ಚೀನಾದಲ್ಲಿ 5G ನೆಟ್​ವರ್ಕ್​ ಆರಂಭ: ಭಾರತದಲ್ಲಿ ಈ ಸೇವೆ ಸಿಗುವುದು ಯಾವಾಗ ಗೊತ್ತಾ?

ಇದಕ್ಕೂ ಮುನ್ನ ಚೀನಾ ದೇಶದ ಗುವಾಂಗ್ಡಾಂಗ್​ ಪ್ರಾಂತ್ಯದ ಬಾಯುನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5G ಬೇಸ್​ ಸ್ಟೇಷನ್​ ಅನ್ನು ಪ್ರಾರಂಭಿಸಿತ್ತು.

zahir | news18
Updated:March 31, 2019, 4:06 PM IST
ಚೀನಾದಲ್ಲಿ 5G ನೆಟ್​ವರ್ಕ್​ ಆರಂಭ: ಭಾರತದಲ್ಲಿ ಈ ಸೇವೆ ಸಿಗುವುದು ಯಾವಾಗ ಗೊತ್ತಾ?
ಸಾಂದರ್ಭಿಕ ಚಿತ್ರ
zahir | news18
Updated: March 31, 2019, 4:06 PM IST
ವಿಶ್ವದಲ್ಲೇ ಮೊದಲ ಬಾರಿ 5G ಜಾಲ ಹಾಗೂ ಬ್ರಾಡ್​ಬ್ಯಾಂಡ್ ಗಿಗಾಬೈಟ್ ನೆಟ್​ವರ್ಕ್​ ಹೊಂದಿರುವ ಜಿಲ್ಲೆ ಎಂಬ ಖ್ಯಾತಿ ಚೀನಾದ ಶಾಂಘೈ ಪಾಲಾಗಿದೆ. ಮೊಬೈಲ್ ನೆಟವರ್ಕ್​ ಹಾಗೂ ಇಂಟರ್​ನೆಟ್​ ಲೋಕದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎನ್ನಲಾಗಿರುವ 5G ಸೇವೆಯನ್ನು ಅಮೆರಿಕ ಸೇರಿದಂತೆ ಇತರೆಲ್ಲಾ ದೇಶಗಳನ್ನು ಹಿಂದಿಕ್ಕಿ ಚೀನಾ ಪ್ರಾರಂಭಿಸಿದೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

5G ಮೊಬೈಲ್ ಜಾಲದ ಪ್ರಾಯೋಗಿಕ ಬಳಕೆಯು ಸರಕಾರಿ ಒಡೆತನದ ಟೆಲಿಕಾಂ ಸಂಸ್ಥೆಯ ಬೆಂಬಲದೊಂದಿಗೆ ಶಾಂಘೈನ ಹೊಂಗ್‌ಕೌ ಎಂಬಲ್ಲಿ ಶನಿವಾರ ಅಧಿಕೃತವಾಗಿ ಆರಂಭಗೊಂಡಿದೆ. ಇಲ್ಲಿನ ಡೆಪ್ಯುಟಿ ಮೇಯರ್ ವೂ ಕಿಂಗ್ ಹುವಾಯ್ ಸ್ಮಾರ್ಟ್​ಫೋನಿಂದ 5G ವಿಡಿಯೋ ಕರೆ ಮಾಡುವ ಮೂಲಕ ಈ ಸೇವೆಗೆ ಅಧಿಕೃತ ಚಾಲನೆ ನೀಡಿದ್ದಾರೆ.

5G ಹೊಸ ತಲೆಮಾರಿನ ಮೊಬೈಲ್ ತಂತ್ರಜ್ಞಾನವಾಗಿದ್ದು, ಅದರ ಡೌನ್‌ಲೋಡ್ ಸ್ಪೀಡ್ 4G ನೆಟ್​ವರ್ಕ್​ಗಿಂತ 10ರಿಂದ 100 ಪಟ್ಟು ಹೆಚ್ಚಾಗಿರಲಿದೆ ಎಂದು ತಿಳಿಸಿದ್ದಾರೆ. ಚೀನಾದಲ್ಲಿ ಸ್ಯಾಮ್​ಸಂಗ್ ಹಾಗೂ ಹುಮಾಯ್ ಕಂಪೆನಿಗಳ 5G ಸ್ಮಾರ್ಟ್​ಫೋನ್​ಗಳು ಬಿಡುಗಡೆ ಮಾಡಿದ್ದು, ಈಗಾಗಲೇ ಹೊಸ ನೆಟ್​ವರ್ಕ್​ನತ್ತ ಯುವ ಸಮೂಹ ಕೂಡ ಆರ್ಕಷಿತರಾಗಿದ್ದಾರೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಚೀನಾ ದೇಶದ ಗುವಾಂಗ್ಡಾಂಗ್​ ಪ್ರಾಂತ್ಯದ ಬಾಯುನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5G ಬೇಸ್​ ಸ್ಟೇಷನ್​ ಅನ್ನು ಪ್ರಾರಂಭಿಸಿತ್ತು. ಈ ಮೂಲಕ ಚೀನಾದಲ್ಲಿ ಮೊದಲ 5G ಸೇವೆಯನ್ನು ನೀಡುತ್ತಿರುವ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿ ಬಾಯುನ್​ ಪಡೆದುಕೊಂಡಿತ್ತು. ಇದೀಗ ಶಾಂಘೈ ಜಿಲ್ಲೆ 5G ಜಾಲ ಹಾಗೂ ಬ್ರಾಡ್​ಬ್ಯಾಂಡ್ ಗಿಗಾಬೈಟ್ ನೆಟ್​ವರ್ಕ್ ಸೇವೆಯನ್ನು ಆರಂಭಿಸಿದೆ.

5G ವೇಗದಲ್ಲಿದೆ ಚೀನಾ!
ಚೀನಾದಲ್ಲಿ ಸುಮಾರು 1.8 ಶತಕೋಟಿ ಮೊಬೈಲ್​ ಪೋನ್ ಬಳಕೆದಾರರಿದ್ದಾರೆ. ಇಲ್ಲಿ ಈಗ ಪ್ರಾರಂಭಿಸಲಾಗಿರುವ 5G ನೆಟ್​ವರ್ಕ್​ನ ಹೈಸ್ಪೀಡ್​ 1 ಸೆಕೆಂಡಿನಲ್ಲಿ 20 ಗಿಗಾಬೈಟ್​ ಎಂದು ಹೇಳಲಾಗಿದೆ. ಪ್ರಸ್ತುತ ಚೀನಾದಲ್ಲಿ 43 ಮಿಲಿಯನ್ ಜನರು 5G ಸಂಪರ್ಕವನ್ನು ಬಳಸುತ್ತಿದ್ದು, 2025 ರ ವೇಳೆಗೆ ಚೀನಾ ಪ್ರಪಂಚದ ಅತಿದೊಡ್ಡ 5G ಮಾರುಕಟ್ಟೆಯಾಗಿ ರೂಪುಗೊಳ್ಳಲಿದೆ ಎಂದು ವರದಿಯಲ್ಲಿ ಹೇಳಿದೆ.
Loading...

ಭಾರತದಲ್ಲೂ 5G ನೆಟ್​ವರ್ಕ್:
ಸೆಪ್ಟೆಂಬರ್​ 2018 ರ ಹೊಸ ಟೆಲಿಕಾಂ ನೀತಿ 'ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ (ಎನ್​ಡಿಸಿಪಿ 2018)' ಅನ್ನು ಸರ್ಕಾರ ಅಂಗೀಕರಿಸಿದೆ. ಹೀಗಾಗಿ ಭಾರತದಲ್ಲಿ 5G ಸೇವೆಯನ್ನು ಪ್ರಾರಂಭಿಸಲು 3300-3600 Mhz ಬ್ಯಾಂಡ್​ನ 8,293 Mhz ಯುನಿಟ್​ ಹರಾಜು ನಡೆಯಲಿದೆ. ಈ ನೀತಿಯಡಿಯಲ್ಲಿ ಟೆಲಿಕಾಂ ವಲಯದಲ್ಲಿ ಸುಮಾರು 100 ಶತಕೋಟಿ ಹೂಡಿಕೆಯ ಬಗ್ಗೆ ಚರ್ಚೆ ನಡೆದಿದೆ. ಈ ಮೂಲಕ 2022 ರ ವೇಳೆ ದೇಶದ ಎಲ್ಲಾ ಗ್ರಾಮ ಪಂಚಾಯತ್​ಗಳಲ್ಲೂ 10Gbps ಇಂಟರ್​ನೆಟ್​ ಸೇವೆಯನ್ನು ಸರ್ಕಾರ ಒದಗಿಸಲಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ದೇಶ ಖಾಸಗಿ ಟೆಲಿಕಾಂ ಕಂಪೆನಿಗಳು 5G  ಸೇವೆಯನ್ನು ನೀಡಲು ಆಸಕ್ತಿ ಹೊಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮನ್​ಕಡ್ ರನೌಟ್: ಮೈದಾನದಲ್ಲೇ ಅಶ್ವಿನ್​ರನ್ನು ಟ್ರೋಲ್ ಮಾಡಿದ ಕೃನಾಲ್ ಪಾಂಡ್ಯ: ವಿಡಿಯೋ ಫುಲ್ ವೈರಲ್
First published:March 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626