ಮೊಬೈಲ್​ ಬಳಕೆದಾರರೇ ಎಚ್ಚರ : ಸ್ಮಾರ್ಟ್​ಫೋನ್​ಗಳಿಂದ ಈ ಸಮಸ್ಯೆಗಳಿಗೆ ತುತ್ತಾಗುವಿರಿ

ಮೊಬೈಲ್​ ಯುಗದಲ್ಲಿ ನಾವಿದ್ದೇವೆ. ಹೀಗಾಗಿಯೇ ಸ್ಮಾರ್ಟ್​ಫೋನ್​ ಎಲ್ಲರ ಕೈಯಲ್ಲಿ ಇಂದು ಕಾಣಬಹುದಾಗಿದೆ. ಆಧುನಿಕ ಜೀವನಕ್ಕೆ ಸರಿಹೊಂದುವಂತೆ ಕುಳಿತಲ್ಲಿಂದಲೇ ಎಲ್ಲಾ ಕಾರ್ಯವನ್ನು ಒಂದು ಟಚ್​ ಮೂಲಕ  ಮಾಡಬಹುದು. ಈ ಕಾರಣಕ್ಕೆ ಮೊಬೈಲ್​ ಬಳಕೆದಾರರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಮೊಬೈಲ್​ಗಳಿಂದ ಸೂಸುವ ವಿಕಿರಣಗಳು ವ್ಯಕ್ತಿಯ  ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ. ಅತಿಯಾದ ಸ್ಮಾರ್ಟ್​ಫೋನ್ ​ಬಳಕೆಯಿಂದ  ಭಯಾನಕ ರೋಗಗಳು ಕಾಣಿಸಿಕೊಳ್ಳುತ್ತಿದೆ ಎನ್ನುತ್ತೆ ಕೆಲ ಅಧ್ಯಾಯನಗಳು.

news18
Updated:March 14, 2019, 4:52 PM IST
ಮೊಬೈಲ್​ ಬಳಕೆದಾರರೇ ಎಚ್ಚರ : ಸ್ಮಾರ್ಟ್​ಫೋನ್​ಗಳಿಂದ ಈ ಸಮಸ್ಯೆಗಳಿಗೆ ತುತ್ತಾಗುವಿರಿ
ಮೊಬೈಲ್​ ದುಷ್ಪರಿಣಾಮ
news18
Updated: March 14, 2019, 4:52 PM IST
ದಿನನಿತ್ಯದ ಜೀವನದಲ್ಲಿ ಮೊಬೈಲ್​ ಫೋನ್​ ಇಂದು ಅನಿವಾರ್ಯವಾಗಿದೆ. ದೂರ ಸ್ನೇಹಿತರಿಗೆ, ಬಂಧುಗಳಿಗೆ ತುರ್ತು ಸುದ್ದಿ ಮುಟ್ಟಿಸಲು, ಸಂದೇಶ ತಲುಪಿಸಲು, ವ್ಯವಹಾರದ ಮಾತುಕತೆಗೆ ಮೊಬೈಲ್​ ಅವಶ್ಯಕ. ಆದರೆ ಅತಿಯಾದರೆ ಅಮೃತವು ವಿಷವೆನ್ನುವಂತೆ ಮೊಬೈಲ್​ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ.

ಮೊಬೈಲ್​ ಯುಗದಲ್ಲಿ ನಾವಿದ್ದೇವೆ. ಹೀಗಾಗಿಯೇ ಸ್ಮಾರ್ಟ್​ಫೋನ್​ ಎಲ್ಲರ ಕೈಯಲ್ಲಿ ಇಂದು ಕಾಣಬಹುದಾಗಿದೆ. ಆಧುನಿಕ ಜೀವನಕ್ಕೆ ಸರಿಹೊಂದುವಂತೆ ಕುಳಿತಲ್ಲಿಂದಲೇ ಎಲ್ಲಾ ಕಾರ್ಯವನ್ನು ಒಂದು ಟಚ್​ ಮೂಲಕ  ಮಾಡಬಹುದು. ಈ ಕಾರಣಕ್ಕೆ ಮೊಬೈಲ್​ ಬಳಕೆದಾರರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಮೊಬೈಲ್​ಗಳಿಂದ ಸೂಸುವ ವಿಕಿರಣಗಳು ವ್ಯಕ್ತಿಯ  ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ. ಅತಿಯಾದ ಸ್ಮಾರ್ಟ್​ಫೋನ್ ​ಬಳಕೆಯಿಂದ  ಭಯಾನಕ ರೋಗಗಳು ಕಾಣಿಸಿಕೊಳ್ಳುತ್ತಿದೆ ಎನ್ನುತ್ತೆ ಕೆಲ ಅಧ್ಯಾಯನಗಳು.

ಸ್ಮಾರ್ಟ್​ ಫೋನ್​ನಿಂದಾಗುವ ದುಷ್ಪರಿಣಾಮ

ಬೆನ್ನು ಹುರಿಯ ಸಮಸ್ಯೆ

ಸ್ಮಾರ್ಟ್​ ಫೋನ್​ ಬಳಕೆದಾರರಿಗೆ ಬೆನ್ನು ಹುರಿಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. 2015ರ ಮೊಬೈಲ್​ ಸಮೀಕ್ಷೆಯಂತೆ ಶೇ.45 ರಷ್ಷು ಮೊಬೈಲ್​ ಬಳಸುವ 16 ರಿಂದ 24 ವರ್ಷದ ಯುವಕರು ಬೆನ್ನು ಹುರಿಯ ನೋವಿನಿಂದ ಬಳಲುತ್ತಿದ್ದಾರೆ. ಇನ್ನೂ ಪ್ರತಿ ದಿನವು ಶೇ.25 ರಷ್ಟು ಬಳಕೆದಾರರಲ್ಲಿ ಬೆನ್ನು ಹುರಿ ನೋವು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ ಎನ್ನಲಾಗಿದೆ.

ನರದ ಸಮಸ್ಯೆ
Loading...

ಯುವಕರು ಹೆಚ್ಚಾಗಿ ಸ್ಮಾರ್ಟ್​ ಫೋನ್​ ಬಳಸುತ್ತಾರೆ.  ಹಾಡು, ಗೇಮ್ಸ್​, ಸಾಮಾಜಿಕ ಜಾಲತಾಣವನ್ನು ವೀಕ್ಷಿಸುವಲ್ಲಿ ಹೆಚ್ಚಾಗಿ ಸ್ಮಾರ್ಟ್​ಫೋನ್​ನಲ್ಲಿ ಸಮಯ ಕಳೆಯುತ್ತಾರೆ. ಕುಳಿತಲ್ಲೇ ಕುಳಿತು ಮೊಬೈಲ್​ ಬಳಕೆಯಲ್ಲಿ ತಲ್ಲೀನರಾಗುವ ಯುವಕರಲ್ಲಿ ನರದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.

ಇದನ್ನೂ ಓದಿ: ದೇವೇಗೌಡ VS ಸದಾನಂದ ಗೌಡ: ಬೆಂಗಳೂರು ಉತ್ತರದಲ್ಲಿ ಮೊಳಗಲಿದೆ ಒಕ್ಕಲಿಗ ನಾಯಕರಿಬ್ಬರ ರಣಕಹಳೆ

ಹಾಗೆಯೇ, ಬೆನ್ನು ಹುರಿಯ ಮೂಲಕ ಹಾದು ಹೋಗುವ ನರಗಳಲ್ಲಿ ಊತಗಳು ಕಂಡುಬರುತ್ತದೆ. ಅತಿಯಾದ ಮೊಬೈಲ್​ ಬಳಕೆಯಿಂದ ಮೈಗ್ರೈನ್​ ಸಮಸ್ಯೆಯು ಕಾಣಿಸಿಕೊಳ್ಳಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ.

ಆತಂಕ ಮತ್ತು ಖಿನ್ನತೆ

ಯೂನಿವರ್ಸಿಟಿಯೊಂದರ ಸಮೀಕ್ಷೆಯ ಪ್ರಕಾರ ಅತಿಯಾದ ಮೊಬೈಲ್​ ಬಳಕೆಯಿಂದ ಬಳಕೆದಾರರಲ್ಲಿ ಖಿನ್ನತೆ ಮತ್ತು ಆತಂಕ ಹೆಚ್ಚಾಗುತ್ತದೆ. ಹೆಚ್ಚಾಗಿ ಗೇಮ್ಸ್​​, ವೀಡಿಯೋವನ್ನು ವೀಕ್ಷಕರಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಮೊಬೈಲ್​ ಬಳಕೆಯಿಂದ ಒಂದು ದಿನದಲ್ಲಿ  ಪ್ರತಿ 68 ನಿಮಿಷಕ್ಕೆ ಖಿನ್ನತೆ ಮತ್ತು ಮಾನಸಿಕ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಒತ್ತಡ

ಮೊಬೈಲ್​ನಲ್ಲಿ ಬರುವ ಫೋನ್​ ಕಾಲ್​, ಮೆಸೇಜ್​, ಸೋಷಿಯಲ್​ ಮೀಡಿಯಾ ನೋಟಿಫಿಕೇಶನ್​ ಮತ್ತು ಇಮೇಲ್​ಗಳಿಂದ ಬಳಕೆದಾರರ ಮಾನಸಿಕ ಒತ್ತಡಗಳು ಹೆಚ್ಚಾಗುತ್ತದೆ ಎನ್ನಲಾಗಿದೆ. ಈ ಕುರಿತಾಗಿ ಯುನಿವರ್ಸಿಟಿಯೊಂದು ಚಿಲ್ಲರೆ ಕಾರ್ಮಿಕರು ಮತ್ತು ಸಾರ್ವಜನಿಕ ವಲಯ ನೌಕರರನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಸಂಶೋಧನೆಯಿಂದ ಮೊಬೈಲ್​ನಿಂದ ವ್ಯಕ್ತಿಯಲ್ಲಿ ಮಾನಸಿಕ ಬದಲಾವಣೆ ಕಂಡು ಬರುತ್ತಿರುವುದು ಪತ್ತೆಯಾಗಿದೆ.

ನಿದ್ರಾಹೀನತೆ

ಶೇ.68 ರಷ್ಟು ಸ್ಮಾರ್ಟ್​ಫೋನ್​ ಬಳಕೆಯ 18 ರಿಂದ 29 ವರ್ಷದ ಜನರಲ್ಲಿ ನಿದ್ರಾಹೀನತೆಯ ಸಮಸ್ಯೆಗೆ ಕಾರಣವಾಗುತ್ತಿದೆ. ಯುವಕರಲ್ಲಿ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತಿದ್ದು, ರಾತ್ರಿ ವೇಳೆಯಲ್ಲಿ ಅತಿಯಾದ ಮೊಬೈಲ್​ ಬಳಕೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.

ಬ್ಯಾಕ್ಟೀರಿಯಾ

ಹೆಚ್ಚಾಗಿ ಮೊಬೈಲ್​ ಚಟವನ್ನು ಹೊಂದಿರುವ ಯುವಕರು ಟಾಯ್ಲೆಟ್​ಗೆ ತೆರಳುವಾಗ ಮೊಬೈಲ್​ ಕೊಂಡೊಯ್ಯತ್ತಾರೆ. ಇದರಿಂದ ಟಾಯ್ಲೆಟ್​ನಲ್ಲಿ ಅವಿತಿರುವ ಬ್ಯಾಕ್ಟೀರಿಯಾ ಮೊಬೈಲ್​ ಮತ್ತು ವ್ಯಕ್ತಿಯ ಮೇಲೆ ವೇಗವಾದ ಪರಿಣಾಮ ಬೀರುತ್ತದೆ.

ಕಣ್ಣಿನ ತೊಂದರೆ.

ಸ್ಮಾರ್ಟ್​ಫೋನ್​ ಬಳಕೆದಾರರು ಅತಿಯಾದ ಮೊಬೈಲ್​ ಬಳಕೆಯಿಂದ ಕಣ್ಣಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊಬೈಲ್​ ಡಿಸ್​ಪ್ಲೇ ಮೂಲಕ ಮೂಡುವ ಬೆಳಕು ಬಳಕೆದಾರರ ಕಣ್ಣಿನ ದೃಷ್ಠಿಗೆ ಹಾನಿಯುಂಟು ಮಾಡುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಇದನ್ನೂ ಓದಿ: ‘ಗಿರ್​​ಗಿಟ್ಲೆ’ ಚಿತ್ರಕ್ಕಾಗಿ ಮಾಡರ್ನ್ ಅವತಾರ ತಾಳಿದ ಮಂಗಳೂರು ಬೆಡಗಿ ಅದ್ವಿತಿ ಶೆಟ್ಟಿ

ಮೊಬೈಲ್​ನಿಂದ ಮೂಡಿಬರುವ ಬೆಳಕು ವ್ಯಕ್ತಿಯ ಕಣ್ಣಿನ ರೆಟಿನಾದ ಮೇಲೆ ನೇರ ಪರಿಣಾಮ ಬೀರುತ್ತದೆ. ಸ್ಮಾರ್ಟ್​ ಫೋನ್​ನಿಂದ ಮೂಡುವ ಬ್ಲೂ ಲೈಟ್​​ ಮೊಬೈಲ್​ ಬಳಕೆದಾರರ ಕಣ್ಣಿಗೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ.

ಕಿವುಡುತನ

ಮೊಬೈಲ್​ ಬಳಕೆಯಿಂದ ‘ನ್ಯಾಷನಲ್​ ಇನ್ಸ್ಟಿಟ್ಯೂಟ್​​ ಆನ್​ ಡೀಫ್​ನೆಸ್‘​ ನಡೆಸಿದ ಸಮೀಕ್ಷೆಯ ಪ್ರಕಾರ 26 ಮಿಲಿಯನ್​  ಅಮೇರಿಕನ್ನರು ಕಿವುಡುತನದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೆಡ್​ಫೋನ್​ನಲ್ಲಿ ಬರುವ ಶಬ್ದ​ ಕಿವುಡುತನಕ್ಕೆ ಮೂಲ ಕಾರಣವಾಗಿದೆ. ಅಂತೆಯೇ ವಿಪರೀತ ಮೊಬೈಲ್​ ಕರೆಗಳನ್ನು ಆಲಿಸಿದರೂ ಕೂಡ ಕಿವುಡು ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದೆ.

ರೇಡಿಯೇಷನ್​

ಸ್ಮಾರ್ಟ್​ ಫೋನ್​ನಲ್ಲಿರುವ ರೇಡಿಯೇಷನ್​ ಮನುಷ್ಯನ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಮೊಬೈಲ್​ನಿಂದ ಹೊರಸೂಸುವ ತರಂಗಗಳು ಅದರಲ್ಲೂ ಫೋನಿನಲ್ಲಿ ಮಾತನಾಡುವ ವೇಳೆ ಹೊರ ಸೂಸುವ ರೇಡಿಯೇಷನ್​ ಬಳಕೆದಾರನ ಮೆದುಳಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಮೆದುಳು ಕ್ಯಾನ್ಸರ್​ಗೂ ಇದುವೇ ಕಾರಣವಾಗುತ್ತದೆ ಎಂದು ಕೆಲ ವರದಿಗಳು ಹೇಳಿದೆ.

First published:March 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626