ನಿಮ್ಮ ಖಾಸಗಿ ಮಾಹಿತಿಯನ್ನು ಗೂಗಲ್​ ಓದುತ್ತಿರಬಹುದು..!


Updated:July 3, 2018, 7:26 PM IST
ನಿಮ್ಮ ಖಾಸಗಿ ಮಾಹಿತಿಯನ್ನು ಗೂಗಲ್​ ಓದುತ್ತಿರಬಹುದು..!

Updated: July 3, 2018, 7:26 PM IST
ಟೆಕ್​ ಜಗತ್ತಿನಲ್ಲಿ ಹೊಸ ಹೊಸ ಸುದ್ದಿಗಳು ದಿನಕ್ಕೊಂದು ಹುಟ್ಟಿಕೊಳ್ಳುತ್ತಲೇ ಇರುತ್ತದೆ, ಇತ್ತೀಚೆಗೆ ಫೇಸ್​ಬುಕ್​ ತನ್ನ ಗ್ರಾಹಕರನ್ನು ಕೇಂಬ್ರಿಡ್ಜ್​ ಅನಾಲೆಟಿಕಾದೊಂದಿಗೆ ಹಂಚಿಕೊಂಡು ಸುದ್ದಿಯಾಗಿತ್ತು, ಇದೀಗ ಜಿಮೇಲ್​ನಲ್ಲಿ ತನ್ನ ಗ್ರಾಹಕರು ಕಳುಹಿಸುವ ಸಂದೇಶಗಳನ್ನು ಕದ್ದು ಓದುತ್ತಿರುವುದಾಗಿ ವರದಿಯಾಗಿದೆ.

ವಾಲ್​ ಸ್ಟ್ರೀಟ್​ ಜರ್ನಲ್​ ವರದಿ ಪ್ರಕಾರ, ಜಿಮೇಲ್​ನಲ್ಲಿ ವಿನಿಮಯಗೊಳ್ಳುವ ಸಂದೇಶವನ್ನು ಸಂಸ್ಥೆಯ ಸಾಫ್ಟ್​ವೇರ್​ ಅಭಿವೃದ್ಧಿಗಾರರು ಗಮನಿಸುತ್ತಿರುವುದಾಗಿ ವರದಿಯಾಗಿದ್ದು, ನಮ್ಮ ಯಾವುದೇ ಸಂದೇಶವನ್ನು ಓದುವ ಸಂಪೂರ್ಣ ಹಕ್ಕು ಹೊಂದಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಗೂಗಲ್​ ತನ್ನ ಗ್ರಾಹಕರ ಯಾವುದೇ ಸಂದೇಶಗಳನ್ನು ಗಮನಿಸುವುದಿಲ್ಲ ಎಂದು ಭರವಸೆ ನಿಡಿತ್ತು, ಆದರೆ ಇದು ಕೇವಲ ಭರವಸೆಗೆ ಮಾತ್ರವೇ ಸೀಮಿತವಾಗಿತ್ತು. ಯಾವುದೇ ವಸ್ತುಗಳ ಬೆಲೆ ಹೋಲಿಕೆಗಳ ಸೈಟ್​ಗಳಿಗೆ ಇ-ಮೇಲ್​ನ್ನು ಕೊಟ್ಟಿರುವ ಗ್ರಾಹಕರ ಮೇಲ್​ ಐಡಿಗಳು ಸಾಕಷ್ಟು ಅಪಾಯ ಹೊಂದಿದೆ.

ಏಕೆಂದರೆ ಗೂಗಲ್​ ನೂರಕ್ಕೂ ಹೆಚ್ಚು ಸಾಫ್ಟ್‌ವೇರ್‌ ಅಭಿವೃದ್ದಿ ಪಡಿಸುವ ಹೊರ ಗುತ್ತಿಗೆ ಕಂಪೆನಿಗಳಿಗೆ ಇನ್‌ ಬಾಕ್ಸ್‌ ಸ್ಕ್ಯಾನ್‌ ಮಾಡುವ ಗುತ್ತಿಗೆ ನೀಡಿದೆ. ಈ ವೇಳೆ ಶಾಪಿಂಗ್‌ ದರಗಳು, ಪ್ರಯಾಣದ ವಿವರಗಳಿರುವ ಜಾಹೀರಾತುಗಳು ಜಿಮೇಲ್‌ ಖಾತೆದಾರರ ಇನ್‌ ಬಾಕ್ಸ್‌ನಲ್ಲಿ ಕಾಣಲಿವೆ ಎಂದು ವಾಲ್​ಸ್ಟ್ರೀಟ್​ ಜರ್ನಲ್ ಸೋಮವಾರ ವರದಿ ಮಾಡಿದೆ.

ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಆ್ಯಪ್​ ಬಳಕೇದಾರರನ್ನು ಹೊಂದಿರುವ ಗೂಗಲ್​, ತನ್ನ ನೌಕರರಿಗೆ ಕೆಲವೇ ಸಂದರ್ಭದಲ್ಲಿ ಮೂರನೇ ವ್ಯಕ್ತಿಯ ಗೂಗಲ್​ ಮೇಲ್​ ಓದುವ ಹಕ್ಕನ್ನು ನೀಡಲಾಗಿದೆ. ಆದರೆ ಹೊರಗುತ್ತಿಗೆ ನೀಡಿದ ವ್ಯಕ್ತಿಗಳು ಈ ಆಯ್ಕೆಯನ್ನು ಪ್ರತಿನಿತ್ಯ ಬಳಸುತ್ತಿದ್ದು, ಹಲವಾರು ಸಂದರ್ಭದಲ್ಲಿ ಈ ವ್ಯಕ್ತಿಗಳು ಖಾಸಗಿ ಮಾಹಿತಿಯನ್ನು ಓದಿರಬಹುದು ಎಂದು ದಿ ವರ್ಜ್​ ಕೂಡಾ ವರದಿ ಮಾಡಿದೆ.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...