• ಹೋಂ
  • »
  • ನ್ಯೂಸ್
  • »
  • ಮೊಬೈಲ್- ಟೆಕ್
  • »
  • WhatsApp: ಮೊಬೈಲ್​ ಬಳಕೆದಾರರಿಗೆ ಶಾಕಿಂಗ್ ನ್ಯೂಸ್​! ಇಂದಿನಿಂದ ಈ ಫೋನ್​ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸಲ್ಲ

WhatsApp: ಮೊಬೈಲ್​ ಬಳಕೆದಾರರಿಗೆ ಶಾಕಿಂಗ್ ನ್ಯೂಸ್​! ಇಂದಿನಿಂದ ಈ ಫೋನ್​ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸಲ್ಲ

ವಾಟ್ಸಾಪ್​

ವಾಟ್ಸಾಪ್​

ವಾಟ್ಸಾಪ್​ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಆದರೆ ಇದೀಗ ವಾಟ್ಸಾಪ್​ ತನ್ನ ಬಳಕೆದಾರರಿಗೆ ಬೇಸರವನ್ನುಂಟು ಮಾಡಿದ್ದು, ಇನ್ಮುಂದೆ ಕೆಲ ಸ್ಮಾರ್ಟ್​​ಫೋನ್​ಗಳಲ್ಲಿ ವಾಟ್ಸಾಪ್​ ಕಾರ್ಯನಿರ್ವಹಿಸುವುದಿಲ್ಲವೆಂದು ಸುದ್ದಿಯಾಗಿದೆ. ಹಾಗಿದ್ರೆ ಇದಕ್ಕೆ ಮೂಲ ಕಾರಣ ಏನೆಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್​(Messaging Application) ಆಗಿರುವ ವಾಟ್ಸಾಪ್​ ದಿನ ಕಳೆದಂತೆ ಹೊಸ ಹೊಸ ಅಪ್ಡೇಟ್​​ಗಳನ್ನು ನೀಡುತ್ತಲೇ ಇದೆ. ವಾಟ್ಸಾಪ್ ಅಪ್ಲಿಕೇಶನ್ ಬಗ್ಗೆ ಕಳೆದ ವರ್ಷ ಬಗ್ಗೆ ಸ್ವಲ್ಪ ಮೆಲುಕು ಹಾಕುವುದಾದರೆ, ವಾಟ್ಸಾಪ್ (WhatsApp)​ 2022 ರಲ್ಲಿ ತನ್ನ ಬಳಕೆದಾರರಿಗಾಗಿ ಬಹಳಷ್ಟು ಫೀಚರ್ಸ್​ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ 2023 ರಲ್ಲಿ ಬಹಳಷ್ಟು ಫೀಚರ್ಸ್​ಗಳು ಬರಲಿದೆ ಎಮದು ಹೇಳಿತ್ತು. ಇದರ ಜೊತೆಗೆ ತನ್ನ ಬಳಕೆದಾರರಿಗೆ ಇನ್ನೊಂದು ಶಾಕಿಂಗ್ ಸುದ್ದಿಯನ್ನು ಹೇಳಿತ್ತು. ಅದೇನೆಂದರೆ ಫೆಬ್ರವರಿ 1 ರಿಂದ ವಾಟ್ಸಾಪ್ ಕೆಲ ಸ್ಮಾರ್ಟ್​​ಫೋನ್​ಗಳಲ್ಲಿ (Smartphones) ಬಂದ್​ ಆಗುತ್ತದೆ ಎಂಬ ನ್ಯೂಸ್ ಅನ್ನು ಹರಿಬಿಟ್ಟಿತ್ತು. ಅದೇ ರೀತಿಯಲ್ಲಿ ಇಂದಿನಿಂದ ಅಂದರೆ ಫೆಬ್ರವರಿ 1 ರಿಂದ ವಾಟ್ಸಾಪ್ ಕೆಲ ಮೊಬೈಲ್​ಗಳಲ್ಲಿ​ ಕಾರ್ಯನಿರ್ವಹಿಸುತ್ತಿಲ್ಲ.


    ವಾಟ್ಸಾಪ್​ ಬಳಕೆದಾರರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಆದರೆ ಇದೀಗ ವಾಟ್ಸಾಪ್​ ತನ್ನ ಬಳಕೆದಾರರಿಗೆ ಬೇಸರವನ್ನುಂಟು ಮಾಡಿದ್ದು, ಇನ್ಮುಂದೆ ಕೆಲ ಸ್ಮಾರ್ಟ್​​ಫೋನ್​ಗಳಲ್ಲಿ ವಾಟ್ಸಾಪ್​ ಕಾರ್ಯನಿರ್ವಹಿಸುವುದಿಲ್ಲವೆಂದು ಸುದ್ದಿಯಾಗಿದೆ. ಹಾಗಿದ್ರೆ ಇದಕ್ಕೆ ಮೂಲ ಕಾರಣ ಏನೆಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


    ಯಾವೆಲ್ಲಾ ಮಾದರಿಗಳು?


    ಫೆಬ್ರವರಿ 1 ರಿಂದ ವಾಟ್ಸಾಪ್​  ಐಫೋನ್​ ಮತ್ತು ಆಂಡ್ರಾಯ್ಡ್ ಸ್ಮಾರ್ಟ್​​ಫೋನ್​ಗಳಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸಲಿದೆ ಎಮದು ವರದಿಯಾಗಿದೆ.




    ಫೀಚರ್ಸ್​​ಗಳೇ ಇದಕ್ಕೆ ಕಾರಣ


    ವಾಟ್ಸಾಪ್ ಈ ವರ್ಷ ಮತ್ತು ಕಳೆದ ವರ್ಷ ಹಲವಾರು ಫೀಚರ್ಸ್​ಗಳನ್ನು ತ ನ್ನ ಬಳಕೆದಾರರಿಗಾಗಿ ಬಿಡುಗಡೆ ಮಾಡಿದೆ. ಆದ್ದರಿಂದ ಈ ಫೀಚರ್ಸ್​ಗಳೇ ಕೆಲ ಸ್ಮಾರ್ಟ್​​ಫೋನ್​ಗಳಲ್ಲಿ ವಾಟ್ಸಾಪ್​ ಕಾರ್ಯನಿರ್ವಹಿಸದೇ ಇರಲು ಮುಖ್ಯ ಕಾರಣವಾಗಿದೆ. ಏಕೆಂದರೆ ಈ ವಾಟ್ಸಾಪ್ ಪರಿಚಯಿಸಿರುವ ಅಪ್ಡೇಟ್ಸ್​ಗಳು ಕೆಲ ಸ್ಮಾರ್ಟ್​​ಫೋನ್​ಗಳ ಮಾದರಿಗಳಿಗೆ ಸಪೋರ್ಟ್​​ ಆಗುವುದಿಲ್ಲ. ಅದಕ್ಕಾಗಿ ಆ ಕಂಪೆಗಳು ತನ್ನ ಸಾಧನಗಳಲ್ಲಿ ವಾಟ್ಸಾಪ್​ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುತ್ತಿದೆ.


    ವಾಟ್ಸಾಪ್ ಅಪ್ಲಿಕೇಶನ್


    ವಾಟ್ಸಾಪ್​ ಬಳಕೆಗೆ ಯಾವ ಸ್ಮಾರ್ಟ್​ಫೋನ್​ ವರ್ಷನ್​ ಅಗತ್ಯವಾಗಿದೆ?


    ಇನ್ನು ಫೆಬ್ರವರಿ 1 ರಿಂದ ನಿಮ್ಮ ಆಂಡ್ರಾಯ್ಡ್​ ಸ್ಮಾರ್ಟ್​​ಫೋನ್​ 4.0.3 ಅಥವಾ ಇದಕ್ಕಿಂತ ಮುಂದಿನ ಆವೃತ್ತಿಯನ್ನು ಹೊಂದಿರಬೇಕು. ಹಾಗೆಯೇ ಐಫೋನ್​ಗಳಲ್ಲಿ ಐಓಎಸ್​ 12.0 ನಂತರದ ವರ್ಷನ್​ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮಾದರಿಗಳನ್ನು ಹೊಂದಿರುವಂತ ಸ್ಮಾರ್ಟ್​​ಫೋನ್​ಗಳನ್ನು ನೀವು ಹೊಂದಿದ್ದರೆ ಆರಾಮವಾಗಿ ನಿಮಗೆ ವಾಟ್ಸಾಪ್ ಅನ್ನು ಬಳಕೆ ಮಾಡಬಹುದು. ಇಲ್ಲವಾದರೆ ಹೊಸ ಸ್ಮಾರ್ಟ್​ಫೋನ್​ ಅನ್ನು ಖರೀದಿಸುವುದು ಅಗತ್ಯವಾಗಿದೆ. ಅಥವಾ ನಿಮ್ಮ ಸ್ಮಾರ್ಟ್​​ಫೋನ್​ ಅನ್ನು ಅಪ್ಡೇಟ್​ ಮಾಡುವ ಮೂಲಕ ನಿಮ್ಮ ಸ್ಮಾರ್ಟ್​ಫೋನ್​ ವರ್ಷನ್​​ ಅನ್ನು ಅಪ್ಡೇಟ್​ ಮಾಡಬಹುದಾಗಿದೆ.


    2023 ರ ನಂತರ ಸಾಕಷ್ಟು ಐಫೋನ್​ಗಳಲ್ಲಿ ವಾಟ್ಸಾಪ್​​ ಕಾರ್ಯನಿರ್ವಹಿಸುವುದಿಲ್ಲವೆಂದು ತಿಳಿಸಿದೆ. ಅವುಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.


    ಐಓಎಸ್​ ಸಾಧನಗಳು


    ಐಫೋನ್ 5, ಐಫೋನ್ 5c, ಆ್ಯಪಲ್​ ಐಫೋನ್ SE (16GB), ಆ್ಯಪಲ್ ಐಫೋನ್ SE (32GB), ಆ್ಯಪಲ್ ಐಫೋನ್ 6S (64GB), ಆ್ಯಪಲ್ ಐಫೋನ್6S ಪ್ಲಸ್‌ (128 GB,) ಆ್ಯಪಲ್ ಐಫೋನ್ 6S ಪ್ಲಸ್‌ (16GB,) ಆ್ಯಪಲ್ ಐಫೋನ್ 6S ಪ್ಲಸ್‌ (32GB), ಆ್ಯಪಲ್ ಐಫೋನ್ 6S ಪ್ಲಸ್‌ (64GB), ಆ್ಯಪಲ್ ಐಫೋನ್ SE (64GB), ಆ್ಯಪಲ್ ಐಫೋನ್6S (128 GB), ಆ್ಯಪಲ್ ಐಫೋನ್6s (16gb), ಆ್ಯಪಲ್ ಐಫೋನ್ 6S (32GB). ಇದಿಷ್ಟು ಆ್ಯಪಲ್​ ಕಂಪನಿಯ ಸಾಧನಗಳಲ್ಲಿ ವಾಟ್ಸಪ್​ ಕಾರ್ಯನಿರ್ವಹಿಸುವುದಿಲ್ಲ.


    ಇದನ್ನೂ ಓದಿ: Union Budget 2023: ಕೆವೈಸಿ ಪ್ರಕ್ರಿಯೆ ಸರಳೀಕರಣಕ್ಕೆ ಒತ್ತು! ಡಿಜಿಟಲ್​ ವ್ಯವಸ್ಥೆ ಇನ್ನಷ್ಟು ಸುಲಭ


    ಆಂಡ್ರಾಯ್ಡ್​ ಸಾಧನಗಳು


    LG ಆಪ್ಟಿಮಸ್ F7, LG ಆಪ್ಟಿಮಸ್ L3 II, LG ಆಪ್ಟಿಮಸ್ F5, LG ಆಪ್ಟಿಮಸ್ L5 II, LG ಆಪ್ಟಿಮಸ್ L5 II, LG ಆಪ್ಟಿಮಸ್ L3 II, LG ಆಪ್ಟಿಮಸ್ L7 II, LG ಆಪ್ಟಿಮಸ್ L7 II, LG ಆಪ್ಟಿಮಸ್ F6, LG ಆಪ್ಟಿಮಸ್ L4 II, LG ಆಪ್ಟಿಮಸ್ F3, LG ಆಪ್ಟಿಮಸ್ L4 II, LG ಆಪ್ಟಿಮಸ್ L2 II, LG ಆಪ್ಟಿಮಸ್ F3Q, vico ಸಿಂಕ್ 5, ವಿಕೊ ಡಾರ್ಕ್ನೈಟ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್ ಕವರ್ 2, ಹುವಾವೇ ಅಸೆಂಡ್G740 ZTE ಗ್ರಾಂಡ್ ಎಸ್ ಫ್ಲೆಕ್ಸ್, ಲೆನೊವೊ A820, ಹುವಾವೇ ಅಸೆಂಡ್ ಮೇಟ್‌, ಹುವಾವೇ ಅಸೆಂಡ್ D2, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಕೋರ್,  ಹೀಗೆ ಇನ್ನೂ ಹಲವಾರು ಸ್ಮಾರ್ಟ್​ಫೋನ್​ಗಳಲ್ಲಿ 2023 ರಿಂದ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲವೆಂದು ಕಂಪನಿ ತಿಳಿಸಿದೆ.


    Published by:Prajwal B
    First published: