Whatsapp Update: ವಾಟ್ಸಪ್​ನಲ್ಲೂ ಬರ್ತಿದೆ ನೋಡಿ ಹೊಸ ಅವತಾರ್​! ಏನಿದು ಫೀಚರ್?​

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೆಟಾ ಮಾಲೀಕತ್ವದಲ್ಲಿರುವಂತಹ ವಾಟ್ಸಪ್​ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದು ತನ್ನ ಸ್ಪೆಷಲ್​ ಫೀಚರ್ಸ್​ಗಳನ್ನು ಬಿಡುಗಡೆಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ಹಿಂದೆ ಸ್ನ್ಯಾಪ್​ಚಾಟ್​ನಲ್ಲಿದ್ದಂತಹ ಅವತಾರ್​ ಸ್ಟಿಕ್ಕರ್​ ಫೀಚರ್​​ ಇದೀಗ ವಾಟ್ಸಪ್​ಗೆ ಕಾಲಿಡುತ್ತಿದೆ.

ಮುಂದೆ ಓದಿ ...
  • Share this:

    ಮೆಟಾ (Meta) ಮಾಲೀಕತ್ವದ ವಾಟ್ಸಪ್‌ (Whatsapp), ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ತನ್ನ ಬಳಕೆದಾರರ ಅನುಕೂಲಕ್ಕಾಗಿ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಈ ಆ್ಯಪ್​ ಪರಿಚಯಿಸಿದೆ. ಅಲ್ಲದೆ ಬಳಕೆದಾರರ ಮಾಹಿತಿ ಸುರಕ್ಷತೆಗೂ ಹಲವು ಆಯ್ಕೆಗಳನ್ನು ಅಳವಡಿಸಿಕೊಂಡಿದೆ. ಸದ್ಯ ವಾಟ್ಸಪ್‌ ಪ್ಲಾಟ್‌ಫಾರ್ಮ್ ಮತ್ತಷ್ಟು ಕುತೂಹಲಕಾರಿ ಫೀಚರ್ಸ್‌ಗಳು ಸೇರಿಸುವ ತಯಾರಿಯಲ್ಲಿದೆ. ವಾಟ್ಸಪ್​ ಈ ವರ್ಷ ಹಲವಾರು ಫೀಚರ್ಸ್​ ಅನ್ನು ಬಿಡುಗಡೆ ಮಾಡಿದ್ದು ಇದೀಗ ಅವತಾರ್​ನಂತೆ ಸ್ಟಿಕ್ಕರ್ಸ್​ (Avatar Stickers) ರಚಿಸುವಂತಹ ಫೀಚರ್ಸ್ ಬಿಡುಗಡೆ ಮಾಡುವುದಾಗಿ ನಿರ್ಧರಿಸಿದೆ. ಈ ಹಿಂದೆ ಇದು ಸ್ನ್ಯಾಪ್​ಚಾಟ್ (Snapchat)​ ಮತ್ತು ಇನ್​​​ಸ್ಟಾಗ್ರಾಂನಲ್ಲಿತ್ತು (Instagram) ಇದೀಗ ವಾಟ್ಸಪ್​ನಲ್ಲೂ ಬರುತ್ತಿದೆ.


    ಮೆಟಾ ಮಾಲೀಕತ್ವದಲ್ಲಿರುವಂತಹ ವಾಟ್ಸಪ್​ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದು ತನ್ನ ಸ್ಪೆಷಲ್​ ಫೀಚರ್ಸ್​ಗಳನ್ನು ಬಿಡುಗಡೆಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ಹಿಂದೆ ಸ್ನ್ಯಾಪ್​ಚಾಟ್​ನಲ್ಲಿದ್ದಂತಹ ಅವತಾರ್​ ಸ್ಟಿಕ್ಕರ್​ ಫೀಚರ್​​ ಇದೀಗ ವಾಟ್ಸಪ್​ಗೆ ಕಾಲಿಡುತ್ತಿದೆ.


    ವಾಟ್ಸಪ್‌ ತರುತ್ತಿದೆ ಹೊಸ ಫೀಚರ್‌


    ಇತ್ತೀಚಿನ ದಿನಗಳಲ್ಲಿ ವಾಟ್ಸಪ್​ ತನ್ನ ಪ್ಲಾಟ್‌ಫಾರ್ಮ್‌ಗೆ ಅನೇಕ ಪ್ರಮುಖ ಹೊಸ ಫೀಚರ್‌ಗಳನ್ನು ಹೊರತಂದಿದೆ. ನವೆಂಬರ್ ತಿಂಗಳ ಆರಂಭದಲ್ಲಿ, ಗ್ರೂಪ್‌ ಚಾಟ್‌ಗಳನ್ನು ಸೂಪರ್‌ಚಾರ್ಜ್ ಮಾಡಲು ಈ ಅಪ್ಲಿಕೇಶನ್‌ ವಾಟ್ಸ್‌ಅಪ್‌ ಕಮ್ಯೂನಿಟಿ ಫೀಚರ್‌ ಅನ್ನು ತಂದಿತು. ಗ್ರೂಪ್‌ ವೀಡಿಯೊ ಕರೆ ಮಿತಿಯನ್ನು 32 ವ್ಯಕ್ತಿಗಳವರೆಗೂ ವಿಸ್ತರಿಸಿತು.


    ಇದನ್ನೂ ಓದಿ: ಬೆಡ್‌ ರೂಂನಲ್ಲೇ ಇರುತ್ತಾ ಸ್ಮಾರ್ಟ್‌ ಫೋನ್? ಹಾಗಿದ್ರೆ, ವಿವಾಹಿತರೇ ಹುಷಾರ್ ಹುಷಾರ್!


    ಇದೇ ಮಾದರಿಯಲ್ಲಿ ಸದ್ಯ ವಾಟ್ಸಪ್‌ ಗ್ರೂಪ್ ವಿಡಿಯೋ ಕಾಲಿಂಗ್ ಸೇವೆಯನ್ನು ನೀಡಲು ಮುಂದಾಗಿದೆ. ಇದರಲ್ಲಿ ನೀವು ಒಂದೇ ಸಮಯದಲ್ಲಿ ನಿಮ್ಮ ಹಲವು ಸ್ನೇಹಿತರೊಂದಿಗೆ ಆಡಿಯೋ ಕಾನ್ಫರೆನ್ಸ್ ಕಾಲ್ ಮಾದರಿಯಲ್ಲಿ ಗ್ರೂಪ್ ವಿಡಿಯೋ ಕಾಲ್ ಮಾಡಬಹುದಾಗಿದೆ. ಈಗಾಗಲೇ ವಾಟ್ಸಪ್‌ ಈ ಸೇವೆಯನ್ನು ಲೈವ್ ಮಾಡಿದೆ.


    ಅವತಾರ ಸ್ಟಿಕ್ಕರ್‌ಗಳ ರೋಲ್‌ಔಟ್ - ಬಳಕೆಯ ಹೊಸ ಫೀಚರ್‌


    ಈಗ, ಮೆಟಾ-ಮಾಲೀಕತ್ವದ ವಾಟ್ಸಪ್‌ ಸೇವೆಯು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಹುನಿರೀಕ್ಷಿತ ಅವತಾರ್ ಚಿತ್ರದ ಸ್ಟಿಕ್ಕರ್‌ ಗಳನ್ನು ರೋಲ್‌ಔಟ್ ಮಾಡಿ ಬಳಕೆ ಮಾಡಬಹುದು ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.


    ಫೇಸ್‌ಬುಕ್‌ನ ಬಿಟ್‌ಮೊಜಿಯಂತಹ, ಅವತಾರ ಸಿನಿಮಾದ ಸ್ಟಿಕ್ಕರ್‌ಗಳನ್ನು ಅಪ್ಲೈ ಮಾಡಲು ವಾಟ್ಸಪ್‌ ಚಿಹ್ನೆಗಳು ಈ ವರ್ಷದ ಜುಲೈನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡವು.ಇದರ ನಂತರ ಅಕ್ಟೋಬರ್‌ನಲ್ಲಿ, ಅಪ್ಲಿಕೇಶನ್‌ನ ಬೀಟಾ ಚಾನಲ್‌ನಲ್ಲಿ ಕಾಣಿಸಿಕೊಂಡಂತೆ ಫೀಚರ್‌ಗಳ ಕುರಿತು ಹೆಚ್ಚಿನ ವಿವರಗಳು ವಾಟ್ಸಾಪ್‌ನಲ್ಲಿ ಕಾಣಿಸಿಕೊಂಡವು.


    ಅವತಾರ ಸಿನಿಮಾದ ಸ್ಟಿಕ್ಕರ್‌ಗಳು ವಾಟ್ಸಪ್‌ನ ಹೊಸ ಡಿಜಿಟಲ್ ಆವೃತ್ತಿಯಾಗಿದ್ದು, ವಿಭಿನ್ನ ಕೇಶವಿನ್ಯಾಸಗಳು, ಚರ್ಮದ ಬಣ್ಣಗಳು, ಬಟ್ಟೆಗಳು ಮತ್ತು ಅಭಿವ್ಯಕ್ತಿಗಳನ್ನು ಬಳಸಿಕೊಂಡು ಸಂಪೂರ್ಣವಾಗಿ ಚಾಟ್‌ನಲ್ಲಿ ಆ ಸ್ಟಿಕ್ಕರ್‌ಗಳ ಬಳಕೆ ಮಾಡಬಹುದಾಗಿದೆ.


    36 ಸ್ಟಿಕ್ಕರ್‌ಗಳ ಕಸ್ಟಮ್‌ ಸ್ಟಿಕ್ಕರ್‌ ಪ್ಯಾಕ್‌ ನೀಡಿರುವ ವಾಟ್ಸಪ್‌


    ವಾಟ್ಸಪ್‌ನಲ್ಲಿ ನೀವು ಅವತಾರದ ಸ್ಟಿಕ್ಕರ್‌ಗಳನ್ನು ಇರಿಸಿದರೆ, ಅದರಲ್ಲಿ ನೀವು ಒಟ್ಟು 36 ಸ್ಟಿಕ್ಕರ್‌ಗಳೊಂದಿಗೆ ಕಸ್ಟಮ್ ಸ್ಟಿಕ್ಕರ್ ಪ್ಯಾಕ್ ಅನ್ನು ಕ್ರೀಯೆಟ್‌ ಮಾಡಬಹುದು. ಅದನ್ನು ನೀವು ಚಾಟಿಂಗ್‌ನಲ್ಲಿ ಸಹ ಕಳುಹಿಸಬಹುದು. ವಾಟ್ಸಪ್‌ನಲ್ಲಿ ನಿಮ್ಮ ನಿಜ ಪೋಟೋದ ಬದಲಿಗೆ ಅವತಾರದ ನಿಮಗೆ ಇಷ್ಟವಾಗುವ ಸ್ಟಿಕ್ಕರ್‌ ಅನ್ನು ನಿಮ್ಮ ಪ್ರೊಫೈಲ್ ಚಿತ್ರವನ್ನಾಗಿ ಮಾಡಿಕೊಳ್ಳಬಹುದು.


    ಫೇಸ್​ಬುಕ್​, ಇನ್​ಸ್ಟಾಗ್ರಾಂನಲ್ಲಿ ಅವತಾರ್​ ಫೀಚರ್​


    ಮೆಟಾ ಸಂಸ್ಥೆಯು ಈಗಾಗಲೇ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಬಿಟ್​ಮೋಜಿ ಶೈಲಿಯ ಅವತಾರ್​ ಸ್ಟಿಕ್ಕರ್‌ಗಳನ್ನು ಕ್ರೀಯೆಟ್‌ ಮಾಡಲು ಅನುಮತಿ ನೀಡಿದೆ. ಆದರೆ ವಾಟ್ಸಪ್‌ ನಲ್ಲಿ ಅವತಾರ್ ಸ್ಟಿಕ್ಕರ್‌ಗಳನ್ನು ಬಳಕೆ ಮಾಡಲು ನೀವು ಅದೇ ಅವತಾರ್​ ಸ್ಟಿಕ್ಕರ್‌ಗಳನ್ನು ಇಂಪೋರ್ಟ್‌ ಮಾಡಿಕೊಳ್ಳಲು ಸಾಧ್ಯವಿಲ್ಲ.


    ಅವತಾರ್ ಸ್ಟಿಕ್ಕರ್‌ಗಳು ಬಳಕೆದಾರರಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು "ಹೊಸ ಮತ್ತು ವೈಯಕ್ತೀಕರಿಸಿದ ಮಾರ್ಗವನ್ನು" ಒದಗಿಸುತ್ತವೆ ಎಂದು ವಾಟ್ಸಪ್ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


    ಇದರ ನಂತರದಲ್ಲಿ ಮೆಟಾ-ಮಾಲೀಕತ್ವದ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌, ಲೈಟಿಂಗ್, ಶೇಡಿಂಗ್, ಹೇರ್ ಸ್ಟೈಲ್ ಮತ್ತು ನಿಮ್ಮ ಸ್ನೇಹಿತರ ಅವತಾರ ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ಬಹು-ಕ್ಯಾರಕ್ಟರ್‌ ಬಳಸಿ ಅವತಾರ್ ಸ್ಟಿಕ್ಕರ್‌ಗಳನ್ನು ಕ್ರೀಯೆಟ್‌ ಮಾಡುವ ಸಾಮರ್ಥ್ಯವನ್ನು ಮತ್ತಷ್ಟು ಕಸ್ಟಮೈಜ್‌ ಮಾಡುವ ಆಯ್ಕೆಗಳೊಂದಿಗೆ ಸುಧಾರಿಸಲು ಯೋಜನೆ ಹಾಕಿಕೊಂಡಿದೆ.


    ವಿಡಿಯೋ ಕಾಲ್​ನಲ್ಲೂ ಅವತಾರ್


    ವೀಡಿಯೊ ಕರೆಗಳಲ್ಲಿ ಅವತಾರ್ ಬಳಕೆಯನ್ನು ಸಹ ವಾಟ್ಸಪ್‌ ಅನುಮತಿಸುವ ಲಕ್ಷಣಗಳಿವೆ. ಆದರೆ ಪ್ರಸ್ತುತದಲ್ಲಿ ಅದು ಸಾಧ್ಯವಿಲ್ಲ ಎಂದು ವಾಟ್ಸಾಪ್‌ ಹೇಳಿಕೊಂಡಿದೆ. ವಾಟ್ಸಪ್‌ನಲ್ಲಿ ಅವತಾರ್ ಸ್ಟಿಕ್ಕರ್‌ನ ಹೊಸ ಫೀಚರ್‌ ಈಗ ಕಾಣಿಸಿಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಈ ಫೀಚರ್‌ ಬಳಕೆಗೆ ಲಭ್ಯವಿರುತ್ತದೆ.


    ವಾಟ್ಸಪ್‌ನ ಸೆಟ್ಟಿಂಗ್‌ಗಳ ಮೆನುವಿನಿಂದ ನಿಮ್ಮ ಖಾತೆಗೆ ಈ ಫೀಚರ್‌ ಲಭ್ಯವಿದೆಯೇ ಎಂದು ಸಹ ನೀವು ಪರಿಶೀಲಿಸಬಹುದು. ಅವತಾರ್ ಸ್ಟಿಕ್ಕರ್‌ಗಳ ಆಯ್ಕೆಯನ್ನು ತೋರಿಸುತ್ತಿದ್ದರೆ, ನಿಮ್ಮ ಆದ್ಯತೆಗೆ ಅನುಗುಣವಾಗಿ ನಿಮ್ಮ ಅವತಾರದ ಸ್ಟಿಕ್ಕರ್‌ಗಳನ್ನು ನೀವು ಕ್ರೀಯೆಟ್‌ ಮಾಡಿ ಅದನ್ನೇ ಕಸ್ಟಮೈಸ್ ಕೂಡ ಮಾಡಬಹುದು.

    Published by:Prajwal B
    First published: