ಐಫೋನ್ (IPhone) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಐಫೋನ್ ಅನ್ನು ಖರೀದಿಸ್ಬೇಕು ಅನ್ನೋ ಆಸೆ ಇರುತ್ತದೆ. ಆದರೆ ಇದರ ಬೆಲೆ ಸ್ವಲ್ಪ ಮಟ್ಟಿಗೆ ದುಬಾರಿಯಾಗಿರುವುದರಿಂದ ಬೇಕೆಂದಾಗ ಖರೀದಿಸಲು ಸಾಧ್ಯವಾಗುವುದಿಲ್ಲ. ಆ್ಯಪಲ್ ಕಂಪೆನಿಯಿಂದ (Apple Company) ಬಿಡುಗಡೆಯಾಗುವಂತಹ ಬಹುತೇಕ ಎಲ್ಲಾ ಡಿವೈಸ್ಗಳು ಉತ್ತಮ ಫೀಚರ್ಗಳನ್ನೇ ಹೊಂದಿರುತ್ತದೆ. ಅದರಲ್ಲಿ ಐಫೋನ್ಗಳಿಗಂತೂ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಈ ಐಫೋನ್ಗಳು ಮಾರುಕಟ್ಟೆಗೆ ಉತ್ತಮ ಫೀಚರ್ಸ್ (Features) ಮತ್ತು ವಿನ್ಯಾಸದ ಮೂಲಕ ಸ್ಮಾರ್ಟ್ಫೋನ್ ಬಳಕೆದಾರರನ್ನು ಆಕರ್ಷಿಸಿದೆ ಎಂದು ಹೇಳಬಹುದು. ಆದರೆ ಐಫೋನ್ಗಳು ಇನ್ನೂ ಹಲವಾರು ಫೀಚರ್ಸ್ಗಳನ್ನು ಹೊಂದಿದೆ. ಆದರೆ ಅದು ಹೆಚ್ಚಿನವರಿಗೆ ಗೊತ್ತಿಲ್ಲ.
ಐಫೋನ್ಗಳು ಇದುವರೆಗೆ ಹಲವಾರು ಫೀಚರ್ಸ್ಗಳನ್ನು ಹೊಂದಿಕೊಂಡು ಸಾಕಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಇವೆಲ್ಲದರ ನಡುವೆ ಇತ್ತೀಚೆಗೆ ಬಿಡುಗಡೆಯಾದ ಐಫೋನ್ಗಳು ಇನ್ನೂ ಹಲವಾರು ಫೀಚರ್ಸ್ಗಳನ್ನು ಹೊಂದಿದೆ. ಹಾಗಿದ್ರೆ ಆ ಫೀಚರ್ಸ್ಗಳು ಯಾವುದು ಎಂಬುದನ್ನು ತಿಳಿಬೇಕಾದ್ರೆ ಇಲ್ಲಿದೆ ನೋಡಿ.
ಏನೆಲ್ಲಾ ಫೀಚರ್ಸ್ಗಳಿವೆ?
ಒನ್ ಹ್ಯಾಂಡ್ ಡಿಸ್ಪ್ಲೇ
ಕೆಲವೊಂದು ಬಾರಿ ಬಳಕೆದಾರರಿಗೆ ಎರಡು ಕೈಯಲ್ಲಿ ಸ್ಮಾರ್ಟ್ಫೋನ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಈ ಇನ್ ಹ್ಯಾಂಡ್ ಡಿಸ್ಪ್ಲೇ ಫೀಚರ್ ಅಗತ್ಯಕ್ಕೆ ಬರುತ್ತದೆ. ಇದಕ್ಕಾಗಿ ಐಫೋನ್ ಬಳಕೆದಾರರು ಮೆನುವಿನಲ್ಲಿ ರೀಚೆಬಿಲಿಟಿ ಎಂಬ ಆಯ್ಕೆಯನ್ನು ಮಾಡ್ಬೇಕು. ಈ ಮೂಲಕ ಬಳಕೆದಾರರಿಗೆ ಬೇಕಾದ ಸ್ಕ್ರೀನ್ ಅನ್ನು ಡಿಸ್ಪ್ಲೇನ ಅರ್ಧಭಾಗಕ್ಕೆ ಫಿಕ್ಸ್ ಮಾಡಿಕೊಂಡು ಬಳಕೆ ಮಾಡಬಹುದು.
ಈ ಮೂಲಕ ಒಂದೇ ಕೈಯಲ್ಲಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಅಥವಾ ನೀವು ಸೆಟ್ಟಿಂಗ್ಸ್ ಅನ್ನು ಓಪನ್ ಮಾಡ್ಬೇಕು. ಅಲ್ಲಿ ಆಕ್ಸೆಸಿಬಿಲಿಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಅಲ್ಲಿ ಟಚ್ ಆಯ್ಕೆ ಕಾಣುತ್ತದೆ. ಅದನ್ನು ಟ್ಯಾಪ್ ಮಾಡಿದಾಗ ಸ್ಕ್ರೀನ್ ಸೈಜ್ ಅನ್ನು ಸೆಲೆಕ್ಟ್ ಮಾಡಲು ಕೇಳುತ್ತದೆ. ಈ ಮೂಲಕ ನಿಮಗೆ ಬೇಕಾದ ರೀತಿಯಲ್ಲಿ ಡಿಸ್ಪ್ಲೇಯನ್ನು ಸೆಟ್ ಮಾಡಿಕೊಳ್ಳಬಹುದು.
ವಸ್ತುಗಳನ್ನು ಅಳತೆ ಮಾಡಲು ಐಫೋನ್ ಸಹಾಯಕವಾಗುತ್ತದೆ
ಈಗಿನ ಐಫೋನ್ ಮೂಲಕ ನಿಮ್ಮ ಮುಂದೆ ಇರುವಂತಹ ಯಾವುದೇ ವಸ್ತುವನ್ನು ಕ್ಯಾಮೆರಾದಲ್ಲಿ ಅಳತೆ ಮಾಡಬಹುದು. ಇದಕ್ಕಾಗಿ ನೀವು ಅಳತೆ ಆ್ಯಪ್ ಅನ್ನು ಮೊದಲು ಆ್ಯಪಲ್ ಸ್ಟೋರ್ನಲ್ಲಿ ಡೌನ್ಲೋಡ್ ಮಾಡಿ. ನಂತರ ನಿಮ್ಮ ಮುಂದಿರುವ ವಸ್ತುವನ್ನು ಸ್ಕ್ಯಾನ್ ಮಾಡಲು ಕ್ಯಾಮೆರಾಗೆ ಅನುಮತಿಯನ್ನು ನೀಡಿ.
ಇದರ ಬಳಿಕ ಅಟೋಮ್ಯಾಟಿಕ್ ಆಗಿ ಐಫೋನ್- ಸ್ಕ್ಯಾನ್ ಮಾಡುವ ಮೂಲಕ ವಸ್ತುವಿನ ಅಳತೆಯನ್ನು ಕಂಡುಹಿಡಿಯುತ್ತದೆ ಮತ್ತು ಅದನ್ನು ಬಿಳಿ ಪೆಟ್ಟಿಗೆಯಲ್ಲಿ ಫ್ರೇಮ್ ಮಾಡುತ್ತದೆ. ನಂತರ ಅದರ ಅಳತೆಯನ್ನು ತಿಳಿಯಬಹುದಾಗಿದೆ.
ಆಕ್ಸೆಸಿಬಿಲಿಟಿ ಫೀಚರ್ಸ್
ಇದನ್ನು ದೃಷ್ಟಿ, ಶ್ರವಣ ಮತ್ತು ಕಲಿಕೆಯ ಅಗತ್ಯಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಈ ಫೀಚರ್ಸ್ ಅನ್ನು ಯಾವುದೇ ಸಮಯದಲ್ಲಾದರೂ ಓಪನ್ ಮಾಡಬಹುದು. ಇದರಲ್ಲಿ ಪ್ರಮುಖವಾಗಿ ಟೆಕ್ಸ್ಟ್ನ ಗಾತ್ರವನ್ನು ಸರಿಮಾಡಬಹುದಾಗಿದೆ. ಇದಕ್ಕಾಗಿ ನೀವು ಮೊದಲು ಸೆಟ್ಟಿಂಗ್ಸ್ ಅನ್ನು ಓಪನ್ ಮಾಡಬೇಕು. ನಂತರ ಅಕ್ಸೆಸಿಬಿಲಿಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಅಲ್ಲಿ ಡಿಸ್ಪ್ಲೇ ಮತ್ತು ಟೆಕ್ಸ್ಟ್ ಸೈಜ್ನಲ್ಲಿ ಬೇಕಾದ ಗಾತ್ರಕ್ಕೆ ನೀವು ಅದನ್ನು ಸೆಟ್ ಮಾಡಿಕೊಳ್ಳಬಹುದು. ವಿಶೇಷವಾಗಿ ಇದರಲ್ಲಿ ಬಣ್ಣವನ್ನೂ ಸಹ ಬದಲಾಯಿಸಬಹುದಾಗಿದೆ. ಇದರೊಂದಿಗೆ ವಾಯ್ಸ್ ಸ್ಪೀಕರ್ ಸಹ ಆಯ್ಕೆ ಇದೆ ಈ ಮೂಲಕ ಡಿಸ್ಪ್ಲೇನಲ್ಲಿರುವ ಟೆಕ್ಸ್ಟ್ ಅನ್ನು ವಾಯ್ಸ್ ಮೂಲಕ ಕೇಳಬಹುದಾಗಿದೆ.
ಇದನ್ನೂ ಓದಿ: ಹೊಸ ಹೆಡ್ಫೋನ್ ತಗೋಬೇಕು ಅಂದ್ಕೊಂಡಿದ್ದೀರಾ? ಈ 5 ಪಾಯಿಂಟ್ಸ್ ಬಗ್ಗೆ ಮೊದಲು ತಿಳಿದುಕೊಳ್ಳಿ!
ಸ್ಕ್ರೀನ್ಶಾಟ್ಗಾಗಿ ಬ್ಯಾಕ್ ಟ್ಯಾಪ್ ಅನ್ನು ಸೆಲೆಕ್ಟ್ ಮಾಡಿ
ಐಒಎಸ್ 14 ಅಥವಾ ಇದರ ಮುಂದಿನ ಆವೃತ್ತಿಯಲ್ಲಿ ಬ್ಯಾಕ್ ಟ್ಯಾಪ್ ಫೀಚರ್ಸ್ ಲಭ್ಯ ಇದೆ. ಇದರ ಮೂಲಕ ಸುಲಭವಾಗಿ ನಿಮ್ಮ ಮೊಬೈಲ್ನಲ್ಲಿ ಸ್ಕ್ರೀನ್ ಶಾಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್ ಅನ್ನು ಓಪನ್ ಮಾಡ್ಬೇಕು. ನಂತರ ಅಲ್ಲಿ ಆಕ್ಸೆಸಿಬಿಲಿಟಿ ಆಯ್ಕೆಯನ್ನು ಟ್ಯಾಪ್ ಮಾಡಿದರೆ ಟಚ್ ಆ್ಯಂಡ್ ಸೆಲೆಕ್ಟ್ ಬ್ಯಾಕ್ ಟ್ಯಾಪ್ ಎಂಬ ಆಯ್ಕೆ ಮೇಲೆ ಟ್ಯಾಪ್ ಮಾಡಿದರೆ ಈ ಸೌಲಭ್ಯ ನಿಮಗೆ ಲಭ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ