ಹೊಸ ಫೋನ್ ಖರೀದಿಸುತ್ತಿದ್ದೀರಾ? ಬಹುಶ: ನಿಮ್ಮ ದೃಷ್ಟಿ ಮಾರುಕಟ್ಟೆಗೆ ಬಂದಿರುವ ಹೊಸ ಆ್ಯಂಡ್ರಾಯ್ಡ್ ಫೋನ್‍ಗಳ ಮೇಲಿದೆ. ಅದು ಸ್ಯಾಮ್‍ಸಂಗ್ ಗ್ಯಾಲಕ್ಸಿ ಎಸ್21 ಅಥವಾ ಶಿಯೋಮಿ ಮಿ ಅಲ್ಟ್ರಾ ಅಥವಾ ನ್ಯೂ ಒನ್‍ಪ್ಲಸ್ 9 ಫೋನ್ ಆಗಿರಬಹುದು. ಅಥವಾ ಬೇರೆ ಇನ್ನಾವುದೇ ಫೋನ್ ಕೂಡ ಆಗಿರಬಹುದು .ಏಕೆಂದರೆ ಆ್ಯಂಡ್ರಾಯ್ಡ್ ಫೋನ್‍ಗಳ ಪ್ರಪಂಚ ವಿಶಾಲವಾಗಿದೆ. ನೀವು ಹೊಸ ಫೋನನ್ನು ಖರೀದಿಸುವುದಾದರೆ, ನಿಮ್ಮ ಹಳೆಯ ಫೋನನ್ನು ರೀಸೆಟ್ ಮಾಡುವ ಸಮಯ ಬಂದಿದೆ ಎಂದು ಅರ್ಥ. ನೀವು ಬೇರೆ ಇನ್ಯಾರಿಗಾದರೂ ಫೋನ್ ಮಾರಾಟ ಮಾಡುವುದಾದರೆ, ಅವರು ನಿಮ್ಮ ಫೋನ್‍ನಲ್ಲಿರುವ ವೈಯುಕ್ತಿಕ ಮಾಹಿತಿ, ಸಂದೇಶಗಳು, ವೆಬ್ ಬ್ರೌಸಿಂಗ್ ಹಿಸ್ಟರಿ ಮತ್ತು ಫೋಟೋಗಳನ್ನು ನೋಡದಂತೆ ಮಾಡಬೇಕಾದರೆ ಫೋನನ್ನು ಸಂಪೂರ್ಣವಾಗಿ ರೀಸೆಟ್ ಮಾಡುವುದು ಅಗತ್ಯ.
ಆದರೆ ಕೇವಲ ಫ್ಯಾಕ್ಟರಿ ರೀಸೆಟ್ ಮಾಡಿದರೆ ಸಾಕಾಗುವುದಿಲ್ಲ. ಜನರು ಸಾಮಾನ್ಯವಾಗಿ ಫೋನ್ ರೀಸೆಟ್ ಮಾಡುವ ಮೊದಲು, ತಮ್ಮ ಆ್ಯಂಡ್ರಾಯ್ಡ್ ಫೋನ್‍ಗಳಲ್ಲಿ ಇರುವ ಆನ್‍ಲೈನ್ ಅಕೌಂಟ್‍ಗಳಿಂದ ಸೈನ್‍ಔಟ್ ಆಗಲು ಮರೆತಿರುತ್ತಾರೆ. ಅದರಿಂದ ನಂತರ, ಟೂ ಫ್ಯಾಕ್ಟರ್ ಅಥಂಟಿಕೇಶನ್ ಅಥವಾ ಸಂದೇಶಗಳು ತಪ್ಪಿ ಹೋಗುವುದು ಮುಂತಾದ ಕಿರಿಕಿರಿಗಳು ಉಂಟಾಗಬಹುದು.
ಅದಕ್ಕಾಗಿ ಮೊದಲು ನೀವು ಸೆಟ್ಟಿಂಗ್ಸ್‌ಗೆ ಹೋಗಿ> ಅಕೌಂಟ್ಸ್‌ಗೆ ಹೋಗಿ, ನೀವು ಸೈನ್‍ಇನ್ ಮಾಡಿದ್ದ ಪ್ರತಿಯೊಂದು ಅಕೌಂಟನ್ನು ಕೈಯಾರೆ ತೆಗೆದು ಹಾಕಿ. ವಾಟ್ಸ್ಯಾಪ್, ಮೈಕ್ರೋಸಾಫ್ಟ್ ಆಫೀಸ್, ಮೈಕ್ರೋಸಾಫ್ಟ್ ಎಕ್ಸ್‌ಚೇಂಜ್ ಅಕೌಂಟ್ಸ್, ಟ್ರೂ ಕಾಲರ್, ಟ್ವಿಟ್ಟರ್ ಮತ್ತು ಇನ್ನೂ ಹಲವಾರು ಖಾತೆಗಳನ್ನು ನೀವು ತೆಗೆದು ಹಾಕಬೇಕಾಗುತ್ತದೆ. ನಿಮ್ಮದು ಶಿಯೋಮಿ ಅಥವಾ ಒನ್‍ಪ್ಲಸ್ ಫೋನ್ ಆಗಿದ್ದರೆ, ಉದಾಹರಣೆಗೆ ಆ ಎಲ್ಲಾ ಖಾತೆಗಳ ಪಟ್ಟಿ ಅವುಗಳಲ್ಲಿ ಇರುತ್ತದೆ.
ನಂತರ ಎರಡನೇ ಹಂತದ ಸರದಿ. ಅದೇನೆಂದರೆ ನೀವು ಫೋನ್‍ನಲ್ಲಿ ಸೈನ್‍ಇನ್ ಆಗಿರುವ ಪ್ರಾಥಮಿಕ ಗೂಗಲ್ ಖಾತೆಯನ್ನು ತೆಗೆದು ಹಾಕುವುದು. ಅದು ಕೂಡ ಸೆಟ್ಟಿಂಗ್ಸ್ > ಅಕೌಂಟ್ಸ್‌ನಲ್ಲಿ ಲಭ್ಯ. ಈ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ನಿಮ್ಮ ಫೋನ್‍ನಲ್ಲಿ ಹಾಕಿಕೊಂಡಿದ್ದ ಆ ಎಲ್ಲಾ ಖಾತೆಗಳು ಇನ್ನು ಮುಂದೆ ನಿಮ್ಮ ಫೋನ್‍ನಲ್ಲಿ ಇರುವುದಿಲ್ಲ, ಹಾಗಾಗಿ ಯಾವುದೇ ಹೊಸ ಸಿಂಕ್‍ನ ಸಾಧ್ಯತೆ ಇರುವುದಿಲ್ಲ.
ಇದೀಗ ಆ್ಯಂಡ್ರಾಯ್ಡ್ ಫೋನನ್ನು ರೀಸೆಟ್ ಮಾಡುವ ಸಮಯ. ಸೆಟ್ಟಿಂಗ್ಸ್ ಆ್ಯಪನ್ನು ತೆರೆಯಿರಿ ಮತ್ತು ಈಗಿನ ಎಲ್ಲಾ ಆ್ಯಂಡ್ರಾಯ್ಡ್ ಫೋನ್‍ಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸರ್ಚ್ ಬಾರ್ ಅಥವಾ ಐಕಾನ್ ಮೇಲೆ ಟ್ಯಾಪ್ ಮಾಡಿ. ‘ರೀಸೆಟ್’ನ್ನು ಹುಡುಕಿರಿ ಮತ್ತು ಫಲಿತಾಂಶಗಳಲ್ಲಿ ಫ್ಯಾಕ್ಟರಿ ಡಾಟಾ ರೀಸೆಟ್ ಆಯ್ಕೆಯನ್ನು ಒತ್ತಿರಿ. ಅನಂತರ ತೆರೆಯುವ ಪರದೆಯಲ್ಲಿ ರೀಸೆಟ್ ಆಯ್ಕೆ ಮಾಡಿ. ಫೋನ್‍ನ ಸಂಪೂರ್ಣ ಕ್ಲೀನಿಂಗ್ ಪ್ರಕ್ರಿಯೆ ನಡೆದು , ರೀಸ್ಟಾರ್ಟ್ ಆಗಲು ಬಿಡಿ. ರೀಸ್ಟಾರ್ಟ್ ಯಶಸ್ವಿಯಾದರೆ, ಆ್ಯಂಡ್ರಾಯ್ಡ್ ಫೋನ್ ಪರದೆಯಲ್ಲಿ ವೆಲ್‍ಕಮ್ ಸ್ಕ್ರೀನ್ ಕಾಣಸಿಗುತ್ತದೆ. ಇಲ್ಲಿ ಹೊಸ ಬಳಕೆದಾರರು ಸ್ವಂತ ಖಾತೆಗಳಿಗೆ ಸೈನ್‍ಇನ್ ಆಗಲು ಸಾಧ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ