• Home
 • »
 • News
 • »
 • tech
 • »
 • Netflix: ನೆಟ್​ಫ್ಲಿಕ್ಸ್​​ ಗ್ರಾಹಕರಿಗೆ ಶಾಕಿಂಗ್​ ಸುದ್ದಿ, ಇನ್ಮುಂದೆ ಯಾರಿಗೂ ಪಾಸ್​ವರ್ಡ್​ ಶೇರ್​ ಮಾಡುವಂತಿಲ್ಲ!

Netflix: ನೆಟ್​ಫ್ಲಿಕ್ಸ್​​ ಗ್ರಾಹಕರಿಗೆ ಶಾಕಿಂಗ್​ ಸುದ್ದಿ, ಇನ್ಮುಂದೆ ಯಾರಿಗೂ ಪಾಸ್​ವರ್ಡ್​ ಶೇರ್​ ಮಾಡುವಂತಿಲ್ಲ!

ನೆಟ್​ಫ್ಲಿಕ್ಸ್​

ನೆಟ್​ಫ್ಲಿಕ್ಸ್​

ಇದುವರೆಗೆ ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಒಬ್ಬರು ಚಂದಾದಾರಿಕೆ ಮಾಡಿದ್ರೆ ನಂತರದಲ್ಲಿ ತನ್ನ ಶೇರ್​ ಮಾಡುವ ಮೂಲಕ ಇತರರಿಗೂ ನೋಡುವಂತಹ ಅವಕಾಶವಿತ್ತು. ಇದೀಗ ನೆಟ್​ಫ್ಲಿಕ್ಸ್​ ತನ್ನ ಗ್ರಾಹಕರಿಗೆ ಬೆಚ್ಚಿಬೀಳಿಸುವಂತಹ ಸುದ್ದಿಯನ್ನು ನೀಡಿದೆ. ಹಾಗಿದ್ರೆ ಇನ್ಮುಂದೆ ಓಟಿಟಿ ಪ್ಲಾಟ್​​ಫಾರ್ಮ್ಸ್​​ಗಳಲ್ಲಿ ಬರಲಿರುವಂತಹ ರೂಲ್ಸ್​ ಯಾವುದೆಂಬುದನ್ನು ಇಲ್ಲಿ ನೋಡಿ.

ಮುಂದೆ ಓದಿ ...
 • Share this:

  ಇತ್ತೀಚೆಗೆ ಓಟಿಟಿ ಪ್ಲಾಟ್​​ಫಾರ್ಮ್​ಗಳು (OTT Platfarms) ಬಹಳಷ್ಟು ವ್ಯಾಪಕವಾಗಿ ಬೆಳವಣಿಗೆಯಾಗುತ್ತಿದೆ. ಆದರೆ ಕೆಲವೊಂದು ಓಟಿಟಿ ಪ್ಲಾಟ್​ಫಾರ್ಮ್​ಗಳು ತನ್ನ ರೂಲ್ಸ್​ಗಳನ್ನು (Rules) ಬದಲಾವಣೆ ಮಾಡುತ್ತಿದೆ. ಆದರೆ ಇದೀಗ ಜನಪ್ರಿಯ ಓಟಿಟಿ ಪ್ಲಾಟ್​ಫಾರ್ಮ್​ ಆಗಿರುವ ನೆಟ್​ಫ್ಲಿಕ್ಸ್ (Netflix)​ ಇದೀಗ ತನ್ನ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್​ ಒಂದನ್ನು ಹೊರಬಿಟ್ಟಿದೆ. ಈ ಹಿಂದೆ ಓಟಿಟಿ ಪ್ಲಾಟ್​​ಫಾರ್ಮ್​​ಗಳಲ್ಲಿ ಒಬ್ಬರು ಯಾರಾದರೂ ಚಂದಾದಾರಿಕೆ ಮಾಡಿದರೆ ನಂತರ ತನ್ನ ಸ್ನೇಹಿತರಿಗೂ ಪಾಸ್​​ವರ್ಡ್ (Password)​ ನೀಡುವ ಮೂಲಕ ಅವರಿಗೂ ನೋಡುವ ಅವಕಾಶವನ್ನು ನೀಡಲಾಗುತ್ತಿತ್ತು. ಆದರೆ ನೆಟ್​ಫ್ಲಿಕ್ಸ್​ ಇದಕ್ಕೆ ಕಡಿವಾಣ ಹಾಕಲು ಯೋಜನೆ ನಡೆಸಿದೆ. ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ನೀವೇ ನೋಡಿ.


  ಇದುವರೆಗೆ ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಒಬ್ಬರು ಚಂದಾದಾರಿಕೆ ಮಾಡಿದ್ರೆ ನಂತರದಲ್ಲಿ ತನ್ನ ಶೇರ್​ ಮಾಡುವ ಮೂಲಕ ಇತರರಿಗೂ ನೋಡುವಂತಹ ಅವಕಾಶವಿತ್ತು. ಇದೀಗ ನೆಟ್​ಫ್ಲಿಕ್ಸ್​ ತನ್ನ ಗ್ರಾಹಕರಿಗೆ ಬೆಚ್ಚಿಬೀಳಿಸುವಂತಹ ಸುದ್ದಿಯನ್ನು ನೀಡಿದೆ. ಹಾಗಿದ್ರೆ ಇನ್ಮುಂದೆ ಓಟಿಟಿ ಪ್ಲಾಟ್​​ಫಾರ್ಮ್ಸ್​​ಗಳಲ್ಲಿ ಬರಲಿರುವಂತಹ ರೂಲ್ಸ್​ ಯಾವುದೆಂಬುದನ್ನು ಇಲ್ಲಿ ನೋಡಿ.


  ಏನದು ಹೊಸ ರೂಲ್ಸ್​? 


  ದಿ ವಾಲ್ ಸ್ಟ್ರೀಟ್ ಜರ್ನಲ್‌ ವರದಿಯ ಪ್ರಕಾರ ನೆಟ್‌ಫ್ಲಿಕ್ಸ್‌ನಲ್ಲಿ 2023ರ ಆರಂಭದಿಂದ, ಬಳಕೆದಾರರು ತಮ್ಮ ಅಕೌಂಟ್‌ ಪಾಸ್‌ವರ್ಡ್‌ಗಳನ್ನು ಬೇರೆಯವರಿಗೆ ಶೇರ್‌ ಮಾಡೋದನ್ನು ಸ್ಟಾಪ್‌ ಮಾಡಲಿದೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆಗಳನ್ನು ಪ್ರಾರಂಭಿಸಿದಾಗಿನಿಂದ ಪಾಸ್‌ವರ್ಡ್ ಶೇರ್‌ ಮಾಡುವ ಆಯ್ಕೆಯಿಂದ ಹೆಚ್ಚಿನ ಜನರು ಒಂದೇ ಅಕೌಂಟ್‌ ಬಳಸುವುದು ಸಾಮಾನ್ಯವಾಗಿದೆ.


  ಇದನ್ನೂ ಓದಿ: ಹಾನರ್​ ಕಂಪನಿಯ ಹೊಸ ಸ್ಮಾರ್ಟ್​​ಫೋನ್ ಅನಾವರಣ, ಫೀಚರ್ಸ್​​ ನೋಡಿದ್ರೆ ಗ್ಯಾರಂಟಿ ಖರೀದಿಸ್ತೀರಾ!


  ಆದರೆ ಇದನ್ನು ತಡೆಗಟ್ಟದಿದ್ದರೆ ಚಂದಾದಾರಿಕೆ ಕುಸಿತವನ್ನು ತಡೆಯಲು ಸಾಧ್ಯವಿಲ್ಲ ಅನ್ನೋದು ನೆಟ್‌ಫ್ಲಿಕ್ಸ್‌ನ ಅಭಿಪ್ರಾಯವಾಗಿದೆ. ಇದೇ ಕಾರಣಕ್ಕೆ ಈ ವರ್ಷದ ಆರಂಭದಲ್ಲಿಯೇ, ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ಪಾಸ್‌ವರ್ಡ್ ಶೇರ್‌ ಆಯ್ಕೆಯನ್ನು ನಿಲ್ಲಿಸುವುದಾಗಿ ಹೇಳಿದ್ದರು.


  ಇನ್ಮುಂದೆ ಒಬ್ಬರಿಗೆ ಮಾತ್ರ ಬಳಕೆಯ ಅವಕಾಶ


  ಇನ್ಮುಂದೆ ನೆಟ್​ಫ್ಲಿಕ್ಸ್​ಗೆ ಚಂದಾದಾರಿಕೆ ಶುಲ್ಕವನ್ನು ಪಾವತಿ ಮಾಡಿದಾಗ ಅದನ್ನು ಒಬ್ಬರಿಗೆ ಮಾತ್ರ ಬಳಸುವ ಅವಕಾಶವಿರುತ್ತದೆ. ಇನ್ಮುಂದೆ ಒಬ್ಬ ಗ್ರಾಹಕ ಚಂದಾದಾರಿಕೆ ಪ್ಲಾನ್​ ಮೂಲಕ ನೆಟ್​​ಫ್ಲಿಕ್ಸ್​ ಬಳಸಬಹುದಾಗಿದೆ. ಒಂದು ವೇಳೆ ನೀವು ನಿಮ್ಮ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಶೇರ್‌ ಮಾಡಿದರೆ, ಆ ವ್ಯಕ್ತಿಯು ಪ್ರೊಫೈಲ್ ಅನ್ನು ಬಳಸಲು ಹಣವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, ತಮ್ಮ ಸ್ನೇಹಿತರ ನೆಟ್‌ಫ್ಲಿಕ್ಸ್ ಪ್ರೊಫೈಲ್ ಅನ್ನು ಬಳಸುವುದಕ್ಕೂ ಕೂಡ ಹಣ ಪಾವತಿಸುವುದು ಕಡ್ಡಾಯವಾಗಿರುತ್ತದೆ.


  ಚಂದಾದಾರಿಕೆಯ ಶುಲ್ಕ ಎಷ್ಟು?


  ನೆಟ್‌ಫ್ಲಿಕ್ಸ್ ಹೊಸ ಪಾಸ್‌ವರ್ಡ್ ಶೇರ್‌ ಮಾಡುವಂತಹ ಶುಲ್ಕದ ಆಯ್ಕೆಯನ್ನು ಕೋಸ್ಟಾ ರಿಕಾ, ಚಿಲಿ, ಪೆರು ಮತ್ತು ಇನ್ನೂ ಕೆಲವು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಯೋಜನೆ ನಡೆಸುತ್ತಿದೆ. ಈ ದೇಶಗಳಲ್ಲಿ ಸ್ನೇಹಿತರ ನೆಟ್‌ಫ್ಲಿಕ್ಸ್ ಖಾತೆಯನ್ನು ಇನ್ನೊಬ್ಬರು ಬಳಸಬೇಕಾದರೆ ಜನರು $3 ಭಾರತದಲ್ಲಿ ಅಂದಾಜು 250ರೂಪಾಯಿ ಹಣ ಪಾವತಿಸಬೇಕಾಗುತ್ತದೆ. ಇದೇ ವಿಧಾನ ಭಾರತದಲ್ಲಿಯೂ ಕೂಡ ಜಾರಿಗೆ ಬರಲಿದ್ದು, ಇಲ್ಲಿ ಪ್ರತಿ ಪ್ರೊಫೈಲ್‌ಗೆ ಎಷ್ಟು ಹಣವನ್ನು ಕಟ್ಟಬೇಕು ಅನ್ನೋದು ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


  ಭಾರತದಲ್ಲಿ ನೆಟ್​ಫ್ಲಿಕ್ಸ್​ ಯೋಜನೆಗಳು


  ಸದ್ಯ ಭಾರತದಲ್ಲಿ, ನೆಟ್‌ಫ್ಲಿಕ್ಸ್ ನಾಲ್ಕು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ 149 ರೂಪಾಯಿ ಬೆಲೆಯ ಮೊಬೈಲ್​ ಓನ್ಲಿ ಪ್ಲಾನ್‌, 199 ರೂಪಾಯಿ ಬೆಲೆಯ ಬೇಸಿಕ್‌ ಪ್ಲಾನ್‌, 499ರೂಪಾಯಿ ಬೆಲೆಯ ಸ್ಟ್ಯಾಂಡರ್ಡ್‌ ಪ್ಲಾನ್‌ ಮತ್ತು 649ರೂಪಾಯಿ ಬೆಲೆಯ ಪ್ರೀಮಿಯಂ ಪ್ಲಾನ್‌ಗಳು ಸೇರಿವೆ. ಇವುಗಳಲ್ಲಿ ನೀವು ನಿಮ್ಮ ಆಯ್ಕೆಯ ಯಾವುದೇ ಪ್ಲಾನ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.


  ನೆಟ್​​ಫ್ಲಿಕ್ಸ್​ ಚಂದಾದಾರಿಕೆ ಕುಸಿತಕ್ಕೆ ಈ ನಿರ್ಧಾರ


  ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಹೆಚ್ಚಾಗಿ ಒಬ್ಬರು ಸಬ್​ಸ್ಕ್ರಿಪ್ಷನ್​ ಮಾಡಿದ್ರೆ ನಂತರ ಅದನ್ನು 5 ಮಣದಿಗೆ ಬಳಕೆ ಮಾಡುವಂತಹ ಅವಕಾಶವಿರುತ್ತದೆ. ಆದರೆ ಈ ರೀತಿಯ ಆಯ್ಕೆಯಿಂದ ಚಂದಾದಾರಿಕೆ ಮಾಡುವಂತಹ ಸಂಖ್ಯೆ ಬಹಳಷ್ಟು ಕುಸಿತಾ ಇದೆ ಎಂಬುದು ತಿಳಿದುಬಂದಿದೆ. ಆದ್ದರಿಂದ ಇನ್ಮುಂದೆ ಪಾಸ್​ವರ್ಡ್​ ಶೇರ್​ ಮಾಡುವಂತಹ ಅವಕಾಶವನ್ನು ಇನ್ನೊಬ್ಬರಿಗೆ ನೀಡಲು ಅನುಮತಿಸುವುದಿಲ್ಲ ಎಂದು ಕಂಪನಿ ಹೇಳಿದೆ. ಇದು ಮುಂದಿನ ವರ್ಷದಿಂದ ಜಾರಿಯಾಗಲಿದೆ.

  Published by:Prajwal B
  First published: