Twitter ಬಳಕೆದಾರರಿಗೆ ಶಾಕ್, ಈ ಸೇವೆ ಬೇಕಾದ್ರೆ ಶುಲ್ಕ ಪಾವತಿ ಕಡ್ಡಾಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಕ್ಟೋಬರ್ 2022 ರಲ್ಲಿ ಟ್ವಿಟರ್‌ ಬ್ಲೂಗೆ ಚಂದಾದಾರರಾಗಲು ಪಾವತಿಸಿದ ಬಳಕೆದಾರರು ಮಾತ್ರ ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು SMS ಮೂಲಕ ಲಾಗಿನ್ ಕೋಡ್‌ಗಳನ್ನು ವಿನಂತಿಸಲು ಸಾಧ್ಯವಾಗುತ್ತದೆ ಎಂದಿದ್ದ ಟ್ವಿಟರ್‌ ಇಂದಿನಿಂದ ಆ ಉಪಕ್ರಮವನ್ನು ಜಾರಿಗೆ ತಂದಿದೆ.

  • Share this:

ಎಲಾನ್‌ ಮಸ್ಕ್‌ (Elon Musk) ಟ್ವಿಟರ್‌ (Twitter) ಸ್ವಾಧೀನಪಡಿಸಿಕೊಂಡ ನಂತರ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ (Social Media Platform) ದೊಡ್ಡ ದೊಡ್ಡ ಬದಲಾವಣೆಗಳೇ ನಡೆಯುತ್ತಿವೆ. ಉದ್ಯೋಗಿಗಳ (Employs) ವಜಾದಿಂದ ಹಿಡಿದು ಇಲ್ಲಿಯವರೆಗಿನ ಬ್ಲೂಟಿಕ್‌ (Blue ticks) ವಿವಾದಾತ್ಮಕ ನಡೆಯವರೆಗೂ ಟ್ವಿಟರ್‌ ಹೊಸ ಹೊಸ ವಿಚಾರಗಳಿಗೆ ಸುದ್ದಿಯಲ್ಲಿದೆ. ಅದರಲ್ಲೂ ಈ ಬ್ಲೂಟಿಕ್‌ ಪ್ರಸ್ತಾಪ ಇನ್ನೂ ಸಹ ಬಳಕೆದಾರರ ನಿದ್ದೆಗೆಡಿಸಿದೆ ಎನ್ನಬಹುದು. ಕೆಲ ತಿಂಗಳ ಹಿಂದಷ್ಟೇ ಮಸ್ಕ್‌ ಒಡೆತನದ ಟ್ವಿಟರ್‌ ಕಂಪನಿ 20ನೇ ಮಾರ್ಚ್ 2023ರಿಂದ ಟ್ವಿಟರ್ ಬ್ಲೂ ಟಿಕ್‌ಗೆ ಚಂದಾದಾರರಾಗದ ಬಳಕೆದಾರರಿಗೆ SMS-ಆಧಾರಿತ 2 ಫ್ಯಾಕ್ಟರ್ ಅಥೆಂಟಿಕೇಷನ್ (2FA) ಅನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಹೇಳಿತ್ತು.


ಅಕ್ಟೋಬರ್ 2022 ರಲ್ಲಿ ಟ್ವಿಟರ್‌ ಬ್ಲೂಗೆ ಚಂದಾದಾರರಾಗಲು ಪಾವತಿಸಿದ ಬಳಕೆದಾರರು ಮಾತ್ರ ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು SMS ಮೂಲಕ ಲಾಗಿನ್ ಕೋಡ್‌ಗಳನ್ನು ವಿನಂತಿಸಲು ಸಾಧ್ಯವಾಗುತ್ತದೆ ಎಂದಿದ್ದ ಟ್ವಿಟರ್‌ ಇಂದಿನಿಂದ ಆ ಉಪಕ್ರಮವನ್ನು ಜಾರಿಗೆ ತಂದಿದೆ.


2 ಫ್ಯಾಕ್ಟರ್ ಅಥೆಂಟಿಕೇಷನ್‌ ಪಡೆಯಲು ಇಂದಿನಿಂದಲೇ ಬಳಕೆದಾರರಿಗೆ ಶುಲ್ಕ


ಟ್ವಿಟರ್‌ ಇಂದಿನಿಂದ ಎರಡು ಅಂಶದ ದೃಢೀಕರಣಕ್ಕಾಗಿ (2 ಫ್ಯಾಕ್ಟರ್ ಅಥೆಂಟಿಕೇಷನ್) SMS ಕೋಡ್‌ಗಳನ್ನು ಸ್ವೀಕರಿಸಲು ಬಳಕೆದಾರರಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿದೆ. ಈ ಹೆಚ್ಚುವರಿ ಹಂತವು ಆನ್‌ಲೈನ್ ಖಾತೆಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಕಂಪನಿಯು ಈಗಾಗ್ಲೆ ತಿಳಿಸಿದೆ.


Shock for Twitter users, payment of fee is mandatory for this service
ಸಾಂಕೇತಿಕ ಚಿತ್ರ


30 ದಿನಗಳ ಕಾಲಾವಕಾಶ


ಬಳಕೆದಾರರು ತಮ್ಮ ಖಾತೆಯ ಸೆಟ್ಟಿಂಗ್‌ಗಳಿಂದ SMS ಆಧಾರಿತ 2FA ಅನ್ನು ತೆಗೆದುಹಾಕಲು 30 ದಿನಗಳ ಕಾಲಾವಕಾಶ ಹೊಂದಿರುತ್ತಾರೆ ಎಂದು ಟ್ವಿಟರ್ ಹೇಳಿದೆ


ಏನಿದು 2 ಫ್ಯಾಕ್ಟರ್ ಅಥೆಂಟಿಕೇಷನ್ ?


ಎರಡು-ಅಂಶದ ವೈಶಿಷ್ಟ್ಯವುಳ್ಳ ದೃಢೀಕರಣವು ಪಾಸ್‌ವರ್ಡ್-ರಕ್ಷಿತ ಖಾತೆಗಳಿಗೆ ಭದ್ರತೆಯ ಎರಡನೇ ಹಂತದ ವಿಧಾನವಾಗಿದೆ, ಬಳಕೆದಾರರು ಲಾಗ್ ಇನ್ ಮಾಡಲು ಸ್ವಯಂ-ರಚಿತ ಕೋಡ್ ಅನ್ನು ನಮೂದಿಸುತ್ತಾರೆ.


ಈ ಹೆಚ್ಚುವರಿ ಹಂತವು ಆನ್‌ಲೈನ್ ಖಾತೆಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ದೃಢೀಕರಣ ಅಪ್ಲಿಕೇಶನ್‌ಗಳು ಮತ್ತು ಹಾರ್ಡ್‌ವೇರ್ ಸುರಕ್ಷತಾ ಕೀಗಳಿಗೆ ಹೋಲಿಸಿದರೆ SMS ಕೋಡ್‌ಗಳನ್ನು ಅಸುರಕ್ಷಿತ 2FA ವಿಧಾನವೆಂದು ಹೇಳಲಾಗುತ್ತಿದೆ.


ಇದನ್ನೂ ಓದಿ:Explained: ಹಣ ಪಾವತಿಸದೆಯೇ ನಿಮ್ಮ Twitter ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?


ಇವುಗಳನ್ನು ಹೊಂದಿಸುವುದು ಅನೇಕ ಬಳಕೆದಾರರಿಗೆ ಸುಲಭವಾಗಿದ್ದು, ಹ್ಯಾಕರ್‌ಗಳಿಗೆ ಮತ್ತಷ್ಟು ಉಪಯುಕ್ತ ಎನ್ನಲಾಗಿದೆ.


ಎರಡನೇ ಹಂತದ ದೃಢೀಕರಣದೊಂದಿಗೆ ತಮ್ಮ ಟ್ವಿಟರ್‌ ಖಾತೆಯನ್ನು ಸಂರಕ್ಷಿಸುವುದನ್ನು ಮುಂದುವರಿಸಲು ಬಯಸುವ ಬಳಕೆದಾರರು ಹಾರ್ಡ್‌ವೇರ್ ಭದ್ರತಾ ಕೀಯನ್ನು ಖರೀದಿಸಬಹುದು ಮತ್ತು ನೋಂದಾಯಿಸಿಕೊಳ್ಳಬಹುದು ಅಥವಾ Authy, Google Authenticator, Microsoft Authenticator, ನಂತಹ ಉಚಿತ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅನ್ನು ಹೊಂದಿಸಬಹುದಾಗಿದೆ.


ಟ್ವಿಟರ್ 'ಬ್ಲೂ ಟಿಕ್' ಪಡೆಯಲು ಪಾವತಿಸಬೇಕಾದ ಹಣ ಎಷ್ಟು?


ದೇಶದಲ್ಲಿ ಡೆಸ್ಕ್‌ಟಾಪ್ ಮೂಲಕ ಟ್ವಿಟರ್ ಬಳಸುವ ಗ್ರಾಹಕರು ಮಾಸಿಕ 650 ರೂ. ಪಾವತಿಸುವ ಮೂಲಕ ಹಾಗೂ ಆಂಡ್ರಾಯ್ಡ್ ಮತ್ತು ಐಓಎಸ್ ಮೊಬೈಲ್‌ ಬಳಕೆದಾರರುವ ಮಾಸಿಕ 900 ರೂ. ಮತ್ತು ವಾರ್ಷಿಕ ಯೋಜನೆಗೆ 9,400 ರೂ. ಪಾವತಿಸುವ ಮೂಲಕ ಟ್ವಿಟರ್ ಬ್ಲೂ ಚಂದಾದಾದರಿಕೆಯನ್ನು ಪಡೆಯಬಹುದು.




ಇದಲ್ಲದೇ, ಟ್ವಿಟರ್ ವೆಬ್‌ನಲ್ಲಿ ವಾರ್ಷಿಕ ಚಂದಾದಾರಿಕೆ ಪಡೆಯುವ ಗ್ರಾಹಕರಿಗಾಗಿ ತಿಂಗಳಿಗೆ 650 ರೂ ಮತ್ತು ವಾರ್ಷಿಕ 6,800 ರೂ. ಬೆಲೆಯಲ್ಲಿ ಚಂದಾದಾರಿಕೆ ಪಡೆಯಬಹುದಾದ ಕೊಡುಗೆಗಳು ಲಭ್ಯವಿದೆ.

top videos


    ಟ್ವಿಟರ್ ಬ್ಲೂ ಟಿಕ್ ಚಂದದಾರಿಕೆ‌ ಪಡೆಯುವುದರ ಲಾಭಗಳನ್ನು ನೋಡುವುದಾದರೆ ಯಾರು ಈ ಬ್ಲೂ ಟಿಕ್‌ ಪಡೆಯುತ್ತಾರೋ ಆ ಬಳಕೆದಾರರ ಪೋಸ್ಟ್‌ಗಳು ಹೆಚ್ಚು ಆದ್ಯತೆಯ ಶ್ರೇಯಾಂಕವನ್ನು ಪಡೆಯಲಿವೆ. ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಜಾಹಿರಾತು ವೀಕ್ಷಣೆ ಪ್ರಮಾಣ ಕಡಿಮೆ ಇರುತ್ತವೆ ಎನ್ನಲಾಗಿದೆ.

    First published: