Technology: ಆಹಾರ ಮತ್ತು ಹಣ್ಣಿನ ತ್ಯಾಜ್ಯ ಬಳಸಿ ಕಾರಿನ ಬಿಡಿ ಭಾಗ ತಯಾರಿಸಿದ ವಿಜ್ಞಾನಿಗಳು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಾರಿನಲ್ಲಿ ಬಳಸುವ ಕೆಲವು ಬಿಡಿ ಭಾಗಗಳನ್ನು ವಿಜ್ಞಾನಿಗಳು ನಿಂಬೆ, ಜೋಳ ಮತ್ತು ಬಾದಾಮಿಯಿಂದ ತಯಾರಿಸಿದ್ದಾರೆ. ನಿಜಕ್ಕೂ ಹೌದು ಹೇಗೆ ತಯಾರಿಸಿದ್ದಾರೆ ಎಂದು ತಿಳಿಯಲು ಇದನ್ನು ಓದಿ.

  • Share this:
  • published by :

ಎಷ್ಟೋ ಬಾರಿ ಈ ಕಾರು (Car) ತಯಾರಕ ಕಂಪನಿಗಳು ತಾವು ತಯಾರಿಸುವ ಕಾರಿನ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಬೇರೆ ಬೇರೆ ದೇಶಗಳಿಂದ (Nation) ಆ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುವುದರ ಬಗ್ಗೆ ನಾವೆಲ್ಲಾ ಕೇಳಿರುತ್ತೇವೆ. ಹೀಗೆ ಒಂದು ಉತ್ತಮವಾದ ಕಾರ್ಯಕ್ಷಮತೆಯ ಕಾರು ತಯಾರಾಗಲು ಯಾವುದೆಲ್ಲಾ ಬಿಡಿ ಭಾಗಗಳು (Parts) ಅದರಲ್ಲಿ ಬಳಸುತ್ತೇವೆ ಅನ್ನೋದು ಸಹ ಮುಖ್ಯವಾಗುತ್ತದೆ ಅಂತ ಹೇಳಬಹುದು. ಆದರೆ ನೀವು ಎಂದಿಗೂ ಕನಸಿನಲ್ಲಿಯೂ ನೋಡದ ಒಂದು ಅದ್ಭುತವಾದ ಆವಿಷ್ಕಾರವನ್ನು ವಿಜ್ಞಾನಿಗಳು (Scientist) ಮಾಡಿ ತೋರಿಸಿದ್ದಾರೆ ನೋಡಿ.


ಅದೇನಪ್ಪಾ? ಅಂತಹ ಆವಿಷ್ಕಾರ ಎಂದರೆ, ಕಾರಿನಲ್ಲಿ ಬಳಸುವ ಕೆಲವು ಬಿಡಿ ಭಾಗಗಳನ್ನು ವಿಜ್ಞಾನಿಗಳು ನಿಂಬೆ, ಜೋಳ ಮತ್ತು ಬಾದಾಮಿಯಿಂದ ಮಾಡುವಂತೆ ಮಾಡಿದ್ದಾರೆ. ಇದನ್ನು ಕೇಳಿದ ತಕ್ಷಣ ನಿಮಗೆ ಸ್ವಲ್ಪ ಶಾಕ್ ಆಗಬಹುದು ಮತ್ತು ನೀವು ಇದನ್ನು ಸುಲಭವಾಗಿ ಒಪ್ಪುವುದೇ ಇಲ್ಲ ಅಂತ ಹೇಳಬಹುದು.


ನಿಂಬೆ, ಜೋಳ, ಬಾದಾಮಿ ಮತ್ತು ದಾಳಿಂಬೆ ತ್ಯಾಜ್ಯವನ್ನು ಬಳಸಿಕೊಂಡ ವಿಜ್ಞಾನಿಗಳು


ಹೌದು.. ಇಲ್ಲಿ ನಾವು ಕೇಳುತ್ತಿರುವುದು ಅಕ್ಷರಶಃ ಸತ್ಯವಾದ ಆವಿಷ್ಕಾರ ಅಂತ ಹೇಳಬಹುದು. ಯುರೋಪಿಯನ್ ವಿಜ್ಞಾನಿಗಳು ನಿಂಬೆ ಹಣ್ಣಿನ ಸಿಪ್ಪೆಗಳು, ಜೋಳದ ಪಿಷ್ಟ, ಬಾದಾಮಿ ಚಿಪ್ಪುಗಳು ಮತ್ತು ದಾಳಿಂಬೆ ಹಣ್ಣಿನ ಸಿಪ್ಪೆಗಳಂತಹ ಆಹಾರ ಮತ್ತು ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಹೆಚ್ಚಿನ ಕಾರ್ಯಕ್ಷಮತೆಯ ಕಾರಿನ ಬಿಡಿ ಭಾಗಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಇದನ್ನು ನಂಬುವುದು ನಿಮಗೆ ಕಷ್ಟವಾಗಬಹುದು, ಆದರೆ ಈ ತ್ಯಾಜ್ಯಗಳಿಂದ ತಯಾರಿಸಿದಂತಹ ಕಾರಿನ ಬಿಡಿ ಭಾಗಗಳು ಪ್ಲಾಸ್ಟಿಕ್ ಭಾಗಗಳಿಗಿಂತ ಉತ್ತಮವಾಗಿ ಕೆಲಸ ಮಾಡುತ್ತವೆಯಂತೆ.


ಇದನ್ನೂ ಓದಿ: OnePlus Offer: ಒನ್​ಪ್ಲಸ್ ಕಂಪೆನಿಯ ಈ​ ಸ್ಮಾರ್ಟ್​​ಫೋನ್​ ಮೇಲೆ ಬಂಪರ್​ ಆಫರ್ಸ್​​! ಇಂದೇ ಖರೀದಿಸಿ


ಯುರೋಪಿಯನ್ ಯೂನಿಯನ್ ಮತ್ತು ಖಾಸಗಿ ವಲಯದ ನಡುವಿನ ಪಾಲುದಾರಿಕೆಯ ಬಾರ್ಬರಾ ಯೋಜನೆಯ ಬಗ್ಗೆ ನೀವು ಇಲ್ಲಿ ತಿಳಿದು ಕೊಳ್ಳುತ್ತಿದ್ದೀರಿ.ಆಹಾರ ತ್ಯಾಜ್ಯಗಳಿಂದ ಪಡೆದ ಜೈವಿಕ ಪಾಲಿಮರ್ ಗಳೊಂದಿಗೆ 3ಡಿ ಪ್ರಿಂಟಿಂಗ್ ತಂತ್ರಗಳನ್ನು ಬಳಸಿಕೊಂಡು, ಬಾರ್ಬರಾ ಆಟೋಮೊಬೈಲ್ ಗಳಲ್ಲಿ ಅಸ್ತಿತ್ವದಲ್ಲಿರುವ ಪ್ಲಾಸ್ಟಿಕ್​ಗಳ ಬದಲಿಗೆ ಬಳಸಬಹುದಾದ ಎಂಟು ರೀತಿಯ ಬಿಡಿ ಭಾಗಗಳನ್ನು ರಚಿಸಿಕೊಂಡರು.


ಈ ಹೊಸ ವಸ್ತುಗಳು ವಿಭಿನ್ನ ಬಣ್ಣಗಳು, ಸುವಾಸನೆಗಳು, ವಿನ್ಯಾಸಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಪ್ರದರ್ಶಿಸಿದವು ಮತ್ತು ಡೋರ್ ಟ್ರಿಮ್ ಗಳು ಮತ್ತು ಡ್ಯಾಶ್ ಬೋರ್ಡ್ ಫಲಕಗಳನ್ನು ಮುದ್ರಿಸಲು ಬಳಸಲಾಗುತ್ತಿತ್ತು. ಆಶ್ಚರ್ಯಕರವಾಗಿ, ಈ ತ್ಯಾಜ್ಯಗಳು ಮೊದಲು ಬಳಸುತ್ತಿದ್ದ ವಸ್ತುಗಳಿಗಿಂತಲೂ ಉತ್ತಮ ಯಾಂತ್ರಿಕ ಮತ್ತು ಉಷ್ಣ ಗುಣಮಟ್ಟವನ್ನು ತೋರಿಸಿವೆ, ಅಲ್ಲದೆ ಇದು ಒಂದು ರೀತಿಯ ಸುವಾಸನೆಯನ್ನು ಸಹ ಸೇರಿಸಿದೆ ಅಂತ ಹೇಳಲಾಗುತ್ತಿದೆ.




ಇಲ್ಲಿ ಯಾವುದು ತ್ಯಾಜ್ಯವಲ್ಲ, ಎಲ್ಲವೂ ಸಂಪನ್ಮೂಲಗಳೆ ಅಂತಾರೆ ವಿಜ್ಞಾನಿಗಳು


"ನಮ್ಮ ದೃಷ್ಟಿಕೋನದಿಂದ ಅತ್ಯಂತ ರೋಮಾಂಚನಕಾರಿ ವಿಷಯವೆಂದರೆ ಇಲ್ಲಿ ಯಾವುದೇ ತ್ಯಾಜ್ಯಗಳಲ್ಲ, ಬಳಕೆಯಾಗುವ ಸಂಪನ್ಮೂಲಗಳು ಇವು" ಎಂದು ಯೋಜನೆಯಲ್ಲಿ ಭಾಗಿಯಾಗಿರುವ ಕಂಪನಿಗಳಲ್ಲಿ ಒಂದಾದ ಐತಿಪ್ ನ ಸಂಶೋಧನಾ ನಿರ್ದೇಶಕ ಬೆರ್ಟಾ ಗೊನ್ಜಾಲ್ವೊ ಹೇಳಿದರು.


"ಆಟೋಮೋಟಿವ್ ಮತ್ತು ನಿರ್ಮಾಣ ತುಣುಕುಗಳನ್ನು ಯಶಸ್ವಿಯಾಗಿ ಮೌಲ್ಯೀಕರಿಸಲಾಗಿದೆ, ಇದು ಪರಿಸರದ ಮೇಲೆ ಆಗುವಂತಹ ಪರಿಣಾಮವನ್ನು ಸಹ ಕಡಿಮೆ ಮಾಡಲು ಕೊಡುಗೆ ನೀಡುತ್ತದೆ" ಎಂದು ಅವರು ಹೇಳುತ್ತಾರೆ.


ಪರಿಸರ ಸ್ನೇಹಿ ಬಳಕೆ


ಅಂತಹ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಉತ್ಪನ್ನ ಚಕ್ರದಿಂದ ತ್ಯಾಜ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅಲ್ಲದೆ ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಪರಿಸರದ ಮೇಲೆ ಆಗುವ ದುಷ್ಪರಿಣಾಮವನ್ನು ಕಡಿಮೆ ಮಾಡುತ್ತದೆ. ಈಗಂತೂ ಇಡೀ ಜಗತ್ತಿಗೆ ಆಹಾರದ ಸಮಸ್ಯೆ ಇದೆ, ಉದಾಹರಣೆಗೆ, ಯುರೋಪ್ ಸುಮಾರು ಆರು ಕೋಟಿ ಟನ್ ಆಹಾರ ತ್ಯಾಜ್ಯವನ್ನು ಉತ್ಪಾದಿಸುತ್ತದೆ ಮತ್ತು ಅದರಲ್ಲಿ ಯಾವುದನ್ನೂ ದೇಶೀಯವಾಗಿ ಮರುಬಳಕೆ ಮಾಡಲಾಗುವುದಿಲ್ಲ. ಜಾಗತಿಕ ಜೈವಿಕ ಪಾಲಿಮರ್ ಉದ್ಯಮವು ವರ್ಷಕ್ಕೆ 6 ಪ್ರತಿಶತದಷ್ಟು ಬೆಳೆಯುತ್ತಿರುವುದರಿಂದ, ಇಂತಹ ತ್ಯಾಜ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ.

First published: