• Home
  • »
  • News
  • »
  • tech
  • »
  • Call Without Tapping: ಫೋನ್ ಕರೆಗಳನ್ನು ಟ್ಯಾಪ್ ಮಾಡದೆಯೇ ಆಲಿಸುವ ಮಾರ್ಗವನ್ನು ಕಂಡುಹಿಡಿದಿದ ವಿಜ್ಞಾನಿಗಳು

Call Without Tapping: ಫೋನ್ ಕರೆಗಳನ್ನು ಟ್ಯಾಪ್ ಮಾಡದೆಯೇ ಆಲಿಸುವ ಮಾರ್ಗವನ್ನು ಕಂಡುಹಿಡಿದಿದ ವಿಜ್ಞಾನಿಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ತಂಡವು ಈ ಮಹತ್ವದ ಭದ್ರತಾ ಕಾಳಜಿಯನ್ನು ಬಹಿರಂಗಪಡಿಸಲು ಸ್ವಯಂಚಾಲಿತ ರಾಡಾರ್ ಸೆನ್ಸರ್ ಅನ್ನು ಬಳಸಿದೆ. ವರ್ಷಗಳು ಕಳೆದಂತೆ ತಂತ್ರಜ್ಞಾನವು ಹೆಚ್ಚು ವಿಶ್ವಾಸಾರ್ಹ ಹಾಗೂ ಸಾಮರ್ಥ್ಯ ಪಡೆದುಕೊಂಡಂತೆ ಅಪರಾಧಿಗಳು ಇಂತಹ ಸಂವೇದನಾ ತಂತ್ರಜ್ಞಾನಗಳ ದುರುಪಯೋಗವನ್ನು ಬಳಸುವ ಅಪಾಯವಿದೆ ಎಂದು ತಂಡದ ಡಾಕ್ಟರೇಟ್ ಅಭ್ಯರ್ಥಿ ಸೂರ್ಯೋದಯ್ ಬಸಾಕ್ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಮೊಬೈಲ್ ಫೋನ್‌ನ (Mobile Phone) ಇಯರ್‌ಪೀಸ್‌ನ ಕಂಪನಗಳನ್ನು ಪತ್ತೆಹಚ್ಚುವ ವಿಧಾನವನ್ನು ಸಂಶೋಧಕರು ಪತ್ತೆಹಚ್ಚಿದ್ದು ಹಾಗೂ ಕರೆಯ ಇನ್ನೊಂದು ಬದಿಯಲ್ಲಿರುವ ವ್ಯಕ್ತಿ 83% ನಿಖರವಾಗಿ ಏನು ಹೇಳುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಲು ಈ ವಿಧಾನ ಸಹಕಾರಿ ಎಂದೇ ಉಲ್ಲೇಖಿಸಿದ್ದಾರೆ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ತಂಡವು ಈ ಮಹತ್ವದ ಭದ್ರತಾ ಕಾಳಜಿಯನ್ನು ಬಹಿರಂಗಪಡಿಸಲು ಸ್ವಯಂಚಾಲಿತ ರಾಡಾರ್ ಸೆನ್ಸರ್ ಅನ್ನು (Automatic radar sensor) ಬಳಸಿದೆ. ವರ್ಷಗಳು ಕಳೆದಂತೆ ತಂತ್ರಜ್ಞಾನವು ಹೆಚ್ಚು ವಿಶ್ವಾಸಾರ್ಹ ಹಾಗೂ ಸಾಮರ್ಥ್ಯ ಪಡೆದುಕೊಂಡಂತೆ ಅಪರಾಧಿಗಳು ಇಂತಹ ಸಂವೇದನಾ ತಂತ್ರಜ್ಞಾನಗಳ (Technology) ದುರುಪಯೋಗವನ್ನು ಬಳಸುವ ಅಪಾಯವಿದೆ ಎಂದು ತಂಡದ ಡಾಕ್ಟರೇಟ್ ಅಭ್ಯರ್ಥಿ ಸೂರ್ಯೋದಯ್ ಬಸಾಕ್ ತಿಳಿಸಿದ್ದಾರೆ.


ಆಡಿಯೋ ಕದ್ದಾಲಿಸುವ ಭೀತಿ
ಆಡಿಯೋವನ್ನು ಕದ್ದಾಲಿಸಲು ಸ್ವಯಂಚಾಲಿತ ರಾಡಾರ್‌ಗಳನ್ನು ಬಳಸಬಹುದು. ಈ ಕುರಿತು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಬಸಕ್ ತಿಳಿಸಿದ್ದಾರೆ. ಮಿಲಿಮೀಟರ್-ತರಂಗ (mmWave) ಸ್ಪೆಕ್ಟ್ರಮ್‌ನಲ್ಲಿ ರಾಡಾರ್ ಕಾರ್ಯನಿರ್ವಹಿಸುತ್ತದೆ ನಿರ್ದಿಷ್ಟವಾಗಿ ಹೇಳಬೇಕೆಂದರೆ 60 ರಿಂದ 64 ಗಿಗಾಹರ್ಟ್ಜ್ ಮತ್ತು 77 ರಿಂದ 81 ಗಿಗಾಹರ್ಟ್ಜ್ ಬ್ಯಾಂಡ್‌ಗಳಲ್ಲಿ ಕೆಲಸ ಮಾಡುತ್ತದೆ. 5G ಗಾಗಿ ಬಳಸಲಾಗುವ ರೇಡಿಯೋ ಸ್ಪೆಕ್ಟ್ರಮ್‌ನ ಉಪವಿಭಾಗವಾಗಿದೆ, ಜಗತ್ತಿನಾದ್ಯಂತ ಸಂವಹನ ವ್ಯವಸ್ಥೆಗಳಿಗೆ ಬಳಸುವ ಮಾನದಂಡವಾಗಿದೆ ಎಂದು ಬಸಕ್ ಹೇಳಿದ್ದಾರೆ.


2022 ರ ಸಿಂಪೋಸಿಯಮ್ ಆನ್ ಸೆಕ್ಯುರಿಟಿ ಅಂಡ್ ಪ್ರೈವಸಿ (SP) ನಲ್ಲಿ ವಿವರಿಸಲಾದ mmSpy ಪ್ರದರ್ಶನದಲ್ಲಿ, ಸಂಶೋಧಕರು ಸ್ಮಾರ್ಟ್‌ಫೋನ್‌ನ ಇಯರ್‌ಪೀಸ್ ಮೂಲಕ ಜನರು ಮಾತನಾಡಿರುವುದನ್ನು ಅನುಕರಿಸಿದ್ದಾರೆ. ಫೋನ್‌ನ ಇಯರ್ ಪೀಸ್ ಮಾತಿನಿಂದ ಕಂಪಿಸುತ್ತದೆ ಹಾಗೂ ಆ ಕಂಪನವು ಫೋನ್ ಮೂಲಕ ದೇಹವನ್ನು ವ್ಯಾಪಿಸುತ್ತದೆ ಎಂಬುದಾಗಿ ಸಂಶೋಧನಕಾರರು ತಿಳಿಸಿದ್ದಾರೆ.


ಇದನ್ನೂ ಓದಿ: Google-Facebook: ಗೂಗಲ್, ಫೇಸ್‌ಬುಕ್ ವೈಫಲ್ಯಕ್ಕೆ ಕಾರಣ ಯಾರು? ಖರ್ಚು ಮಾಡಿದ್ದು ಹೆಚ್ಚಾಯ್ತಾ?

ಈ ಕಂಪನವನ್ನು ಗ್ರಹಿಸಲು ನಾವು ರಾಡಾರ್ ಅನ್ನು ಬಳಸುತ್ತೇವೆ ಮತ್ತು ಫೋನ್ ಸಂಭಾಷಣೆಯ ಬದಿಯಲ್ಲಿರುವ ವ್ಯಕ್ತಿ ಏನು ಹೇಳಿದ್ದಾರೋ ಅದನ್ನು ಪುನರಾವರ್ತಿಸುತ್ತೇವೆ ಎಂದು ಬಸಾಕ್ ತಿಳಿಸಿದ್ದಾರೆ.


ಶೋಧನೆ ಇನ್ನೂ ಪೂರ್ಣಗೊಂಡಿಲ್ಲ
ಪೆನ್ ಸ್ಟೇಟ್‌ನ ಸಹಾಯಕ ಪ್ರಾಧ್ಯಾಪಕರಾದ ಮಹಾಂತ್ ಗೌಡ ಹೇಳುವಂತೆ, ಆಡಿಯೊವನ್ನು ಸನಿಹದಲ್ಲಿರುವ ಜನರಿಗೆ ಮತ್ತು ಮೈಕ್ರೊಫೋನ್‌ಗಳಿಗೆ ಸಂಪೂರ್ಣವಾಗಿ ಆಲಿಸಲಾಗದೇ ಇದ್ದರೂ ವಿಧಾನವು 80% ದಷ್ಟು ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಿದ್ದಾರೆ. ಇದರಿಂದ ಸ್ಮಾರ್ಟ್‌ಫೋನ್‌ನ ಇನ್ನೊಂದು ಬದಿಯಲ್ಲಿ ಮಾತನಾಡುತ್ತಿರುವ ಸಂಭಾಷಣೆಯನ್ನು ಪತ್ತೆಹಚ್ಚುವುದು ಹಾಗೂ ಅದೇ ರೀತಿ ಮರುನಿರ್ಮಾಣ ಮಾಡುವುದನ್ನು ಇನ್ನೂ ಸರಿಯಾಗಿ ಪರಿಶೋಧಿಸಬೇಕಾಗಿದೆ ಎಂಬುದು ಬಸಾಕ್ ಹೇಳಿಕೆಯಾಗಿದೆ.


ರಾಡಾರ್ ಸಂವೇದಕ ಡೇಟಾವನ್ನು MATLAB (ಮ್ಯಾಟ್‌ಲ್ಯಾಬ್) ಮತ್ತು ಪೈಥಾನ್ ಮಾಡ್ಯೂಲ್‌ಗಳ ಮೂಲಕ ಪೂರ್ವ-ಪ್ರಕ್ರಿಯೆಗೊಳಿಸಲಾಗುತ್ತದೆ, ಇದು ಡೇಟಾದಿಂದ ಹಾರ್ಡ್‌ವೇರ್-ಸಂಬಂಧಿತ ಮತ್ತು ಕಲಾಕೃತಿ ಶಬ್ದವನ್ನು ತೆಗೆದುಹಾಕಲು ಬಳಸುವ ಇಂಟರ್ಫೇಸ್‌ಗಳನ್ನು ಕಂಪ್ಯೂಟಿಂಗ್ ಮಾಡುತ್ತದೆ.


ಪದಗಳನ್ನು ಬೇಕಾದಂತೆ ಫಿಲ್ಟರ್ ಮಾಡಬಹುದು
ಸಂಶೋಧಕರು ನಂತರ ಭಾಷಣವನ್ನು ವರ್ಗೀಕರಿಸಲು ಮತ್ತು ಆಡಿಯೊವನ್ನು ಮರುನಿರ್ಮಾಣ ಮಾಡಲು ತರಬೇತಿ ಪಡೆದ ಯಂತ್ರ ಕಲಿಕೆ ಮಾಡ್ಯೂಲ್‌ಗಳಿಗೆ ಇದನ್ನು ನೀಡುತ್ತಾರೆ. ರಾಡಾರ್ ಒಂದು ಅಡಿ ದೂರದಿಂದ ಕಂಪನಗಳನ್ನು ಗ್ರಹಿಸಿದಾಗ, ಪ್ರಕ್ರಿಯೆಗೊಳಿಸಿದ ಸಂಭಾಷಣೆಯು 83% ದಷ್ಟು ನಿಖರವಾಗಿರುತ್ತದೆ. ಫೋನ್‌ನಿಂದ ರಾಡಾರ್ ಎಷ್ಟು ದೂರ ಚಲಿಸುತ್ತದೆಯೋ, ಆರು ಅಡಿಗಳಷ್ಟು ನಿಖರವಾಗಿ 43% ಕ್ಕೆ ಕಡಿಮೆಯಾಗುತ್ತದೆ ಎಂಬುದು ಪರೀಕ್ಷಕರ ಮಾತಾಗಿದೆ.ಸಂಭಾಷಣೆಯನ್ನು ಪುನರ್ ರಚಿಸಿದ ನಂತರ ಅಗತ್ಯವಿರುವ ಪ್ರಮುಖ ಪದಗಳನ್ನು ಫಿಲ್ಟರ್ ಮಾಡಬಹುದು, ತೆಗೆಯಬಹುದು ಬೇರೆ ಪದಗಳನ್ನು ಬಳಸಬಹುದು ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ.


ಇದನ್ನೂ ಓದಿ: 5G Network: 5ಜಿ ಎಂದರೆ 5 ಪ್ರಮುಖ ಗುರಿ! ಇದು ದೇಶದ ಅಭಿವೃದ್ಧಿ ಪಥ ಎಂದ ಮುಕೇಶ್ ಅಂಬಾನಿ

ಇದೊಂದು ಭದ್ರತಾ ದೌರ್ಬಲ್ಯ ಎಂದೇ ತಂಡವು ತಿಳಿಸಿದ್ದು ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ ಮತ್ತು ಈ ವಿಧಾನವನ್ನು ಉತ್ತಮ ಉದ್ದೇಶಕ್ಕಾಗಿ ಬಳಸಿಕೊಳ್ಳುವತ್ತ ತಂಡವು ಪರಿಷ್ಕಾರವನ್ನು ನಡೆಸುತ್ತಿದೆ ಎಂಬುದಾಗಿ ತಿಳಿಸಿದೆ. ಇದೊಂದು ಸೂಕ್ಷ್ಮ ಟ್ರ್ಯಾಕಿಂಗ್ ವಿಧಾನವಾಗಿದ್ದು ಇದರಿಂದ ಮನೆಯ ನಿರ್ವಹಣೆ ಹಾಗೂ ಆರೋಗ್ಯ ಮೇಲ್ವಿಚಾರಣೆಯಂತಹ ವ್ಯವಸ್ಥೆಗಳಲ್ಲಿ ಬಳಸಿಕೊಳ್ಳಬಹುದು ಎಂದಾಗಿದೆ.

Published by:Ashwini Prabhu
First published: