ಅಂಗಡಿ (Store), ಶಾಪಿಂಗ್ ಮಾಲ್ (Shopping Mall), ಆನ್ಲೈನ್ ಶಾಪಿಂಗ್ (Online Shopping) ಇವುಗಳನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ(Social Media) ನಡೆಯುತ್ತಿರುವ ಶಾಪಿಂಗ್ ಹಿಂದಿಕ್ಕಿ (Overtaking) ಸಾಗುತ್ತಿದೆ. ಜನ ಸಾಮಾಜಿಕ ಮಾಧ್ಯಮಗಳಲ್ಲಿ ಅಂದರೆ ವಾಟ್ಸ್ಆ್ಯಪ್ (WhatsApp), ಫೇಸ್ಬುಕ್ (Facebook), ಇನ್ಸ್ಟಾಗ್ರಾಮ್ನಲ್ಲಿ (Instagram) ಹೆಚ್ಚು ಹೆಚ್ಚು ಶಾಪಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಈ ಶಾಪಿಂಗ್ 2025ರ ಒಳಗೆ 1.2 ಟ್ರಿಲಿಯನ್ (Trillion) ಡಾಲರ್ ತಲುಪಬಹುದು ಎಂದು ಊಹಿಸಲಾಗಿದೆ. ಹಾಗಾದರೆ ಏನದು ಸೋಶಿಯಲ್ ಮೀಡಿಯಾದಲ್ಲಿ ಶಾಪಿಂಗ್ ನೋಡೋಣ ಬನ್ನಿ.
ಫ್ಯಾಷನ್, ಸ್ಟೈಲ್, ಟ್ರೆಂಡ್ ದಿನ ದಿನ ಬದಲಾಗ್ತಿರುತ್ತೆ. ಬದಲಾಗುವ ಟ್ರೆಂಡ್, ಸ್ಟೈಲ್ಗೆ ಅನುಗುಣವಾಗಿ ಹೊಸ ಹೊಸ ಮಾದರಿಯ ಬಟ್ಟೆ, ಜ್ಯುವೆಲ್ಲರಿ, ಬ್ಯಾಗ್ಸ್, ಚಪ್ಪಲ್, ಶೂಗಳು ಬರ್ತಾನೆ ಇರುತ್ತವೆ. ಈವಾಗೆಲ್ಲ ಇವೆಲ್ಲವನ್ನು ಅಂಗಡಿಗಳಿಗೆ ಹೋಗಿನೇ ಖರೀದಿ ಮಾಡಬೇಕು ಎನ್ನುವ ಕಾಲಾನು ಹೋಗಿದೆ. ಕೂತಲ್ಲೇ ನಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳುವಷ್ಟು ಮುಂದುವರಿದಿದ್ದೇವೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಶಾಪಿಂಗ್ ತೀವ್ರ ವೇಗದಲ್ಲಿ ಬೆಳೆಯುತ್ತಿದ್ದು, ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಿಗಿಂತ 3 ಪಟ್ಟು ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ 2025ರ ವೇಳೆಗೆ ಜಾಗತಿಕವಾಗಿ US $ 1.2 ಟ್ರಿಲಿಯನ್ ತಲುಪುವ ವೇಗದಲ್ಲಿದೆ ಎಂದು ಅಂತಾರಾಷ್ಟ್ರೀಯ ವೃತ್ತಿಪರ ಸೇವಾ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ಈ ಬೆಳವಣಿಗೆಯ ಬಹುಪಾಲು ಅಂದರೆ ಪ್ರತಿಶತ 62 Gen Z ಮತ್ತು ಮಿಲೇನಿಯಲ್ ಶಾಪರ್ಸ್ನಿಂದ ನಡೆಸಲ್ಪಡುತ್ತದೆ ಎಂದು ಅಸೆಂಚರ್ ವರದಿ ಮಾಡಿದೆ.
ಇದನ್ನೂ ಓದಿ: Truth Social: ಇನ್ಸ್ಟಾಗ್ರಾಂ. ಟ್ವಿಟ್ಟರ್ ಅನ್ನು ಮೂಲೆಗುಂಪು ಮಾಡಲು ಬರುತ್ತಿದೆ ಹೊಸ ಅಪ್ಲಿಕೇಶನ್! ಹೇಗಿದೆ ಗೊತ್ತಾ?
ಈ ಬೆಳವಣಿಗೆ ನಾವು ಒಂದೇ ಸ್ಥಳದಲ್ಲಿ ವಸ್ತುಗಳ ಬಗ್ಗೆ ಕಲಿಯಲು ಮತ್ತು ಅನ್ವೇಷಿಸಲು ಸಮಯ ಕಳೆಯುತ್ತಿದ್ದೇವೆ ಮತ್ತು ನಂತರ ವ್ಯವಹಾರಕ್ಕಾಗಿ ಬೇರೆಡೆಗೆ ಹೋಗುವುದು ವಿಚಿತ್ರವಾಗಿ ತೋರುತ್ತದೆ ಎಂದು ಅಸೆಂಚರ್ ವ್ಯವಸ್ಥಾಪಕ ನಿರ್ದೇಶಕ ಕೆವಿನ್ ಕಾಲಿನ್ಸ್ ಹೇಳಿದ್ದಾರೆ. "ನಾವು ಈಗ ಟಿಕ್ಟಾಕ್ ಅಮ್ಮಂದಿರನ್ನು ಹೊಂದಿದ್ದೇವೆ, ಮತ್ತು ಜೆನ್ಎಕ್ಸ್ ಮತ್ತು ಬೂಮರ್ಗಳು ಕಳೆದ ವರ್ಷದಿಂದ ಟಿಕ್ಟಾಕ್ಗೆ ಬರುತ್ತಿದ್ದಾರೆ, ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನಿಜವಾಗಿಯೂ ಆಸಕ್ತಿದಾಯಕ ಕೆಲಸ ಮಾಡುತ್ತಿದ್ದಾರೆ ಎಂದು ಇ-ಕಾಮರ್ಸ್ ಟೈಮ್ಸ್ಗೆ ಕೆವಿನ್ ಕಾಲಿನ್ಸ್ ತಿಳಿಸಿದರು.
1) ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭಾವಿಗಳ ಪ್ರಭಾವ
ಸುದ್ದಿ, ಕಾಮೆಂಟರಿ ಮತ್ತು ವಿಶ್ಲೇಷಣಾ ವೆಬ್ಸೈಟ್ನ ನಿಯರ್ ಮೀಡಿಯಾದ ಸಹ-ಸಂಸ್ಥಾಪಕ ಗ್ರೆಗ್ ಸ್ಟರ್ಲಿಂಗ್ ಅಂತಿಮವಾಗಿ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ವ್ಯಾಪಾರ ಮುಖ್ಯವಾಹಿನಿಯಾಗಬಹುದು. ಇದು ಯುವ ವ್ಯಾಪಾರಿಗಳನ್ನು ಆಕರ್ಷಿಸುತ್ತಿದೆ ಎಂದಿದ್ದಾರೆ. ಸೋಶಿಯಲ್ ಮೀಡಿಯಾಗಳನ್ನು ಹೆಚ್ಚಾಗಿ ಯುವಕ, ಯುವತಿಯರು ಬಳಸುವುದರಿಂದ ಅವರು ಅಲ್ಲಿನ ವಸ್ತುಗಳಿಗೆ ಹೆಚ್ಚು ಆಕರ್ಷಿತರಾಗಿ ಕೊಳ್ಳುವ ಮನಸ್ಸು ಮಾಡುತ್ತಾರೆ. ಉದಾಹರಣೆಗೆ ಇನ್ಸ್ಟಾಗ್ರಾಮ್ನಲ್ಲಿ ಲೆಕ್ಕ ಇಲ್ಲದಷ್ಟು ಬಟ್ಟೆ, ಜುವೆಲ್ಲರಿ, ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಬ್ರ್ಯಾಂಡ್ ಮಾಡಿಕೊಂಡು ಸೇಲ್ ಮಾಡುತ್ತಿದ್ದಾರೆ. ಕೆಲವು ಇನ್ಫ್ಲ್ಯೂಎನ್ಸರ್ಗಳು ಅದನ್ನು ಪ್ರಮೋಟ್ ಮಾಡುತ್ತಾರೆ. ಹೀಗಾಗಿ ಜನ ಬೇಗ ಆಕರ್ಷಿತರಾಗಿ ಅಲ್ಲೇ ಶಾಪಿಂಗ್ ಮಾಡುತ್ತಿದ್ದಾರೆ.
2) ನಂಬಿಕೆಯ ಸಮಸ್ಯೆ
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ವ್ಯಾಪಾರಗಳು ಇ-ಕಾಮರ್ಸ್ಗೆ ಹೋಲಿಸಿದರೆ ಕೆಲವು ಲೋಪಗಳನ್ನು ಹೊಂದಿವೆ. ಯಾರನ್ನು ನಂಬಿ ಹಣ ನೀಡುವುದು ಎಂಬುವುದು ಇಲ್ಲಿ ತಲೆನೋವು. ಕಾರಣ ಕೇವಲ ಸೋಶಿಯಲ್ ಮೀಡಿಯಾ ಬ್ರಾಂಡ್ ಅಥವಾ ವೆಬ್ಸೈಟ್ ನಂಬಲು ಕಷ್ಟವಾಗುತ್ತಿದೆ. ಹಾಗೂ ಹಣ ಮರುಪಾವತಿ, ವಸ್ತು ಬದಲಾವಣೆ ಈ ರೀತಿಯ ಪಾಲಿಸಿ ಇಲ್ಲಿ ಕಂಡು ಬರುವುದಿಲ್ಲ. ಹಾಗಾಗಿ ಗ್ರಾಹಕರ ಇದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ.
ಇದನ್ನೂ ಓದಿ: Violation: ರೂಲ್ಸ್ ಬ್ರೇಕ್ ಮಾಡಿದ ಫೇಸ್ಬುಕ್ ಮತ್ತು ಗೂಗಲ್! ದೊಡ್ಡ ಮೊತ್ತದ ದಂಡ ವಿಧಿಸಿದ ಫ್ರಾನ್ಸ್!
3) ಸಣ್ಣ ಸಣ್ಣ ವ್ಯಾಪಾರಿಗಳಿಗೆ ಉತ್ತಮ ವೇದಿಕೆ
ಸಣ್ಣ ಸಣ್ಣ ವ್ಯಾಪಾರಿಗಳು ಕೆಲವೊಮ್ಮೆ ದೊಡ್ಡ ವ್ಯಾಪಾರಿಗಳೊಂದಿಗೆ ಗುದ್ದಾಡುವುದು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಸಹಾಯಕ್ಕೆ ಬರಬಹುದು. ಚಿಕ್ಕ ಪುಟ್ಟ ವಸ್ತುಗಳನ್ನು ಮಾರಾಟ ಮಾಡಲು ಇದು ಉತ್ತಮ ವೇದಿಕೆಯಾಗಿದೆ. ಸದ್ಯ ಉನ್ನತ ಮಟ್ಟದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಮಾಡುತ್ತಿರುವ ವ್ಯಾಪಾರ ಒಳ್ಳೆಯ ಗಳಿಕೆಯನ್ನು ತಂದುಕೊಟ್ಟಿದೆ. ಇಷ್ಟಕ್ಕೇ ನಿಲ್ಲದೆ ಇದು 2025ರ ವೇಳೆಗೆ ಜಾಗತಿಕವಾಗಿ 1.2 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆ ಇರುವುದು ಕಂಡು ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ