ಭಾರತದ ಆ್ಯಪ್​ಗಳಿಗೆ ಬಂತು ಭಾರೀ ಬೇಡಿಕೆ; ಒಂದೇ ದಿನ 1.5 ಕೋಟಿ ಡೌನ್​​ಲೋಡ್​ ಕಂಡ ಶೇರ್​ ಚಾಟ್​

ಚೀನಾ ಆ್ಯಪ್​ಗಳು ರದ್ದಾದ ಬೆನ್ನಲ್ಲೇ ಭಾರತೀಯ ಆ್ಯಪ್​ಗಳಿಗೆ ಆದ್ಯತೆ ನೀಡಿ ಎನ್ನುವ ಆಂದೋಲನ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡಿದೆ. ಹೀಗಾಗಿ, ಭಾರತದ ಆ್ಯಪ್​ಗಳು ಹೆಚ್ಚೆಚ್ಚು ಡೌನ್​ಲೋಡ್​ ಆಗುತ್ತಿವೆ.

news18-kannada
Updated:July 1, 2020, 3:37 PM IST
ಭಾರತದ ಆ್ಯಪ್​ಗಳಿಗೆ ಬಂತು ಭಾರೀ ಬೇಡಿಕೆ; ಒಂದೇ ದಿನ 1.5 ಕೋಟಿ ಡೌನ್​​ಲೋಡ್​ ಕಂಡ ಶೇರ್​ ಚಾಟ್​
ಶೇರ್​ಚಾಟ್​
  • Share this:
ನವದೆಹಲಿ (ಜು.1): ಭದ್ರತಾ ದೃಷ್ಟಿಯಿಂದ ಚೀನಾದ 59 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಬ್ಯಾನ್​ ಮಾಡಿದೆ. ಈ ನಡೆಯನ್ನು ಬಹುತೇಕ ಭಾರತೀಯರು ಸ್ವಾಗತಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಭಾರತೀಯರು ಚೀನಾ ಆ್ಯಪ್​ಗಳಿಗೆ ಬದಲಿ ಆ್ಯಪ್ ಹುಡುಕುತ್ತಿದ್ದಾರೆ. ಹೀಗಾಗಿ ಭಾರತದ ಆ್ಯಪ್​ಗಳ ಹೆಚ್ಚೆಚ್ಚು ಡೌನ್​ಲೋಡ್​ ಕಾಣುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಶೇರ್​ ಚಾಟ್.

ಚೀನಾದ ಟಿಕ್​ ಟಾಕ್​, ಹೆಲೋ, ಶೇರ್​ ಚಾಟ್​ ಸೇರಿ ಒಟ್ಟು 59 ಆ್ಯಪ್​ಗಳು ಭಾರತದಲ್ಲಿ ನಿಷೇಧಗೊಂಡಿವೆ. ಈ ಆ್ಯಪ್​ಗಳು ರದ್ದಾದ ಬೆನ್ನಲ್ಲೇ ಭಾರತೀಯ ಆ್ಯಪ್​ಗಳಿಗೆ ಆದ್ಯತೆ ನೀಡಿ ಎನ್ನುವ ಆಂದೋಲನ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರಂಭಗೊಂಡಿದೆ. ಹೀಗಾಗಿ, ಭಾರತದ ಆ್ಯಪ್​ಗಳು ಹೆಚ್ಚೆಚ್ಚು ಡೌನ್​ಲೋಡ್​ ಆಗುತ್ತಿವೆ.

ಚೀನಾ ಆ್ಯಪ್​ ರದ್ದಾದ ನಂತರ ಗಂಟೆಗೆ 5 ಲಕ್ಷ ಬಳಕೆದಾರರು ಶೇರ್ ​ಚಾಟ್​ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಒಂದೇ ದಿನ 1.5 ಕೋಟಿ ಹೊಸ ಬಳಕೆದಾರರು ಶೇರ್​ ಚಾಟ್​ ಕುಟುಂಬಕ್ಕೆ ಬಂದಿದ್ದಾರೆ.

2015ರ ಜನವರಿ ತಿಂಗಳಲ್ಲಿ ಶೇರ್​ ಚಾಟ್​ ಕಾರ್ಯಾರಂಭ ಮಾಡಿತ್ತು. ಅಂಕುಶ್​ ಸಚ್​ದೇವ್​ ಈ ಆ್ಯಪ್​ನ ಸ್ಥಾಪಕರು. ಶೇರ್​ ಚಾಟ್​ನಲ್ಲಿ 6 ಕೋಟಿ ಸಕ್ರಿಯ ಬಳಕೆದಾರರು ಇದ್ದಾರೆ. ವಿಶೇಷ ಎಂದರೆ ಭಾರತದ 13 ಭಾಷೆಗಳಲ್ಲಿ ಶೇರ್​ ಚಾಟ್​ ಕಾರ್ಯ ನಿರ್ವಹಿಸುತ್ತಿದೆ.

ಇದನ್ನೂ ಓದಿ: TikTok: ಟಿಕ್​ಟಾಕ್​ ಆ್ಯಪ್ ತೆಗೆದುಹಾಕಿದ ಗೂಗಲ್ ಪ್ಲೇ ಸ್ಟೋರ್, ಆ್ಯಪ್ ಸ್ಟೋರ್

ಲಡಾಖ್ ಗಡಿಯಲ್ಲಿ ಚೀನಾ ಸಂಘರ್ಷದ ಬಳಿಕ ಈಗಾಗಲೇ ಲಕ್ಷಾಂತರ ಜನರು ತಮ್ಮ ಮೊಬೈಲ್​ನಲ್ಲಿರುವ ಚೀನಾ ಆ್ಯಪ್​ಗಳನ್ನು ಡಿಲೀಟ್ ಮಾಡಿದ್ದಾರೆ. ಈ 59 ಚೀನೀ ಆ್ಯಪ್​ಗಳು ಭಾರತೀಯ ಮೊಬೈಲ್ ಬಳಕೆದಾರರ ಡೇಟಾವನ್ನು ಅನಧಿಕೃತವಾಗಿ ಭಾರತದ ಹೊರಗಿರುವ ಸರ್ವರ್​ಗಳಿಗೆ ರವಾನಿಸುತ್ತಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಆ್ಯಪ್​ಗಳನ್ನು ಬ್ಯಾನ್ ಮಾಡುತ್ತಿರುವುದಾಗಿ ಸರ್ಕಾರ ತಿಳಿಸಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಿಕ್​ಟಾಕ್, ನಾವು ನಮ್ಮ ಬಳಕೆದಾರರ ಯಾವುದೇ ಡೇಟಾವನ್ನು ಚೀನಾ ಸರ್ಕಾರಕ್ಕೆ ನೀಡಿಲ್ಲ ಎಂದು ತಿಳಿಸಿದೆ.

ನಿಷೇಧಿಸಲಾಗಿರುವ ಚೀನಾ ಆ್ಯಪ್​ಗಳ ಪಟ್ಟಿ:

  1. TikTok

  2. Shareit3. Kwai

  3. UC Browser

  4. Baidu map

  5. Shein

  6. Clash of Kings

  7. DU battery saver

  8. Helo

  9. Likee

  10. YouCam makeup

  11. Mi Community

  12. CM Browers

  13. Virus Cleaner

  14. APUS Browser

  15. ROMWE

  16. Club Factory

  17. Newsdog

  18. Beutry Plus

  19. WeChat

  20. UC News

  21. QQ Mail

  22. Weibo

  23. Xender

  24. QQ Music

  25. QQ Newsfeed

  26. Bigo Live

  27. SelfieCity

  28. Mail Master

  29. Parallel Space

  30. Mi Video Call – Xiaomi

  31. WeSync

  32. ES File Explorer

  33. Viva Video – QU Video Inc

  34. Meitu

  35. Vigo Video

  36. New Video Status

  37. DU Recorder

  38. Vault- Hide

  39. Cache Cleaner DU App studio

  40. DU Cleaner

  41. DU Browser

  42. Hago Play With New Friends

  43. Cam Scanner

  44. Clean Master – Cheetah Mobile

  45. Wonder Camera

  46. Photo Wonder

  47. QQ Player

  48. We Meet

  49. Sweet Selfie

  50. Baidu Translate

  51. Vmate

  52. QQ International

  53. QQ Security Center

  54. QQ Launcher

  55. U Video

  56. V fly Status Video

  57. Mobile Legends

  58. DU Privacy

First published: July 1, 2020, 3:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading