ಆ್ಯಪಲ್ ಕಂಪೆನಿಯ ಉತ್ಪನ್ನಗಳೆಂದರೆ ಮಾರುಕಟ್ಟೆಯಲ್ಲಿ ಎಲ್ಲರಿಗೂ ಇಷ್ಟನೇ. ಇದು ವಿಭಿನ್ನ ವಿನ್ಯಾಸದ ಮೂಲಕ ಗ್ರಾಹಕರ ಗಮನ ಸೆಳೆಯುತ್ತವೆ. ಅದೇ ರೀತಿ ಗ್ರಾಹಕರು ಮಾರುಕಟ್ಟೆಗೆ ಹೊಸ ಐಫೋನ್ ಅಥವಾ ಇನ್ನಿತರೆ ಡಿವೈಸ್ ಬಿಡುಗಡೆಯಾದರೆ ಸಾಕು ಕುತೂಹಲದಿಂದ ನೋಡುತ್ತಾರೆ. ಇತ್ತೀಚೆಗೆ ಕಂಪೆನಿಗಳು ಸ್ಮಾರ್ಟ್ಫೋನ್ಗಳನ್ನು, ಗ್ಯಾಜೆಟ್ಸ್ಗಳನ್ನು,ಎಲೆಕ್ಟ್ರಾನಿಕ್ ಸಾಧನಗಳ ಬೆಲೆ ಕಡಿಮೆ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಐಫೋನ್ನ ಡಿವೈಸ್ಗಳ ಬೆಲೆ ದುಬಾರಿಯೇ ಆದರೆ ಇತ್ತೀಚೆಗೆ ಈ ಕಂಪೆನಿ ಸಹ ಬೆಲೆಯನ್ನು ಇಳಿಕೆ ಮಾಡಿದ್ದನ್ನು ನೋಡಬಹುದು. ಆದರೆ ಇದೀಗ ಆ್ಯಪಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಅನ್ನು ನೀಡಿದೆ. ಆ್ಯಪಲ್ ಸಾಧನಗಳ ಮೇಲೆ ಕಂಪೆನಿ ಬೆಲೆ ಏರಿಕೆ ಮಾಡಿದೆ.
ಆ್ಯಪಲ್ ಕಂಪೆನಿಯಿಂದ ಇತ್ತೀಚೆಗೆ ಹೋಮ್ಪ್ಯಾಡ್ ಮಿನಿ ಮತ್ತು ಐಮ್ಯಾಕ್ ಡಿವೈಸ್ಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಈ ಕಂಪೆನಿ ಈ ಎರಡು ಡಿವೈಸ್ಗಳ ಮೇಲೆ ಬೆಲೆಯನ್ನು ಏರಿಕೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದೀಗ ಈ ನಿಯಮವನ್ನು ಜಾರಿಗೆ ತಂದಿದ್ದು, ಭಾರತದಲ್ಲಿಯೂ ಇದು ಅನ್ವಯವಾಗಲಿದೆ ಎಂದು ತಂತ್ರಜ್ಞರು ತಿಳಿಸಿದ್ದಾರೆ.
ಹೋಮ್ಪಾಡ್ ಮಿನಿ ಮತ್ತು ಐಮ್ಯಾಕ್ಗಳ ಮೇಲೆ ಬೆಲೆ ಏರಿಕೆ
ಸದ್ಯ ಎಲ್ಲಾ ಕಂಪೆನಿಗಳು ಟೆಕ್ ಡಿವೈಸ್ಗಳ ಬೆಲೆಯನ್ನು ಇಳಿಕೆ ಮಾಡುತ್ತಿರುವಾಗ ಆ್ಯಪಲ್ ಕಂಪೆನಿ ಮಾತ್ರ ತನ್ನ ಬ್ರಾಂಡ್ನ ಎರಡು ಡಿವೈಸ್ಗಳ ಬೆಲೆಯನ್ನು ಭರ್ಜರಿಯಾಗಿ ಏರಿಕೆ ಮಾಡಿದೆ. ಹೌದು ಇದರಲ್ಲಿ ಹೋಮ್ಪಾಡ್ ಮಿನಿ ಬೆಲೆಯಲ್ಲಿ 1,000 ರೂಪಾಯಿಯಷ್ಟು ಏರಿಕೆ ಮಾಡಿದೆ. ಈ ಮೂಲಕ ಈ ಡಿವೈಸ್ನ ಬೆಲೆಯು ಈಗ 10,900 ರೂಪಾಯಿ ಆಗಿದೆ.
ಅದೇ ರೀತಿ ಐಮ್ಯಾಕ್ ಬೆಲೆಯಲ್ಲಿ 10,000 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಏರಿಕೆಯ ಹಿನ್ನಲೆಯಲ್ಲಿ ಐಮ್ಯಾಕ್ನ ದರವು ಈಗ 1,29,900 ರೂಪಾಯಿ ಆಗಿದೆ.
ಹೋಮ್ಪಾಡ್ ಮಿನಿ ಫೀಚರ್ಸ್
ಆ್ಯಪಲ್ ಕಂಪೆನಿಯ ಹೋಮ್ಪಾಡ್ ಮಿನಿ ಡಿವೈಸ್ ಅನ್ನು 2020 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿಲಾಯಿತು. ಇದು ಮೆಶ್ ಫ್ಯಾಬ್ರಿಕ್ ವಿನ್ಯಾಸದಲ್ಲಿ ಬಿಡುಗಡೆಯಾಗಿದೆ. ಹಾಗೆಯೇ ಇದು S5 ಚಿಪ್ ಮತ್ತು U1 ಚಿಪ್ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಇದು ಸಿರಿಗೆ ನಾಲ್ಕು ಮೈಕ್ರೊಫೋನ್ ಬೆಂಬಲವನ್ನು ಪಡೆದಿದೆ. ಹೊಸ ಹೋಮ್ಪಾಡ್ನಂತೆಯೇ, ಇದು ಕೂಡ ವಾಯ್ಸ್ ಗುರುತಿಸುವಿಕೆ, ತಾಪಮಾನ ಮತ್ತು ತೇವಾಂಶ ಸೆನ್ಸಾರ್ಗಳು ಮತ್ತು ಸ್ಟೀರಿಯೋ ಆಯ್ಕೆಗಳನ್ನು ಹೊಂದಿದೆ. ಹೋಮ್ಪಾಡ್ ಮಿನಿ ನೀಲಿ, ಸ್ಪೇಸ್ ಗ್ರೇ, ಬಿಳಿ, ಹಳದಿ ಮತ್ತು ಕಿತ್ತಳೆ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ.
ಆ್ಯಪಲ್ ಐಮ್ಯಾಕ್ ಫೀಚರ್ಸ್
ಆಪಲ್ ಐಮ್ಯಾಕ್ 24 ಇಂಚಿನ ಡಿವೈಸ್ 4480 x 2520 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 24 ಇಂಚಿನ 4.5K ರೆಟಿನಾ ಡಿಸ್ಪ್ಲೇಯನ್ನು ಹೊಂದಿದೆ. ಇದು ಎಮ್1 ಆಧಾರಿತ ಐಮ್ಯಾಕ್ ಹೊಚ್ಚ ಹೊಸ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ ಡಿಸ್ಟ್ರಕ್ಷನ್-ಫ್ರೀ-ಮ್ಯೂಟೆಡ್ ಕಲರ್ ಮತ್ತು ಹಿಂಭಾಗದಲ್ಲಿ ಬ್ರೈಟ್ನೆಸ್ ಕಲರ್ ಅನ್ನು ಒಳಗೊಂಡಿದೆ. ಇನ್ನು ಈ ಐಮ್ಯಾಕ್ ಆ್ಯಪಲ್ನ ಟ್ರೂ ಟೋನ್ ಟೆಕ್ ಫಾರ್ ಕಲರ್ ಬ್ಯಾಲೆನ್ಸ್, P3 ವೈಡ್ ಕಲರ್ ಗ್ಯಾಮಟ್, 500 ನಿಟ್ಸ್ ಪೀಕ್ ಬ್ರೈಟ್ನೆಸ್ ಮತ್ತು ಲೋ ರಿಫ್ಲೆಕ್ಟಿವಿಟಿ ಕೋಟಿಂಗ್ ಅನ್ನು ಹೊಂದಿದೆ.
ಇದನ್ನೂ ಓದಿ: ಐಫೋನ್ನ ಈ ಹಿಡನ್ ಫೀಚರ್ಸ್ ನೋಡಿದ್ರೆ ಗಾಬರಿಯಾಗ್ತೀರಾ! ಹೇಗಿದೆ ಗೊತ್ತಾ?
ಇನ್ನು ಈ ಐಮ್ಯಾಕ್ನಲ್ಲಿ 1080p ವೆಬ್ಕ್ಯಾಮ್ ಅನ್ನು ಒದಗಿಸಲಾಗಿದ್ದು, ಇದು ಫೇಸ್ ಡಿಟೆಕ್ಷನ್ ಮತ್ತು ಕಲರ್ ಬ್ಯಾಲೆನ್ಸ್ಗಾಗಿ ಎಮ್1 ನ್ಯೂರಲ್ ಇಂಜಿನ್ ಸಹಾಯ ಮಾಡಲಿದೆ. ಆ್ಯಪಲ್ ಕಂಪೆನಿಯು ಬೀಮ್ಫಾರ್ಮಿಂಗ್ ತಂತ್ರಜ್ಞಾನದೊಂದಿಗೆ ಸ್ಟುಡಿಯೋ ಗುಣಮಟ್ಟದ 3-ಮೈಕ್ ಅರೇ ಮತ್ತು ಡಾಲ್ಬಿ ಅಟ್ಮೋಸ್ ಪ್ರಮಾಣೀಕೃತ 6 ಸ್ಪೀಕರ್ ಸೆಟಪ್ ಅನ್ನು ಸಹ ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ