• Home
  • »
  • News
  • »
  • tech
  • »
  • Social Media: ಸೋಶಿಯಲ್ ಮೀಡಿಯಾಗಳನ್ನು ಆ್ಯಪ್‌ನಲ್ಲಿ ಬಳಸಬೇಕಾ? ವೆಬ್‌ನಲ್ಲಿ ಬಳಸಬೇಕಾ?

Social Media: ಸೋಶಿಯಲ್ ಮೀಡಿಯಾಗಳನ್ನು ಆ್ಯಪ್‌ನಲ್ಲಿ ಬಳಸಬೇಕಾ? ವೆಬ್‌ನಲ್ಲಿ ಬಳಸಬೇಕಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸೋಶಿಯಲ್ ಮೀಡಿಯಾಗಳನ್ನು ಹೆಚ್ಚಾಗಿ ಆ್ಯಪ್​ಗಳಲ್ಲೇ ಓಪನ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಇದು ಸುರಕ್ಷಿತವಾಗಿರುವುದಿಲ್ಲ. ಇದಕ್ಕಾಗಿ ಸೋಶಿಯಲ್ ಮೀಡಿಯಾ ಅಕೌಂಟ್​ಗಳನ್ನು ವೆಬ್​ ಮೂಲಕ ಓಪನ್​ ಮಾಡಿದ್ರೆ ಉತ್ತಮ. ಯಾಕೆ ಎಂಬುದು ಗೊತ್ತಾಗ್ಬೇಕಾ? ಈ ಲೇಖನವನ್ನು ಕಂಪ್ಲೀಟ್ ಓದಿ.

  • Share this:

    ಈಗಂತೂ ನಾವೆಲ್ಲಾ ನಮ್ಮ ದಿನದ ಕೆಲವು ಗಂಟೆಗಳನ್ನ ಸಾಮಾಜಿಕ ಮಾಧ್ಯಮಗಳನ್ನು (Social Media) ನೋಡುವುದರಲ್ಲಿಯೇ ಕಳೆಯುತ್ತೇವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಈ ಕಾಲೇಜಿಗೆ ಹೋಗೋ ಹುಡುಗ-ಹುಡುಗಿಯರಂತೂ ತಮ್ಮ ದಿನದ ಬಹುತೇಕ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಪೋಸ್ಟ್ (Post) ಗಳನ್ನು ಓದುವುದಕ್ಕೆ ಮತ್ತು ಅಲ್ಲಿ ಬಂದಿರುವ ಪೋಸ್ಟ್ ಗಳಿಗೆ ಪ್ರತಿಕ್ರಿಯೆ ನೀಡುವುದಕ್ಕೆ ಸಮಯ ವ್ಯರ್ಥ ಮಾಡುತ್ತಾರೆ ಅಂತ ಹೇಳಬಹುದು. ಸಾಮಾನ್ಯವಾಗಿ ಈ ರೀತಿಯ ಸಾಮಾಜಿಕ ಮಾಧ್ಯಮಗಳನ್ನು ನಾವೆಲ್ಲಾ ಹೆಚ್ಚಾಗಿ ಮೊಬೈಲ್ ಅಪ್ಲಿಕೇಶನ್​ಗಳಲ್ಲಿಯೇ (Mobile Application) ನೋಡುತ್ತೇವೆ. ಎಂದರೆ ಮೊಬೈಲ್ ಆ್ಯಪ್​​ಗಳನ್ನು ಇನ್​​ಸ್ಟಾಲ್ (Install)​ ಮಾಡಿಕೊಂಡು ಅದರಲ್ಲಿಯೇ ನಮ್ಮ ಸಾಮಾಜಿಕ ಮಾಧ್ಯಮದ ಅಕೌಂಟ್​ ಅನ್ನು ತೆರೆಯುತ್ತೇವೆ.


    ಎಷ್ಟೋ ಬಾರಿ ನಮಗೆ ಮೊಬೈಲ್ ನಲ್ಲಿ ಚಿಕ್ಕ ಸ್ಕ್ರೀನ್ ಇರುವುದರಿಂದ ಸಾಮಾಜಿಕ ಮಾಧ್ಯಮದ ಪುಟದಲ್ಲಿರುವ ಎಲ್ಲಾ ಅಂಶಗಳು ನಮಗೆ ಸ್ಪಷ್ಟವಾಗಿ ಕಾಣುವುದಿಲ್ಲ. ಆಗ ನಾವು ಅದನ್ನು ದೊಡ್ಡದಾಗಿ ಮಾಡಿಕೊಂಡು ನೋಡುತ್ತೇವೆ ಮತ್ತು ಹಾಗೆಯೇ ನಮ್ಮ ಬೆರಳುಗಳಿಂದ ಸ್ಕ್ರೀನ್ ಮೇಲೆ ಕೆಳಕ್ಕೆ ಮೇಲಕ್ಕೆ ಆಡಿಸುತ್ತಾ ನೋಡುತ್ತಾ ಇರುವುದು ಎಷ್ಟೋ ಬಾರಿ ಕಿರಿಕಿರಿಯನ್ನು ಉಂಟು ಮಾಡುತ್ತದೆ ಅಂತ ಹೇಳಬಹುದು.


    ಆದರೆ ಇದಕ್ಕೆ ಪರಿಹಾರ ಏನು ಅಂತ ನೀವು ಕೇಳುತ್ತೀರಾ? ಇದಕ್ಕೆ ಪರಿಹಾರ ಎಂದರೆ ಸಾಮಾಜಿಕ ಮಾಧ್ಯಮಗಳನ್ನು ನೀವು ಮೊಬೈಲ್ ಆ್ಯಪ್​​ ಗಳಲ್ಲಿ ಓಪನ್ ಮಾಡುವುದಕ್ಕಿಂತಲೂ ವೆಬ್ ನಲ್ಲಿ ಓಪನ್ ಮಾಡುವುದು ಒಳ್ಳೆಯದು ಅಂತಾರೆ ಕೆಲವರು. ಅಂದರೆ ಮೊಬೈಲ್ ನಲ್ಲಿ ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್​ ಮಾಡುವ ಬದಲು ಫೋನ್ ನಲ್ಲಿಯೇ ಸಾಮಾಜಿಕ ಮಾಧ್ಯಮಗಳ ವೆಬ್ ಆವೃತ್ತಿಯನ್ನು ಬಳಸುವುದು.


    ಇದನ್ನೂ ಓದಿ: ವಾಟ್ಸಾಪ್​ ಸ್ಟೋರೇಜ್​ ಬೇಗನೆ ಫುಲ್​ ಆಗುತ್ತಾ? ಈ ಟ್ರಿಕ್ಸ್ ಮೂಲಕ ಕ್ಲಿಯರ್​ ಮಾಡಿ


    ಇನ್‌ಸ್ಟಾಗ್ರಾಮ್, ಟ್ವಿಟ್ಟರ್, ಫೇಸ್‌ಬುಕ್ ಮತ್ತು ಲಿಂಕ್ಡ್ಇನ್ ಎಲ್ಲಾ ಸಾಮಾಜಿಕ ಮಾಧ್ಯಮಗಳು ಫೋನ್ ನ ಬ್ರೌಸರ್ ನಲ್ಲಿ ಕಾರ್ಯ ನಿರ್ವಹಿಸುತ್ತವೆ. ಅಪ್ಲಿಕೇಶನ್ ಬದಲಿಗೆ ಇದನ್ನು ಬಳಸುವುದು ಸ್ವಲ್ಪ ಸುಲಭವಾಗಿದೆ ಎಂದು ಅಂತಾರೆ ಕೆಲವರು.


    ವೆಬ್ ಅಪ್ಲಿಕೇಶನ್ ಅನ್ನು ಬಳಸುವುದು ಮೊಬೈಲ್ ಅಪ್ಲಿಕೇಶನ್ ಗಿಂತ ಹೇಗೆ ಉತ್ತಮವಾಗಿದೆ?


    1. ನಿಮ್ಮ ಮೊಬೈಲ್ ಡೇಟಾವನ್ನು ಬೇರೆಯವರು ನೋಡಲು ಅವಕಾಶವಿರುವುದಿಲ್ಲ


    ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳು ಇನ್​ಸ್ಟಾಲ್​ ಮಾಡುವಾಗ ಸಾಕಷ್ಟು ಮಾಹಿತಿಯನ್ನು ಕೇಳುತ್ತವೆ. ಇವುಗಳಲ್ಲಿ ಕೆಲವು ಅರ್ಥಪೂರ್ಣವಾಗಿದ್ದರೆ, ಇನ್ನೂ ಕೆಲವು ಅರ್ಥಹೀನ ವಾಗಿರುತ್ತವೆ. ನೀವು ಫೋಟೋಗಳನ್ನು ಅಪ್​​ಲೋಡ್​ ಮಾಡಲು ಬಯಸಿದರೆ, ಉದಾಹರಣೆಗೆ, ಫೇಸ್‌ಬುಕ್ ನಲ್ಲಿ ಅಪ್​​ಲೋಡ್ ಮಾಡಲು ನಿಮ್ಮ ಫೋಟೋ ಲೈಬ್ರರಿಗೆ ಪ್ರವೇಶದ ಅಗತ್ಯವಿರುತ್ತದೆ.


    ಸಾಂಕೇತಿಕ ಚಿತ್ರ


    ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳು ನಿಮ್ಮ ಪ್ರಸ್ತುತ ಸ್ಥಳದ ಮಾಹಿತಿಯನ್ನು ಕೇಳುತ್ತವೆ. ಈ ಅಪ್ಲಿಕೇಶನ್ ಗಳಿಗೆ ಏನೆಲ್ಲಾ ಮಾಹಿತಿ ಮತ್ತು ಪ್ರವೇಶವನ್ನು ನಾವು ನೀಡಬೇಕು ಅನ್ನೋದು ಕೆಲವೊಮ್ಮೆ ನಮಗೆ ತಿಳಿದಿರುವುದಿಲ್ಲ. ಆದರೆ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳ ವೆಬ್ ಆವೃತ್ತಿಯನ್ನು ಬಳಸಿದರೆ ನೀವು ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಿಲ್ಲ. ಏಕೆಂದರೆ ವೆಬ್‌ಸೈಟ್ ಗಳು ನಿಮ್ಮ ಸಾಧನದ ಹಿನ್ನೆಲೆಯಲ್ಲಿ ನಿರಂತರವಾಗಿ ಚಲಿಸುವುದಿಲ್ಲ. ನೀವು ಅವುಗಳನ್ನು ವಿನಂತಿಸಿದಾಗ ಮಾತ್ರ ಅವು ಲೋಡ್ ಆಗುತ್ತವೆ.


    2. ಯಾವುದೇ ಅಧಿಸೂಚನೆಗಳು ಬರುವುದಿಲ್ಲ


    ಇದರಲ್ಲಿ ಸಾಧಕ ಬಾಧಕಗಳಿವೆ, ನಿಮ್ಮ ಫೋನ್ ನಲ್ಲಿನ ಅಧಿಸೂಚನೆಗಳು ನಿಮ್ಮ ಆಯ್ಕೆಯ ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಯಾವುದನ್ನೂ ನೀವು ತಪ್ಪಿಸಿಕೊಳ್ಳುವುದಿಲ್ಲ. ನೀವು ನಿರಂತರವಾಗಿ ಸಂಪರ್ಕ ಹೊಂದಲು ಬಯಸಿದರೆ ಮೊಬೈಲ್ ಆಪ್ ಉತ್ತಮವಾಗಿದೆ, ಆದರೆ ಇದು ಈ ಸಾಮಾಜಿಕ ಮಾಧ್ಯಮಗಳ ವ್ಯಸನಿಯನ್ನಾಗಿ ಮಾಡುವ ಅಪಾಯವಿರುತ್ತದೆ.


    ಸಾಂಕೇತಿಕ ಚಿತ್ರ


    ಸರಳವಾಗಿ ಹೇಳುವುದಾದರೆ, ನಿಮ್ಮ ಸಾಮಾಜಿಕ ಮಾಧ್ಯಮ ಬಳಕೆಯ ಬಗ್ಗೆ ನೀವು ಹೆಚ್ಚು ಜಾಗರೂಕರಾಗಿರಲು ಪ್ರಯತ್ನಿಸುತ್ತಿದ್ದರೆ, ಅಧಿಸೂಚನೆಗಳು ಬಹಳ ದೊಡ್ಡ ಸಮಸ್ಯೆಯಾಗಿದೆ. ಆದಾಗ್ಯೂ, ಸಾಮಾಜಿಕ ಮಾಧ್ಯಮ ಸೈಟ್ ಗಳ ವೆಬ್ ಆವೃತ್ತಿಯು ನಿಮ್ಮ ಸಾಧನಕ್ಕೆ ಅಧಿಸೂಚನೆಗಳನ್ನು ನೀಡಲು ಸಾಧ್ಯವಿಲ್ಲ.


    3. ಬೇರೆ ಫೀಚರ್ ಗಳನ್ನ ವೆಬ್ ನಲ್ಲಿ ತೀರಾ ಕಡಿಮೆ ಸೇರಿಸಲಾಗಿರುತ್ತದೆ


    ಸಾಮಾನ್ಯವಾಗಿ ಈ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ನಾವು ನಮ್ಮ ಸ್ನೇಹಿತರ ಫೋಟೋಗಳನ್ನು, ಪೋಸ್ಟ್ ಗಳನ್ನು ನೋಡುತ್ತಿರುವಾಗ ಅಥವಾ ಸ್ಕ್ರೋಲ್ ಮಾಡುತ್ತಿರುವಾಗ ಬೇರೆ ಅನೇಕ ಫೀಚರ್ ಗಳು ಮಧ್ಯೆ ಮಧ್ಯೆ ಬರುತ್ತವೆ. ಇದರಿಂದ ಅನೇಕರಿಗೆ ತುಂಬಾನೇ ಕಿರಿಕಿರಿಯಾಗುತ್ತದೆ ಅಂತ ಹೇಳಬಹುದು. ಹೀಗಾದಾಗ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಗಂಟೆಗಟ್ಟಲೆ ಸ್ಕ್ರಾಲ್ ಮಾಡುತ್ತಾ ಕುಳಿತುಕೊಳ್ಳಬೇಕಾಗುತ್ತದೆ.


    ಆದ್ದರಿಂದ ಸಾಮಾಜಿಕ ಮಾಧ್ಯಮಗಳ ವೆಬ್ ಆವೃತ್ತಿಯನ್ನು ಬಳಸುವುದು ಕನಿಷ್ಠ ಸ್ವಲ್ಪ ಸಮಯದವರೆಗಾದರೂ ಈ ಫೀಚರ್ ಗಳನ್ನ ವಿಳಂಬಗೊಳಿಸುತ್ತದೆ ಎಂದು ಅನೇಕರು ಹೇಳುತ್ತಾರೆ.


    4. ನಿಮ್ಮ ಹೋಮ್ ಸ್ಕ್ರೀನ್ ಗೆ ವೆಬ್‌ಸೈಟ್ ಐಕಾನ್ ಸೇರಿಸುವುದು ಹೇಗೆ?


    ನೀವು ಪ್ರತಿ ಬಾರಿ ಸಾಮಾಜಿಕ ಮಾಧ್ಯಮವನ್ನು ತೆರೆಯಲು ಅದರ ಯುಆರ್‌ಎಲ್ ಅನ್ನು ಬ್ರೌಸರ್ ನಲ್ಲಿ ಟೈಪ್ ಮಾಡುವ ಅಗತ್ಯ ಸಹ ಇಲ್ಲ. ಏಕೆಂದರೆ ಅದನ್ನು ಹೋಮ್ ಸ್ಕ್ರೀನ್ ಗೆ ವೆಬ್ ಆವೃತ್ತಿಗೆ ಐಕಾನ್ ಗಳನ್ನು ಸೇರಿಸಬಹುದು. ಹೀಗೆ ಮಾಡುವುದರಿಂದ ನೀವು ಬೇಕಾದಾಗ ಅವುಗಳನ್ನು ಅಪ್ಲಿಕೇಶನ್ ಗಳಂತೆ ಬೇಗನೆ ತೆರೆಯಬಹುದು. ಐಫೋನ್ ಅಥವಾ ಐಪ್ಯಾಡ್ ನಲ್ಲಿ, ಸಫಾರಿಯಲ್ಲಿ ಸೈಟ್ ತೆರೆಯಿರಿ ಮತ್ತು ವಿಳಾಸ ಪಟ್ಟಿಯ ಬಲಭಾಗದಲ್ಲಿರುವ ಶೇರ್ ಬಟನ್ ಅನ್ನು ಒತ್ತಿರಿ. ಆಡ್ ಟು ಹೋಮ್ ಸ್ಕ್ರೀನ್ ಅನ್ನು ಒತ್ತಿ ಮತ್ತು ಸೂಕ್ತವಾದ ಲೋಗೋ ಹೊಂದಿರುವ ಐಕಾನ್ ಅನ್ನು ನಿಮ್ಮ ಹೋಮ್ ಸ್ಕ್ರೀನ್ ಗೆ ಸೇರಿಸಿಕೊಳ್ಳಿ.


    ಆಂಡ್ರಾಯ್ಡ್ ಅಥವಾ ಕ್ರೋಮ್ ನಲ್ಲಿ ನಿಮಗೆ ಬೇಕಾದ ವೆಬ್‌ಸೈಟ್ ತೆರೆಯಿರಿ, ಮೇಲಿನ-ಬಲ ಮೂಲೆಯಲ್ಲಿರುವ ಮೂರು-ಚುಕ್ಕೆ ಐಕಾನ್ ಅನ್ನು ಒತ್ತಿರಿ. ತದ ನಂತರ ಆಡ್ ಟು ಹೋಮ್ ಸ್ಕ್ರೀನ್ ಗೆ ಸೇರಿಸಲು ಒಮ್ಮೆ ಒತ್ತಿರಿ. ಹೀಗೆ ಮಾಡುವುದರಿಂದ ಆ ಐಕಾನ್ ನಿಮ್ಮ ಆಂಡ್ರಾಯ್ಡ್ ಹೋಮ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು