೈರಸ್​ಗಳಲ್ಲಿ ಪ್ರೋಗ್ರಾಂ ಅನ್ನು ರನ್ ಮಾಡಲೇಬೇಕೆಂದಿಲ್ಲ. ತಾನಾಗಿಯೇ ಬೇರೆ ಕಂಪ್ಯೂಟರಿಗೆ ನಕಲಾಗುವ ಇದು, ಸ್ವಯಂ ಆಗಿ ರನ್ ಆಗುತ್ತದೆ ಮತ್ತು ತದ್ರೂಪಿ ಫೈಲ್‌ಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೋಗುತ್ತದೆ. ಇದರಿಂದ ವೆಬ್ ಬ್ರೌಸಿಂಗ್ ನಿಧಾನವಾಗುತ್ತದೆ ಮತ್ತು ಸಾಕಷ್ಟು ಡೇಟಾ ನಷ್ಟವಾಗುತ್ತದೆ. ಇಂಟರ್‌ನೆಟ್‌ ಸಂಪರ್ಕ ಮತ್ತು ಹಾರ್ಡ್‌ ಡ್ರೈವ್‌ಗಳ ಸ್ಕ್ಯಾನ್‌ ಮಾಡದೇ ಬಳಸುವುದರಿಂದ ಕಂಪ್ಯೂಟರ್‌ನೊಳಗೆ ವೈರಸ್‌ ಅಟ್ಯಾಕ್ ಆಗುತ್ತದೆ.


    ವೈರಸ್ ಅಟ್ಯಾಕ್ ಆಗದಂತೆ ಮಾಡುವುದು ಹೇಗೆ?


    ಮೊದಲಿಗೆ ವೈರಸ್ ಅಟ್ಯಾಕ್ ಆಗಿದೆಯಾ ಎಂದು ತಿಳಿದುಕೊಳ್ಳಬೇಕು. ಒಂದು ವೇಳೆ ದಾಳಿಯಾಗಿದೆ ಎಂದು ತಿಳಿದ ಕೂಡಲೇ ನಿಮ್ಮ ಇಂಟರ್ನೆಟ್​ ಕನೆಕ್ಷನ್ ಅನ್ನು ತಪ್ಪಿಸಿ. ಈ ಮೂಲಕ ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗದಂತೆ ತಪ್ಪಿಸಬಹುದು. ಇನ್ನೊಂದು ವಿಷಯ ಏನೆಂದರೆ ನಿಮ್ಮ ಕಂಪ್ಯೂಟರ್​ಗೆ ಉತ್ತಮ ಗುಣಮಟ್ಟದ ಆಂಟಿವೈರಸ್​ ಅನ್ನು ಇನ್​​ಸ್ಟಾಲ್ ಮಾಡಿ ಬಳಸಬೇಕು. ಜೊತೆಗೆ ಈ ಆಂಟಿ ವೈರಸ್​ಗೆ ನಿಗದಿತವಾಗಿ ಕೊನೆಯ ದಿನಾಂಕವನ್ನು ನೀಡಿರುತ್ತಾರೆ. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.


    ಸಾಂಕೇತಿಕ ಚಿತ್ರ


    ನೀವು ಮೊಬೈಲ್, ಪೆನ್ ಡ್ರೈವ್ ಅಥವಾ ಯಾವುದೇ ಸಾಧನವನ್ನು ಕಂಪ್ಯೂಟರ್‌ಗೆ ಸಂಪರ್ಕಿಸುವಾಗ ಸ್ಕ್ಯಾನ್ ಮಾಡಿ. ಮುಖ್ಯವಾಗಿ ನೀವು ಆನ್​ಲೈನ್​​ನಲ್ಲಿ ಏನಾದರು ವೀಕ್ಷಿಸುವಾಗ ಅಥವಾ ಡೌನ್​ಲೋಡ್ ಮಾಡುವಾಗ ಆ ಲಿಂಕ್ ಅನ್ನು ಸರಿಯಾಗಿ ಚೆಕ್ ಮಾಡಿಕೊಂಡು ಓಪನ್ ಮಾಡಿ.


    ವೈರಸ್ ಅಟ್ಯಾಕ್ ಆಗಿದೆಯಾ ಎಂದು ನೋಡುವುದು ಹೇಗೆ?


    • ವೈರಸ್ ಅಟ್ಯಾಕ್ ಆಗಿದೆ ಎಂದಾದರೆ ಕಂಪ್ಯೂಟರ್ ಸಾಮಾನ್ಯ ವೇಗಕ್ಕಿಂತ ಮತ್ತಷ್ಟು ನಿಧಾನವಾಗಿ ಕೆಲಸ ಮಾಡುತ್ತದೆ.

    • ನಿಮ್ಮ ಕಂಪ್ಯೂಟರ್​ನಲ್ಲಿ ಪ್ರೊಸೆಸ್ ಆಗುವ ರಿಸೋರ್ಸ್ ಕೋಟ್​ಗಳ ಮೇಲೆ ಮಾಲ್ವೇರ್​ ವೈರಸ್​​ಗಳು ಅಟ್ಯಾಕ್ ಮಾಡಿದಾಗ ಈ ರೀತಿ ಆಗಿರುವ ಸಾಧ್ಯತೆ ಇರುತ್ತದೆ.

    • ಸಿಸ್ಟಮ್ ನಲ್ಲಿ ಬಿಓಡಿ( ಬ್ಲೂ ಸ್ಕ್ರೀನ್ ಆಫ್ ಡೆತ್) ಕಾಣಿಸುವುದು ವೈರಸ್ ಅಟ್ಯಾಕ್ ಆಗಿರುವ ಮುಖ್ಯ ಲಕ್ಷಣವಾಗಿದೆ.

    • ಪ್ರೋಗ್ರಾಮ್ ಅನ್ನು ರನ್ ಮಾಡಲು ನೀವು ಯಾವಾಗ ಬಯಸುತ್ತೀರೋ ಆಗ ಫೈಲ್ ಕರಪ್ಟ್ ಆಗಿದೆ ಎಂದು ಪದೇ ಪದೇ ತೋರಿಸುತ್ತದೆ.

    • ಒಂದು ಫೋಲ್ಡರ್​ನೊಳಗಡೆ ನೀವು ರಚಿಸದ ಕೆಲವು ಶಾರ್ಟ್ ಕಟ್ ಫೋಲ್ಡರ್ ಸೃಷ್ಟಿಯಾದರೆ ಅದು ವೈರಸ್​ಗಳ ದಾಳಿಯಿಂದ ಬರಲು ಸಾದ್ಯ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು