• Home
  • »
  • News
  • »
  • tech
  • »
  • Facebook: ಫೇಸ್‌ಬುಕ್ ಪೋಷಕ ಸಂಸ್ಥೆ ಮೆಟಾದ ತ್ರೈಮಾಸಿಕ ಆದಾಯದಲ್ಲಿ ಕುಸಿತ, 5%ಕ್ಕಿಂತ ಹೆಚ್ಚು ನಷ್ಟಕ್ಕೊಳಗಾದ ಷೇರುಗಳು

Facebook: ಫೇಸ್‌ಬುಕ್ ಪೋಷಕ ಸಂಸ್ಥೆ ಮೆಟಾದ ತ್ರೈಮಾಸಿಕ ಆದಾಯದಲ್ಲಿ ಕುಸಿತ, 5%ಕ್ಕಿಂತ ಹೆಚ್ಚು ನಷ್ಟಕ್ಕೊಳಗಾದ ಷೇರುಗಳು

Facebook meta.

Facebook meta.

ತ್ರೈಮಾಸಿಕದ ದುರ್ಬಲ ಫಲಿತಾಂಶಗಳು ಮೆಟಾವರ್ಸ್‌ನಲ್ಲಿ (Meta) ಕಂಪನಿಯು ವರ್ಷಕ್ಕೆ $10 ಶತಕೋಟಿ ಖರ್ಚುಮಾಡುವ ಮೆಟಾದ ಯೋಜನೆಗಳ ಕುರಿತು ಪ್ರಶ್ನೆಯನ್ನು ಹುಟ್ಟುಹಾಕಿದೆ.

  • Share this:

ಫೇಸ್‌ಬುಕ್ (Face Book) ಪೋಷಕ ಸಂಸ್ಥೆ ಮೆಟಾ ಆದಾಯವು ಸತತ ಎರಡನೇ ತ್ರೈಮಾಸಿಕಕ್ಕೆ ಕುಸಿದಿರುವುದಾಗಿ ವರದಿ ಮಾಡಿದ್ದು, ಟಿಕ್‌ಟಾಕ್‌ನ  (Tik Tok) ಜನಪ್ರಿಯ ವಿಡಿಯೋ ಆ್ಯಪ್‌ನಿಂದ ತೀವ್ರ ಪೈಪೋಟಿಯನ್ನು ಎದುರಿಸುತ್ತಿರುವ ಕಾರಣ ಜಾಹೀರಾತು ಮಾರಾಟದ ಕುಸಿತವನ್ನೆದುರಿಸಿದೆ ಎಂಬುದಾಗಿ ವರದಿಯಾಗಿದೆ. ಗೂಗಲ್ ಪಾಲುದಾರ ಆಲ್ಫಾಬೆಟ್ ಇಂಕ್ ಹಾಗೂ ಮೈಕ್ರೋಸಾಫ್ಟ್‌ನ ಈ ವಾರದ ದುರ್ಬಲ ಗಳಿಕೆಯ ಆದಾಯಗಳ ವರದಿಗಳನ್ನು ಅನುಸರಿಸಿ ಮೆಟಾ ತೀವ್ರ ನಿರಾಶಾದಾಯಕ ಫಲಿತಾಂಶಗಳನ್ನು ನೀಡಿದೆ. ತ್ರೈಮಾಸಿಕದ ದುರ್ಬಲ ಫಲಿತಾಂಶಗಳು ಮೆಟಾವರ್ಸ್‌ನಲ್ಲಿ (Meta) ಕಂಪನಿಯು ವರ್ಷಕ್ಕೆ $10 ಶತಕೋಟಿ ಖರ್ಚುಮಾಡುವ ಮೆಟಾದ ಯೋಜನೆಗಳ ಕುರಿತು ಪ್ರಶ್ನೆಯನ್ನು ಹುಟ್ಟುಹಾಕಿದೆ. ಆದಾಯವು ಕುಂಠಿತವಾಗುತ್ತಿರುವುದರಿಂದ ಇನ್ನೂ ಅಸ್ತಿತ್ವದಲ್ಲಿಲ್ಲದ ಮತ್ತು ಎಂದಿಗೂ ಪ್ರಾಯಶಃ ರೂಪುಗೊಳ್ಳದಿರುವ ಪರಿಕಲ್ಪನೆ ಎಂಬ ಸೂಚನೆಯನ್ನು ಇದು ನೀಡಿದೆ.


ನಿರಾಶಾದಾಯಕ ಫಲಿತಾಂಶ


ಮೆಟಾ ಪ್ಲ್ಯಾಟ್‌ಫಾರ್ಮ್‌ ಇಂಕ್‌ನ ತ್ರೈಮಾಸಿಕ ಫಲಿತಾಂಶಗಳು ಕಂಪನಿಯ ಸ್ಟಾಕ್ ಅನ್ನು 19% ದಷ್ಟು ಕುಸಿಯುವಂತೆ ಮಾಡಿದ್ದು $105.20 ವಹಿವಾಟು ನಿಲ್ಲಿಸಿದೆ. 2016 ರಿಂದ ಇದು ಅತ್ಯಂತ ಕ್ಷೀಣ ಸ್ಟಾಕ್ ಇಳಿಕೆ ಎಂದೆನಿಸಿದೆ. ಸ್ಟಾಕ್ ಬುಧವಾರ 61% ಕ್ಕೆ ಮುಚ್ಚಿದೆ.


ಕಳವಳ ವ್ಯಕ್ತಪಡಿಸಿರುವ ಹೂಡಿಕೆದಾರರು


ಮೆಟಾದ ಷೇರು ಕುಸಿತವನ್ನು ನೋಡಿ ಕೆಲವೊಂದು ಹೂಡಿಕೆದಾರರು ಕಳವಳ ವ್ಯಕ್ತಪಡಿಸಿದ್ದು ಮೆಟಾ ಅನಾವಶ್ಯಕವಾಗಿ ಹೆಚ್ಚಿನ ಹಣ ಖರ್ಚುಮಾಡುತ್ತಿದ್ದು ಮೆಟಾವರ್ಸ್ ಪರಿಕಲ್ಪನೆಯನ್ನು ಮುಂದಿರಿಸಿಕೊಂಡು ಜನರನ್ನು ಗೊಂದಲಕ್ಕೆ ತಳ್ಳುತ್ತಿದೆ ಏಕೆಂದರೆ ಈ ಪರಿಕಲ್ಪನೆಯನ್ನು ಕೆಲವೇ ಜನರಿಗೆ ಅರ್ಥಮಾಡಿಕೊಳ್ಳಲು ಸಾಧ್ಯ ಹಾಗಾಗಿ ಸಂಸ್ಥೆ ದುರ್ಬಲಗೊಳ್ಳುತ್ತಿರುವ ಜಾಹೀರಾತು ವ್ಯವಹಾರದೊಂದಿಗೆ ಹಿಡಿತ ಸಾಧಿಸುತ್ತಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಒಂದೇ ಒಂದು ಸೆಕೆಂಡ್​ನಲ್ಲಿ ಇಡೀ ಪ್ರಪಂಚದ ಇಂಟರ್ನೆಟ್ ಟ್ರಾಫಿಕ್ ರವಾನಿಸುವ ಚಿಪ್ ಸಂಶೋಧನೆ


ಹಲವಾರು ಜನರಿಂದ ಅನಿಸಿಕೆ ಹಂಚಿಕೆ, ಹಲವಾರು ಅಭಿಪ್ರಾಯಗಳ ಸ್ವೀಕಾರ, ಹಾಗೂ ತುರ್ತು ಸಮಯದಲ್ಲಿ ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಂಸ್ಥೆ ಮಿತಿಮೀರಿ ನಿರ್ಧಾರ ಕೈಗೊಂಡಿದೆ ಎಂದು ಮೆಟಾ ಷೇರುದಾರರಾದ ಅಲ್ಟಿಮೀಟರ್ ಕ್ಯಾಪಿಟಲ್‌ನ ಸಿಇಒ ಬ್ರಾಡ್ ಗೆರ್ಸ್ಟ್ನರ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಪತ್ರ ಬರೆದಿದ್ದಾರೆ.


ಮಾರ್ಕ್ ಜುಕರ್‌ಬರ್ಗ್ ಆಶಾಭಾವನೆ


ಸಂಸ್ಥೆಯ ಬೆಳವಣಿಗೆ ವೇಗವಾಗಿದ್ದಾಗ ಇಂತಹ ಕೊರತೆಗಳು ಗಮನಕ್ಕೆ ಬರುವುದಿಲ್ಲ ಆದರೆ ಬೆಳವಣಿಗೆ ನಿಧಾನವಾದಾಗ ಮತ್ತು ತಂತ್ರಜ್ಞಾನ ಬದಲಾದಾಗ ಇದೇ ಅಂಶಗಳು ಮಾರಕವಾಗಿ ಕಂಪನಿಗೆ ನಷ್ಟವನ್ನುಂಟು ಮಾಡುತ್ತವೆ ಎಂಬುದು ಬ್ರಾಡ್ ಅವರ ಮಾತಾಗಿದೆ.


ವೇಗವರ್ಧಿತ ಆದಾಯದ ಕುಸಿತದ ಜೊತೆಗೆ, ಪ್ರಸಕ್ತ ತ್ರೈಮಾಸಿಕದಲ್ಲಿ ನಿರೀಕ್ಷಿತ ಮಾರಾಟಕ್ಕಿಂತ ದುರ್ಬಲವಾದ ಮಾರಾಟವನ್ನು ಮೆಟಾ ಸಂಕೇತಿಸಿದೆ. ಆದಾಯ ಕುಸಿತವು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬುದು ಬ್ರಾಡ್ ತಿಳಿಸಿದ್ದಾರೆ.


ಆದಾಯಕ್ಕೆ ಸಂಬಂಧಿತವಾಗಿರುವ ಸಮೀಪದ ಸವಾಲುಗಳನ್ನು ನಿವಾರಿಸುವ ಬೆಳವಣಿಗೆಗೆ ಮರಳುವ ಮೂಲಭೂತ ಅಂಶಗಳ ಕಡೆಗೆ ಗಮನ ನೀಡಬೇಕು ಎಂದು ಮಾರ್ಕ್ ತಿಳಿಸಿದ್ದಾರೆ. ಉದ್ಯೋಗದಲ್ಲಿನ ದಕ್ಷತೆ ಹಾಗೂ ಆದ್ಯತೆಯನ್ನು ಕೇಂದ್ರೀಕರಿಸಿ 2023 ರತ್ತ ಗಮನ ಹರಿಸುತ್ತಿದ್ದು ಪ್ರಸ್ತುತ ಪರಿಸರವನ್ನು ನ್ಯಾವಿಗೇಟ್ ಮಾಡಲು ಹಾಗೂ ಸಮರ್ಥ ಕಂಪನಿಯಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ ಎಂಬುದು ಮಾರ್ಕ್ ಅವರ ಅಭಿಪ್ರಾಯವಾಗಿದೆ. ಪ್ರಸ್ತುತ ತ್ರೈಮಾಸಿಕದಲ್ಲಿ ಸಿಬ್ಬಂದಿ ಮಟ್ಟವು ಸರಿಸುಮಾರು ಒಂದೇ ಆಗಿರುತ್ತದೆ ಎಂದು ಮೆಟಾ ತಿಳಿಸಿದೆ.


ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಇನ್ನೊಬ್ಬರಿಗೆ ನೀಡಿದರೆ ದಂಡ ಗ್ಯಾರಂಟಿ! ಅಕೌಂಟ್‌ ಶೇರ್‌ ಮಾಡುವ ಮುನ್ನ ಇದನ್ನ ರೀಡ್ ಮಾಡಿ


ಯೋಜನೆಗಳ ದಿಕ್ಕು ಬದಲಾಯಿಸಬೇಕು


ಕಂಪನಿಯು ಸೆಪ್ಟೆಂಬರ್ 30 ರ ಹೊತ್ತಿಗೆ ಸುಮಾರು 87,000 ಉದ್ಯೋಗಿಗಳನ್ನು ಹೊಂದಿದ್ದು, ವರ್ಷದಿಂದ ವರ್ಷಕ್ಕೆ 28% ರಷ್ಟು ಹೆಚ್ಚಳವಾಗಿದೆ. ಬಲವಾದ ಅಭಿವೃದ್ಧಿಯನ್ನು ಹೊಂದಲು ಮೆಟಾ ವ್ಯವಹಾರದ ದಿಕ್ಕನ್ನು ತಿರುಗಿಸುವ ಅಗತ್ಯವಿದೆ ಎಂದು ಇನ್ಸೈಡರ್ ಇಂಟೆಲಿಜೆನ್ಸ್ ವಿಶ್ಲೇಷಕ ಡೆಬ್ರಾ ಅಹೋ ವಿಲಿಯಮ್ಸನ್ ಸಲಹೆ ನೀಡಿದ್ದಾರೆ. ಫೇಸ್‌ಬುಕ್ ಕ್ರಾಂತಿಕಾರಿ ಕಂಪನಿಯಾಗಿದ್ದು, ಜನರ ಸಂವಹನ ನಡೆಸುವ ಹಾಗೂ ಮಾರಾಟಗಾರರು ಗ್ರಾಹಕರೊಂದಿಗೆ ಸಂವಹನ ನಡೆಸುವ ವಿಧಾನವನ್ನೇ ಬದಲಾಯಿಸಿದ ಸಂಸ್ಥೆಯಾಗಿ ರೂಪುಗೊಂಡಿತು. ಮೆಟಾ ಅಭಿವೃದ್ಧಿ ಹೊಂದಬೇಕು ಎಂದಾದಲ್ಲಿ ತನ್ನ ಮೆಟಾವರ್ಸ್ ಯೋಜನೆಯ ಮೇಲೆ ಕಡಿಮೆ ಗಮನವನ್ನು ನೀಡಬೇಕು ಹಾಗೂ ಅದರ ಪ್ರಮುಖ ವ್ಯವಹಾರದತ್ತ ಗಮನವನ್ನು ಹೆಚ್ಚು ಕೇಂದ್ರೀಕರಿಸಬೇಕು ಎಂದು ತಿಳಿಸಿದ್ದಾರೆ.

First published: